ಮೇಕೆದಾಟು: ತ.ನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ, ಬಿಜೆಪಿ ಬೆಂಬಲ, ಸಿದ್ದು ಕೆಂಡಾಮಂಡಲ
* ಕರ್ನಾಟಕ ಸರ್ಕಾರ ನಿರ್ಧಾರದ ವಿರುದ್ಧ ತ.ನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ
* ಈ ನಿರ್ಣಯಕ್ಕೆ ತಮಿಳುನಾಡು ಬಿಜೆಪಿ ಕೂಡಾ ಬೆಂಬಲ
* ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನ ಕ್ರಮಕ್ಕೆ ಸಿದ್ದರಾಮಯ್ಯ ವಿರೋಧ
ವರದಿ .ಸುರೇಶ್ ಎ ಎಲ್.
ಬೆಂಗಳೂರು, (ಮಾ.21): ಮೇಕೆದಾಟು ಯೋಜನೆ(Mekedatu Project) ವಿರುದ್ಧ ತಮಿಳುನಾಡು ವಿಧಾನಸಭೆ ಸರ್ವಾನುಮತದ ನಿರ್ಣಯ ಕೈಗೊಂಡಿದೆ. ಈ ನಿರ್ಣಯವನ್ನು ತಮಿಳುನಾಡು ಬಿಜೆಪಿ (Tamil Nadu BJP)ಕೂಡಾ ಬೆಂಬಲಿಸಿದ್ದು, ಇದಕ್ಕೆ ಕರ್ನಾಟಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಕಿಡಿ ಕಾರಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಮೇಕೆದಾಟು ವಿಚಾರದಲ್ಲಿ ಕರ್ನಾಟಕಕ್ಕೆ(Karnataka) ದ್ರೋಹ ಮಾಡುತ್ತಿವೆ. ಓಟಿಗಾಗಿ ಈ ರೀತಿ ನಡೆದುಕೊಳ್ತಿದಾರೆ ಎಂದು ಬಿಜೆಪಿ (BJP) ವಿರುದ್ಧ ಟೀಕಿಸಿದ್ದಾರೆ.
ಮೇಕೆದಾಟು ಯೋಜನೆ: ಪ್ರಧಾನಿ ಬಳಿಗೆ ನಿಯೋಗ ಕೊಂಡೊಯ್ಯಲು ಸಭೆಯಲ್ಲಿ ನಿರ್ಣಯ
ವಿಧಾನಸೌಧದಲ್ಲಿ ಇಂದು(ಸೋಮವಾರ) ಈ ವಿಚಾರವಾಗಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ರಾಜಕೀಯ ಮಾಡಬಾರದು.ತಮಿಳುನಾಡು ರಾಜಕೀಯಕ್ಕಾಗಿ ಕ್ಯಾತೆ ತೆಗೆದಿದೆ. ಕಾವೇರಿ ವಿವಾದ ಇಂದು ನಿನ್ನೆಯದಲ್ಲ. 2018ರಲ್ಲಿ ಅಂತಿಮ ತೆರೆ ಬಿದ್ದಿದೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ 2018ರಲ್ಲಿ ಅಂತಿಮ ತೀರ್ಪು ನೀಡಿದೆ. ನಾವು ಎಷ್ಟು ನೀರು ಕೊಡಬೇಕು, ಬಿಳಿಗುಂಡ್ಲು ಇಂದ ಎಷ್ಟು, ಕೇರಳಾಗೆ ಎಷ್ಟು, ಪಾಂಡಿಚೇರಿಗೆ ಎಷ್ಟು ಅಂತ ನಿಗದಿ ಮಾಡಲಾಗಿದೆ. ಅದನ್ನ ಇಂಪ್ಲಿಮೆಂಟ್ ಮಾಡಬೇಕು. ಕಾವೇರಿ ಬೋರ್ಡ್ ಇತ್ಯರ್ಥ ಪಡಿಸಬೇಕು. ಅವರು ಎಲ್ಲಾ ನೋಡ್ಕೋತಾರೆ. ತೀರ್ಪು ಬಂದ ಮೇಲೆ 400ಕ್ಕೂ ಹೆಚ್ಚು TMC ನೀರು ತಮಿಳುನಾಡಿಗೆ ಹೋಗ್ತಿದೆ. ಹೀಗಿರುವಾಗ ಕೇಂದ್ರ ಸರ್ಕಾರ ಎನ್ವಿರಾನ್ಮೆಂಟ್ ಕ್ಲಿಯರೆನ್ಸ್ ಕೊಡಬೇಕು. ತಮಿಳುನಾಡು ಸರ್ಕಾರ ತೆಗೆದಿರೋ ತಗಾದೆಗೆ ಸೊಪ್ಪು ಹಾಕಬಾರದು ಎಂದರು.
ಈಗ ಡಿಸ್ಪ್ಯೂಟ್ ಎಲ್ಲಿದೆ.?
ಕೇಂದ್ರ ಸರ್ಕಾರ ರಾಜಕೀಯ ಮಾಡದೆ, ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಬೇಕು. ಬಹಳ ಹಿಂದೆಯೇ ಕೊಡಬೇಕಿತ್ತು. ಸಿಎಂ ಆಲ್ ಪಾರ್ಟಿ ಮೀಟಿಂಗ್ ಮಾಡಿದಾಗಲೂ ಹೇಳಿದ್ದೆವು. ಅವರು ರೆಡ್ಯೂಸ್ ಆದ್ರೂ ಮಾಡಿಕೊಡಲಿ, ಅದಕ್ಕೂ ನಮಗೂ ಸಂಬಂಧ ಇಲ್ಲ.ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣ ಮಲೈ ಪ್ರತಿಭಟನೆ ಕೂತಿದ್ದ. ಬಿಜೆಪಿ ಮತಗಳನ್ನ ಹೆಚ್ಚು ಮಾಡಿಕೊಳ್ಳಲು ಹೀಗೆ ಮಾಡಿದ್ದ ಎಂದು ಟಾಂಗ್ ಕೊಟ್ಟರು.
ಇನ್ನು ಡಬಲ್ ಇಂಜಿನ್ ಸರ್ಕಾರ ಅಂತಿದ್ದಾರೆ. ಕೇಂದ್ರ ಸರ್ಕಾರ ಇಲ್ಲಿ ಎನ್ವಿರಾನ್ಮೆಂಟ್ ಕ್ಲಿಯರೆನ್ಸ್ ನೀಡಬೇಕು.ಇಲ್ಲದಿದ್ರೆ ಕರ್ನಾಟಕಕ್ಕೆ ಅನ್ಯಾಯ ಮಾಡ್ತಿದೆ ಅಂತ ಅರ್ಥಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ತ.ನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ
ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ಮುಂದುವರಿಸಿದ್ದು, ಕರ್ನಾಟಕ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ನಿರ್ಣಯ ಮಂಡಿಸಿದೆ. ಇಂದು ಜಲ ಸಂಪನ್ಮೂಲ ಸಚಿವ ದುರೈ ಮುರುಗನ್ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಗೊತ್ತುವಳಿ ಮಂಡಿಸಿದ್ದಾರೆ.
ದುರೈ ಮುರುಗನ್ ಮಂಡಿಸಿದ ನಿರ್ಣಯಕ್ಕೆ ತಮಿಳನಾಡಿನ ಎಲ್ಲಾ ಪಕ್ಷಗಳು ಸಮ್ಮತಿ ಸೂಚಿಸಿ ಅಂಗೀಕರಿಸಿದ್ದು, ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ ಕೇಂದ್ರ ಸರ್ಕಾರಕ್ಕೆ ಒಕ್ಕೂರಲಿನಿಂದ ಆಗ್ರಹಿಸಿವೆ. ಈ ನಿರ್ಣಯಕ್ಕೆ ವಿಶೇಷವಾಗಿ ತಮಿಳುನಾಡು ಬಿಜೆಪಿ ಕೂಡಾ ಬೆಂಬಲ ನೀಡಿದೆ.
ಅಲ್ಲದೇ ಮೇಕೆದಾಟು ಅಣೆಕಟ್ಟು ಯೋಜನೆಗೆ ಅನುಮತಿ ನೀಡದಂತೆ ನಾವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಿದ್ದೇವೆ ಎಂದು ತಮಿಳುನಾಡು ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್ ಹೇಳಿಕೆ ನೀಡಿದ್ದಾರೆ.
ಕೇಂದ್ರಕ್ಕೆ ಸರ್ವ ಪಕ್ಷ ನಿಯೋಗ
ಅಂತರ ರಾಜ್ಯ ಜಲವಿವಾದಗಳ ಕುರಿತಂತೆ ಇತ್ತೀಚೆಗಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಸರ್ವ ಪಕ್ಷಗಳ ಸಭೆ ಕರೆದಿದ್ದರು. ತಮಿಳುನಾಡು ವಿರೋಧಕ್ಕೆ ಕ್ಯಾರೆ ಮಾಡದಿರಲು ಸರ್ವ ಸಭೆಯಲ್ಲಿ ಸಹಮತ ವ್ಯಕ್ತವಾಗಿದ್ದು. ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಅಲ್ಲದೇ, ಪ್ರಧಾನಿ ಬಳಿಗೆ ನಿಯೋಗ ಕೊಂಡೊಯ್ಯಲು ಸಭೆಯಲ್ಲಿ ನಿರ್ಣಯವಾಗಿತ್ತು.