MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • Politics
  • ಸಿದ್ದರಾಮಯ್ಯಗೆ ರಾಜ್ಯಸಭಾ ಆಫರ್‌ ಜೊತೆಗೆ ಡಿಕೆಶಿ ಪಟ್ಟಾಭಿಷೇಕದ ಹಿಂದೆ ಪ್ರಿಯಾಂಕಾ ಗಾಂಧಿ ಮಾಸ್ಟರ್ ಮೈಂಡ್!

ಸಿದ್ದರಾಮಯ್ಯಗೆ ರಾಜ್ಯಸಭಾ ಆಫರ್‌ ಜೊತೆಗೆ ಡಿಕೆಶಿ ಪಟ್ಟಾಭಿಷೇಕದ ಹಿಂದೆ ಪ್ರಿಯಾಂಕಾ ಗಾಂಧಿ ಮಾಸ್ಟರ್ ಮೈಂಡ್!

ಕರ್ನಾಟಕದ ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆಯಲ್ಲಿ ಪ್ರಿಯಾಂಕಾ ಗಾಂಧಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ದೆಹಲಿಯಲ್ಲಿ ನಡೆದ ಹೈಡ್ರಾಮಾದ ಬಳಿಕ, ಡಿ.ಕೆ. ಶಿವಕುಮಾರ್ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲು ಹೈಕಮಾಂಡ್ ನಿರ್ಧರಿಸಿದ್ದು, ಸಿದ್ದರಾಮಯ್ಯ ಗೆ ರಾಜ್ಯಸಭಾ ಆಫರ್ ನೀಡಲಾಗಿದೆ. 

3 Min read
Author : Gowthami K
Published : May 27 2026, 12:08 PM IST
Share this Photo Gallery
  • FB
  • TW
  • Linkdin
  • Whatsapp
19
ಹೈಕಮಾಂಡ್‌ನ ಟ್ರಬಲ್ ಶೂಟರ್ ಪ್ರಿಯಾಂಕಾ ಗಾಂಧಿ
Image Credit : Asianet News

ಹೈಕಮಾಂಡ್‌ನ ಟ್ರಬಲ್ ಶೂಟರ್ ಪ್ರಿಯಾಂಕಾ ಗಾಂಧಿ

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆಯ ಹಿಂದೆ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್‌ನ "ಟ್ರಬಲ್ ಶೂಟರ್" ಪ್ರಿಯಾಂಕಾ ಗಾಂಧಿ ಅವರ ಹಸ್ತಕ್ಷೇಪ ಬಹಿರಂಗವಾಗಿದೆ. ಕಳೆದ ಒಂದು ವರ್ಷದಿಂದ ಮುಖ್ಯಮಂತ್ರಿ ಗಾದಿಗಾಗಿ ತೀವ್ರ ಕಸರತ್ತು ನಡೆಸುತ್ತಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹೈಕಮಾಂಡ್ ಹಸಿರು ನಿಶಾನೆ ತೋರಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ದಾರಿ ಮಾಡಿಕೊಡುವಂತೆ ಸೂಚಿಸಲಾಗಿದೆ ಎಂದು ದಟ್ಟವಾದ ಮೂಲಗಳು ತಿಳಿಸಿವೆ. ಇದರೊಂದಿಗೆ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರ ಆಯ್ಕೆ ಬಹುತೇಕ ಖಚಿತಗೊಂಡಿದೆ.

Add Asianetnews Kannada as a Preferred SourcegooglePreferred
29
ಇಂದಿರಾ ಭವನದಲ್ಲಿ ನಡೆದ ಹೈಡ್ರಾಮಾ: ಬಯಲಾಯ್ತು ಒಳಒಪ್ಪಂದ!
Image Credit : Asianet News

ಇಂದಿರಾ ಭವನದಲ್ಲಿ ನಡೆದ ಹೈಡ್ರಾಮಾ: ಬಯಲಾಯ್ತು ಒಳಒಪ್ಪಂದ!

ದೆಹಲಿಯ ಇಂದಿರಾ ಭವನದಲ್ಲಿ ಆರಂಭದಲ್ಲಿ ನಡೆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ಅವರೊಂದಿಗಿನ ಸಭೆಯು ಕೇವಲ ಸಚಿವ ಸಂಪುಟ ಪುನಾರಚನೆ ಮತ್ತು ಆಡಳಿತಾತ್ಮಕ ವಿಷಯಗಳಿಗಷ್ಟೇ ಸೀಮಿತವಾಗಿತ್ತು. ಆದರೆ, ಮಧ್ಯಾಹ್ನ 3:30ರ ಸುಮಾರಿಗೆ ಇಡೀ ರಾಜಕೀಯ ಚಿತ್ರಣವೇ ಬದಲಾಯಿತು.

Related Articles

Related image1
ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ನಾಳೆ ಬೆಳಗ್ಗೆ 10:30ಕ್ಕೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ, ಶಾಸಕರ ಸುಳಿವು
Related image2
BREAKING: ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ, ಸಿಎಂ ಸ್ಥಾನಕ್ಕೆ ಗುರುವಾರ ರಾಜೀನಾಮೆ ಸಾಧ್ಯತೆ
39
ಸೋನಿಯಾ-ಪ್ರಿಯಾಂಕಾ ಭೇಟಿ
Image Credit : Asianet News

ಸೋನಿಯಾ-ಪ್ರಿಯಾಂಕಾ ಭೇಟಿ

ಮಧ್ಯಾಹ್ನ ರಾಹುಲ್ ಗಾಂಧಿ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿಯಾದರು. ಈ ವೇಳೆ ಅಲ್ಲಿ ಹಾಜರಿದ್ದ ಪ್ರಿಯಾಂಕಾ ಗಾಂಧಿ ಅವರು ಕರ್ನಾಟಕದ ನಾಯಕತ್ವ ಬದಲಾವಣೆಯ ಕುರಿತು ಗಂಭೀರ ಚರ್ಚೆ ನಡೆಸಿದರು.

ಸಿದ್ದರಾಮಯ್ಯಗೆ ರಾಜ್ಯಸಭಾ ಆಫರ್

ಈ ಚರ್ಚೆಯ ಬೆನ್ನಲ್ಲೇ, ಸಂಜೆ 4:20ಕ್ಕೆ ಪುನಃ ಸಭೆಗೆ ಆಗಮಿಸಿದ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೌರವಯುತವಾಗಿ 'ರಾಜ್ಯಸಭಾ ಸದಸ್ಯತ್ವದ ಆಫರ್' ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆತರುವ ಈ ತಂತ್ರದ ಹಿಂದೆ ಪ್ರಿಯಾಂಕಾ ಗಾಂಧಿ ಅವರದ್ದೇ ಮುಖ್ಯಪಾತ್ರ ಎಂಬುದು ಸ್ಪಷ್ಟವಾಗಿದೆ.

49
ಡಿ.ಕೆ. ಶಿವಕುಮಾರ್ ಪರ ಪ್ರಿಯಾಂಕಾ ಗಾಂಧಿ ಬ್ಯಾಟಿಂಗ್ ಮಾಡಿದ್ದೇಕೆ?
Image Credit : Asianet News

ಡಿ.ಕೆ. ಶಿವಕುಮಾರ್ ಪರ ಪ್ರಿಯಾಂಕಾ ಗಾಂಧಿ ಬ್ಯಾಟಿಂಗ್ ಮಾಡಿದ್ದೇಕೆ?

ಗಾಂಧಿ ಕುಟುಂಬದ ಅತ್ಯಂತ ನಂಬಿಕಸ್ಥ ನಾಯಕರಾಗಿ ಗುರುತಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಅವರಿಗೆ ಪ್ರಿಯಾಂಕಾ ಗಾಂಧಿ ಹಾಗೂ ರಾಬರ್ಟ್ ವಾದ್ರಾ ಅವರೊಂದಿಗೆ ದಶಕಗಳ ನಿಕಟ ಸಂಬಂಧವಿದೆ. ಸಿಎಂ ಹುದ್ದೆಯ ಕನಸು ಹೊತ್ತು ದೆಹಲಿಗೆ ಹಲವು ಬಾರಿ ಭೇಟಿ ನೀಡಿದ್ದರೂ ಸೂಕ್ತ ರಾಜಕೀಯ ಸ್ಪಷ್ಟನೆ ಸಿಗದೆ ಡಿOption.ಕೆ. ಶಿವಕುಮಾರ್ ತೊಂದರೆ ಅನುಭವಿಸುತ್ತಿದ್ದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಿಯಾಂಕಾ ಗಾಂಧಿ ಅವರೇ ಖುದ್ದಾಗಿ ಶಿವಕುಮಾರ್ ಅವರ ಪರವಾಗಿ ವಾದ ಮಂಡಿಸಿ, ಹೈಕಮಾಂಡ್ ಮಟ್ಟದಲ್ಲಿ ಅವರ ಸ್ಥಾನವನ್ನು ಬಲಪಡಿಸಿದ್ದಾರೆ.

59
ಡಿಕೆಶಿ ಕೈ ಹಿಡಿದ ಪ್ರಮುಖ ಅಂಶಗಳು
Image Credit : Asianet News

ಡಿಕೆಶಿ ಕೈ ಹಿಡಿದ ಪ್ರಮುಖ ಅಂಶಗಳು

ಪಕ್ಷ ಸಂಘಟನೆಯಲ್ಲಿ ಶಿವಕುಮಾರ್ ಅವರು ಅಪ್ರತಿಮ ಸಾಮರ್ಥ್ಯ ಹೊಂದಿರುವ ನಾಯಕ. ಅದನ್ನು ಡಿಕೆಶಿ ಸಾಬೀತು ಮಾಡಿದ್ದಾರೆ. ಚುನಾವಣಾ ಸಮಯದಲ್ಲಿ ಮತ್ತು ಪಕ್ಷದ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಎಲ್ಲವನನೂ ಯಶಸ್ವಿಯಾಗಿ ನಿರ್ವಹಿಸುವ ಕಲೆ ಡಿಕೆಶಿ ಅವರಿಗಿದೆ. ಪ್ರಭಾವಿ ಒಕ್ಕಲಿಗ ಸಮುದಾಯದ ಸಂಪೂರ್ಣ ಬೆಂಬಲ ಹೊಂದಿದ್ದು, ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್ ಭದ್ರಕೋಟೆ ನಿರ್ಮಿಸಿರುವುದು ಕೂಡ ಪ್ರಮುಖವಾಗಿ ಕಾಣಿಸುತ್ತಿದೆ.

69
ಗಾಂಧಿ ಕುಟುಂಬದ ಪರಮ ನಿಷ್ಠಾವಂತ ಟ್ರಬಲ್ ಶೂಟರ್
Image Credit : Asianet News

ಗಾಂಧಿ ಕುಟುಂಬದ ಪರಮ ನಿಷ್ಠಾವಂತ ಟ್ರಬಲ್ ಶೂಟರ್

ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಕಷ್ಟದ ಸಮಯದಲ್ಲಿ ಪಕ್ಷದ ಕೈ ಹಿಡಿದ ನಾಯಕರಿಗೆ ಸೋನಿಯಾ ಗಾಂಧಿ ಯಾವಾಗಲೂ ವಿಶೇಷ ಸಹಾನುಭೂತಿ ಹೊಂದಿದ್ದಾರೆ. ಡಿ.ಕೆ. ಶಿವಕುಮಾರ್ ಸಹ ಅಂತಹದ್ದೇ ಒಂದು ನಿದರ್ಶನ.

ಈ ಹಿಂದೆ ಗುಜರಾತ್‌ನಲ್ಲಿ ನಡೆದ ಕಠಿಣ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ದಿವಂಗತ ಅಹ್ಮದ್ ಪಟೇಲ್ ಅವರ ಗೆಲುವಿಗಾಗಿ ಮತ್ತು ಕಾಂಗ್ರೆಸ್ ಶಾಸಕರ ರಕ್ಷಣೆಗಾಗಿ ನಿಂತಿದ್ದಕ್ಕೆ ತಾವೇ ಸ್ವತಃ ಕಾನೂನುಾತ್ಮಕ ತೊಂದರೆ ಹಾಗೂ ಜೈಲು ವಾಸವನ್ನು ಅನುಭವಿಸಬೇಕಾಯಿತು ಎಂಬುದನ್ನು ಶಿವಕುಮಾರ್ ಹಲವು ಬಾರಿ ಬಹಿರಂಗವಾಗಿಯೇ ಸ್ಮರಿಸಿದ್ದಾರೆ. ಕೇಂದ್ರದ ತನಿಖಾ ಸಂಸ್ಥೆಗಳ ರಾಜಕೀಯ ಒತ್ತಡ, ಸವಾಲುಗಳ ಹೊರತಾಗಿಯೂ ಅವರು ಕಾಂಗ್ರೆಸ್ ಜತೆಗಿನ ನಿಷ್ಠೆಯನ್ನು ಎಂದಿಗೂ ಬದಲಾಯಿಸಲಿಲ್ಲ.

79
 ಸಮಸ್ಯೆ ನಿವಾರಕ ಡಿಕೆಶಿ
Image Credit : Asianet News

ಸಮಸ್ಯೆ ನಿವಾರಕ ಡಿಕೆಶಿ

ಗುಜರಾತ್ ಮಾತ್ರವಲ್ಲದೆ ಹಿಮಾಚಲ ಪ್ರದೇಶ ಹಾಗೂ ತೆಲಂಗಾಣದಂತಹ ರಾಜ್ಯಗಳಲ್ಲಿ ಉಂಟಾಗಿದ್ದ ಸಾಂಸ್ಥಿಕ ಬಿಕ್ಕಟ್ಟುಗಳನ್ನು ಪರಿಹರಿಸುವಲ್ಲಿ ಡಿ.ಕೆ. ಶಿವಕುಮಾರ್ ಅವರು ಗಾಂಧಿ ಕುಟುಂಬದ ಪ್ರಮುಖ 'ಸಮಸ್ಯೆ ನಿವಾರಕ' (Trouble Shooter) ಆಗಿ ಕೆಲಸ ಮಾಡಿದ್ದಾರೆ. ಶಿವಕುಮಾರ್ ಅವರು ಸಂಕಷ್ಟದಲ್ಲಿದ್ದಾಗ ಗಾಂಧಿ ಕುಟುಂಬ ಬೆಂಬಲವಾಗಿ ನಿಂತಿತ್ತು, ಈಗ ಅಧಿಕಾರ ಹಂಚಿಕೆಯ ಸರದಿಯಲ್ಲಿ ಪ್ರಿಯಾಂಕಾ ಗಾಂಧಿ ಅವರು ಶಿವಕುಮಾರ್ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ ಎನ್ನಲಾಗಿದೆ.

89
ಸಮಸ್ಯೆ ನಿವಾರಕ
Image Credit : Asianet News

ಸಮಸ್ಯೆ ನಿವಾರಕ

ಗುಜರಾತ್ ಮಾತ್ರವಲ್ಲದೆ ಹಿಮಾಚಲ ಪ್ರದೇಶ ಹಾಗೂ ತೆಲಂಗಾಣದಂತಹ ರಾಜ್ಯಗಳಲ್ಲಿ ಉಂಟಾಗಿದ್ದ ಸಾಂಸ್ಥಿಕ ಬಿಕ್ಕಟ್ಟುಗಳನ್ನು ಪರಿಹರಿಸುವಲ್ಲಿ ಡಿ.ಕೆ. ಶಿವಕುಮಾರ್ ಅವರು ಗಾಂಧಿ ಕುಟುಂಬದ ಪ್ರಮುಖ 'ಸಮಸ್ಯೆ ನಿವಾರಕ' (Trouble Shooter) ಆಗಿ ಕೆಲಸ ಮಾಡಿದ್ದಾರೆ. ಶಿವಕುಮಾರ್ ಅವರು ಸಂಕಷ್ಟದಲ್ಲಿದ್ದಾಗ ಗಾಂಧಿ ಕುಟುಂಬ ಬೆಂಬಲವಾಗಿ ನಿಂತಿತ್ತು, ಈಗ ಅಧಿಕಾರ ಹಂಚಿಕೆಯ ಸರದಿಯಲ್ಲಿ ಪ್ರಿಯಾಂಕಾ ಗಾಂಧಿ ಅವರು ಶಿವಕುಮಾರ್ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ ಎನ್ನಲಾಗಿದೆ.

99
ಸುಗಮ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಮುಂದು
Image Credit : Asianet News

ಸುಗಮ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಮುಂದು

ಕರ್ನಾಟಕ ಕಾಂಗ್ರೆಸ್‌ನಲ್ಲಿ ಯಾವುದೇ ರೀತಿಯ ಬಂಡಾಯ ಏಳದಂತೆ, ಪ್ರಾದೇಶಿಕ ಹಾಗೂ ಸಾಮಾಜಿಕ ಸಮೀಕರಣಗಳನ್ನು ಸರಿದೂಗಿಸಿಕೊಂಡು ಅತ್ಯಂತ ಸುಗಮವಾಗಿ ಅಧಿಕಾರ ಹಸ್ತಾಂತರ ಮಾಡಲು ಹೈಕಮಾಂಡ್ ತೀವ್ರವಾಗಿ ಶ್ರಮಿಸುತ್ತಿದೆ.

ಮೂಲಗಳ ಪ್ರಕಾರ, ಇತ್ತೀಚೆಗೆ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮನವೊಲಿಸಿದಾಗ, ಸಿದ್ದರಾಮಯ್ಯ ಅವರು ಅಂತಿಮ ತೀರ್ಮಾನವನ್ನು ಹೈಕಮಾಂಡ್‌ಗೆ ಬಿಟ್ಟಿದ್ದರು. ರಾಹುಲ್ ಏನೇ ನಿರ್ಧಾರ ತೆಗೆದುಕೊಂಡರು ನಾನು ಒಪ್ಪುವೆ ಎಂದಿದ್ದರು. ಇದರ ಬೆನ್ನಲ್ಲೇ ಮೇ 26ರ ಮಂಗಳವಾರದಂದು ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರೊಂದಿಗೆ ಮತ್ತೊಂದು ಸುತ್ತಿನ ನಿರ್ಣಾಯಕ ಮಾತುಕತೆ ನಡೆಸಿದ್ದರು. ಈ ಎಲ್ಲಾ ಹೈ-ವೋಲ್ಟೇಜ್ ಬೆಳವಣಿಗೆಗಳನ್ನು ಗಮನಿಸಿದರೆ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಯುಗ ಮುಗಿದು, ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವುದು ಕೇವಲ ಕ್ಷಣಗಣನೆಯಷ್ಟೇ ಬಾಕಿ ಇದೆ ಎಂಬುದು ಸ್ಪಷ್ಟವಾಗುತ್ತದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಕರ್ನಾಟಕ ರಾಜಕೀಯ
ಪ್ರಿಯಾಂಕಾ ಗಾಂಧಿ
ಡಿ.ಕೆ. ಶಿವಕುಮಾರ್
ಕಾಂಗ್ರೆಸ್
ಸಿದ್ದರಾಮಯ್ಯ

Latest Videos
Recommended Stories
Recommended image1
ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ನಾಳೆ ಬೆಳಗ್ಗೆ 10:30ಕ್ಕೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ, ಶಾಸಕರ ಸುಳಿವು
Recommended image2
Karnataka Politics: ಮುಖ್ಯಮಂತ್ರಿಯಾಗಿ ಡಿಕೆಶಿ ಪ್ರಮಾಣ ವಚನಕ್ಕೆ ಮುಹೂರ್ತ ಫಿಕ್ಸ್​? ಸಿದ್ದು ಮುಂದಿನ ನಡೆ ಏನು
Recommended image3
ಕರ್ನಾಟಕ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ಚುನಾವಣೆ ಘೋಷಣೆ! ಜೂ.18ರ ಮತದಾನ, ಬಿಕೆ ಹರಿಪ್ರಸಾದ್ ಗೆಲ್ಲುತ್ತಾರಾ?
Related Stories
Recommended image1
ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ನಾಳೆ ಬೆಳಗ್ಗೆ 10:30ಕ್ಕೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ, ಶಾಸಕರ ಸುಳಿವು
Recommended image2
BREAKING: ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ, ಸಿಎಂ ಸ್ಥಾನಕ್ಕೆ ಗುರುವಾರ ರಾಜೀನಾಮೆ ಸಾಧ್ಯತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved