* ಕಾಂಗ್ರೆಸ್ ಎತ್ತಿನಗಾಡಿ ಪ್ರತಿಭಟನೆಗೆ ಬಿಜೆಪಿ ಅಧ್ಯಕ್ಷ ವ್ಯಂಗ್ಯ* ಬಿಜೆಪಿ ಸರ್ಕಾರ ಇರುವುದರಿಂದ ಎತ್ತುಗಳು ಉಳಿದಿವೆ ಎಂದ ಕಟೀಲ್* ಬೆಲೆ ಏರಿಕೆ ವಿರೋಧಿಸಿ ಎತ್ತಿನಗಾಡಿ ಪ್ರತಿಭಟನೆ ಮಾಡಿದ ಕಾಂಗ್ರೆಸ್

ಬೆಂಗಳೂರು, (ಸೆ.13): ಕಾಂಗ್ರೆಸ್ ನಾಯಕರಿಂದ ಎತ್ತಿನಗಾಡಿ ಚಲೋ ಪ್ರತಿಭಟನೆ ನಡೆಸಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

Add Asianetnews Kannada as a Preferred SourcegooglePreferred

ಬೆಂಗಳೂರಿನಲ್ಲಿ ಇಂದು (ಸೆ.13) ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಕಟೀಲ್, ಬಿಜೆಪಿ ಸರ್ಕಾರ ಇರುವುದರಿಂದ ಎತ್ತುಗಳು ಉಳಿದಿವೆ. ಇಲ್ಲದಿದ್ದರೆ ಎತ್ತುಗಳೆಲ್ಲಾ ಕಸಾಯಿಖಾನೆಗೆ ಹೋಗುತ್ತಿದ್ದವು ಎಂದರು.

'ಪ್ರಾಣಿಗಳಿಗೆ ತೊಂದ್ರೆ ಕೊಡೋ ಬದ್ಲು ಸೈಕಲ್​ನಲ್ಲಿ ಬಂದಿದ್ರೆ ಚೆನ್ನಾಗಿರ್ತಿತ್ತು'

ಇನ್ನು ಇದೇ ವೇಳೆ ನಂಜನಗೂಡಿನಲ್ಲಿ ಏಕಾಏಕಿ ದೇವಾಲಯ ತೆರವು ವಿಚಾರವಾಗಿಯೂ ಮಾತನಾಡಿದ್ದು, ವ್ಯವಸ್ಥೆಗೆ ಸುಪ್ರೀಂ ಕೋರ್ಟ್ ಆದೇಶ ಪಾಲಿಸುವ ಜವಾಬ್ದಾರಿ ಇದೆ. ಆದರೆ ಧಾರ್ಮಿಕ ಕ್ಷೇತ್ರಗಳನ್ನು ಉಳಿಸಬೇಕಾದ ಅಗತ್ಯವಿದೆ. ಹೀಗಾಗಿ ಸರ್ಕಾರದ ಜತೆ ಚರ್ಚಿಸಿ ತೀರ್ಮಾನ ಮಾಡ್ತೇವೆ ಎಂದು ಹೇಳಿದರು.

ಇನ್ನು ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನಾಯಕ ಎತ್ತಿನ ಬಂಡಿ ಪ್ರತಿಭಟನೆ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಎತ್ತಿನ ಬಂಡಿ ಏರಿ ಹಸುಗಳಿಗೆ ತೊಂದರೆ ಕೊಡೋ ಬದಲು ಸೈಕಲ್​ ಏರಿ ಪ್ರತಿಭಟನೆ ಮಾಡಿದ್ದರೆ ಚೆನ್ನಾಗಿರ್ತಿತ್ತು ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.