Karnataka Election Exit Poll ಏಷ್ಯಾನೆಟ್ ಚುನಾವಣೋತ್ತರ ಸಮೀಕ್ಷೆ ಪ್ರಕಟ, ಬಿಜೆಪಿ ಅತೀದೊಡ್ಡ ಪಕ್ಷ!
ಕರ್ನಾಟಕ ವಿಧಾನಸಭಾ ಚುನಾವಣಾ ಮತದಾನ ಅಂತ್ಯಗೊಂಡಿದೆ. ಈ ಬಾರಿ ಶೇಕಡಾ ರಷ್ಟು ಮತದಾನವಾಗಿದೆ. ಇದೀಗ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಳ್ಳುತ್ತಿದೆ. ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಜನ್ ಕಿ ಬಾತ್ ಪ್ರಕಟಿಸಿದ ಸಮೀಕ್ಷೆಯಲ್ಲಿ ಈ ಬಾರಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದಿದೆ. ಆದರೆ ಕಾಂಗ್ರೆಸ್ ಠಕ್ಕರ್ ನೀಡುವ ಸಾಧ್ಯತೆಯನ್ನೂ ಹೇಳಿದೆ.
ಬೆಂಗಳೂರು(ಮೇ.10): ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಮುಖ ಘಟ್ಟ ಅಂತ್ಯಗೊಂಡಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರಗೆ 58,282 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಇದೀಗ ಕುತೂಹಲ ಯಾರಿಗೆ ಗೆಲುವು? ಯಾರಿಗೆ ಅಧಿಕಾರ. ಮತದಾನ ಅಂತ್ಯಗೊಂಡ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದೆ. ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಜನ್ ಕಿ ಬಾತ್ ನಡೆಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ ಸ್ಪಷ್ಟ ಬಹುಮತ ಬರದಿದ್ದರೂ, ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದಿದೆ. ಈ ಬಾರಿ ಬಿಜೆಪಿ 94 ರಿಂದ 117ಸ್ಥಾನ ಗೆಲ್ಲಲಿದೆ ಎಂದಿದೆ. ಇನ್ನು ಕಾಂಗ್ರೆಸ್ 96 ರಿಂದ 106 ಸ್ಥಾನ ಗೆಲ್ಲಲಿದೆ ಎಂದರೆ ಜೆಡಿಎಸ್ 14 ರಿಂದ 24 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಇತರರ 2 ಸ್ಥಾನ ಗೆಲ್ಲುವ ಸಾಧ್ಯತೆಗಳಿವೆ ಎಂದು ಏಷ್ಯಾನೆಟ್ ಸುವರ್ಣನ್ಯೂಸ್-ಜನ್ ಕಿ ಬಾತ್ ಸಮೀಕ್ಷೆ ಹೇಳಿದೆ
ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಜನ್ ಕಿ ಬಾತ್ ಸಮೀಕ್ಷೆ
ಬಿಜೆಪಿ: 94 ರಿಂದ 117 ಸ್ಥಾನ
ಕಾಂಗ್ರೆಸ್: 96 ರಿಂದ 106 ಸ್ಥಾನ
ಜೆಡಿಎಸ್: 14 ರಂದ 24 ಸ್ಥಾನ
ಇತರರು: 2 ಸ್ಥಾನ
Karnataka Elections 2023 LIVE: ಎಕ್ಸಿಟ್ ಪೋಲ್‌ನಲ್ಲಿ ಸಿಕ್ತು ಅತಂತ್ರ ಸರ್ಕಾರದ ಸೂಚನೆ
ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಗೆ 5,21,73,579 ಮತದಾರರು ಮತದಾನಕ್ಕೆ ಅರ್ಹರಾಗಿದ್ದರು. ಇದರಲ್ಲಿ ಶೇಕಡಾ ರಷ್ಟು ಮಂದಿ ಮತದಾನ ಮಾಡಿದ್ದಾರೆ. ರಾಜ್ಯದಲ್ಲಿ ಒಟ್ಟು 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಸುಗಮ ಮತದಾನಕ್ಕಾಗಿ ಚುನಾವಣಾ ಆಯೋಗ ಎಲ್ಲಾ ಸಿದ್ಧತೆ ಮಾಡಿಕೊಂಡಿತ್ತು. ನಗರ ಪ್ರದೇಶದಲ್ಲಿನ ಮತಗಟ್ಟೆಗಳು ಸಂಖ್ಯೆ 24063. ಇನ್ನು ಗ್ರಾಮೀಣ ಪ್ರದೇಶದಲ್ಲಿ 34219 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಒಟ್ಟು ಮತಗಟ್ಟೆಗಳ ಪೈಕಿ 12,000 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿತ್ತು.
ಏಷ್ಯಾನೆಟ್ ಸುವರ್ಣನ್ಯೂಸ್ ಸಮೀಕ್ಷೆ
ಬಿಜೆಪಿ: ಶೇಕಡಾ 37.5 ರಿಂದ 39 ವೋಟ್ ಶೇರ್
ಕಾಂಗ್ರೆಸ್: ಶೇಕಡಾ 38 ರಿಂದ 40 ವೋಟ್ ಶೇರ್
ಜೆಡಿಎಸ್: ಶೇಕಡಾ 14 ರಿಂದ 17 ವೋಟ್ ಶೇರ್
ಇತರರು: ಶೇಕಡಾ 6 ರಿಂದ 8.5 ವೋಟ್ ಶೇರ್
2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಗೆದ್ದಿತ್ತು. ಕಾಂಗ್ರೆಸ್ 80 ಸ್ಥಾನ ಗೆದ್ದುಕೊಂಡಿತ್ತು. ಇನ್ನು ಜೆಡಿಎಸ್ 37 ಸ್ಥಾನ ಗೆದ್ದುಕೊಂಡಿತ್ತು. ಇತರರ 3 ಸ್ಥಾನ ಗೆದ್ದುಕೊಂಡಿದ್ದರು.ಆಪರೇಶನ್ ಕಮಲದ ಬಳಿಕ ಹಾಲಿ ಬಿಜೆಪಿ ಸ್ಥಾನ 119. ಕಾಂಗ್ರೆಸ್ ಹಾಲಿ ಸ್ಥಾನ 69 ಹಾಗೂ ಜೆಡಿಎಸ್ ಹಾಲಿ ಸ್ಥಾನ 32ಕ್ಕೆ ಕುಸಿದಿದೆ.
Karnataka Election Exit Poll ಏಷ್ಯಾನೆಟ್ ಚುನಾವಣೋತ್ತರ ಸಮೀಕ್ಷೆ ಪ್ರಕಟ, ಬಿಜೆಪಿ ಅತೀದೊಡ್ಡ ಪಕ್ಷ!
ಇಂದು(ಮೇ.10) ಕರ್ನಾಟಕ ವಿಧಾನಸಭಾ ಚುನಾವಣೆ ನಡೆದಿದೆ. ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡು ಸಂಜೆ 6 ಗಂಟೆ ವರೆಗೆ ಮತದಾನ ನಡಿದಿದೆ. ಕೆಲ ಮತಗಟ್ಟೆಗಳಲ್ಲಿ ಕಾರ್ಯಕರ್ತರು, ನಾಯಕರ ನಡುವಿನ ಸಣ್ಣ ಪ್ರಮಾಣದ ಘರ್ಷಣೆ ಹೊರತುಪಡಿಸಿದರೆ ಕರ್ನಾಟಕ ವಿಧಾನಸಭಾ ಚುನಾವಣೆ ಶಾಂತಿಯುತವಾಗಿ ನಡೆದಿದೆ.