Asianet Suvarna News Asianet Suvarna News

ಜೆಡಿಎಸ್‌ನ ಭದ್ರಕೋಟೆ ಹಾಸನ ಕ್ಷೇತ್ರದಲ್ಲಿ ಪ್ರೀತಂಗೌಡ ಶಾಸಕರಾದದ್ದು ಸಣ್ಣ ಸಾಧನೆಯಲ್ಲ!

ಒಬ್ಬ ಬುದ್ಧಿವಂತ ರಾಜಕಾರಣಿಗೆ ಇರಬೇಕಾದ ಎಲ್ಲಾ ರೀತಿಯ ಗುಣಲಕ್ಷಣಗಳು ಪ್ರೀತಂ ಗೌಡರಲ್ಲಿ ಕಾಣಬಹುದು, ಸ್ಪಷ್ಟವಾಗಿ ಮಾತನಾಡುವ ರೀತಿ, ಭಾಷೆ ಮೇಲಿನ ಹಿಡಿತ, ಕೇಳಿದ ಪ್ರಶ್ನೆಗೆ ಮಾತ್ರ ಉತ್ತರಿಸಿ ಅನವಶ್ಯಕ ವಿವಾದಗಳನ್ನ ಮೈಮೇಲೆ ಎಳೆದುಕೊಳ್ಳದಿರುವ ಬುದ್ದಿವಂತಿಕೆ, ಒಟ್ಟಿನಲ್ಲಿ ಹಾಸನದಲ್ಲಿ ಕುಟುಂಬ ರಾಜಕಾರಣ ಕಂಡಿರುವ ಜನತೆಗೆ ಪ್ರೀತಂ ಗೌಡರು ದೀ ಬೆಸ್ಟ್ ರಾಜಕಾರಣಿ.

Karnataka assembly ellection Hassans people should vote for development rav
Author
First Published Apr 22, 2023, 9:52 AM IST

- ಶ್ರೀನಿವಾಸ,ಕೆ.ಬಿ.

ಒಬ್ಬರು ಮಾಜಿ ಪ್ರಧಾನಿ, ಒಬ್ಬರು ಮಾಜಿ ಮುಖ್ಯಮಂತ್ರಿ ಮತ್ತು ಹಾಸನದಲ್ಲೇ ದಶಕಗಳಿಂದ ರಾಜಕೀಯ ನಡೆಸುತ್ತಿರುವ ಪ್ರಭಾವಿಯೊಬ್ಬರು ಹಾಗೂ ಪ್ರಸ್ತುತ ಸಂಸದರಾಗಿರುವ ಇವರ ಮಗ ಪ್ರಜ್ವಲ್ ರೇವಣ್ಣ ಇಷ್ಟು ಜನರು ಒಬ್ಬನೇ ಒಬ್ಬ ಪ್ರೀತಂ ಗೌಡರನ್ನ ಸೋಲಿಸೋಕೆ ಪಣ ತೊಟ್ಟು ನಿಂತಿರೋದು ನೋಡಿದ್ರೆ ಪ್ರೀತಂ ಗೌಡರು ಅಭಿಮನ್ಯು ಥರ ಅರ್ಧಂಬರ್ಧ ತಿಳಿದು ಚಕ್ರವ್ಯೂಹಕ್ಕೆ ನುಗ್ಗಿಲ್ಲ ಅನಸ್ತಿದೆ, ಕ್ಷೇತ್ರದ ಆಳ ಅಗಲವನ್ನ ಪೂರ್ತಿಯಾಗಿ ತಿಳಿದುಕೊಂಡೇ ನುಗ್ಗಿದ್ದಾರೆ.

ಒಬ್ಬ ಬುದ್ಧಿವಂತ ರಾಜಕಾರಣಿಗೆ ಇರಬೇಕಾದ ಎಲ್ಲಾ ರೀತಿಯ ಗುಣಲಕ್ಷಣಗಳು ಪ್ರೀತಂ ಗೌಡರಲ್ಲಿ ಕಾಣಬಹುದು, ಸ್ಪಷ್ಟವಾಗಿ ಮಾತನಾಡುವ ರೀತಿ, ಭಾಷೆ ಮೇಲಿನ ಹಿಡಿತ, ಕೇಳಿದ ಪ್ರಶ್ನೆಗೆ ಮಾತ್ರ ಉತ್ತರಿಸಿ ಅನವಶ್ಯಕ ವಿವಾದಗಳನ್ನ ಮೈಮೇಲೆ ಎಳೆದುಕೊಳ್ಳದಿರುವ ಬುದ್ದಿವಂತಿಕೆ, ಎಷ್ಟೇ ಕೆರಳಿಸಿ ಪ್ರಚೋದಿಸಿದರೂ ಎದುರಾಳಿಗಳ ಮೇಲೆ ವೈಯಕ್ತಿಕವಾಗಿ ದಾಳಿ ಮಾಡದೇ ಸೈದ್ಧಾಂತಿಕವಾಗಿ ವಿರೋಧಿಸುವ ರೀತಿ, ಇದೆಲ್ಲ ನೋಡ್ತಿದ್ರೆ ಪ್ರೀತಂ ಗೌಡರು ದೀ ಬೆಸ್ಟ್ ರಾಜಕಾರಣಿ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ ಅನ್ಸುತ್ತೆ.

ಹೊಳೆನರಸೀಪುರದಲ್ಲಿ ರೇವಣ್ಣ V/S ಪ್ರೀತಂಗೌಡ?

ಹಾಸನ ಅಂದ್ರೆ ಸಾಕು ಅದು ಜೆಡಿಎಸ್ ಭದ್ರಕೋಟೆ ಎಂದೇ ಪ್ರಸಿದ್ಧಿ, ಅಂತಹ ಕೋಟೆಯನ್ನ ಮೊದಲ ಪ್ರಯತ್ನದಲ್ಲೇ ಬೇಧಿಸಿ ಶಾಸಕ ಆಗಿದ್ದು ಸಣ್ಣ ಸಾಧನೆಯಲ್ಲ, ಈ ಮನುಷ್ಯ ವಿರೋಧಿಗಳ ಬಗ್ಗೆ ಟೀಕೆ ಮಾಡಿದ್ದಕ್ಕಿಂತ ಹೆಚ್ಚಾಗಿ ತನ್ನ ಕ್ಷೇತ್ರದ ಜನರನ್ನ ಪ್ರೀತಿಸಿದ್ದು, ಎಂತದ್ದೇ ಸಂದರ್ಭ ಬಂದರೂ ತನ್ನ ಕ್ಷೇತ್ರದ ಜನರನ್ನ ಬಿಟ್ ಕೊಡೋದೆ ಇರೋದು, ಪ್ರತಿ ಬಾರಿ ಮಾಧ್ಯಮಗಳ ಮುಂದೆ ಮಾತಾಡುವಾಗ ತನ್ನ ಮತದಾರರ ಬಗ್ಗೆ ತನ್ನ ಕಾರ್ಯಕರ್ತರ ಬಗ್ಗೆ ಆತ್ಮವಿಶ್ವಾಸದಿಂದ ಹಾಗೂ ಹೆಮ್ಮೆಯಿಂದ ಮಾತಾಡಿದ್ದೇ ಹೆಚ್ಚು, ಬಹುಶಃ ಇದೇ ಕಾರಣಕ್ಕೆ ಅನ್ಸುತ್ತೆ ಹಾಸನ ಜನತೆ ಈ ಮನುಷ್ಯನ ಹಿಂದೆ ಇಷ್ಟು ಗಟ್ಟಿಯಾಗಿ ನಿಂತಿರೋದು.

ವಿರೋಧಿಗಳಿಗೆ ಮಣಿಯದೆ ಪ್ರೀತಂ ಗೌಡರು ಮತ್ತೊಮ್ಮೆ ಗೆಲ್ಲೊದಂತೂ ಪಕ್ಕಾ, ಅಕಸ್ಮಾತ್ ಸೋತ್ರೆ ಅದು ಎದುರಾಳಿಗಳ ಕುತಂತ್ರದಿಂದ ಅಷ್ಟೇ, ಅದೇನಾದ್ರು ಇರಲಿ ಹಾಸನದ ಜನತೆ ಮಾತ್ರ ಯಾವುದೇ ಕಾರಣಕ್ಕೂ ಇಂತಹ ಅದ್ಭುತ ನಾಯಕನನ್ನ ಸೋಲಿಸಬಾರದು, ಹಾಸನ ಒಂದು ಕುಟುಂಬಕ್ಕೆ ಸೀಮಿತವಾದದ್ದಲ್ಲ, ಅಭಿವೃದ್ಧಿಗೆ ನಮ್ಮ ಮತ ಅನ್ನೋದನ್ನ ಮತ್ತೊಮ್ಮೆ ತೋರಿಸಬೇಕು, ಈ ಬಾರಿ ಮತ್ತೊಮ್ಮೆ ಪ್ರೀತಂ ಗೌಡರು ಗೆದ್ದರೆ ಹಾಸನ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಹೊಂದುತ್ತೆ, ಯಾಕಂದ್ರೆ ಕುಟುಂಬವನ್ನ ಮಾತ್ರ ಬೆಳೆಸೊಕೆ ಪ್ರೀತಂ ಗೌಡರೇನು ಜೆಡಿಎಸ್ ಪಕ್ಷದಲ್ಲಿಲ್ಲ.

ಪ್ರೀತಂ ಗೌಡರ ಆತ್ಮವಿಶ್ವಾಸ ನೋಡ್ತಿದ್ರೆ ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಮುಂಬರುವ ದಿನಗಳಲ್ಲಿ ನಿಧಾನವಾಗಿ ತನ್ನ ಅಸ್ತಿತ್ವ ಉಳಿಸಿಕೊಳ್ಳೊಕೂ ಪರದಾಡುತ್ತೇನೊ ಅಂತ ಅನುಸ್ತಿದೆ, ಈ ಸಲ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ್ರೆ ಇವರಿಗೊಂದು ಸಚಿವ ಸ್ಥಾನ ಕೊಡ್ಬೇಕು, ಆಮೇಲೆ ಹಾಸನ ಆಲ್ಮೋಸ್ಟ್ ಕೇಸರಿಮಯ ಆಗೋದಂತೂ ಪಕ್ಕಾ.

ಇಷ್ಟು ದಿನ ನಿಮ್ಮ ಹವಾ, ಇನ್ಮುಂದೆ ನಮ್ಮದೇ ಹವಾ: ಸಂಸದ ಪ್ರಜ್ವಲ್‌ ರೇವಣ್ಣ ಸವಾಲು

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Follow Us:
Download App:
  • android
  • ios