ನವದೆಹಲಿ, (ಜ.14): ರಾಜ್ಯ ಬಿಜೆಪಿಯ ನಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ನಿದ್ದೆಗೆಡಿಸಿದೆ.

ನವದೆಹಲಿಯಲ್ಲಿ ಬಿಜೆಪಿ ವರಿಷ್ಟರು ರಾಜ್ಯ ನಾಯಕರೊಂದಿಗೆ ಸಭೆ ಮೇಲೆ ಸಭೆ ನಡೆಸಿದ್ದು, ಹತ್ತು ಹಲವು ಸೂಚನೆಗಳನ್ನು ನೀಡಿದ್ದಾರೆ.

ಹಲಿ ಚಳಿಯಲ್ಲಿ ಆಪರೇಷನ್ ಕ್ಲೈಮ್ಯಾಕ್ಸ್, BSY ಫುಲ್ ರಿಲ್ಯಾಕ್ಸ್

ಅದರಲ್ಲೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೀಡುತ್ತಿರುವ ಹೇಳಿಕೆಗಳಾಗಲಿ ಅಥವಾ ತಮ್ಮ ಶಾಸಕರುಗಳಿಗೆ ನೀಡುತ್ತಿರುವ ಸೂಚನೆಗಳು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಬಿಎಸ್‌ವೈ ಸೂಚನೆಯಂತೆ ನವದೆಹಲಿಯಲ್ಲಿರುವ ಬಿಜೆಪಿಯ ಎಲ್ಲಾ ಶಾಸಕರು ರೆಸ್ಟಾರ್ಟ್ ನತ್ತ ಮುಖ ಮಾಡಿದ್ದಾರೆ.

ಅಖಾಡಕ್ಕಿಳಿದ ಡಿ.ಕೆ.ಶಿವಕುಮಾರ್: ಮುಂಬೈನತ್ತ ಕಾಂಗ್ರೆಸ್ ಟ್ರಬಲ್ ಶೂಟರ್

ಯಡಿಯೂರಪ್ಪ ಅವರು ದೆಹಲಿಯಿಂದ ನೇರವಾಗಿ ಬೆಂಗಳೂನತ್ತ ಮುಖ ಮಾಡಿದ್ದರೆ,  ಬಿಜೆಪಿ ಎಲ್ಲಾ ಶಾಸಕರು ಹರಿಯಾಣದ ಗುರುಗ್ರಾಮನಲ್ಲಿರುವ ರೆಸ್ಟಾರ್ಟ್‌ಗೆ ತೆರಳಲು ಸಜ್ಜಾಗಿದ್ದಾರೆ ಎನ್ನುವ ಖಚಿತ ಮಾಹಿತಿ ಸುವರ್ಣನ್ಯೂಸ್ ಗೆ ಲಭ್ಯವಾಗಿದೆ.

ಬಿಜೆಪಿಯ ನಡೆಯನ್ನು ನೋಡಿದ್ರೆ  ಆಪರೇಷನ್ ಕಮಲ ಮೂಲಕ ಸರ್ಕಾರ ಪತನಗೊಳಿಸಲು ಸಹ ಬಿಜೆಪಿ ಮುಂದಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಇದಕ್ಕೂ ಮೊದಲು ತಮ್ಮ ಶಾಸಕರನ್ನು ಸಂರಕ್ಷಿಸುವ ದೃಷ್ಠಿಯಿಂದ ದೆಹಲಿಯಿಂದ ಶಾಸಕರನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ ಎನ್ನಲಾಗಿದೆ.

ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲೆಂದು ಮೂರು ದಿನಗಳ ಮುಂಚೆ ತೆರಳಿದ್ದ ರಾಜ್ಯ ಬಿಜೆಪಿ ಬೆಂಗಳೂರಿಗೆ ವಾಪಸ್ ಆಗದೆ ಗುಪ್ತ ಸ್ಥಳಕ್ಕೆ ಹೊರಟಿರುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಮೂಡಿಸಿದೆ.