Asianet Suvarna News Asianet Suvarna News

ವಿಧಾನಸಭಾ ಚುನಾವಣೆ ಹಿನ್ನೆಲೆ ; ವಿಜಯಪುರ ಪೊಲೀಸ್ ಹೈ ಅಲರ್ಟ್!

ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ ಅವರು ಸೋಮವಾರ ರಾತ್ರಿ ದಿಢೀರವಾಗಿ ಜಿಲ್ಲೆಯ  ವಿವಿಧ ಚೆಕ್‌ ಪೋಸ್ಟ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Karnataka assembly election - Vijayapur police highalerts  rav
Author
First Published Mar 28, 2023, 9:29 PM IST

ವಿಜಯಪುರ (ಮಾ.28): ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ ಅವರು ಸೋಮವಾರ ರಾತ್ರಿ ದಿಢೀರವಾಗಿ ಜಿಲ್ಲೆಯ  ವಿವಿಧ ಚೆಕ್‌ ಪೋಸ್ಟ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಯಲಗೂರು ಅಂತರ್‌ ಜಿಲ್ಲಾ ಚೆಕ್‌ಪೋಸ್ಟ್‌ಗೆ ಡಿಸಿ, ಎಸ್ಪಿ ಭೇಟಿ..!

ಸೋಮವಾರ ಮಧ್ಯರಾತ್ರಿ ನಿಡಗುಂದಿ ಯಲಗೂರು ಕ್ರಾಸಿನಲ್ಲಿ ಸ್ಥಾಪಿಸಿರುವ ಅಂತರ್ ಜಿಲ್ಲಾ ಚೆಕ್ ಫೋಸ್ಟ್(Checkpost) ಭೇಟಿ ನೀಡಿದ ಅವರು, ಚೆಕ್‍ಪೋಸ್ಟ್ಗ ಗಳ ಮೂಲಕ ಹಾದು ಹೋಗುವ ಪ್ರತಿಯೊಂದು ವಾಹನಗಳ ತಪಾಸಣೆ ನಡೆಸಬೇಕು. ಚುನಾವಣೆ ಹಿನ್ನಲೆ ವಾಹನ ತಪಾಸಣೆ ನಡೆಸುತ್ತಿರುವ ಕುರಿತು ಸಾರ್ವಜನಿಕರಿಗೆ ತಿಳಿ ಹೇಳಬೇಕು. ಸಾರ್ವಜನಿಕರೊಂದಿಗೆ ಸೌಹಾರ್ದತೆಯಿಂದ ನಡೆದುಕೊಳ್ಳಬೇಕು. ಚುನಾವಣಾ ಕರ್ತವ್ಯದಲ್ಲಿ ಲೋಪಕ್ಕೆ ಆಸ್ಪದ ನೀಡಬಾರದು. ಪರಸ್ಪರ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಅಕ್ರಮ ಕಂಡು ಬಂದಲ್ಲಿ ಕಾನೂನು ರಿತ್ಯ ಕ್ರಮ ಜರುಗಿಸುವಂತೆ ಅವರು ತಿಳಿಸಿದರು. 

ಕೋಮುವಾದ ಪಕ್ಷಗಳಿಂದ ದೇಶ ಇಬ್ಭಾಗ: ಮುಖ್ಯಮಂತ್ರಿ ಚಂದ್ರು

ಜಿಲ್ಲೆಯಲ್ಲಿ ಎಷ್ಟು ಕಡೆಗಳಲ್ಲಿ ಚೆಕ್‌ಪೋಸ್ಟ್!

ಈಗಾಗಲೇ ಜಿಲ್ಲೆಯ ಮುದ್ದೇಬಿಹಾಳ ಮತಕ್ಷೇತ್ರ(Muddebihal assembly constitueny)ದಲ್ಲಿ 2, ದೇವರಹಿಪ್ಪರಗಿ(Devarahipparagi) ಮತಕ್ಷೇತ್ರದಲ್ಲಿ 1, ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ 2, ಬಬಲೇಶ್ವರ ಮತಕ್ಷೇತ್ರದಲ್ಲಿ 7, ವಿಜಯಪುರ ನಗರ ಮತಕ್ಷೇತ್ರದ ವ್ಯಾಪ್ತಿಯಲ್ಲಿ 3, ನಾಗಠಾಣ ಮತಕ್ಷೇತ್ರದಲ್ಲಿ 7, ಇಂಡಿ ಮತಕ್ಷೇತ್ರದಲ್ಲಿ 2 ಹಾಗೂ ಸಿಂದಗಿ ಮತಕ್ಷೇತ್ರದಲ್ಲಿ 3 ಸೇರಿದಂತೆ ಒಟ್ಟು 27 ಚೆಕ್ ಪೋಸ್ಟ್‍ಗಳನ್ನು ಸ್ಥಾಪಿಸಿ ಚುನಾವಣಾ ಅಕ್ರಮದ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಈ ಸಂದರ್ಭದಲ್ಲಿ ನಿಡಗುಂದಿ ಠಾಣಾಧಿಕಾರಿ ಹಾಗೂ ಚೆಕ್ ಫೋಸ್ಟ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮುಸ್ಲಿಂ ಸಮುದಾಯವನ್ನು ನಾನೆಂದಿಗೂ ಕಡೆಗಣಿಸಿಲ್ಲ: ಬಿಜೆಪಿ ಶಾಸಕ ನಡಹಳ್ಳಿ

ಉಪವಿಭಾಗಾಧಿಕಾರಿಗಳಿಂದ ಪರಿಶೀಲನೆ: 

ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ಸೋಮವಾರ ರಾತ್ರಿ  ಸಿಂದಗಿ ನಾಕಾ ಸೇರಿದಂತೆ ವಿವಿಧ ಚೆಕ್ ಪೋಸ್ಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Follow Us:
Download App:
  • android
  • ios