ರಾಜ್ಯದ ನಿಗಮ- ಮಂಡಳಿಗಳ ಅಧ್ಯಕ್ಷರು, ನಿರ್ದೇಶಕರ ನೇಮಕ ರದ್ದು: 10 ತಿಂಗಳಿಗೆ ಅಧಿಕಾರ ಮುಕ್ತಾಯ

ಬಿಜೆಪಿ ಸರ್ಕಾರದಲ್ಲಿ ನೇಮಕ ಮಾಡಲಾಗಿದ್ದ ಎಲ್ಲ ಅಭಿವೃದ್ಧಿ ನಿಗಮಗಳು, ಮಂಡಳಿಗಳು ಹಾಗೂ ಪ್ರಾಧಿಕಾರದ ಅಧ್ಯಕ್ಷರು, ಪದಾಧಿಕಾರಿಗಳನ್ನು ರದ್ದುಗೊಳಿಸಲಾಗಿದೆ.

Karnataka CM cancels govt boards and corporations president and directors sat

ಬೆಂಗಳೂರು (ಮೇ 22): ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಮೊದಲ ಅಧಿವೇಶನದ ದಿನವೇ ಈ ಹಿಂದಿನ (ಬಿಜೆಪಿ) ಸರ್ಕಾರದಲ್ಲಿ ರಾಜ್ಯದ ಎಲ್ಲ ನಿಗಮ ಮಂಡಳಿಗಳಿಗೆ ನೇಮಕ ಮಾಡಲಾಗಿದ್ದ ಅಧ್ಯಕ್ಷರು, ನಿರ್ದೇಶಕರು ಹಾಗೂ ಪದಾಧಿಕಾರಿಗಳ ನೇಮಕಾತಿಗಳನ್ನು ರದ್ದುಗೊಳಿಸಲಾಗಿದೆ. ಜೊತೆಗೆ, ನಿಗಮ ಮಂಡಳಿಗಳಿಗೆ ನಿಡಲಾದ ಅನುದಾನ ಹಾಗೂ ಹಣ ಹಂಚಿಕೆಯನ್ನು ತತಕ್ಷಣದಿಂದಲೇ ತಡೆ ಹಿಡಿಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಭಾರಿ ಬಹುಮತ ಸಿಕ್ಕಿದೆ. ಇದರ ಬೆನ್ನಲ್ಲೇ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಸಿದ್ದರಾಮಯ್ಯ ಸರ್ಕಾರ ರಚನೆ ಮಾಡಿದ್ದಾರೆ. ಸರ್ಕಾರ ರಚನೆ ಮಾಡಿ ಪ್ರಮಾಣವಚನ ಸ್ವೀಕಾರ ಮಾಡಿದ ಮೊದಲ ದಿನವೇ ಸಚಿವ ಸಂಪುಟ ಸಭೆ ನಡೆಸಿದ ಸಿದ್ದರಾಮಯ್ಯ ಅವರು, ಮೊದಲ ದಿನವೇ ಕಾಂಗ್ರೆಸ್‌ ನೀಡಿದ್ದ 5 ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಆದೇಶ ಹೊರಡಿಸಿದ್ದಾರೆ. ನಂತರ, ಮೊದಲ ಅಧಿವೇಶನ ದಿನವಾದ ಸೋಮವಾರ, ಕಳೆದ ಬಿಜೆಪಿ ಸರ್ಕಾರದಲ್ಲಿ ರಾಜ್ಯದ ಎಲ್ಲ ನಿಗಮ ಮಂಡಳಿಗಳಿಗೆ ನೇಮಕ ಮಾಡಲಾಗಿದ್ದ ಅಧ್ಯಕ್ಷರು, ನಿರ್ದೇಶಕರು ಸೇರಿದಂತೆ ಎಲ್ಲ ಪದಾಧಿಕಾರಿಗಳ ಅಧಿಕಾರವನ್ನು ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ. 

ಡಿಕೆಶಿ ನನ್ನ ದೈವವೆಂದು ಶಾಸಕ ಪ್ರಮಾಣವಚನ: ಹಿಂದು ಹುಲಿ ಯತ್ನಾಳ್‌ ಘರ್ಜನೆ

ಎಲ್ಲ ಸರ್ಕಾರಿ ಸೌಲಭ್ಯಗಳಿಗೆ ಕತ್ತರಿ: ಹಿಂದಿನ ಸರ್ಕಾರದ‌ ಅಕಾಡೆಮಿಗಳು, ನಿಗಮ-ಮಂಡಳಿಗಳ ಅಧ್ಯಕ್ಷ, ಸದಸ್ಯರ, ನಿರ್ದೇಶಕರ ನೇಮಕಾತಿ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ನೇಮಕಾತಿ ರದ್ದು ಮಾಡಿದ ಸಿದ್ದರಾಮಯ್ಯ ಸರ್ಕಾರವು, ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ನಿಗಮ-ಮಂಡಳಿ ಅಧ್ಯಕ್ಷರು, ಸದಸ್ಯರು,‌ನಿರ್ದೇಶಕರನ್ನು ವಜಾಗೊಳಿಸಿದೆ. ತತಕ್ಷಣದಿಂದಲೇ ನಿಗಮ ಮಂಡಳಿಗಳ ಅಧ್ಯಕ್ಷರು, ನಿರ್ದೇಶಕರು ಉಪಯೋಗಿಸುತ್ತಿದ್ದ ಎಲ್ಲ ಸರ್ಕಾರಿ ಸೌಲಭ್ಯಗಳನ್ನು ವಾಪಸ್‌ ಪಡೆಯಲಾಗುತ್ತಿದೆ.

ನಿಗಮ ಮಂಡಳಿಗಳ ಕಾಮಗಾರಿಗಳಿಗೆ ತಡೆ: ಇನ್ನು ಈ ಹಿಂದೆ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರದಿಂದ ರಾಜ್ಯದ ಎಲ್ಲ ಇಲಾಖೆ, ಅಕಾಡೆಮಿಗಳು, ನಿಗಮ ಹಾಗೂ ಮಂಡಳಿಗಳಲ್ಲಿ ಚಾಲನೆ ನೀಡಲಾಗಿದ್ದ ಕಾಮಗಾರಿಗಳಿಗೆ ತಡೆ ನೀಡಲಾಗಿದೆ. ನಿಗಮ, ಮಂಡಳಿ, ಪ್ರಾಧಿಕಾರಗಳ ಕಾಮಗಾರಿಗಳಿಗೆ ತಡೆ ನೀಡಿ ಆದೇಶ ಹೊರಡಿಸಲಾಗಿದೆ. ಜೊತೆಗೆ, ಕಾಮಗಾರಿಗಳಿಗೆ ಸಂಬಂಧಿಸಿದ ಎಲ್ಲ ಮುಂದಿನ ಹಣ ಬಿಡುಗಡೆ, ಹಣ ಪಾವತಿಗಳನ್ನು ತಕ್ಷಣದಿಂದ ತಡೆ ಹಿಡಿಯುವಂತೆ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಆರ್ಥಿಕ ಇಲಾಖೆಯ ಕಾರ್ಯದರ್ಶಿ ಏಕರೂಪ್ ಖೌರ್ ಅವರು ಹಣ ಬಿಡುಗಡೆಯನ್ನು ತಡೆಹಿಡಿಯುವಂತೆ ಆದೇಶಿಸಿದ್ದಾರೆ.

ಹತ್ತು ತಿಂಗಳಿಗೇ ಅಧಿಕಾರ ಮುಕ್ತಾಯ:
ಕರ್ನಾಟಕದ ವಿವಿಧ ನಿಗಮ ಮಂಡಳಿಗಗಳಿಗೆ ಹೊಸ ಅಧ್ಯಕ್ಷರನ್ನ ನಾಮನಿರ್ದೇಶನ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಲಾಗಿತ್ತು. ಒಟ್ಟು 22 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿ 2022ರ ಜುಲೈ 25ರಂದು ಸರ್ಕಾರ ಆದೇಶ ಹೊರಡಿಸಿದ್ದು, ಪಕ್ಷ ನಿಷ್ಠ ನಾಯಕರುಗಳಿಗೆ ಮಣೆ ಹಾಕಲಾಗಿತ್ತು. ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ಶ್ರಮಿಸುತ್ತಿರುವರಿಗೆ ಮುಖಂಡರುಗಳಿಗೆ ನಿಗಮ ಮಂಡಳಿ ನೀಡಲಾಗಿತ್ತು. ಆದರೆ, ಈ ನಾಯಕರಿಗೆ ನಿಗಮ ಮಂಡಳಿಗಳು ಹಾಗೂ ಪ್ರಾಧಿಕಾರಗಳ ಆಡಳಿತ 10 ತಿಂಗಳಿಗೇ ಮುಕ್ತಾಯಗೊಂಡಿದೆ. 

ನಿರುದ್ಯೋಗಿಗಳಿಗೆ ಗುಡ್‌ನ್ಯೂಸ್: 2.5 ಲಕ್ಷ ಉದ್ಯೋಗ ಭರ್ತಿಗೆ ಕ್ರಮ

  • 10 ತಿಂಗಳು ಮಾತ್ರ ಅಧಿಕಾರ ಅನುಭವಿಸಿದವರು: 
  • 1. ಸಫಾಯಿ ಕರ್ಮಚಾರಿ ನಿಗಮ - ಕೆ.ಪಿ.ವೆಂಕಟೇಶ್
  • 2. ಅಲೆಮಾರಿ ಅಭಿವೃದ್ಧಿ ನಿಗಮ-ದೇವೇಂದ್ರನಾಥ್.ಕೆ
  • 3. ಕಾಡುಗೊಲ್ಲ ಅಭಿವೃದ್ಧಿ ನಿಗಮ-ಚಂಗಾವರ ಮಾರಣ್ಣ
  • 4. ವಸ್ತುಪ್ರದರ್ಶನ ಪ್ರಾಧಿಕಾರ-ಮಿರ್ಲೆ ಶ್ರೀನಿವಾಸ
  • 5. ಮಾವು ಅಭಿವೃದ್ಧಿ ನಿಗಮ-ಎಂ.ಕೆ.ವಾಸುದೇವ್
  • 6. ದ್ರಾಕ್ಷಿ, ವೈನ್ ಬೋರ್ಡ್​ - N.M.ರವಿ ನಾರಾಯಣ ರೆಡ್ಡಿ
  • 7. ರೇಷ್ಮೆ ಮಾರಾಟ ಮಂಡಳಿ - ಬಿ.ಸಿ.ನಾರಾಯಣ ಸ್ವಾಮಿ
  • 8. ಲಿಂಬೆ ಅಭಿವೃದ್ಧಿ ಮಂಡಳಿ-ಚಂದ್ರಶೇಖರ ಕವಟಗಿ
  • 9. ಗೇರು ಅಭಿವೃದ್ಧಿ ನಿಗಮ-ಮಣಿರಾಜ ಶೆಟ್ಟಿ
  • 10.ಪಶ್ಚಿಮ ಘಟ್ಟಗಳ ಕಾರ್ಯಪಡೆ - ಗೋವಿಂದ ನಾಯ್ಕ್
  • 11. ಮೈಸೂರು ಮೃಗಾಲಯ ಪ್ರಾಧಿಕಾರ-M.ಶಿವಕುಮಾರ್
  • 12. ಅರಣ್ಯ ಅಭಿವೃದ್ಧಿ ನಿಗಮ-ರೇವಣ್ಣಪ್ಪ ಕೋಳಗಿ
  • 13. ಜೀವ ವೈವಿದ್ಯ ಮಂಡಳಿ - ರವಿಕಾಳಪ್ಪ
  • 14. ಕುರಿ, ಉಣ್ಣೆ ಅಭಿವೃದ್ಧಿ ನಿಗಮ-ಧರ್ಮಣ್ಣ ದೊಡ್ಡಮನೆ
  • 15. ಮೀನುಗಾರಿಕೆ ಅಭಿವೃದ್ಧಿ ನಿಗಮ-A.V.ತೀರ್ಥರಾಮ
  • 16. ಪೇಂಟ್ಸ್, ವಾರ್ನಿಷ್ - ರಘು ಕೌಟಿಲ್ಯ
  • 17. ಜವಳಿ ಅಭಿವೃದ್ಧಿ ನಿಗಮ- ವಿರೂಪಾಕ್ಷಗೌಡ
  • 18. ಖಾದಿ, ಗ್ರಾಮೋದ್ಯೋಗ ಮಂಡಳಿ-K.V.ನಾಗರಾಜ್
  • 19. ಕರಕುಶಲ ಅಭಿವೃದ್ಧಿ ನಿಗಮ-ಮಾರುತಿ ಅಷ್ಟಗಿ
  • 20. ತುಂಗಾಭದ್ರ ಯೋಜನೆ (ಕಾಡಾ)-ಕೊಲ್ಲಾ ಶೇಷಗಿರಿ ರಾವ್
  • 21. ಕಾವೇರಿ ಜಲಾನಯನ ಯೋಜನೆ-ನಿಜಗುಣರಾಜು
  • 22. ಮದ್ಯಪಾನ ಸಂಯಮ ಮಂಡಳಿ-ಮಲ್ಲಿಕಾರ್ಜುನ ತುಬಾಕಿ
Latest Videos
Follow Us:
Download App:
  • android
  • ios