ಮೂರು ದಿನಗಳ ಐತಿಹಾಸಿಕ ಸಮಾವೇಶ ಬೆಳಗಾವಿಯಲ್ಲಿ ನಡೆಸುತ್ತೇವೆ. ಗಾಂಧಿಜಿಗೆ ಅಂದು ಸಹಕಾರ ನೀಡಿದಂತೆ ಇಂದಿನ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಬೇಕು. ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ನಮ್ಮ ಕಾರ್ಯಕರ್ತರಿಗೂ ಹೆಮ್ಮೆ. ಬೆಳಗಾವಿಯ ಪ್ರತಿ ಕಾರ್ಯಕರ್ತರು 5 ಸಾವಿರ ಜನರನ್ನು ಕಾರ್ಯಕ್ರಮಕ್ಕೆ ಕರೆತರಬೇಕು: ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್
ಬೆಳಗಾವಿ(ಡಿ.13): ಮಹಾತ್ಮಾ ಗಾಂಧಿಜಿ ಎಐಸಿಸಿ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದಕ್ಕೆ ಶತಮಾನದ ಸಂಭ್ರಮ. ಈಗ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಕುಳಿತಿದ್ದು ಹೆಮ್ಮೆಯ ಸಂಗತಿಯಾಗಿದೆ. ಜನರ ಬದುಕು ಬದಲಾವಣೆಗೆ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನ ಜಾರಿಗೊಳಿಸಿದೆ. ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ, ಕಾಂಗ್ರೆಸ್ ಈ ದೇಶದ ಶಕ್ತಿ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.
1924ರ ಬೆಳಗಾವಿ ಎಐಸಿಸಿ ಅಧಿವೇಶನ ಶತಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ ಇಂದು(ಶುಕ್ರವಾರ) ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಮೂರು ದಿನಗಳ ಐತಿಹಾಸಿಕ ಸಮಾವೇಶ ಬೆಳಗಾವಿಯಲ್ಲಿ ನಡೆಸುತ್ತೇವೆ. ಗಾಂಧಿಜಿಗೆ ಅಂದು ಸಹಕಾರ ನೀಡಿದಂತೆ ಇಂದಿನ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಬೇಕು. ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ನಮ್ಮ ಕಾರ್ಯಕರ್ತರಿಗೂ ಹೆಮ್ಮೆ. ಬೆಳಗಾವಿಯ ಪ್ರತಿ ಕಾರ್ಯಕರ್ತರು 5 ಸಾವಿರ ಜನರನ್ನು ಕಾರ್ಯಕ್ರಮಕ್ಕೆ ಕರೆತರಬೇಕು ಎಂದು ಹೇಳಿದ್ದಾರೆ.
ಡಿಕೆ ಪುತ್ರಿ ಗಟ್ಟಿತನದಲ್ಲಿ ಅಪ್ಪನ ಪಡಿಯಚ್ಚು! ಬಂಡೆಯಂಥಾ ಅಪ್ಪನಿಗೆ ಬೋಲ್ಡ್ & ಖಡಕ್ ಮಗಳು!
ನಮ್ಮ ಸರ್ಕಾರ ಬರಲು ಭಾರತ ಜೋಡೋ ಮುನ್ನುಡಿ ಬರೆಯಿತು. ಈ ಐತಿಹಾಸಿಕ ಕಾರ್ಯಕ್ರಮಕ್ಕೆ 7 ಕೋಟಿ ವಿದ್ಯುತ್ ದೀಪಾಲಂಕಾರಕ್ಕೆ ವೆಚ್ಚ ಮಾಡುತ್ತಿದ್ದೇವೆ. 2028 ಕ್ಕೆ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಲು ಬೆಳಗಾವಿ ಕಾರ್ಯಕ್ರಮ ಮುನ್ನುಡಿ ಬರೆಯಬೇಕು. ಸಚಿವರು, ಶಾಸಕರು, ಕಾರ್ಯಕರ್ತರಿಗೆ ಜವಾಬ್ದಾರಿ ವಹಿಸುತ್ತೇವೆ. 20 ಇಲ್ಲವೇ 21 ರಂದು ಶಾಸಕರು, ಮಾಜಿ ಶಾಸಕರು ಪೂರ್ವಭಾವಿ ಸಭೆ ಕರೆಯಬೇಕು. ಶತಮಾನೋತ್ಸವ ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ಕಾರ್ಯನಿರ್ವಹಿಸಬೇಕು. ಇದು ಕಾರ್ಯಕರ್ತರ ಕಾರ್ಯಕ್ರಮ, ಹೊಸ ಮುನ್ನುಡಿ ಬರೆಯಬೇಕು. ಈ ವರ್ಷ ರಾಜ್ಯದಲ್ಲಿ ನೂರು ಕಾಂಗ್ರೆಸ್ ಕಚೇರಿ ಕಟ್ಟಿಸಲು ನಿರ್ಧರಿಸಿದ್ದೇವೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮೂರು ದಿನ ಐತಿಹಾಸಿಕ ಸಮಾವೇಶ
ಮೂರು ದಿನಗಳ ಐತಿಹಾಸಿಕ ಸಮಾವೇಶ ಬೆಳಗಾವಿಯಲ್ಲಿ ನಡೆಸುತ್ತೇವೆ. ಗಾಂಧಿಜಿಗೆ ಅಂದು ಸಹಕಾರ ನೀಡಿದಂತೆ ಇಂದಿನ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಬೇಕು. ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ನಮ್ಮ ಕಾರ್ಯಕರ್ತರಿಗೂ ಹೆಮ್ಮೆ. ಬೆಳಗಾವಿಯ ಪ್ರತಿ ಕಾರ್ಯಕರ್ತರು 5 ಸಾವಿರ ಜನರನ್ನು ಕಾರ್ಯಕ್ರಮಕ್ಕೆ ಕರೆತರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.
ನುಡಿ ನಮನ: ಚಾಣಾಕ್ಷತೆ, ಸತ್ಯ-ನಿಷ್ಠೆಯಲ್ಲಿ ಶ್ರೀಕೃಷ್ಣನ ಪ್ರತಿರೂಪ ನಮ್ ಕೃಷ್ಣ : ಡಿಕೆ ಶಿವಕುಮಾರ್
ಗಾಂಧೀ ಬಾವಿಯಲ್ಲಿ ನೀರು ತಂದು ರಸ್ತೆ ಮೇಲೆ ಚಲ್ಲಿ ಬೆಳಗಾವಿಯಲ್ಲಿ ಗೃಹಜ್ಯೋತಿ ಘೋಷಣೆ ಮಾಡಿದ್ವಿ. ನೂರು ವರ್ಷದ ಇತಿಹಾಸಕ್ಕೆ ಸಮಾವೇಶ ಸಾಕ್ಷಿಯಾಗಲಿದೆ. 150 ಜನ ಎಂಪಿಗಳು, 40 ಬಿಸಿಸಿ ಅಧ್ಯಕ್ಷರುಗಳು, ಕಾಂಗ್ರೆಸ್ ಸದಸ್ಯರು, ಸಿಎಂ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 26 ರಂದು ಕಾರ್ಯಕಾರಿ ಸಮಿತಿಯ ಸಭೆ ಇರುತ್ತೆ. ಮಾರನೇ ದಿನ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಇದೆ. ನಿಂತವರು ಗೆದ್ದವರು ಸೋತವರು ಎಲ್ಲರೂ ಸಹ ಸೇರಲಿದ್ದಾರೆ. ಸಿಪಿಎಡ್ ಮೈದಾನದಲ್ಲಿ ಸಮಾವೇಶ ನಡೆಯಲಿದೆ ಎಂದು ತಿಳಿಸಿದ್ದಾರೆ.
ನೂರು ಕಡೆ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟನೆ ಮಾಡಬೇಕು ಎಂದು ಸಿದ್ಧತೆ ಆಗಿದೆ. ಸೋಮವಾರ ಅಥವಾ ಮಂಗಳವಾರ ವೇಣುಗೋಪಾಲ್ ಹಾಗೂ ಸುರ್ಜೇವಾಲ ಬರುತ್ತಿದ್ದಾರೆ. ನಮಗೆ ಅವರು ಮಾರ್ಗದರ್ಶನ ಮಾಡುತ್ತಾರೆ. ಒಬ್ಬೊಬ್ಬ ಶಾಸಕರಿಗೂ ಸಹ ಒಬ್ಬೊಬ್ಬ ನಾಯಕರುನ್ನು ಕರೆದುಕೊಂಡು ಬರುವ ಜವಾಬ್ದಾರಿ ನೀಡಲಾಗಿದೆ. ಮೈಸೂರು ದಸರಾ ಯಾವ ರೀತಿ ವಿಜೃಂಭಿಸುತ್ತೋ ಅದೇ ರೀತಿ ಲೈಟಿಂಗ್ ಅರೆಂಜ್ ಮಾಡುತ್ತೇವೆ. ಒಂದು ಕಡೆ ಸರ್ಕಾರ ಇನ್ನೊಂದು ಕಡೆ ಪಕ್ಷವೂ ಕೆಲಸ ಮಾಡುತ್ತದೆ. ಒಂದು ವಾರಗಳ ಕಾಲ ಲೈಟಿಂಗ್ ವ್ಯವಸ್ಥೆಯನ್ನು ಇಡುತ್ತೇವೆ. ಜನ ಬಂದು ನೋಡಿಕೊಂಡು ಹೋಗಬಹುದು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಬೆಳಗಾವಿಯಲ್ಲಿ ತಂಗುತ್ತಾರೆ ಎಂದು ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.
