ಬೈ ಎಲೆಕ್ಷನ್ ರಿಸಲ್ಟ್: ಹಾರಿದ ಕಾಗೆ, ಮತ್ತೆ 'ಶ್ರೀಮಂತ'

ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವಲ್ಲಿ ಪಾತ್ರ ನಿರ್ವಹಿಸಿದ ಜಿಲ್ಲೆಯ ಮೂರು ಕ್ಷೇತ್ರಗಳ ಪೈಕಿ ಕಾಗವಾಡವೂ ಒಂದು. ಈ ಮೂಲಕ ರಾಜ್ಯದ ಗಮನ ಸೆಳೆದಿದ್ದು, ಇಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
 

Karnataka Bypolls results 2019  BJP Candidate Sreemanth Patil Wins In Kagwad

ಬೆಳಗಾವಿ, (ಡಿ.09): ರಾಜ್ಯರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಉಪಚುನಾವಣಾ ಫಲಿತಾಂಶಗಳು ಪ್ರಕಟವಾಗಿವೆ. ಭಾರೀ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದ ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಗೆದ್ದು ಬೀಗಿದ್ದಾರೆ. 

LIVE: ಮತ ಎಣಿಕೆ ಆರಂಭ, ಬಿಜೆಪಿಯದ್ದೇ ಪಾರಮ್ಯ

ಆದ್ರೆ, ಶ್ರೀಮಂತ ಪಾಟೀಲ್ ಪಡೆದ ಮತಗಳು ಹಾಗೂ ಗೆಲುವಿನ ಅಂತರ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಸತತ 20 ವರ್ಷಗಳಿಂದ ಕಾಗವಾಡ ಕ್ಷೇತ್ರದಲ್ಲಿ ರಾಜು ಕಾಗೆ ಶಾಸಕರಾಗಿದ್ದರು. 2018ರಲ್ಲಿ ನಡೆದ ಚುನಾವಣೆಯಲ್ಲಿ ಬದಲಾವಣೆ ಬಯಸಿದ್ದರಿಂದ ಶ್ರೀಮಂತ ಪಾಟೀಲ್‌ ಆಯ್ಕೆಯಾಗಿದ್ದರು.

ಹಳೆ ಎದುರಾಳಿಗಳು, ಪಕ್ಷ ಅದಲು ಬದಲು; ಕಾಗವಾಡ ಯಾರ ಪಾಲು?

ಟಿಕೆಟ್ ಸಿಗದೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜು ಕಾಗೆ ಭಾರೀ ಮುಖಭಂಗವಾಗಿದ್ದು, ಕಾಗವಾಡ ಕ್ಷೇತ್ರದ ಜನರು ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಕೈ ಹಿಡಿದಿದ್ದಾರೆ.

ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಸೋಲಿಸಲೆಂದೇ ಕುಮಾರಸ್ವಾಮಿ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಶ್ರೀಶೈಲ ಪರಸಪ್ಪ ತೂಬಶೆಟ್ಟಿ ಅವರನ್ನು ಕಣಕ್ಕಿಳಿಸಿದ್ದರು.  ಆದ್ರೆ, ಕುಮಾರಸ್ವಾಮಿ ತಂತ್ರಗಾರಿಕೆ, ಇನ್ನು ಅನರ್ಹರನ್ನು ಸೋಲಿ ಪ್ರಜಾಪ್ರಭತ್ವ ಗೆಲ್ಲಿಸಿ ಎಂದು ಹೇಳುತ್ತಿದ್ದ ಕಾಂಗ್ರೆಸ್‌ನ ರಣತಂತ್ರ ನೆಲಕಚ್ಚಿದೆ.

 ಡಿ.05ರಂದು ನಡೆದ ಉಪಚುನಾವಣೆಯಲ್ಲಿ 76.24 ಶೇ. ಮತದಾನವಾಗಿತ್ತು. 2018ರಲ್ಲಿ ನಡೆದ ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಂದ ಸೆಣಸಾಟ ನಡೆಸಿದ್ದ ಅಭ್ಯರ್ಥಿಗಳೇ ಸದ್ಯ 2019ರ ಉಪಚುನಾವಣೆಯಲ್ಲೂ ಪರಸ್ಪರ ಪಕ್ಷಾಂತರಗೊಂಡು ಅಖಾಡದಲ್ಲಿದ್ದರು. ಕೊನೆಗಳಿಗೆಯಲ್ಲಿ ಕಾಗವಾಡದ ಮತದಾರರು ಅನರ್ಹ ಶಾಸಕ ಶ್ರೀಮಂತ ಪಾಟೀಲ್‌ನ ಮತ್ತೊಮ್ಮೆ ಗೆಲ್ಲಿಸಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ  ಶ್ರೀಮಂತ್ ಪಾಟೀಲ್  83060 ಮತಗಳನ್ನು ಪಡೆಯುವ ಮೂಲಕ ಜಯಭೇರಿ ಬಾರಿಸಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ರಾಜು ಕಾಗೆ 50188 ಮತಗಳನ್ನು ಪಡೆದಿದ್ದರು. ಜೆಡಿಎಸ್‌ನ ಕಲ್ಲಪ್ಪ ಪಾರಿಸ್ ಮಾಗೆಣ್ಣವರ್ 7337 ವೋಟುಗಳನ್ನು ಪಡೆದಿದ್ದರು.

ಕಳೆದ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಚುನಾಯಿತರಾಗಿದ್ದ ಶ್ರೀಮಂತ ಪಾಟೀಲ ಎದುರು ಬಿಜೆಪಿಯ ಭರಮಗೌಡ (ರಾಜು) ಕಾಗೆ ಅವರು ಸೋಲಿನ ರುಚಿ ಅನುಭವಿಸಿದ್ದರು. ಆದರೆ ಬದಲಾದ ರಾಜ್ಯ ರಾಜಕಾರಣದಲ್ಲಿ ಕಳೆದ ಚುನಾವಣೆಯಲ್ಲಿ ತನ್ನ ವಿರುದ್ಧ ತೊಡೆತಟ್ಟಿದ್ದ ಅನರ್ಹ ಶಾಸಕ ಶ್ರೀಮಂತ ಪಾಟೀಲ ಅವರನ್ನೇ ಬಿಜೆಪಿ ತನ್ನ ಹುರಿಯಾಳನ್ನಾಗಿ ಕಣಕ್ಕಿಳಿಸಿತ್ತು.

Latest Videos
Follow Us:
Download App:
  • android
  • ios