ರಾಜ್ಯದಲ್ಲಿ ಒಟ್ಟು 13 ಮಂದಿ ಹಾಲಿ ಶಾಸಕರು ಶತಕೋಟಿಗಿಂತ (100 ಕೋಟಿ ರೂ.) ಹೆಚ್ಚು ಸಂಪತ್ತನ್ನು ಹೊಂದಿದ್ದಾರೆ. ಅವರ ವಿವರ ಇಲ್ಲಿದೆ ನೋಡಿ.
ಬೆಂಗಳೂರು (ಏ.05): ರಾಜ್ಯ ರಾಜಕಾರಣದಲ್ಲಿ ಅತ್ಯಧಿಕ ಆಸ್ತಿವುಳ್ಳ ನಾಯಕರನ್ನು ನೋಡುವುದಾದರೆ ಕಾಂಗ್ರೆಸ್ ನಾಯಕರೇ ಅತ್ಯಧಿಕ ಹಣವಂತರಿದ್ದಾರೆ ಎಂಬುದು ತಿಳಿದುಬಂದಿದೆ. ರಾಜ್ಯದಲ್ಲಿ ಒಟ್ಟು 13 ಮಂದಿ ಹಾಲಿ ಶಾಸಕರು ಶತಕೋಟಿಗಿಂತ (100 ಕೋಟಿ ರೂ.) ಹೆಚ್ಚು ಸಂಪತ್ತನ್ನು ಹೊಂದಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು 38 ದಿನಗಳು ಬಾಕಿಯಿದೆ. ಇನ್ನು ರಾಜ್ಯದಲ್ಲಿ ಪ್ರಮುಖ ಮೂರು ರಾಜಕೀಯ ಪಕ್ಷಗಳು ಬಹುತೇಕ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕಸರತ್ತು ನಡೆಸುತ್ತಿವೆ. ಅದರಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ಬಹುತೇಕ ಸ್ಪರ್ಧೆ ಖಚಿತ ಎಂದು ಹೇಳಲಾಗುವ (ಹಾಲಿ ಶಾಸಕರು) ಹದಿಮೂರು ಅಭ್ಯರ್ಥಿಗಳು ಬರೋಬ್ಬರಿ 100 ಕೋಟಿ ರೂ.ಗಿಂತಲೂ ಅತ್ಯಧಿಕ ಆಸ್ತಿಯನ್ನು ಹೊಂದಿದ್ದಾರೆ ಎನ್ನುವುದು ಇಲ್ಲಿ ಅಚ್ಚರಿಯ ಸಂಗತಿಯಾಗಿದೆ.
ಖಾಸಗಿ ವಿಡಿಯೋ ಲೀಕ್ ಮಾಡ್ತೀವಿ; ರಾಜಕೀಯಕ್ಕೆ ಕಾಲಿಡುವ ಮುನ್ನ ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರ
ಕೇಂದ್ರ ಚುನಾವಣಾ ಆಯೋಗದ ನಿಯಮದಂತೆ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡುವ ಎಲ್ಲ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯ ವೇಳೆ ತಮ್ಮ ಆಸ್ತಿ ವಿವರವನ್ನು ಕಡ್ಡಾಯಗಾಗಿ ಅಫಿಡವಿಟ್ ಮೂಲಕ ಸಲ್ಲಿಸಬೇಕಾಗಿದೆ. ಒಂದು ವೇಳೆ ನಾಮಪತ್ರ ಸಲ್ಲಿಕೆಯ ಎರಡು ದಿನಗಳಲ್ಲಾದರೂ ಅಫಿಡವಿಟ್ ಸಲ್ಲಿಕೆ ಮಾಡಲೇಬೇಕು. ಇಲ್ಲವಾದಲ್ಲಿ ತಮ್ಮ ಅಭ್ಯರ್ಥಿ ಸ್ಥಾನವನ್ನೇ ವಜಾಗೊಳಿಸಬಹುದು. ಇನ್ನು ಈ ಹಿಂದಿನ 2018ರ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿರುವ ಶಾಸಕರು ಸಲ್ಲಿಸಿರುವ ಅಫಿಡವಿಟ್ ಪ್ರಕಾರ ಒಟ್ಟು 13 ಜನಪ್ರತಿನಿಧಿಗಳು ಶತಕೋಟಿಗಿಂತ ಅಧಿಕ ಆಸ್ತಿ ಹೊಂದಿದ್ದಾರೆ.
100 ಕೋಟಿಗಿಂತ ಅಧಿಕ ಆಸ್ತಿ ಹೊಂದಿದವರ ವಿವರ ಹೀಗಿದೆ:
ಶಾಸಕರ ಹೆಸರು (ವಿ.ಕ್ಷೇತ್ರ) ಪಕ್ಷ ಆಸ್ತಿ ಮೊತ್ತ (ರೂ.ಗಳಲ್ಲಿ)
- ಎನ್. ನಾಗರಾಜು (ಹೊಸಕೋಟೆ) ಬಿಜೆಪಿ 1015,80,29,532
- ಡಿ.ಕೆ. ಶಿವಕುಮಾರ್ (ಕನಕಪುರ) ಕಾಂಗ್ರೆಸ್ 840,01,67,045
- ಬೈರತಿ ಸುರೇಶ್ (ಹೆಬ್ಬಾಳ) ಕಾಂಗ್ರೆಸ್ 416,79,70,876
- ಎಂ.ಕೃಷ್ಣಪ್ಪ (ವಿಜಯನಗರ) ಕಾಂಗ್ರೆಸ್ 236,17,92,635
- ಆರ್.ವಿ. ದೇಶಪಾಂಡೆ (ಹಳಿಯಾಳ) ಕಾಂಗ್ರೆಸ್ 215,15,93,731
- ಉದಯ್ ಬಿ. ಗರುಡಾಚಾರ್ (ಚಿಕ್ಕಪೇಟೆ) ಬಿಜೆಪಿ 196,08,85,154
- ಎನ್.ಎ. ಹ್ಯಾರಿಸ್ (ಶಾಂತಿನಗರ) ಕಾಂಗ್ರೆಸ್ 190,24,86,635
- ಶಾಮನೂರು ಶಿವಶಂಕರಪ್ಪ (ದಾವಣಗೆರೆ) ಕಾಂಗ್ರೆಸ್ 183,22,67,262
- ಆನಂದ್ ಸಿಂಗ್ (ಹೊಸಪೇಟೆ) ಬಿಜೆಪಿ 176,58,92,840
- ಎಚ್.ಡಿ. ಕುಮಾರಸ್ವಾಮಿ (ಚನ್ನಪಟ್ಟಣ) ಜೆಡಿಎಸ್ 167,14,08,437
- ಎಸ್.ಎನ್.ಸುಬ್ಬಾರೆಡ್ಡಿ (ಬಾಗೇಪಲ್ಲಿ) ಕಾಂಗ್ರೆಸ್ 157,57,19,607
- ನಾರಾಯಣಸ್ವಾಮಿ (ದೇವನಹಳ್ಳಿ) ಜೆಡಿಎಸ್ 147,11,81,720
- ಎಂ.ಬಿ.ಪಾಟೀಲ (ಬಬಲೇಶ್ವರ) ಕಾಂಗ್ರೆಸ್ 104,89,05,747
Bengaluru: ಆಟೋ ಮೇಲೆ ಪಕ್ಷಗಳ ಸ್ಟಿಕ್ಕರ್, ಬ್ಯಾನರ್ ಇದ್ದರೆ ಕೇಸ್: ಈವರೆಗೂ 450ಕ್ಕೂ ಹೆಚ್ಚು ಪ್ರಕರಣ ದಾಖಲು
ಶಾಸಕರ ಬ್ಯಾಂಕ್ ವ್ಯವಹಾರದ ಮೇಲೆ ನಿಗಾ: ನಗದು ವ್ಯವಹಾರದ ಮೇಲೆ ನಿಗಾ ವಹಿಸಿ ಎಂದು ನೀತಿ ಸಂಹಿತೆ ನೋಡಲ್ ಅಧಿಕಾರಿಯಾದ ಜಿಪಂ ಸಿಇಒ ಕೆ.ಎಂ. ಗಾಯತ್ರಿ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು. ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ಜಿಪಂ ಸಭಾಂಗಣದಲ್ಲಿ ನಡೆದ ಬ್ಯಾಂಕ್ ವಹಿವಾಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಲೀಡ್ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ನಗದು ವ್ಯವಹಾರದ ಮೇಲೆ ನಿಗಾ ಇಡುವ ಮೂಲಕ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಹೇಳಿದರು. ಎಸ್‌ಎಜಿ ಅಕೌಂಟ್‌ಗಳಿಗೆ ಸಾಲ ಮಂಜೂರು ಮಾಡುವ ಸಂಬಂಧ ಚುನಾವಣಾ ಆಯೋಗದಿಂದ ಸ್ಪಷ್ಟೀಕರಣ ಕೇಳಿರುವ ಹಿನ್ನೆಲೆಯಲ್ಲಿ ಸ್ಪಷ್ಟೀಕರಣ ಬಂದ ನಂತರ ಸಾಲ ಮಂಜೂರು ಮಾಡಲು ಕ್ರಮ ವಹಿಸುವಂತೆ ಸೂಚಿಸಿದರು.
