ನಿರುದ್ಯೋಗಿಗಳಿಗೆ ಗುಡ್‌ನ್ಯೂಸ್: 2.5 ಲಕ್ಷ ಉದ್ಯೋಗ ಭರ್ತಿಗೆ ಕ್ರಮ

ನಿರುದ್ಯೋಗಿ ಯುವಕ, ಯುವತಿಯರಿಗೆ ಹಣ ನೀಡಿದರೆ ನಿರುದ್ಯೋಗ ಹೋಗುವುದಿಲ್ಲ. ಹಾಗಾಗಿ, ರಾಜ್ಯದಲ್ಲಿ ಖಾಲಿಯಿರುವ 2.5 ಲಕ್ಷ ಉದ್ಯೋಗಗಳನ್ನು ಭರ್ತಿ ಮಾಡುತ್ತೇವೆ.

Good news for the unemployed Minister Priyanka Kharge promises to fill two lakh jobs sat

ಬೆಂಗಳೂರು (ಮೇ 21): ರಾಜ್ಯದಲ್ಲಿ ಒಟ್ಟಾರೆ 2.5 ಲಕ್ಷ ಉದ್ಯೋಗಗಳು ಖಾಲಿಯಿವೆ. ನಮ್ಮ ಸರ್ಕಾರದಿಂದ ಕೇವಲ ನಿರುದ್ಯೋಗಿ ಯುವಕ, ಯುವತಿಯರಿಗೆ ಹಣ ನೀಡಿದರೆ ನಿರುದ್ಯೋಗ ಹೋಗುವುದಿಲ್ಲ. ಹಾಗಾಗಿ, ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಎಲ್ಲ 2.5 ಲಕ್ಷ ಉದ್ಯೋಗಗಳನ್ನು ಭರ್ತಿ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ. 

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಿರುದ್ಯೋಗವನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ಉದ್ಯೋಗ ಸೃಷ್ಟಿ ಆಗಬೇಕು. ಆದ್ದರಿಂದ ಈಗ ಖಾಲಿ ಇರುವಂತಹ 2.5 ಲಕ್ಷ ಉದ್ಯೋಗಗಳನ್ನು ಭರ್ತಿ ಮಾಡುತ್ತೇವೆ. ಯಾವುದೇ ಸ್ಕೀಮ್ ಅಥವಾ ಉಚಿತ ಯೋಜನೆ ಜೀವನಪೂರ್ತಿಯಾಗಿ ನೀಡುವುದಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಉದ್ಯೋಗ ಭರ್ತಿ ಮೂಲಕ ನಿರುದ್ಯೋಗ ನಿರ್ಮೂಲನೆ ಮಾಡುತ್ತೇವೆ ಎಂದು ಹೇಳಿದರು. 

ಕಾಂಗ್ರೆಸ್‌ ಕೊಟ್ಟ 5 ಗ್ಯಾರಂಟಿಗಳು ಈಡೇರುತ್ತಾ ?: ಈ ಬಗ್ಗೆ ಆರ್ಥಿಕ ತಜ್ಞರು ಹೇಳೋದೇನು ?,

ಪಿಎಸ್‌ಐ ನೇಮಕಾತಿಗೆ ಲಾಜಿಕಲ್‌ ಎಂಡ್‌: ಬಿಟ್ ಕಾಯಿನ್ ಹಗರಣ (Bit coin Scam), ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಪಿಎಸ್‌ಐ) (PSI Scam) ನೇಮಕಾತಿ ಹಗರಣ ಇದೆರಡರ ಬಗ್ಗೆ ಲಾಜಿಕಲ್ ಎಂಡ್ ಸಿಗಲಿದೆ. ಅನೇಕ ಹಗರಣಗಳ ಬಗ್ಗೆ ನಾನು ಮಾತಾಡಿದ್ದೆನು. ಅದಕ್ಕೆ ಖಂಡಿತ ತಾರ್ಕಿಕ ಅಂತ್ಯ ಕಾಣಲಿದೆ‌. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಘೋಷಣೆಗಳನ್ನು ನಾವು ಯೋಜನೆಗಳಾಗಿ ಜಾರಿಗೊಳಿಸುವ ಮೂಲಕ ಜನರಿಗೆ ಸೌಲಭ್ಯಗಳನ್ನು ನೀಡುತ್ತೇವೆ. ಸಹಜವಾಗಿ ಯಾವುದೇ ಯೋಜನೆ ಬಂದಾಗ ಅದಕ್ಕೆ ನಿಯಮಗಳು (ಕಂಡಿಶನ್ ಅಪ್ಲೈ) (congress 5 guarantee condition apply) ಅನ್ವಯವಾಗುತ್ತವೆ. ಕೆಳವರ್ಗದವರ ಬದುಕು ಸುಧಾರಿಸಲಿ ಎಂದು ಎಂಬ ಕಾರಣಕ್ಕೆ ಈ ಸೌಲಭ್ಯ ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು. 

ಕಾಂಗ್ರೆಸ್‌ 5 ಗ್ಯಾರಂಟಿಗಳಿಗೆ ಷರತ್ತುಗಳು ಅನ್ವಯ: ಈ ಮೂಲಕ ರಾಜ್ಯದಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಘೋಷಣೆ ಮಾಡಿದ್ದ 5 ಗ್ಯಾರಂಟಿಗಳು ಹಾಗೂ ಭರವಸೆಗಳಿಗೆ ಕೆಲವು ಷರತ್ತುಗಳು ಅನ್ವಯವಾಗಲಿವೆ ಎಂದು ಪರೋಕ್ಷವಾಗಿ ಹೇಳಿದರು. ಜೊತೆಗೆ, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (chief minister Siddaramaiah) ಅವರು ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಮುಂದಿನ ಕ್ಯಾಬಿನೆಟ್ ನಲ್ಲಿ ಅಧಿಕೃತ ಆದೇಶ ಆಗಬಹುದು ಎಂದು ತಿಳಿಸಿದರು.

'ಚುನಾವಣೆ ವೇಳೆ ನುಡಿದಂತೆ ನಡೆದಿದ್ದೇವೆ, ಎಷ್ಟೇ ಆರ್ಥಿಕ ಹೊರೆ ಬಂದರೂ 5 ಗ್ಯಾರಂಟಿ ಜಾರಿ'

ಬಿಜೆಪಿ ಸೋಲಿಸಲು ಪ್ರಯತ್ನಿಸಿದರೂ ಕೈಬಿಡದ ಜನ: ನಾನು ಸಚಿವನಾಗಲು ಅರ್ಹನಲ್ಲವಾ? ನಾನು ನಿರೀಕ್ಷೆ ಇಟ್ಟಿರಲಿಲ್ಲ. ಆದರೆ ಚಿತ್ತಾಪುರದಿಂದ 3 ಬಾರಿ ಗೆದ್ದಿದ್ದೇನೆ (chittapur constitunecy MLA Priyank Kharge) ಎಂದರೆ ಎನೊ ಇರಬೇಕಲ್ಲ. ತನ್ನ ಸೋಲಿಸಲು ಅನೇಕ ರೀತಿ ಬಿಜೆಪಿ ಪ್ರಯತ್ನ ಮಾಡಿತು. ಆದರೆ ಜನ ನನ್ನ ಕೈ ಬಿಡಲಿಲ್ಲ. ಬಿಜೆಪಿಯಿಂದ ಅರವಿಂದ್ ಚೌಹಾಣ್ (BJP Aravind Chouhan)  ಕೂಡ ಬಂದರು. ಈಗ ನನ್ನ ಗೆಲುವು ಆಗಿದೆ. ಈಗ ಸಚಿವ ಸ್ಥಾನ (Minister post) ನೀಡಿದ್ದಾರೆ ಎಂದು ಮಾಹಿತಿ ನೀಡಿದರು. 

Latest Videos
Follow Us:
Download App:
  • android
  • ios