ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವೋಟ್‌ ಬ್ಯಾಂಕ್‌ ಮುಲಾಜಿಗೋಸ್ಕರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಭಾರತ ಪಾಕಿಸ್ತಾನ ವಿಶ್ವಕಪ್‌ ಪಂದ್ಯಕ್ಕೆ ವಿಶ್‌ ಮಾಡಲಿಲ್ವಾ?

ಬೆಂಗಳೂರು (ಅ.10): ಇಡೀ ವಿಶ್ವವೇ ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್‌ 2023ರತ್ತ ಚಿತ್ತವನ್ನು ನೆಟ್ಟಿದೆ. ಅದರಲ್ಲಿ ಭಾರತ- ಪಾಕಿಸ್ತಾನ ನಡುವೆ ಹೈವೋಲ್ಟೇಜ್‌ ಪಂದ್ಯ ಏರ್ಪಡಲಿದ್ದು, ಇದಕ್ಕೆ ಪ್ರತಿಯೊಬ್ಬರೂ ಕಾತುರರಾಗಿ ಇರುತ್ತಾರೆ. ಆದರೆ, ನಮ್ಮ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರತ ತಂಡಕ್ಕೆ ಶುಭಾಶಯ ಕೋರುವುದಕ್ಕೂ ಹಿಂದು ಮುಂದು ನೋಡುತ್ತಾ ಕೊನೆಗೂ ವಿಶ್‌ ಮಾಡದೇ ಹೊರಟು ಹೋಗಿದ್ದಾರೆ. ಭಾರತೀಯರಿಗೆ ವಿಶ್‌ ಮಾಡಿದರೆ ಕೆಲ ಓಟ್‌ ಬ್ಯಾಂಕ್‌ ತಪ್ಪಿ ಹೋಗುತ್ತವೆಯೇ ಎಂಬ ಮುಲಾಜು ನೋಡಿದ್ದಾರೆಯೇ ಎಂಬ ಅನುಮಾನದ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. 

ವಿಧಾನಸೌಧದಲ್ಲಿ ನಡೆದಿದ್ದೇನು?
ಅತ್ತಬೆಲೆ ಪಟಾಕಿ ಮಳಿಗೆ ಸ್ಪೋಟದಲ್ಲಿ 14 ಜನ ಸಾವನ್ನಪ್ಪಿದ ಪ್ರಕರಣದ ಕುರಿತು ಸಭೆ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ಭಾರತ- ಪಾಕಿಸ್ತಾನ ವರ್ಲ್ಡ್ ಕಪ್ ಪಂದ್ಯಕ್ಕೆ ಶುಭಾಶಯ ತಿಳಿಸುವಂತೆ ಕೇಳಿದ ಪ್ರಶ್ನೆಗೆ, ಡಿ.ಕೆ.ಶಿವಕುಮಾರ್ ವಿಷ್ ಮಾಡ್ತಾರೆ. ಅವರೆಲ್ಲ ಡಿ.ಕೆ. ಶಿವಕುಮಾರ್ ಸ್ನೇಹಿತರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿ ಮುಂದೆ ಹೋದರು. ಪಕ್ಕದಲ್ಲಿಯೇ ಇದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಭಾರತ- ಪಾಕಿಸ್ತಾನ ಪಂದ್ಯಕ್ಕೆ ಭಾರತೀಯರಿಗೆ ವಿಶ್‌ ಮಾಡುವಂತೆ ಕೇಳಿದಾಗ, ಅದು ಸಿಎಂ ಚೇರ್ ಎಂದು ಹೇಳಿ ನಗೆ ಬೀರಿ ಮುನ್ನಡೆದರು.

'ನಾವು ಭಾರತಕ್ಕೆ ಯುದ್ದ ಮಾಡಲು ಹೋಗುತ್ತಿಲ್ಲ' : ಇಂಡೋ-ಪಾಕ್ ವಿಶ್ವಕಪ್‌ ಬಗ್ಗೆ ತುಟಿಬಿಚ್ಚಿದ ಪಾಕ್ ವೇಗಿ ಹ್ಯಾರಿಸ್ ರೌಫ್

ಓಟ್‌ ಬ್ಯಾಂಕ್‌ ರಾಜಕಾರಣ ಮಾಡಿದ್ರಾ ಸಿಎಂ-ಡಿಸಿಎಂ: ಭಾರತ ಪಾಕಿಸ್ತಾನ ಪಂದ್ಯದ ಬಗ್ಗೆ ಇಡೀ ಜಗತ್ತೇ ತಿರುಗಿ ನೋಡುತ್ತಿದ್ದು, ಟಿಕೆಟ್‌ ಮಾರಾಟ ಕೆಲವೇ ಗಂಟೆಗಳಲ್ಲಿ ಸೋಲ್ಡ್‌ ಔಟ್‌ ಆಗಿತ್ತು. ಈಗ ಪಂದ್ಯಕ್ಕೆ ಹಲವು ನಾಯಕರು ವಿಶ್‌ ಮಾಡಿದ್ದಾರೆ. ಮುಸ್ಲಿಂ ಬಾಹುಳ್ಯದ ಪಾಕಿಸ್ತಾನಕ್ಕೂ ಭಾರತದಲ್ಲಿಯೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಹೀಗಾಗಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಮತಗಳನ್ನು ಓಲೈಕೆ ಮಾಡಿಕೊಳ್ಳಲು ಯಾವುದೇ ಒಂದು ಮುಸ್ಲಿಂ ವಿರೋಧಿ ನಡೆಯನ್ನು ಪ್ರದರ್ಶನ ಮಾಡುತ್ತಿಲ್ಲ. ಈಗ ಮುಸ್ಲಿಂ ರಾಷ್ಟ್ರ ಪ್ಯಾಲೆಸ್ತೇನ್‌ಗೆ ಕಾಂಗ್ರೆಸ್‌ ಬೆಂಬಲ ನೀಡಿದೆ ಎಂದು ಹೇಳಲಾಗುತ್ತಿದೆ. ಈಗ ಕರ್ನಾಟಕ ಕಾಂಗ್ರೆಸ್‌ ನಾಯಕರು ಭಾರತ- ಪಾಕಿಸ್ತಾನ ವಿಶ್ವಕಪ್‌ ಪಂದ್ಯಕ್ಕೆ ವಿಶ್‌ ಮಾಡದಿರುವುದಕ್ಕೆ ಕಾರಣವೂ ವೋಟ್‌ ಬ್ಯಾಂಕ್‌ ರಾಜಕಾರಣವೇ ಕಾರಣ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ.

ಭಾರತ ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಶಾಕ್‌: ಭಾರತದ ಮುಂದಿನ ಪ್ರಮುಖ ಪಂದ್ಯ ಪಾಕಿಸ್ತಾನದ ವಿರುದ್ಧ ಇದ್ದು, ಆ ಪಂದ್ಯ ಗೆಲ್ಲಲು ಸಹ ಪ್ಲ್ಯಾನ್‌ ಮಾಡ್ತಿದೆ. ಆದರೆ, ಅದಕ್ಕೂ ಮುನ್ನ ಟೀಂ ಇಂಡಿಯಾಗೆ ಮತ್ತೊಂದು ಶಾಕ್‌ ಎದುರಾಗುವ ಸಾಧ್ಯತೆ ಇದೆ. ವಿಶ್ವಕಪ್‌ ಕ್ರಿಕೆಟ್‌ ಪಂದ್ಯ ಆರಂಭವಾಗಿದ್ದು, ಆಸ್ಟ್ರೇಲಿಯ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಇನ್ನು, ಭಾರತದ ಮುಂದಿನ ಪ್ರಮುಖ ಪಂದ್ಯ ಪಾಕಿಸ್ತಾನದ ವಿರುದ್ಧ ಇದ್ದು, ಆ ಪಂದ್ಯ ಗೆಲ್ಲಲು ಸಹ ಪ್ಲ್ಯಾನ್‌ ಮಾಡ್ತಿದೆ. ಆದರೆ, ಅದಕ್ಕೂ ಮುನ್ನ ಟೀಂ ಇಂಡಿಯಾಗೆ ಮತ್ತೊಂದು ಶಾಕ್‌ ಎದುರಾಗುವ ಸಾಧ್ಯತೆ ಇದೆ. 

ಆಸ್ಪತ್ರೆಗೆ ದಾಖಲಾದ ಟೀಂ ಇಂಡಿಯಾದ ಪ್ರಮುಖ ಆಟಗಾರ: ಪಾಕ್‌ ವಿರುದ್ಧದ ಪಂದ್ಯಕ್ಕೆ ಡೌಟ್‌!

ಕಳೆದ 12 ತಿಂಗಳುಗಳಲ್ಲಿ ಭಾರತದ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾದ ಶುಭ್‌ಮನ್‌ ಗಿಲ್‌ ODI ವಿಶ್ವಕಪ್‌ನಲ್ಲಿ ಭಾರತ ತಂಡದ ದೊಡ್ಡ ಭಾಗವಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತದ ಆರಂಭಿಕ ಪಂದ್ಯಕ್ಕೆ ಮುಂಚೆಯೇ ಡೆಂಗ್ಯೂ ಕಾಣಿಸಿಕೊಂಡ ಕಾರಣ ಪಂದ್ಯದಲ್ಲಿ ಆಡಲಿಲ್ಲ. ಹಾಗೆ, ಎರಡನೇ ಪಂದ್ಯದಲ್ಲೂ ಆಡುತ್ತಿಲ್ಲ ಎಂಬುದು ಖಚಿತವಾಗಿದೆ.