ಜಗದೀಶ್‌ ಶೆಟ್ಟರ್‌ ವಿರುದ್ಧ ಘರ್ಜಿಸಿದ ರಾಜಾಹುಲಿ ಬಿಎಸ್‌ವೈ: ಅವರಿಗೆ ಒಬ್ಬ ಕಾರ್ಯಕರ್ತನೂ ಬೆಂಬಲವಿಲ್ಲ

ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟರೆ ಯಾವುದೇ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಯಾಕೆಂದರೆ ಜಗದೀಶ್ ಶೆಟ್ಟರ್ ನಂಬಿ ಅವರ ಜೊತೆಗೆ ಯಾವೊಬ್ಬ ಕಾರ್ಯಕರ್ತರು ಹೋಗಿಲ್ಲ.

BS Yediyurappa lashed out at Jagdish Shettar He has no support from single activist sat

ಬೆಂಗಳೂರು (ಏ.18): ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟರೆ ಯಾವುದೇ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಯಾಕೆಂದರೆ ಜಗದೀಶ್ ಶೆಟ್ಟರ್ ನಂಬಿ ಅವರ ಜೊತೆಗೆ ಯಾವೊಬ್ಬ ಕಾರ್ಯಕರ್ತರು ಹೋಗಿಲ್ಲ. ಇನ್ನು ಅನಗತ್ಯವಾಗಿ ಬಿ.ಎಲ್. ಸಂತೋಷ್‌ ಹೆಸರು ಹೇಳುವುದು ಶೆಟ್ಟರ್‌ಗೆ ಶೋಭೆ ತರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಿಡಿ ಕಾರಿದ್ದಾರೆ.

ಈ ಕುರಿತು ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟರೆ ಯಾವುದೇ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಯಾಕೆಂದರೆ ಜಗದೀಶ್ ಶೆಟ್ಟರ್ ನಂಬಿ ಅವರ ಜೊತೆಗೆ ಯಾವೊಬ್ಬ ಕಾರ್ಯಕರ್ತರು ಹೋಗಿಲ್ಲ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸಹ ಹುಬ್ಬಳ್ಳಿಗೆ ಬರುತ್ತಿದ್ದಾರೆ. ಅವರು ಈ ರೀತಿಯ ತೀರ್ಮಾನ ತೆಗೆದುಕೊಳ್ಳಬಾರದಾಗಿತ್ತು. ಇಷ್ಟೆಲ್ಲಾ ರಿಕ್ಷೆಸ್ಟ್ ಮಾಡಿದರೂ ಅವರು ಒಪ್ಪಿಕೊಳ್ಳದೇ ಕಾಂಗ್ರೆಸ್‌ಗೆ ಹೋಗಿದ್ದಾರೆ. ಇನ್ನುಮುಂದೆ ಅವರ ದಾರಿ ಅವರಿಗೆ ನಮ್ಮ ದಾರಿ ನಮಗೆ ಎಂದು ಹೇಳಿದರು.

ಮಂಡ್ಯದಲ್ಲಿ ಸುಮಲತಾ ವಿರುದ್ಧ ಸ್ಪರ್ಧಿಸೊಲ್ಲ: ಸವಾಲಿಗೆ ಮುನ್ನವೇ ಹೆದರಿದರೇ ಕುಮಾರಣ್ಣ!

ಬಿಜೆಪಿ ಮೆಜಾರಿಟಿಯಲ್ಲಿ ಅಧಿಕಾರಕ್ಕೆ ಬರುತ್ತೆ: ಇನ್ನು ಬಿಜೆಪಿಗೆ ಏನೇನು ಆಗಲ್ಲ. ಈ ಬಾರಿ ಮೆಜಾರಿಟಿ ತೆಗೆದುಕೊಂಡು ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಜಗದೀಶ್ ಶೆಟ್ಟರ್ ಗೆ ಟಿಕೆಟ್ ಸಿಗದಿರುವುದಕ್ಕೆ ರಾಜ್ಯದ ಯಾರೊಬ್ಬರೂ ಕಾರಣ ಅಲ್ಲ. ಎಲ್ಲವನ್ನೂ ಹೈಕಮಾಂಡ್‌ ತೀರ್ಮಾನಿಸಿದೆ. ಅವರಿಗೆ ರಾಜ್ಯ ಸಭೆ ಮೆಂಬರ್ ಮಾಡುತ್ತೇವೆ ಎಂದು ಹೇಳಿದ್ದರೂ ಕೇಳದೆ ಹೋಗಿದ್ದಾರೆ. ಈಗ ಅನಗತ್ಯವಾಗಿ ಬಿ.ಎಲ್ ಸಂತೋಷ ಮೇಲೆ ಆರೋಪ ಮಾಡೋದು ಶೆಟ್ಟರ್‌ಗೆ ಶೋಭೆ ತರಲ್ಲ ಎಂದು ಕಿಡಿಕಾರದರು. ಇನ್ನು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಘೋಷಣೆಯನ್ನು ಇಂದೇ ಮಾಡುತ್ತೇವೆ ಎಂದು ತಿಳಿಸಿದರು.

ಬಿಎಲ್ ಸಂತೋಷ್‌ ಹೆಸರೇಳುವುದು ಶೋಭೆ ತರಲ್ಲ: ಟಿಕೆಟ್ ತಪ್ಪಿಸಿದ್ದು ಯಾರು ಕಾರಣರಲ್ಲ. ಅದು ಪಕ್ಷದ ನಾಯಕರ ತೀರ್ಮಾನ. ಅನಗತ್ಯವಾಗಿ ಸಂತೋಷ್ ಮೇಲೆ ಆರೋಪ ಮಾಡಿರೋದು ಅವರಿಗೆ ಶೋಭೆ ತರುವುದಿಲ್ಲ. ಇನ್ನು ನಾಳೆ ಶಿಕಾರಿಪುರದಿಂದ ವಿಜಯೇಂದ್ರ‌ ನಾಮಪತ್ರ ಸಲ್ಲಿಕೆ ಮಾಡ್ತಿದ್ದಾರೆ. ಅದಕ್ಕಾಗಿ ನಾನು ಇಂದು ಶಿವಮೊಗ್ಗಕ್ಕೆ ಹೋಗುತ್ತಿದ್ದೇನೆ. ನಾಳೆ ನಾಮಪತ್ರ ಸಲ್ಲಿಕೆ ನಂತರ ಒಂದೆರಡು ದಿನಗಳಲ್ಲಿ ಪ್ರಚಾರ ಆರಂಭಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಹಿತಿ ನೀಡಿದರು.

ಹೆತ್ತ ತಾಯಿಯನ್ನು ತುಳಿದು ಹೋದ ಶೆಟ್ಟರ್: ದೊಡ್ಡಬಳ್ಳಾಪುರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ನಮ್ಮಲ್ಲಿ ಹಿರಿಯರನ್ನ‌ ಕಡೆಗಣಿಸಿರುವ ಪ್ರಶ್ನೆಯೆ ಇಲ್ಲ.  ಜಗದೀಶ್ ಶೆಟ್ಟರ್ ಹೆತ್ತ ತಾಯಿಯನ್ನ ತುಳಿದು ಹೋಗಿದ್ದಾರೆ. ಅವರಿಗೆ ಜನರೆ ತಕ್ಕ ಪಾಠ ಕಲಿಸುತ್ತಾರೆ.  ಶೆಟ್ಟರ್ ಗೆ ಬಿಜೆಪಿ ಪಕ್ಷ ಏನು ಕಡಿಮೆ ಮಾಡಿತ್ತು. ಅವರನ್ನ ಶಾಸಕ ಮಂತ್ರಿ ಮಾಡಿ ಸಿಎಂ ಮಾಡಿ ಎಲ್ಲವನ್ನೂ ಕೊಟ್ಟಿತ್ತು‌‌. ಬಿಬಿ ಶಿವಪ್ಪ ಅವರನ್ನ ವಿರೋಧ ಕಟ್ಟಿಕೊಂಡು ಅನಂತ್ ಕುಮಾರ್, ಬಿಎಸ್, ಯಡಿಯೂರಪ್ಪ ಅವರ ಬೆನ್ನಿಗೆ ನಿಂತಿದ್ದರು. ಕಾಂಗ್ರೆಸ್‌ ಅವರನ್ನ ಮಾಜಿ ಅಧ್ಯಕ್ಷ, ಮಾಜಿ ಸಿಎಂ ಕರೆಯುತ್ತಾರೆ ಎಂದರೆ ಅದಕ್ಕೆ ಬಿಜೆಪಿ ಕಾರಣ. ಇನ್ನು ಜಗದೀಶ್‌ ಶೆಟ್ಟರ್‌ ಅವರು ಬಿಎಲ್ ಸಂತೋಷ್ ಬಗ್ಗೆ ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ. ಜಗದೀಶ್ ಶೆಟ್ಟರ್ ದೂಷಣೆ ಮಾಡುವುದನ್ನ ನೋಡಿದರೆ ಅವರು ನಿಜವಾಗ್ಲೂ ಬಿಜೆಪಿಗೆ ಬದ್ಧರಾಗಿದ್ದರಾ ಎನ್ನುವ ಅನುಮಾನ ಬರುತ್ತೆದೆ ಎಂದು ಕಿಡಿಕಾರಿದರು.

ಬಿಜೆಪಿ ಸಾಲು ಸಾಲು ರಾಜೀನಾಮೆ ಬೆನ್ನಲ್ಲೇ ಬಿಎಸ್‌ವೈ ಪತ್ರಿಕಾಗೋಷ್ಠಿ: ಶೆಟ್ಟರ್, ಸವದಿ ವಿರುದ್ಧ ಕೆಂಡಾಮಂಡಲ!

ಏಪ್ರಿಲ್‌ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ.  ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

Latest Videos
Follow Us:
Download App:
  • android
  • ios