Asianet Suvarna News Asianet Suvarna News

Karnataka Politics ಡಿಕೆ ಬ್ರದರ್ಸ್ ವಿರುದ್ಧ ಸಿಡಿದೆದ್ದ ಡಿಕೆ ಶಿವಕುಮಾರ್ ಭಾವ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ!

  • ಕಾಂಗ್ರೆಸ್ ಕಟ್ಟಿದ ನನಗೆ ಅನ್ಯಾಯ, ಡಿಕೆ ಬ್ರದರ್ಸ್ ವಿರುದ್ಧ ಗರಂ
  • ಬಂಡಾಯವಾಗಿ ಸ್ಪರ್ಧಿಸಲು ನಿರ್ಧರಿಸಿದ ಶರತ್ ಚಂದ್ರ
  • ಕುಟುಂಬಕ್ಕೆ ಟಿಕೆಟ್ ಕೊಡಲ್ಲ ಎಂದ ಡಿಕೆ ಶಿವಕುಮಾರ್
Karnataka Electiion Relative Sharath chandra slams dk Shivakumar denying tickets on family reason ckm
Author
Bengaluru, First Published May 25, 2022, 8:35 PM IST

ಚನ್ನಪಟ್ಟಣ(ಮೇ.25): ಚುನಾವಣೆ ಸಮೀಪಿಸುತ್ತಿದ್ದಂತೆ ಕರ್ನಾಟಕದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಕಾಂಗ್ರೆಸ್‌ನಲ್ಲಿ ಒಳಜಗಳ ಹೆಚ್ಚಾಗುತ್ತಿದೆ. ಬಣ ರಾಜಕೀಯದ ನಡುವೆ ಇದೀಗ ಕುಟುಂಬ ರಾಜಕೀಯವೂ ಕಾಂಗ್ರೆಸ್‌ಗೆ ಮುಳ್ಳಾಗಿದೆ. ಡಿಕೆ ಶಿವಕುಮಾರ್ ವಿರುದ್ಧವೇ ಕುಟುಂಬ ಸದಸ್ಯ ಶರತ್ ಚಂದ್ರ ಗರಂ ಆಗಿದ್ದಾರೆ. ಇಷ್ಟೇ ಅಲ್ಲ ಚನ್ನಪಟ್ಟಣದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ಡಿ.ಕೆ ಶಿವಕುಮಾರ್ ತಂಗಿ‌ ಮಂಜುಳಾ ಅವರ ಪತಿ ಶರತ್ ಚಂದ್ರ  ಕಾಂಗ್ರೆಸ್ ಹಾಗೂ ಬಾವ ಡಿಕೆ ಶಿವಕುಮಾರ್ ವಿರುದ್ಧವೇ ಸಿಡಿದೆದ್ದಿದ್ದಾರೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಕಟ್ಟಿ ಬೆಳಿಸಿ ಹಾಗೂ ಪಕ್ಷ ಸಂಘಟನೆ ಮಾಡಿದ ಶರತ್ ಚಂದ್ರಾಗೆ ಟಿಕೆಟ್ ನೀಡಲು ಡಿಕೆ ಶಿವಕುಮಾರ್ ನಿರಾಕರಿಸಿದ್ದಾರೆ. ಕುಟುಂಬಕ್ಕೆ ಟಿಕೆಟ್ ನೀಡುವುದಿಲ್ಲ ಅನ್ನೋ ಸಂದೇಶವನ್ನು ಡಿಕೆ ಶಿವಕುಮಾರ್ ಸಾರಿದ್ದಾರೆ. 

ಟಗರು Vs ಬಂಡೆ: ಕೈ ಟಿಕೆಟ್ ಫೈಟ್‌ನಲ್ಲಿ ಗೆದ್ದಿದ್ಯಾರು..?

ವೈಯಕ್ತಿಕ ಸಂಬಂಧ ಬೇರೆ ರಾಜಕಾರಣ ಬೇರೆ. ಚೆನ್ನಪಟ್ಟಣದಲ್ಲಿ ನಮ್ಮದು ಪ್ರತಿಷ್ಠಿತ ಕುಟುಂಬ. ಕಾಂಗ್ರೆಸ್ ಟಿಕೆಟ್ ಕೊಡದಿದ್ದರೆ ನಾನು ಸ್ಪರ್ಧಿಸುವುದು ಖಚಿತ. ಯಾವ ಪಕ್ಷದಲ್ಲಿ ಅವಕಾಶ ನೀಡ್ತಾರೆ ನೋಡ್ತೇನೆ.  ನಮ್ಮ ಕಾರ್ಯಕರ್ತರ ಜೊತೆ ಚರ್ಚಿಸ್ತೇನೆ.ಸ್ವತಂತ್ರ ಅಭ್ಯರ್ಥಿಯಾಗಿ ಆದ್ರೂ ಸ್ಪರ್ಧೆ ಮಾಡುತ್ತೇನೆ ಎಂದು ಶರತ್ ಚಂದ್ರ ಹೇಳಿದ್ದಾರೆ.

ಚೆನ್ನಪಟ್ಟಣದಲ್ಲಿ ಜೆಡಿಎಸ್ ನಿಂದ ಪ್ರಸನ್ನ ಗೌಡ ಅವರನ್ನ ಪಕ್ಷಕ್ಕೆ ಕರೆತಂದಿರುವ ಡಿಕೆ ಬ್ರದರ್ಸ್ ಕಾಂಗ್ರೆಸ್ ದುಡಿದ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತದೆ.  ನಾನು ಡಿ.ಕೆ ಶಿವಕುಮಾರ್ ಸಂಬಂಧಿ ಆಗಿರಬಹುದು,ಆದರೆ ಚುನಾವಣೆಗೆ ನಿಲ್ಲುವುದು ನನ್ನ ಹಕ್ಕು. ಪಕ್ಷ ಸಂಘಟನೆ ಮಾಡಿದ ನನಗೆ ಟಿಕೆಟ್ ನಿರಾಕರಿಸುವುದು ಸರಿಯಲ್ಲ ಎಂದು ಶರತ್ ಚಂದ್ರ ಹೇಳಿದ್ದಾರೆ.

ನಮ್ಮ ಕುಟುಂಬಕ್ಕೆ ಟಿಕೆಟ್ ಕೊಡಲ್ಲ ಎಂದು ಚೆನ್ನಪಟ್ಟಣ ಕಾರ್ಯಕರ್ತರಿಗೆ ಡಿಕೆ ಶಿವಕುಮಾರ್ ಸಂದೇಶ ರವಾನಿಸಿದ್ದಾರೆ. ಇದು ಕುಟುಂಬದಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ. 

ಕಳೆದ ಬಾರಿ ಎಐಸಿಸಿ ನಾಯಕರು ನನಗೆ ಟಿಕೆಟ್ ಕೊಡ್ತೇನೆ ಎಂದು ಭರವಸೆ ನೀಡಿದ್ದರು.  ನಾನು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದೆ. ಪಕ್ಷಕ್ಕಾಗಿ ಶ್ರಮವಹಿಸಿ ದುಡಿದಿದ್ದೆ. ಆದರೆ  ಎಚ್.ಎಮ್ ರೇವಣ್ಣ ಅವರಿಗೆ ಟಿಕೆಟ್ ಕೊಟ್ಟು ಕಣಕ್ಕಿಳಿಸಿದರು. ಈ ಮೂಲಕ ನನ್ನನ್ನು ಕಡೆಗಣಿಸಿದರು. ಈ ಬೆಳವಣಿ ಬಳಿಕವೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದು, ಸಂಘಟನೆ ಕಾರ್ಯದಲ್ಲಿ ತೊಡಗಿದ್ದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಖ್ಯೆಯನ್ನು ಹೆಚ್ಚಿಸಿ ಪಕ್ಷವನ್ನು ಬಲಪಡಿಸಿದ್ದೇನೆ. ಇದೀಗ ಪ್ರಸನ್ನ ಅವರನ್ನ ಕರೆದು ಟಿಕೆಟ್ ಕೊಡಲು ಪ್ಲಾನ್ ಮಾಡಿದ್ದಾರೆ ಎಂದು ಶರತ್ ಚಂದ್ರ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಅಸಮಾಧಾನ ತೋಡಿಕೊಂಡಿದ್ದಾರೆ.

ಕಾಂಗ್ರೆಸ್‌ ಕೈ ಬಿಟ್ಟ ಸಿಬಲ್, ಹಿರಿಯ ನಾಯಕನ ಈ ನಡೆ ಹಿಂದಿದೆ ಆ ಒಂದು ಕಾರಣ!

ಕಳೆದ ಐದು ವರ್ಷದಲ್ಲಿ ಚೆನ್ನಪಟ್ಡಣದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿದ್ದೇನೆ.ನಾನು ಏಲ್ಲಿಗೆ ಹೋಗಬೇಕು? ಕುಟುಂಬ ರಾಜಕಾರಣ ಮಾಡಲ್ಲ ಎಂದು ಭಾಷಣ ಮಾಡುತ್ತಾರೆ. ಎಸ್.ರವಿ ಅವರನ್ನು ಎಂ.ಎಲ್ ಸಿ ಮಾಡಲಾಗಿದೆ. ರಂಗನಾಥ್ ಅವರನ್ನ ಶಾಸಕರನ್ನಾಗಿ ಮಾಡಲಾಗಿದೆ. ನನ್ನ ಮೇಲೆ ಮಾತ್ರ ಏಕೆ ಹೀಗೆ ಗೊತ್ತಿಲ್ಲ ಎಂದು ಶರತ್ ಚಂದ್ರ ಹೇಳಿದ್ದಾರೆ. 

Follow Us:
Download App:
  • android
  • ios