ದೆಹಲಿಯಲ್ಲಿ ನಡೆದ ಹೈವೋಲ್ಟೇಜ್ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕುರಿತು ಊಹಾಪೋಹಗಳು ಹೆಚ್ಚಾಗಿವೆ. ಡಿಕೆ ಶಿವಕುಮಾರ್ ದೆಹಲಿಯಲ್ಲೇ ಉಳಿದಿದ್ದು, 'ನಾಳೆ ಮಾತನಾಡುತ್ತೇನೆ' ಎಂಬ ಸಿಎಂ ಹೇಳಿಕೆ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ.

ಬೆಂಗಳೂರು (ಮೇ.27): ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ರಾಜೀನಾಮೆ ನೀಡುವ ಕುರಿತು ದೆಹಲಿಯಲ್ಲಿ ನಡೆದ ಹೈವೋಲ್ಟೇಜ್‌ ಸಭೆಯ ಬಳಿಕ ಕಾಂಗ್ರೆಸ್‌ ಮತ್ತು ರಾಜ್ಯ ರಾಜಕೀಯದಲ್ಲಿ ಭಾರೀ ತಲ್ಲಣ ಸೃಷ್ಟಿಸಿದೆ.ಕಳೆದೊಂದು ವರ್ಷದಿಂದ ನಾಯಕತ್ವ ಬದಲಾವಣೆ ಕುರಿತು ಊಹಾಪೋಹಗಳೆದ್ದಿದ್ದವು ಇದೀಗ ಎಲ್ಲ ಗೊಂದಲಗಳಿಗೆ ನಾಳೆ ಸ್ಪಷ್ಟ ಚಿತ್ರಣ ಸಿಗಲಿದೆ. ಸಿಎಂ ಸಿದ್ದರಾಮಯ್ಯ ನಾಳೆಯೇ ರಾಜೀನಾಮೆ ನೀಡುತ್ತಾರ? ಮುಂದಿನ ಸಿಎಂ ಡಿಕೆ ಶಿವಕುಮಾರ್ ಅಗುತ್ತಾರಾ? ಅಥವಾ ದಲಿತ ಸಿಎಂ ಕೂಗು ಮುನ್ನಲೆಗೆ ಬರುತ್ತದ? ನಾಯಕತ್ವ ಬದಲಾವಣೆ ಕುರಿತ ಊಹಾಪೋಹಗಳು ಹೆಚ್ಚಾಗಿವೆ.

Add Asianetnews Kannada as a Preferred SourcegooglePreferred

ಈ ನಡುವೆ ಸಿಎಂ ಅವರ ಇಂದಿನ ಕಾರ್ಯಕ್ರಮಗಳನ್ನು ಕೊನೆಯ ಅಧಿಕೃತ ಕಾರ್ಯಕ್ರಮ ಎಂದು ಕೆಲ ನಾಯಕರು ಹಾಗೂ ಕಾರ್ಯಕರ್ತರು ಚರ್ಚಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಯಲ್ಲೇ ಉಳಿದು ವರಿಷ್ಠರ ಜೊತೆ ಮಾತುಕತೆ ಮುಂದುವರಿಸಿರುವುದು ರಾಜಕೀಯ ಕಾವು ಹೆಚ್ಚಿಸಿದೆ. ಆದರೆ ಈ ಬಗ್ಗೆ ಸಿಎಂ ಸ್ಪಷ್ಟನೆ ನೀಡದೇ, 'ನಾಳೆ ಎಲ್ಲವನ್ನೂ ಮಾತಾಡ್ತೇನೆ' ಎಂದಿರುವುದು ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಸಸ್ಪೆನ್ಸ್ ಸೃಷ್ಟಿಸಿದೆ.

ಸಿಎಂ ಆಗಿ ಇಂದಿನ ಕಾರ್ಯಕ್ರಮಗಳೇ ಬಹುತೇಕ ಕೊನೆ?

ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಆಗಿ ಇಂದಿನ ಕಾರ್ಯಕ್ರಮಗಳು ಬಹುತೇಕ ಕೊನೆಯ ಅಧಿಕೃತ ಕಾರ್ಯಕ್ರಮಗಳಾಗಬಹುದು ಎಂಬ ರಾಜಕೀಯ ಚರ್ಚೆ ಜೋರಾಗಿದೆ. ಬೆಳಗ್ಗೆ ವಿಧಾನಸೌಧಕ್ಕೆ ಆಗಮಿಸಿದ ಸಿಎಂ, ಜವಹರಲಾಲ್ ನೆಹರು ಪುಣ್ಯಸ್ಮರಣೆ ಅಂಗವಾಗಿ ನೆಹರು ಪ್ರತಿಮೆಗೆ ನಮನ ಸಲ್ಲಿಸಿದರು. ಈ ವೇಳೆ ಸಚಿವರಾದ ಜಮೀರ್ ಅಹ್ಮದ್ (Zameer Ahmed Khan) ಸಚಿವ ಹೆಚ್‌ಸಿ ಮಹದೇವಪ್ಪ (HC Mahadevappa) ಉಪಸ್ಥಿತರಿದ್ದರು.

ನೆಹರು ನೆನೆದು ಸಿಎಂ ಭಾವನಾತ್ಮಕ ಮಾತು

ನೆಹರು ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಜವಹರಲಾಲ್ ನೆಹರು ದೇಶದ ಮೊದಲ ಪ್ರಧಾನಿ. ದೇಶದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರ. ಪಂಚವಾರ್ಷಿಕ ಯೋಜನೆಗಳಿಂದ ದೇಶವನ್ನು ವೈಜ್ಞಾನಿಕವಾಗಿ ಮುನ್ನಡೆಸಿದರು' ಎಂದು ಸ್ಮರಿಸಿದರು. ಶಿಕ್ಷಣ, ಸಹಕಾರ ಕ್ಷೇತ್ರ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ನೆಹರು ಪಾತ್ರ ದೊಡ್ಡದು ಎಂದು ಸಿಎಂ ಹೇಳಿದರು.

ಕೆಪಿಸಿಸಿ ಕಾರ್ಯಕ್ರಮ ಬಳಿಕ ಕ್ರಿಕೆಟ್ ಸ್ಟೇಡಿಯಂ ಶಂಕುಸ್ಥಾಪನೆ

ವಿಧಾನಸೌಧ ಕಾರ್ಯಕ್ರಮದ ಬಳಿಕ ಸಿಎಂ ಕೆಪಿಸಿಸಿ ಕಚೇರಿಯ ಕಾರ್ಯಕ್ರಮದಲ್ಲೂ ಭಾಗವಹಿಸಿ ನಮನ ಸಲ್ಲಿಸಿದರು. ನಂತರ ಅನೇಕಲ್ ಸಮೀಪ ನಿರ್ಮಾಣವಾಗುತ್ತಿರುವ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾದರು. ಇದೇ ಸಿಎಂ ಆಗಿ ಅವರ ಕೊನೆಯ ಪ್ರಮುಖ ಸಾರ್ವಜನಿಕ ಕಾರ್ಯಕ್ರಮವಾಗಬಹುದು ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.

ದೆಹಲಿ ಭೇಟಿ ಪ್ರಶ್ನೆಗೆ ಸಿದ್ದು ಸಸ್ಪೆನ್ಸ್ ಉತ್ತರ

ದೆಹಲಿ ಹೈವೋಲ್ಟೇಜ್‌ ಸಭೆಯ ಬಳಿಕ ರಾಜಕೀಯ ಬೆಳವಣಿಗೆಗಳು ತೀವ್ರವಾಗಿರುವ ನಡುವೆ, ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸಿಎಂ 'ನಾಳೆ ಎಲ್ಲವನ್ನೂ ಮಾತಾಡ್ತೇನೆ' ಎಂದು ಉತ್ತರಿಸಿ ಕುತೂಹಲ ಹೆಚ್ಚಿಸಿದರು. ಕಾರ್ಯಕ್ರಮಗಳ ಬಳಿಕ ಸಿಎಂ ವಿಧಾನಸೌಧದಿಂದ ನೇರವಾಗಿ ಕಾವೇರಿ ನಿವಾಸಕ್ಕೆ ವಾಪಸ್ಸಾದರು.

Scroll to load tweet…