ಬೆಂಗಳೂರು, [ಜ.14]: ಕಾಂಗ್ರೆಸ್ ಹಾಗೂ ಜೆಡಿಎಸ್  ರಾಜ್ಯ ಮೈತ್ರಿ ಸರ್ಕಾರಕ್ಕೆ ತಳಮಳ ಶುರುವಾಗಿದೆ.

ಸಚಿವ ಸ್ಥಾನ ವಂಚಿತ ಕೆಲ ಅತೃಪ್ತ ಶಾಸಕರು ಮುನಿಸಿಕೊಂಡಿದ್ದು, ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗದೆ ಮೈತ್ರಿ ಸರ್ಕಾರವನ್ನು ಶೇಕ್ ಮಾಡುತ್ತಿದ್ದಾರೆ.  

ದೆಹಲಿ ಚಳಿಯಲ್ಲಿ ಆಪರೇಷನ್ ಕ್ಲೈಮ್ಯಾಕ್ಸ್, BSY ಫುಲ್ ರಿಲ್ಯಾಕ್ಸ್

ಕಳೆದ ಕೆಲವು ದಿನಗಳಿಂದ ನವದೆಹಲಿಯಲ್ಲಿ ಬಿಡಾರ ಹೂಡಿದ್ದ ಕೆಲ ಅತೃಪ್ತ ಕಾಂಗ್ರೆಸ್ ಶಾಸಕರು ಮುಂಬೈಗೆ ಶಿಫ್ಟ್ ಆಗಿದ್ದಾರೆ. ಅದರಲ್ಲೂ ರಮೇಶ್ ಜಾರಕಿಹೊಳಿ ನಡೆ ರಾಜ್ಯ ಮೈತ್ರಿ ಸರ್ಕಾರವನ್ನು ನಿದ್ದೆಗೆಡಿಸಿದೆ.

ಇದು ಕಾಂಗ್ರೆಸ್ ಹಾಗೂ ಸಮ್ಮೀಶ್ರ ಸರಕಾರದ ಮುಖಂಡರಿಗೆ ಮತ್ತು ವಿಶೇಷವಾಗಿ ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ಗೂ ದೊಡ್ಡ ತಲೆ ನೋವಾಗಿದೆ. 

ಅಖಾಡಕ್ಕಿಳಿದ ಡಿಕೆಶಿ
ಹೌದು, ಮುನಿಸಿಕೊಂಡು ಪಕ್ಷದಿಂದ ದೂರ ಉಳಿದಿರುವ ಶಾಸಕರನ್ನು ಮನವೊಲಿಸಲು  ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅಖಾಡಕ್ಕಿಳಿದಿದ್ದಿಾರೆ.

ಅತೃಪ್ತ ಟೀಂ ಮುಂಬೈನಲ್ಲಿರುವು ಖಚಿತವಾಗಿರುವುದರಿಂದ ಅವರನ್ನು ಸಮಾಧಾನ ಮಾಡಲು ಡಿ.ಕೆ. ಶಿವಕುಮಾರ್ ಅವರು ಸೆಮಿನಾರ್ ನೆಪದಲ್ಲಿ ನಾಳೆ [ಮಂಗಳವಾರ] ಮುಂಬೈಗೆ ತೆರಳಲಿದ್ದಾರೆ.

ಅತೃಪ್ತರನ್ನು ಸಮಾಧಾನಿಸುವ ಹೊಣೆ ಹೊತ್ತಿರುವ  ಡಿ.ಕೆ. ಶಿವಕುಮಾರ್ 3 ದಿನ ಮುಂಬೈನಲ್ಲೇ ವಾಸ್ತವ್ಯ ಹೂಡಲಿದ್ದು, ಅತೃಪ್ತ ಶಾಸಕರನ್ನು ಭೇಟಿ ಮಾಡಿ ಅವರ ಜೊತೆ ಮಾತುಕತೆ ನಡೆಸುವ ಸಾಧ್ಯತೆಗಳಿವೆ.

ಮತ್ತೊಂದೆಡೆ ಎರಡ್ಮೂರು ದಿನಗಳಲ್ಲಿ ಸಿಹಿ ಸುದ್ದಿ ಕೊಡುವುದಾಗಿ ಬಿಜೆಪಿ ಶಾಸಕರಿಗೆ ಬಿ.ಎಸ್. ಯಡಿಯೂರಪ್ಪ ಅವರು ಹೇಳಿರುವುದು ರಾಜ್ಯ ರಾಜಕಾರಣ ದಿನದಿಂದ ದಿನಕ್ಕೆ ಕುತೂಹಲ ಮೂಡಿಸಿದೆ.