ಡಿಕೆಶಿ ನನ್ನ ದೈವವೆಂದು ಶಾಸಕ ಪ್ರಮಾಣವಚನ: ಹಿಂದು ಹುಲಿ ಯತ್ನಾಳ್ ಘರ್ಜನೆ
ವಿಧಾನಸಭಾ ಅಧಿವೇಶನದಲ್ಲಿ ಶಾಸಕನಾಗಿ ಪ್ರಮಾಣವಚನ ಸ್ವೀಕಾರ ಮಾಡುವ ವೇಳೆ ಚನ್ನಗಿರಿ ಕ್ಷೇತ್ರದ ಶಾಸಕ ಬಸವರಾಜ್ ಶಿವಗಂಗ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕಾರ ಮಾಡಿದ್ದಾರೆ.
ಬೆಂಗಳೂರು (ಮೇ 22): ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಶಾಸಕನಾಗಿ ಪ್ರಮಾಣವಚನ ಸ್ವೀಕಾರ ಮಾಡುವ ವೇಳೆ ಚನ್ನಗಿರಿ ಕ್ಷೇತ್ರದ ಶಾಸಕ ಬಸವರಾಜ್ ಶಿವಗಂಗ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕಾರ ಮಾಡಿದ್ದಾರೆ.
ರಾಜ್ಯದಲ್ಲಿ ಮೇ 24ರಿಂದ ಸರ್ಕಾರ ಕಾರ್ಯಾರಂಭ ಮಾಡಬೇಕಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ 3 ದಿನ ವಿಧಾನಸಭಾ ಅಧಿವೇಶನ ಆರಂಭ ಮಾಡಲಾಗಿದೆ. ಆದರೆ, ಈ ವೇಳೆ ಚನ್ನಗಿರಿ ಕ್ಷೇತ್ರದ ಶಾಸಕ ಬಸವರಾಜ್ ಶಿವಗಂಗ ಅವರು ನನ್ನ ಆರಾಧ್ಯ ದೈವ ಡಿ ಕೆ ಶಿವಕುಮಾರ್ ಮೇಲೆ ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆಂದು ಪ್ರತಿಜ್ಞೆ ಸ್ವೀಕಾರ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಚ್ಚೆತ್ತ ಹಂಗಾಮಿ ಸ್ಪೀಕರ್ ಆರ್.ವಿ. ದೇಶಪಾಂಡೆ ಅವರು ವ್ಯಕ್ತಿಗತ ಹೆಸರಿನಲ್ಲಿ ಪ್ರಮಾಣವಚನ ತೆಗೆದುಕೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂತರ ಶಾಸಕ ಬಸವರಾಜ್ ಅವರಿಗೆ ದೇವರ ಹೆಸರಲ್ಲಿ ಪ್ರತಿಜ್ಞೆ ಸ್ವೀಕರಿಸುವಂತೆ ತಾಕೀತು ಮಾಡಿದ್ದಾರೆ.
ಮೊದಲ ಹಂತದಲ್ಲಿ ಸಚಿವಸ್ಥಾನ ನೀಡಲು ಮೀನಾಮೇಷ: ಕಾಂಗ್ರೆಸ್ ಕ್ಯಾಬಿನೆಟ್‌ನಲ್ಲಿ ಕಾಣದ ನಿಜ ಕಲ್ಯಾಣ!...
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಗವಂತನ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಎರಡನೇಯದಾಗಿ ಡಿಸಿಎಂ ಡಿಕೆಶಿವಕುಮಾರ್ ನೊಣವಿನಕೆರೆ ಗಂಗಾಧರ ಅಜ್ಜನ ಹೆಸರಲ್ಲಿ ಹಾಗೂ ಸತ್ಯ, ನಿಷ್ಠೆಯ ಮೇಲೆ ಪ್ರಮಾಣ ಮಾಡಿದರು. ಮೂರನೆಯದಾಗಿ ಸಚಿವ ಡಾ.ಜಿ ಪರಮೇಶ್ವರ ಅವರು ಸಂವಿಧಾನದ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕೆ.ಹೆಚ್.ಮುನಿಯಪ್ಪ, ಎಂಬಿ ಪಾಟೀಲ್, ರಾಮಲಿಂಗಾರೆಡ್ಡಿ ಹಾಗೂ ಕೆಜೆ ಜಾರ್ಜ್ ಭಗವಂತನ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ನಂತರ ಸತೀಶ್ ಜಾರಕಿಹೊಳಿ ಅವರು ಸಂವಿಧಾನದ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದರು.
ನಿಮ್ಮನ್ನು ಎಬ್ಬಿಸಬೇಕು ಎಂದು ಕಿಚಾಯಿಸಿದ ಡಿಕೆಶಿ: ಪ್ರಮಾಣವಚನ ಪಡೆದುಕೊಂಡ ಬಳಿಕ ಪ್ರತಿಪಕ್ಷ ಶಾಸಕರನ್ನು ಮಾತಾಡಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಸವನಗೌಡ ಪಾಟೀಲ್ ಯತ್ನಾಳ್ ಸವರನ್ನೂ ಮಾತನಾಡಿದರು. ಇವರನ್ನು ಮಾತನಾಡಲು ಬೇಗಬೇ ಎಬ್ಬಿಸಬೇಕಪ್ಪ ಎಂದು ತಮಾಷೆ ಮಾಡಿದರು. ಇನ್ನು ಬಿಜೆಪಿ ಸದಸ್ಯರ ಸಾಲಿನಲ್ಲಿ ಜನಾರ್ದನ ರೆಡ್ಡಿ ಅವರಿಗೆ ಸ್ಥಾನ ನೀಡಲಾಯಿತು. ನೊಂದಾಯಿತ ರಾಜಕೀಯ ಪಕ್ಷವಾಗಿರುವ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಅಧ್ಯಕ್ಷ ಆಗಿರುವ ಜನಾರ್ದನ ರೆಡ್ಡಿ, ವಿಧಾನಸಭೆಗೆ ಕಾಲಿಟ್ಟರು.
ಹಿಂದುತ್ವ ಗೋಮಾತೆ ಹೆಸರಲ್ಲಿ ಪ್ರಮಾಣವಚನ: ವಿಜಯಪುರದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಹಿಂದುತ್ವ ಮತ್ತು ಗೋಮಾತೆ ಹೆಸರಿನಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಪ್ರಮಾಣವಚನ ಸ್ವೀಕರಿಸಿದರು. ದರ್ಶನ್ ಧ್ರುವ ನಾರಾಯಣ್ - ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕಾರ, ದರ್ಶನ್ ಪುಟ್ಟಣ್ಣಯ್ಯ - ಸತ್ಯ ನಿಷ್ಠೆ ಪ್ರತಿಜ್ಞೆ ಮೂಲಕ ಪ್ರಮಾಣ ವಚನ ಸ್ವೀಕಾರ, ಜಿಟಿ ದೇವೇಗೌಡ - ತಾಯಿ ಚಾಮುಂಡೇಶ್ವರಿ ದೇವರ ಮೇಲೆ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಅಧಿವೇಶನದ ನಂತರ ಸಂಪುಟ ವಿಸ್ತರಣೆ: ಡಿಸಿಎಂ ಡಿ.ಕೆ.ಶಿವಕುಮಾರ್
ಸದನದಲ್ಲಿ ರಾರಾಜಿಸಿದ ಹಸಿರು ಶಾಲು, ಕೇಸರಿ ಪೇಟ: ಶಾಸಕ ವಿಠಲ್ ಹಲಗೇಕರ್ ಅವರು ಕೇಸರಿ ಪೇಟಾ ಕಟ್ಟಿಕೊಂಡು ಸದನದಲ್ಲಿ ಹಾಜರಾದರು. ಶಿವಮೊಗ್ಗದ ಚನ್ನಬಸಪ್ಪ ಅವರು ಕೇಸರಿ ಶಾಲು ಹಾಕಿಕೊಂಡು ಬಂದಿದ್ದರು. ಮಂಡ್ಯ ಜಿಲ್ಲೆಯ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಎನ್.ಹೆಚ್. ಕೋನರೆಡ್ಡಿ ಅವರು ಹಸಿರು ಶಾಲು ಹಾಕಿ ಸದನಕ್ಕೆ ಆಗಮಿಸಿದರು. ವಿಜಯಾನಂದ ಕಾಶಪ್ಪನವರ್ ಅವರು ಕೇಸರಿ, ಬಿಳಿ ಹಸಿರು ಶಾಲು ಹಾಕಿಕೊಂಡು ಬಂದಿದ್ದರು. ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕಿ ಖನೀಜಾ ಫಾತೀಮಾ ಅವರು ಎಂದಿನಂತೆ ಹಿಜಾಬ್ ಹಾಕಿಕೊಂಡು ಬಂದಿದ್ದರು.