- Home
- News
- Politics
- Karnataka assembly election 2023: ಮತದಾನ ಬಳಿಕ ಸ್ವಗ್ರಾಮದಲ್ಲಿ ಆಟೋ ಓಡಿಸಿ ಖುಷಿ ಪಟ್ಟ ಡಿಕೆಶಿ
Karnataka assembly election 2023: ಮತದಾನ ಬಳಿಕ ಸ್ವಗ್ರಾಮದಲ್ಲಿ ಆಟೋ ಓಡಿಸಿ ಖುಷಿ ಪಟ್ಟ ಡಿಕೆಶಿ
ಬೆಂಗಳೂರು (ಮೇ.10): ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮತದಾನ ಪ್ರಭುಗಳು ಬೆಳಗ್ಗಿನಿಂದಲೇ ಉತ್ಸಾಹದಿಂದ ಬಂದು ಮತದಾನ ಮಾಡಿದ್ದಾರೆ. ಕನಕಪುರದಲ್ಲಿ ಡಿಕೆ ಶಿವಕುಮಾರ್ ಮತದಾನ ಮಾಡಿವುದರ ಜೊತೆಗೆ ಆಟೋ ರಿಕ್ಷಾ ಓಡಿಸಿ ಸಂಭ್ರಮ ಪಟ್ಟಿದ್ದಾರೆ.

ಮತಚಲಾಯಿಸಲು ಸ್ವಗ್ರಾಮಕ್ಕೆ ಬಂದಿದ್ದ ಡಿಕೆ ಶಿವಕುಮಾರ್ ಮತದಾನ ಮಾಡಿದ ಬಳಿಕ ಆಟೋ ಓಟಿಸಿದರು. ಸ್ವಗ್ರಾಮದಲ್ಲಿ ಆಟೋ ಚಲಾಯಿಸಿ ಖುಷಿ ಪಟ್ಟರು.
ಆಟೋದಲ್ಲಿ ಸ್ವಗ್ರಾಮ ದೊಡ್ಡಾಲನಹಳ್ಳಿಯಲ್ಲಿ ಸಂಚಾರ ನಡೆಸಿದ ಡಿಕೆಶಿ, ಈ ವೇಳೆ ಕೆಲ ದೂರ ಸ್ವತಃ ಆಟೋ ಓಡಿಸಿ ಖುಷಿ ಪಟ್ಟರು.
ಸ್ವಗ್ರಾಮದಲ್ಲಿ ಆಟೋ ಓಡಿಸಿ ಡಿಕೆಶಿ ಖುಷಿ ಪಟ್ಟರೆ, ಇದೇ ವೇಳೆ ಗ್ರಾಮಸ್ಥರು ಶಿವಕುಮಾರ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು.
ಮತದಾನಕ್ಕೂ ಮುನ್ನ ಕುಲ ದೈವ ಶ್ರೀ ಕೆಂಕೇರಮ್ಮ ತಾಯಿಯ ಆಶೀರ್ವಾದ ಪಡೆದ ಡಿಕೆಶಿ, ತಾಯಿ ಕೆಂಕೇರಮ್ಮ ಸರ್ವರಿಗೂ ಸನ್ಮಂಗಳ ಉಂಟುಮಾಡಲಿ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಕುಟುಂಬದ ಸದಸ್ಯರು ದೊಡ್ಡ ಆಲನಹಳ್ಳಿಯ ಮತಗಟ್ಟೆ ಸಂಖ್ಯೆ 245ರಲ್ಲಿ ಮತದಾನ ಮಾಡಿದ್ದಾರೆ.
ಡಿಕೆಶಿ ಪತ್ನಿ ಉಷಾ, ಪುತ್ರಿ ಐಶ್ವರ್ಯ, ಆಭರಣ ಮತ್ತು ಆಕಾಶ್ . ಡಿಕೆಶಿ ಸಹೋದರ ಸಂಸದ ಡಿಕೆ ಸುರೇಶ್ ಮತದಾನ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.