Asianet Suvarna News Asianet Suvarna News

ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಅಧಿಕಾರ ಹಸ್ತಾಂತರಿಸಿದ ಕಟೀಲ್‌

ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿರುವ ಬಿವೈ ವಿಜಯೇಂದ್ರ ಅವರು ಅಧಿಕಾರ ಸ್ವೀಕರಿಸಿದ್ದಾರೆ.

Karnataka BJP state president BY Vijayendra take charge gow
Author
First Published Nov 15, 2023, 11:07 AM IST

ಬೆಂಗಳೂರು (ನ.15): ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿರುವ ಬಿವೈ ವಿಜಯೇಂದ್ರ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದಗ್ರಹಣ ಸಮಾರಂಭದಲ್ಲಿ ಪಕ್ಷದ ಜವಾಬ್ದಾರಿಯನ್ನು ನಿಕಟಪೂರ್ವ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಅವರು ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಪಕ್ಷದ ಹಿರಿಯ ನಾಯಕರು, ಹಾಲಿ ಶಾಸಕರು ಸೇರಿ ಹಲವು ಮಂದಿ ಈ ಕಾರ್ಯಕ್ರಮದಲ್ಲಿ ನೆರೆದಿದ್ದರು.

ಪದಗ್ರಹಣ ಹಿನ್ನೆಲೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ರಸ್ತೆಯುದ್ಧಕ್ಕೂ ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ. ಬೆಳಗ್ಗೆ  ಬಿಜೆಪಿ ಕಚೇರಿ ತಲುಪಿದ ವಿಜಯೇಂದ್ರ ಅವರಿಗೆ ಮಹಿಳೆಯರಿಂದ ಪೂರ್ಣ ಕುಂಭ ಸ್ವಾಗತ ದೊರೆಯಿತು ಬಳಿಕ ಕಾರ್ಯಕರ್ತರು ಸೇಬಿನ ಹಣ್ಣಿನ ಹಾರ ಹಾಕಿ ಸ್ವಾಗತ ಕೋರಿದರು. ಬಿಜೆಪಿ ಕಚೇರಿಯಲ್ಲಿ ಬೆಳಗ್ಗೆಯಿಂದಲೇ ಪೂಜೆ ಹೋಮ, ಹವನ ನಡೆದಿದ್ದು, ವಿಜಯೇಂದ್ರ ಅವರು ಭಾಗಿಯಾದರು. ಹೋಮ ಹವನ ಪೂರ್ಣಾಹುತಿಯಲ್ಲಿ ತೊಡಗಿರುವ ವಿಜಯೇಂದ್ರ  ಅವರಿಗೆ ನಿಕಟಪೂರ್ವ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಸಾಥ್  ನೀಡಿದರು.

ಪುತ್ರ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ: ಬಿಜೆಪಿಯಲ್ಲಿ ಕೊನೆಗೂ ಮೇಲುಗೈ ಸಾಧಿಸಿದ ಯಡಿಯೂರಪ್ಪ..!

ಇದರ ಜೊತೆಗೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದ್ದು. ಕಚೇರಿ ಆವರಣದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು, ಡೋಲು, ಚೆಂಡೆ, ವಾದ್ಯಗಳನ್ನು ನುಡಿಸಿ ಕಾರ್ಯಕರ್ತರು ಹೆಜ್ಜೆ ಹಾಕಿ ಸಂಭ್ರಮಿದರು. ವೀರಗಾಸೆ ಕುಣಿತ ಹಾಗೂ ವಿವಿಧ ಕಲಾಪ್ರಕಾರಗಳು ಗಮನ ಸೆಳೆಯಿತು.

ತಂದೆಯ ಹಾದಿ ತುಳಿದ ವಿಜಯೇಂದ್ರಗೆ ಮಹತ್ತರ ಹುದ್ದೆ..!

ಬೆಳಿಗ್ಗೆ 11 ಗಂಟೆಗೆ‌ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆದಿದ್ದು,  ಪದಗ್ರಹಣ ಕಾರ್ಯಕ್ರಮಕ್ಕೆ ಬಿಜೆಪಿ ಹಾಲಿ ಹಾಗೂ ‌ಮಾಜಿ ಶಾಸಕರಿಗೆ ವಿಜಯೇಂದ್ರ ಅವರೇ ಸ್ವತಃ ದೂರವಾಣಿ ಕರೆ ಮಾಡಿ ಆಹ್ವಾನ ನೀಡಿದ್ದರು. ಹಿರಿಯ ನಾಯಕ ಬಿಎಸ್‌ ಯಡಿಯೂರಪ್ಪ, ಈಶ್ವರಪ್ಪ, ಶ್ರೀರಾಮುಲು, ರಾಮಚಂದ್ರೆ ಗೌಡ, ಕಾರಜೋಳ, ಬೈರತಿ ಬಸವರಾಜ್ ಬೈರತಿ ಡಿ ಹೆಚ್ ಶಂಕರ್ ಮೂರ್ತಿ, ಮಾಜಿ ಸಿಎಂ ಬೊಮ್ಮಾಯಿ ವೇದಿಕೆಯಲ್ಲಿ ಉಪಸ್ಥಿತಿಯಿದ್ದರು.

ಕಾರ್ಯಕ್ರಮದ ಬಳಿಕ ಮಾತನಾಡಿದ ವಿಜಯೇಂದ್ರ ಪಿಎಂ ಮೋದಿ, ಅಮಿತ್ ಶಾ, ನಡ್ಡಾ  ಸಂತೋಷ್ ಅವರ ಆಶಿರ್ವಾದ ದಿಂದ ನನಗೆ ಜವಬ್ದಾರಿ ನೀಡಿದ್ದಾರೆ. ಎಲ್ಲಾರಿಗೂ ಧನ್ಯವಾದಗಳು. ಸಂಘ ಪರಿವಾರದ ನಾಯಕರಿಗೆ ಧನ್ಯವಾದಗಳು. ನೀವು ನೀಡಿದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವೆ. ಜೀವನದಲ್ಲಿ ಮೊದಲ ಬಾರಿಗೆ ಶಾಸಕ ಆಗಲು ಸಹಕರಿಸಿದ ಶಿಕಾರಿಪುರ ಜನತೆಗೆ ಸಂಘದ ಪ್ರಮುಖರಿಗೆ ಅಭಿನಂದನೆಗಳು. 

ನಾನು ನಮ್ಮ ಪಾರ್ಟಿಯ ಎಲ್ಲಾ ಹಿರಿಯರಿಗೂ ವಯಕ್ತಿಕವಾಗಿ ಮಾತಾಡುವ ಪ್ರಯತ್ನ ಮಾಡಿದ್ದೇನೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುವ ಮೂಲಕ ಮೋದಿ ಪ್ರಧಾನಿ ಆಗಬೇಕು. ಇದು ನಮ್ಮ ಸ್ವಾರ್ಥ ಅಲ್ಲ. ಇದು ದೇಶಕ್ಕಾಗಿ. ವಿಧಾನಸಭೆ ಯಲ್ಲಿ ಸ್ವಲ್ಪ ಹಿನ್ನಡೆ ಆಗಿದೆ. ಯಡಿಯೂರಪ್ಪ ನಡೆಯನ್ನು ಹತ್ತಿರದಿಂದ ನೋಡಿದ್ದೇನೆ. ಅನೇಕ ಹಿರಿಯರು ಇರುವಾಗ ನನಗೆ ಜವಬ್ದಾರಿ ನೀಡಿದ್ದಾರೆ. ಆ ಹುದ್ದೆಯ ಜವಬ್ದಾರಿಯ ಅರಿವಿದೆ‌.  ನಾಯಕರು, ಕಾರ್ಯಕರ್ತರು ಯಾರೂ ಕೂಡ ತಲೆ ತಗ್ಗಿಸಿ ಹೊಕಗದಂತೆ ನೋಡಿಕೊಳ್ಳುತ್ತೇನೆ.

40% ಆರೋಪ ನಮ್ಮ ಮೇಲೆ ಮಾಡಿದ್ರು. ಈಗ ಅದನ್ನು ಜಾರಿಗೆ ತರೋಕೆ  ಹೊರಟಿದೆ ಈ ಸರ್ಕಾರ. ಬರ ಭೀಕರವಾಗಿದೆ. ಒಬ್ಬ ಸಚಿವ ಹೋಗ್ತಾ ಇಲ್ಲ
ರಾಜ್ಯದಲ್ಲಿ ರೈತರ ಸಮಸ್ಯೆಗೆ ಸ್ಪಂದನೆ ಮಾಡುತ್ತಿಲ್ಲ. ಉದ್ದಟತನದಿಂದ ಕೆಲಸ ಮಾಡುತ್ತಿದೆ. ಭ್ರಷ್ಟ ಸರ್ಕಾರಕ್ಕೆ ತಕ್ಕ ಉತ್ತರ ನೀಡಬೇಕಿದೆ.
ಎಲ್ಲಾರೂ ಒಟ್ಟಾಗಿ ಒಂದಾಗಿ ಹೋಗಬೇಕಿದೆ. ಜಿಲ್ಲಾ ಪಂಚಾಯತ ತಾಲೂಕು ಪಂಚಾಯತಿ ಕಾರ್ಯಕರ್ತ ಚುನಾವಣೆ ಅದು ಕಾರ್ಯಕರ್ತರ ಚುನಾವಣೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದಿದ್ದಾರೆ.

Follow Us:
Download App:
  • android
  • ios