ಒಂದು ದೇಶ ಒಂದು ಚುನಾವಣೆಗೆ ನಮ್ಮ ವಿರೋಧವಿದೆ: ಡಿ.ಕೆ.ಶಿವಕುಮಾರ್‌

ಇದು ಸಣ್ಣ ಸಣ್ಣ ಪಾರ್ಟಿಗಳನ್ನು ಮುಗಿಸುವ ತಂತ್ರವಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಇವರಿಗೆ ಸೀಟ್‌ ಬರುತ್ತಿಲ್ಲ. ಹಾಗಾಗಿ ಅವುಗಳನ್ನು ಮುಗಿಸುವ ಯತ್ನ ನಡೆದಿದೆ. ಈಗಾಗಲೇ ಕೆಲವೆಡೆ ಈಗಷ್ಟೆ ಹೊಸದಾಗಿ ಸರ್ಕಾರ ಬಂದಿದೆ. ಕೆಲವೆಡೆ ಅಧಿಕಾರಕ್ಕೆ ಬಂದು ಒಂದೂವರೆ ಹಾಗೂ ಎರಡೂವರೆ ವರ್ಷಗಳಾಗಿವೆ. ಅವುಗಳಿಗೆ ಹೇಗೆ ನಿಯಮ ಮಾಡುತ್ತಾರೋ ಗೊತ್ತಿಲ್ಲ. ನನ್ನ ಪ್ರಕಾರ ಇದು ಕಷ್ಟ ಎಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ 

Karnataka DCM DK Shivakumar Talks Over One Nation One Election grg

ವಿಜಯಪುರ(ಡಿ.14):  ಒಂದು ದೇಶ ಒಂದು ಚುನಾವಣೆ ಜಾರಿಗೆ ತರುವುದರ ಹಿಂದೆ ದೊಡ್ಡ ಹುನ್ನಾರವೇ ಇದೆ. ಕಾಂಗ್ರೆಸ್‌ನದ್ದು ಮೂಲ‌ ಸಿದ್ಧಾಂತ ಇದೆ. ನಮ್ಮ ರಾಷ್ಟ್ರೀಯ ನಾಯಕರು ಈಗಾಗಲೇ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸಣ್ಣ ಸಣ್ಣ ಪಾರ್ಟಿಗಳನ್ನು ಮುಗಿಸುವ ತಂತ್ರವಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಇವರಿಗೆ ಸೀಟ್‌ ಬರುತ್ತಿಲ್ಲ. ಹಾಗಾಗಿ ಅವುಗಳನ್ನು ಮುಗಿಸುವ ಯತ್ನ ನಡೆದಿದೆ. ಈಗಾಗಲೇ ಕೆಲವೆಡೆ ಈಗಷ್ಟೆ ಹೊಸದಾಗಿ ಸರ್ಕಾರ ಬಂದಿದೆ. ಕೆಲವೆಡೆ ಅಧಿಕಾರಕ್ಕೆ ಬಂದು ಒಂದೂವರೆ ಹಾಗೂ ಎರಡೂವರೆ ವರ್ಷಗಳಾಗಿವೆ. ಅವುಗಳಿಗೆ ಹೇಗೆ ನಿಯಮ ಮಾಡುತ್ತಾರೋ ಗೊತ್ತಿಲ್ಲ. ನನ್ನ ಪ್ರಕಾರ ಇದು ಕಷ್ಟ ಎಂದು ಉತ್ತರಿಸಿದರು.

1924ರ ಬೆಳಗಾವಿ ಕಾಂಗ್ರೆಸ್‌ ಅಧಿವೇಶನಕ್ಕೆ ಶತಮಾನೋತ್ಸವ: ಕುಂದಾನಗರಿಯಲ್ಲಿ 3 ದಿನ ಐತಿಹಾಸಿಕ ಸಮಾವೇಶ, ಡಿಕೆಶಿ

ಆಲಮಟ್ಟಿ ಸಂತ್ರಸ್ತರ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 519 ರಿಂದ 524 ಮೀಟರ್ ಎತ್ತರ ಏನು ಮಾಡಬೇಕು ಅದನ್ನು ನಾವು ಮಾಡುತ್ತೇವೆ. ಅದರ ಭೂಸ್ವಾಧೀನ ನೋಟಿಫಿಕೇಷನ್ ಆಗಬೇಕಿದೆ. ನೋಟಿಫಿಕೇಷನ್ ಮುಂಚೆಯೇ ಅಲ್ಲಿ ಕೆಲಸ ಮಾಡಬೇಕಾ ಅಥವಾ ಬೇಡವಾ ಎಂಬ ವಿಚಾರ ನಡೆದಿದೆ. ಕೆಲವು ರೈತರು ಭೂಮಿಗೆ ಪರಿಹಾರ ನೀಡಬೇಕು ಎಂದು ಸಲ್ಲಿಸಿದ ಪರಿಹಾರ ಬೇಡಿಕೆ ಅರ್ಜಿಗಳಲ್ಲಿ ಬೆಂಗಳೂರಿಗಿಂತ ಜಾಸ್ತಿ ಬೆಲೆ ಇದೆ. ಅದನ್ನು ವಿಚಾರ ಮಾಡಲಾಗುವುದು ಎಂದರು. 

ಭೂಸ್ವಾಧೀನಕ್ಕೆ ಈ ಮೊದಲು ಬಸವರಾಜ ಬೊಮ್ಮಾಯಿ ಸರ್ಕಾರ ಕೊಟ್ಟ ರೇಟ್ ಕೊಡಲು ನಮಗೆ ತಕರಾರಿಲ್ಲ. ನಾವು ಕೊಡಲು ಸಿದ್ಧರಿದ್ದೇವೆ. ಇದೇ ವಿಚಾರಕ್ಕೆ ಸೋಮವಾರ ಸಿಎಂ ಅವರು ಸಂಬಂಧಿಸಿದ ಕೆಲವರನ್ನು ಕರೆದಿದ್ದಾರೆ. ಅವರು ಅದರ ವಿಚಾರ ಮಾಡುತ್ತಾರೆ. ಸಂತ್ರಸ್ತರು ನೂರು ಬೇಡಿಕೆ ಇಡಲಿ. ಆದರೆ ಕಾನೂನು ಚೌಕಟ್ಟಿನಲ್ಲಿ ಏನು ಮಾಡಲು ಸಾಧ್ಯವಿದೆ ಅದನ್ನು ನಾವು ಮಾಡುತ್ತೇವೆ. ಅದಕ್ಕೂ ಮೊದಲು ಕೇಂದ್ರ ಗೆಜೆಟ್ ನೋಟಿಫಿಕೇಷನ್ ಮಾಡಬೇಕಿದೆ ಎಂದು ಹೇಳಿದರು.

ಬೆಳಗಾವಿಯಲ್ಲಿ ಮೂರು ದಿನ ಎಐಸಿಸಿ ಅಧಿವೇಶನ: ಡಿ.ಕೆ.ಶಿವಕುಮಾರ್‌ 

ವಿಜಯಪುರ: ಬೆಳಗಾವಿಯಲ್ಲಿ ಡಿ.27, 28, 29 ರಂದು ಎ.ಐ.ಸಿ.ಸಿ ಅಧಿವೇಶನದಲ್ಲಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು. 

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಎಐಸಿಸಿ ಅಧಿವೇಶನ ನಡೆದು 100 ವರ್ಷಗಳು ಸಂದಿರುವ ಸವಿನೆನಪಿಗಾಗಿ ರಾಜ್ಯದಲ್ಲಿ 100 ಬ್ಲಾಕ್ ಕಾಂಗ್ರೆಸ್ ಕಚೇರಿಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ವಿಜಯಪುರ ಜಿಲ್ಲೆಯಲ್ಲಿ 8 ಮತಕ್ಷೇತ್ರಗಳ ಪೈಕಿ 5ರಲ್ಲಿ ನಿವೇಶನ ನೀಡಲು ಜಿಲ್ಲಾಧ್ಯಕ್ಷರು ಮನವಿ ನೀಡಿದ್ದಾರೆ. ಉಳಿದ ಕಚೇರಿಗಳನ್ನು ಮುಂದಿನ ದಿನಗಳಲ್ಲಿ ಮಾಡುವುದಾಗಿ ಹೇಳಿದರು. 

ವಿಜಯಪುರ ಜಿಲ್ಲೆಯ ಅಧಿಕಾರಿ ವರ್ಗದವರು ಕಾಂಗ್ರೆಸ್ ಕಾರ್ಯಕರ್ತರ ಕೆಲಸಗಳಿಗೆ ಸ್ಪಂದಿಸದಿ ರುವ ಬಗ್ಗೆ ಜಿಲ್ಲಾಧ್ಯಕ್ಷರು ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಅಂತಹ ಅಧಿಕಾರಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸೂಚನೆ ನೀಡುವುದಾಗಿ ತಿಳಿಸಿದರು. 

ಎಸ್‌ಎಂ ಕೃಷ್ಣ ಅವರ ಮನೆ ಬಾಗಿಲಿಗೆ ಒದ್ದು ಸಚಿವನಾಗಿದ್ದೆ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್!

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಗಳನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಉಪಮುಖ್ಯಮಂತ್ರಿ ಕೆಪಿಸಿಸಿಯಿಂದ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಶಾಸಕರಾದ ಸಿ.ಎಸ್ ನಾಡಗೌಡ, ಅಶೋಕ ಮನಗೂಳಿ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹ್ಮದರಫೀಕ ಟಪಾಲ, ಮುಖಂಡ ಅಬ್ದುಲ ಹಮೀದ ಮುಶ್ರೀಫ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಸುಭಾಷ ಕಾಲೇಬಾಗ, ವಿಜಯಕುಮಾರ ಘಾಟಗೆ, ಗಂಗಾಧರ ಸಂಭಣ್ಣಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಾಕೀರ ಹುಸೇನ ಮುಲ್ಲಾ, ಎಂ.ಎಂ.ಮುಲ್ಲಾ, ದೇಸು ಚವ್ಹಾಣ, ಸಂತೋಷ ಬಿರಾದಾರ, ಹಾಜಿಲಾಲ್ ದಳವಾಯಿ, ಅಯಾಜ ರೋಜೆವಾಲೆ, ವಿದ್ಯಾವತಿ ಅಂಕಲಗಿ, ಶಾಹಜಾನ ಮುಲ್ಲಾ, ಜಮೀರ ಬಕ್ಷಿ, ಎಸ್ಸಿ ಘಟಕದ ಅಧ್ಯಕ್ಷ ರಮೇಶ ಗುಬ್ಬೇವಾಡ, ವಿದ್ಯಾರಾಣಿ ತುಂಗಳ, ವಿಜಯಕುಮಾರ ಕಾಳೆ, ಅಮೀತ ಚವ್ಹಾಣ, ಲಕ್ಷ್ಮಣ ಇಲಕಲ್, ಜಯಶ್ರೀ ಭಾರತೆ, ಜಯಶ್ರೀ ಹಲಗೂರ, ಭಾರತಿ ಹೊಸಮನಿ, ರಾಜೇಶ್ವರಿ ಚೋಳಕೆ, ಶಮೀಮಾ ಅಕ್ಕಲಕೋಟ ಮುಂತಾದವರು ಇದ್ದರು.

Latest Videos
Follow Us:
Download App:
  • android
  • ios