ವಿಜಯೇಂದ್ರ ನಾಮಪತ್ರಕ್ಕೆ ಲಕ್ಕಿ ಕಾರಲ್ಲಿ ಬಂದ ಬಿ.ಎಸ್.ಯಡಿಯೂರಪ್ಪ!

ಯಡಿಯೂರಪ್ಪ ಕುಟುಂಬಕ್ಕೆ ‘ಲಕ್ಕಿ’ ಎನ್ನಲಾದ ‘ಸಿಕೆಆರ್‌ 45’ ಸಂಖ್ಯೆಯ ಹಳೆಯ ಅಂಬಾಸಿಡರ್‌ ಕಾರು ಬುಧವಾರ ಮತ್ತೆ ಹೊರ ಬಂದಿತ್ತು. ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಬಿ.ವೈ. ವಿಜಯೇಂದ್ರ ಅವರ ನಾಮಪತ್ರ ಸಲ್ಲಿಕೆಗಾಗಿ ಇದೇ ಕಾರಿನಲ್ಲಿ ಬಿ.ಎಸ್‌.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಬಿ.ವೈ.ರಾಘವೇಂದ್ರ ಅವರು ಆಗಮಿಸಿದ್ದು ವಿಶೇಷವಾಗಿತ್ತು.

Karnataka election 2023 BS Yadiyurappa arrived in a lucky car for Vijayendra's nomination submission at shikaripur rav

ಶಿವಮೊಗ್ಗ (ಏ.20) : ಯಡಿಯೂರಪ್ಪ ಕುಟುಂಬಕ್ಕೆ ‘ಲಕ್ಕಿ’ ಎನ್ನಲಾದ ‘ಸಿಕೆಆರ್‌ 45’ ಸಂಖ್ಯೆಯ ಹಳೆಯ ಅಂಬಾಸಿಡರ್‌ ಕಾರು ಬುಧವಾರ ಮತ್ತೆ ಹೊರ ಬಂದಿತ್ತು. ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಬಿ.ವೈ. ವಿಜಯೇಂದ್ರ ಅವರ ನಾಮಪತ್ರ ಸಲ್ಲಿಕೆಗಾಗಿ ಇದೇ ಕಾರಿನಲ್ಲಿ ಬಿ.ಎಸ್‌.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಬಿ.ವೈ.ರಾಘವೇಂದ್ರ ಅವರು ಆಗಮಿಸಿದ್ದು ವಿಶೇಷವಾಗಿತ್ತು.

80ರ ದಶಕದಲ್ಲಿ ಯಡಿಯೂರಪ್ಪನವರು(BS Yadiyurappa) ಮೊದಲ ಬಾರಿಗೆ ಈ ಕಾರನ್ನು ಖರೀದಿಸಿದ್ದರು. ಈ ಕಾರನ್ನು ಖರೀದಿಸಿದ ಬಳಿಕ ಅವರು ರಾಜಕೀಯವಾಗಿ ಬೆಳೆಯುತ್ತಾ ಬಂದರು. ಇದು ಕಾಕತಾಳೀಯವಾಗಿದ್ದರೂ, ಯಡಿಯೂರಪ್ಪ ಕುಟುಂಬ ಇದನ್ನು ‘ಲಕ್ಕಿ ಕಾರು’ ಎಂದು ಬಲವಾಗಿ ನಂಬಿಕೊಂಡಿರುವುದರಿಂದ ಪ್ರತಿ ಬಾರಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆಗೆ ಇದೇ ಕಾರಿನಲ್ಲಿ ಯಡಿಯೂರಪ್ಪನವರು ಆಗಮಿಸಿ ನಾಮಪತ್ರ ಸಲ್ಲಿಸುತ್ತಿದ್ದರು.

ಬಿಎಸ್‌ವೈ ಮನೆಯಲ್ಲಿ ಲಿಂಗಾಯತ ನಾಯಕರ ಸಭೆ: ಲಿಂಗಾಯತ ಸಿಎಂ ಎಂದೇ ಪ್ರಚಾರ ಮಾಡಲು ತೀರ್ಮಾನ

9 ಬಾರಿ ಶಿಕಾರಿಪುರ ಕ್ಷೇತ್ರದ(Shivamogga shikaripur constituency) ಅಭ್ಯರ್ಥಿಯಾಗಿ ಇದೇ ಕಾರಿನಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದ್ದ ಯಡಿಯೂರಪ್ಪನವರು, ಈ ಬಾರಿ ನಿವೃತ್ತಿ ಘೋಷಿಸಿದ್ದಾರೆ. ಇವರ ಬದಲಿಗೆ ಈ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಬಿ.ವೈ. ವಿಜಯೇಂದ್ರ ಕೂಡ ಬುಧವಾರ ಇದೇ ಕಾರಿನಲ್ಲಿ ತಮ್ಮ ತಂದೆ ಯಡಿಯೂರಪ್ಪ, ಸೋದರ ಬಿ.ವೈ.ರಾಘವೇಂದ್ರ ಅವರ ಜೊತೆಗೂಡಿ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈಗಲೂ ಈ ಕಾರು ಸುಸ್ಥಿತಿಯಲ್ಲಿಯೇ ಇದೆ.

2ನೇ ಬಾರಿಗೆ ನಾಮಪತ್ರ ಸಲ್ಲಿಸಿದ ವಿಜಯೇಂದ್ರ:

ಶಿವಮೊಗ್ಗ: ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ(BY Vijayendra) ಅವರು ಬುಧವಾರ ಎರಡನೇ ಬಾರಿಗೆ ಬಿಜೆಪಿ ಅಭ್ಯರ್ಥಿ(BJP Candidate)ಯಾಗಿ ನಾಮಪತ್ರ ಸಲ್ಲಿಸಿದರು. ಕುಟುಂಬದ ಲಕ್ಕಿ ಕಾರಾದ ಹಳೆಯ ಅಂಬಾಸಿಡರ್‌ ಕಾರಿನಲ್ಲಿ ಬಂದು ಅವರು ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು.

ಜಗದೀಶ್‌ ಶೆಟ್ಟರ್‌ ವಿರುದ್ಧ ಘರ್ಜಿಸಿದ ರಾಜಾಹುಲಿ ಬಿಎಸ್‌ವೈ: ಅವರಿಗೆ ಒಬ್ಬ ಕಾರ್ಯಕರ್ತನೂ ಬೆಂಬಲವಿಲ್ಲ

ಇದಕ್ಕೂ ಮೊದಲು, ಸೋಮವಾರ ಕೂಡ ಅವರು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಕೆಗೂ ಮುನ್ನ ಅವರು ಹುಚ್ಚೂರಾಯಸ್ವಾಮಿ ಮತ್ತು ಗುರುರಾಘವೇಂದ್ರ ದೇವಸ್ಥಾನಗಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಅವರ ತಂದೆ ಬಿ.ಎಸ್‌.ಯಡಿಯೂರಪ್ಪ, ಪತ್ನಿ ಪ್ರೇಮಾ ವಿಜಯೇಂದ್ರ, ಸೋದರ ಬಿ.ವೈ. ರಾಘವೇಂದ್ರ(BY Raghavendra), ಅತ್ತಿಗೆ ತೇಜಸ್ವಿನಿ ರಾಘವೇಂದ್ರ, ಸೋದರಿಯರಾದ ಅರುಣಾದೇವಿ ಮತ್ತು ಉಮಾದೇವಿ ಜೊತೆಗಿದ್ದರು. ಬಳಿಕ, ತಮ್ಮ ತಂದೆಯವರಿಗೆ ನಮಸ್ಕರಿಸಿ, ಭರ್ಜರಿ ರೋಡ್‌ ಶೋ ನಡೆಸಿದರು. ಯಡಿಯೂರಪ್ಪ, ಬಿ.ವೈ.ರಾಘವೇಂದ್ರ, ಗೃಹ ಸಚಿವ ಆರಗ ಜ್ಞಾನೇಂದ್ರ, ಹಲವು ಶಾಸಕರು, ಸಂಸದರು, ಸಚಿವ ಎಂಟಿಬಿ ನಾಗರಾಜ್‌, ಚಿತ್ರನಟಿ ಶ್ರುತಿ ಮತ್ತಿತರರು ಈ ವೇಳೆ ಹಾಜರಿದ್ದರು.

 

Latest Videos
Follow Us:
Download App:
  • android
  • ios