ಶ್ರಮಿಕ ಸ್ತ್ರೀಯರಿಗೆ ಬಂಪರ್‌: ಅಂಗನವಾಡಿ, ಆಶಾ, ಬಿಸಿಯೂಟ ವೇತನ ಏರಿಕೆ; ಪ್ರಿಯಾಂಕಾ ಗಾಂಧಿ ಭರವಸೆ

ಒಂದು ವೇಳೆ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಅಂಗನವಾಡಿ ಕಾರ್ಯಕರ್ತೆಯರ ನಿವೃತ್ತಿ ಅಥವಾ ಅಕಾಲಿಕ ಮರಣದ ಸಂದರ್ಭದಲ್ಲಿ ಪರಿಹಾರ ರೂಪದಲ್ಲಿ 3 ಲಕ್ಷ ರೂ. ಮತ್ತು ಇತರರಿಗೆ 2 ಲಕ್ಷ ರೂ. ನೀಡುವುದಾಗಿಯೂ ಪ್ರಿಯಾಂಕಾ ಗಾಂಧಿ ಭರವಸೆ ನೀಡಿದ್ದಾರೆ.

bumper for women workers anganwadi asha mid day meals hike a flood of promises from priyanka gandhi ash

ಖಾನಾಪುರ (ಬೆಳಗಾವಿ) (ಮೇ 1, 2023): ರಾಜ್ಯದಲ್ಲಿ ತಾನು ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ ಮತ್ತು ಯುವನಿಧಿ ಮತ್ತು ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಗ್ಯಾರಂಟಿ ನೀಡಿರುವ ಕಾಂಗ್ರೆಸ್‌ ಪಕ್ಷ ಇದೀಗ, ಅಸಂಘಟಿತ ವಲಯದ ಮಹಿಳೆಯರ ವೇತನವನ್ನು ಹೆಚ್ಚಳ ಮಾಡುವ ಭರವಸೆಯನ್ನೂ ನೀಡಿದೆ. ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 15,000 ರೂ, ಸಹಾಯಕಿಯರಿಗೆ 10,000 ರೂ., ಆಶಾ ಕಾರ್ಯಕರ್ತೆಯರಿಗೆ 8,000 ರೂ., ಬಿಸಿಯೂಟ ಸಿಬ್ಬಂದಿಗೆ 5,000 ರೂ. ಗೌರವಧನ ನೀಡುವುದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಘೋಷಿಸಿದ್ದಾರೆ.ಈ ಮೂಲಕ ಅಂಗನವಾಡಿ ಕಾರ್ಯಕರ್ತರ ಗೌರವಧನ 7 ಸಾವಿರ ರೂ., ಅಂಗನವಾಡಿ ಸಹಾಯಕಿಯರು 4 ಸಾವಿರ ರೂ., ಆಶಾ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ಕಾರ್ಯಕರ್ತೆಯರ ಗೌರವಧನವನ್ನು 2 ಸಾವಿರದ ರೂ. ನಷ್ಟು ಹೆಚ್ಚಿಸುವ ವಾಗ್ದಾನ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಖಾನಾಪುರದ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಪಕ್ಷದ ಅಭ್ಯರ್ಥಿ ಹಾಗೂ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ಪರ ಪ್ರಚಾರಾರ್ಥ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಒಂದು ವೇಳೆ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಅಂಗನವಾಡಿ ಕಾರ್ಯಕರ್ತೆಯರ ನಿವೃತ್ತಿ ಅಥವಾ ಅಕಾಲಿಕ ಮರಣದ ಸಂದರ್ಭದಲ್ಲಿ ಪರಿಹಾರ ರೂಪದಲ್ಲಿ 3 ಲಕ್ಷ ರೂ. ಮತ್ತು ಇತರರಿಗೆ 2 ಲಕ್ಷ ರೂ. ನೀಡುವುದಾಗಿಯೂ ಭರವಸೆ ನೀಡಿದರು.

ಇದನ್ನು ಓದಿ: From the India Gate: ವಯನಾಡ್‌ನಲ್ಲಿ ಕಣಕ್ಕಿಳೀತಾರಾ ಪ್ರಿಯಾಂಕಾ ಗಾಂಧಿ..? ತಮಿಳುನಾಡಲ್ಲಿ ಬಿಜೆಪಿಯೇ ಪ್ರಮುಖ ವಿಪಕ್ಷ..!

ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್‌ ಸರ್ಕಾರ ರಾಜ್ಯದ ಜನರಿಗೆ ವಿವಿಧ ಭಾಗ್ಯ ಯೋಜನೆಗಳನ್ನು ಪರಿಚಯಿಸಿತ್ತು. ಇಂದಿರಾ ಕ್ಯಾಂಟೀನ್‌ ಮೂಲಕ ಬಡವರ ಹಸಿವು ನೀಗಿಸಿತ್ತು. ಇದಲ್ಲದೆ, ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜಸ್ಥಾನ ಮತ್ತು ಛತ್ತೀಸ್‌ಗಢಗಳಲ್ಲಿ ರೈತರ ಸಾಲಮನ್ನಾ ಮಾಡಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಸಾಲಮನ್ನಾ ಮಾಡುವ ಪ್ರಯತ್ನ ನಡೆದಿದೆ. ಹೀಗಾಗಿ ಈ ಬಾರಿ ರಾಜ್ಯದ ಜನ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಮೋಸದ ರಾಜಕಾರಣದ ಮೂಲಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆಡಳಿತಾರೂಢ ಶಾಸಕರ ಮನೆಯಲ್ಲಿ ಕೋಟಿಗಟ್ಟಲೆ ನಗದು ಪತ್ತೆಯಾದರೂ ಅವರ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ. ಸರ್ಕಾರದ ಭ್ರಷ್ಟಾಚಾರಕ್ಕೆ ಬೇಸತ್ತ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರದ ವಿವಿಧ ನೇಮಕಾತಿಗಳಲ್ಲಿ ಹಗರಣ ನಡೆದಿದೆ. ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಬೆಲೆ ಏರಿಕೆ, ಮಕ್ಕಳಿಗೆ ಮೊಟ್ಟೆ ವಿತರಣೆಯಲ್ಲಿ ಅವ್ಯವಹಾರಗಳಿಂದಾಗಿ ಶೇ.40 ಕಮಿಷನ್‌ ಸರ್ಕಾರ ಎಂಬ ಬಿರುದೂ ಬಂದಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ರಾಹುಲ್‌ ಗಾಂಧಿ ಹಾರ್ವರ್ಡ್‌, ಕೇಂಬ್ರಿಡ್ಜ್‌ನಿಂದ ಪದವಿ ಪಡೆದಿದ್ದಾರೆ, ಆದರೂ ಪಪ್ಪು ಅಂತೀರಿ: ಪ್ರಿಯಾಂಕಾ ಗಾಂಧಿ

ಯಾರಿಗೆ ಎಷ್ಟು?
1) ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 8000 ರೂ. ನಿಂದ 15,000ಕ್ ರೂ. ಗೆ ಹೆಚ್ಚಳ
2) ಅಂಗನವಾಡಿ ಸಹಾಯಕಿಯರ ಗೌರವಧನ 6,000 ರೂ. ನಿಂದ 10,000 ರೂ. ಗೆ ಏರಿಕೆ
3) ಆಶಾ ಕಾರ್ಯಕರ್ತೆಯರ ಸಹಾಯಧನ ಹಾಲಿ 4,000 ರೂ. ನಿಂದ 8,000 ರೂ. ಗೆ ಹೆಚ್ಚಳ
4) ಬಿಸಿಯೂಟ ಸಿಬ್ಬಂದಿಯ ಗೌರವಧನ ಹಾಲಿ 3,000 ರೂ. ನಿಂದ 5,000 ರೂ. ಗೆ ಹೆಚ್ಚಳ
5) ಅಂಗನವಾಡಿಯವರಿಗೆ 3 ಲಕ್ಷ ರೂ. , ಇತರರಿಗೆ 2 ಲಕ್ಷ ರೂ. ನಿವೃತ್ತಿ ಧನ, ಜೀವವಿಮೆ

ಇದನ್ನೂ ಓದಿ: ಕರ್ನಾಟಕ ಗೆದ್ದು ರಾಹುಲ್‌ ಅನರ್ಹತೆಗೆ ಉತ್ತರ ನೀಡೋಣ: ಸಾಮೂಹಿಕ ರಾಜೀನಾಮೆಗೆ ಮುಂದಾದ ಸಂಸದರಿಗೆ ಪ್ರಿಯಾಂಕಾ ಸಲಹೆ

Latest Videos
Follow Us:
Download App:
  • android
  • ios