ಬೆಂಗಳೂರು, (ಸೆ.18):  ಹಲವು ತಿಂಗಳುಗಳ ವಿಫಲ ಪ್ರಯತ್ನ ಮತ್ತು ಮುಂದೂಡಿಕೆಗಳ ನಂತರ ಕೊನೆಗೂ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು (ಶುಕ್ರವಾರ) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

"

ನವದೆಹಲಿಯ ಪಾರ್ಲಿಮೆಂಟ್ ಹೌಸ್ ನಲ್ಲಿ ಭೇಟಿಯಾಗಿದ್ದು, ಸುಮಾರು 15 ನಿಮಿಷ ಚರ್ಚೆ ಮಾಡಿದ್ದು, ಈ ವೇಳೆ ನವೆಂಬರ್ 19 ರಂದು ನಡೆಯಲಿರುವ ಬೆಂಗಳೂರು ಟೆಕ್ ಸಮ್ಮಿಟ್ ಉದ್ಘಾಟಿಸಲು ಪ್ರಧಾನಿಗೆ ಆಹ್ವಾನ ನೀಡಿದರು.

'ನಿಮ್ಮ ನಾಯಕರ ಎದೆಯಳತೆಯ ಮುಂದೆ ಮಣಿಯಬೇಡಿ ಸಿಎಂ ಸಾಹೇಬ್ರೆ, ಧೈರ್ಯದಿಂದ ಕೇಳಿ'

ನಾಯಕತ್ವ ಬದಲಾವಣೆ ಬಗ್ಗೆ ‌ಸಿಎಂ ಯಡಿಯೂರಪ್ಪ ಜತೆ ಚರ್ಚಿಸದ ಪ್ರಧಾನಿ ನರೇಂದ್ರ ಮೋದಿ,  ರಾಜ್ಯ ರಾಜಕೀಯದ ಪರಿಸ್ಥಿತಿ ಬಗ್ಗೆ ಸೂಕ್ಷ್ಮವಾಗಿ ಗಮನ ಹರಿಸಿದ್ದಾರೆ.

ಭೇಟಿ ವೇಳೆ ಯಡಿಯೂರಪ್ಪ ಮುಂದೆ ನಾಯಕತ್ವದ ಬದಲಾವಣೆಯ ನೇರ ಪ್ರಸ್ತಾಪವೇ ಇಲ್ಲ. ಜೆ.ಪಿ.ನಡ್ಡಾ,  ಅಮಿತ್ ಷಾ  ಭೇಟಿ ಬಳಿಕವಷ್ಟೇ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.

ವಿವಿಧ ಬೇಡಿಕೆ ಈಡೇರಿಸಲು ಮನವಿ

ಬೆಂಗಳೂರು ಸಅರ್ಬನ್ ರೈಲು ಯೋಜನೆಗೆ ಆರ್ಥಿಕ ವ್ಯವಹಾರಗಳ ಸಮಿತಿಯಿಂದ ಒಪ್ಪಿಗೆ. ಮೇಕೆದಾಟು, ಕಳಸಾ ಬಂಡೂರಿ ಯೋಜನೆ ಅಡಚಣೆಗಳ ಬಗೆಹರಿಸುವಂತೆ ಕೋರಿದರು. 

ಅಲ್ಲದೇ ಇದೇ ವೇಳೆ ರಾಜ್ಯದಲ್ಲಿ ಪ್ರವಾಹ ಹಿನ್ನಲೆ NDRF ನಿಂದ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಹಾಗೂ ಕೃಷ್ಣ ಮೆಲ್ಡೆಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ ಎಂದು ಮನವಿ ಮಾಡಿದರು.