ಕೋಮುವಾದ ಪಕ್ಷಗಳಿಂದ ದೇಶ ಇಬ್ಭಾಗ: ಮುಖ್ಯಮಂತ್ರಿ ಚಂದ್ರು
ಜಾತಿಗಣತಿ ಆಧಾರಿತವಾಗಿ ಮೀಸಲಾತಿ ಕಲ್ಪಿಸಬೇಕು ಹೊರತು ಜನಗಣತಿ ಆಧರಿಸಿ ಅಲ್ಲ, ಜಾತಿಗಣತಿ ಆಧರಿಸಿ ಮೀಸಲಾತಿ ಜಾರಿಯಾದರೆ ಮಾತ್ರ ಅದು ವೈಜ್ಞಾನಿಕವಾಗಿರಲು ಸಾಧ್ಯ: ಆಪ್ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು
ವಿಜಯಪುರ(ಮಾ.28): ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಭಾರತದಲ್ಲಿ ಒಂದೇ ಪಕ್ಷ, ಒಂದೇ ಧರ್ಮ ಎನ್ನುವ ಮಾತುಗಳು ಕೇಳಿ ಬರುತ್ತಿರುವುದು ನೋವಿನ ಸಂಗತಿ, ಕೋಮುವಾದ ಪಕ್ಷಗಳು ಸರ್ವಾಧಿಕಾರ ಧೋರಣೆ, ದ್ವೇಷದ ರಾಜಕಾರಣ ಮಾಡುವ ಮೂಲಕ ದೇಶ ಇಬ್ಬಾಗಿಸುವ ಕೆಲಸ ನಡೆಯುತ್ತಿದೆ ಎಂದು ಖ್ಯಾತ ಚಿತ್ರನಟ, ಆಪ್ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ನಗರದ ಮಧುವನ ಸಭಾಂಗಣದಲ್ಲಿ ಸೋಮವಾರ ಆಮ್ ಆದ್ಮಿ ಪಕ್ಷದ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಜಾತಿಗಣತಿ ಆಧಾರಿತವಾಗಿ ಮೀಸಲಾತಿ ಕಲ್ಪಿಸಬೇಕು ಹೊರತು ಜನಗಣತಿ ಆಧರಿಸಿ ಅಲ್ಲ, ಜಾತಿಗಣತಿ ಆಧರಿಸಿ ಮೀಸಲಾತಿ ಜಾರಿಯಾದರೆ ಮಾತ್ರ ಅದು ವೈಜ್ಞಾನಿಕವಾಗಿರಲು ಸಾಧ್ಯ ಎಂದು ಹೇಳಿದರು.
ಮುಸ್ಲಿಂ ಸಮುದಾಯವನ್ನು ನಾನೆಂದಿಗೂ ಕಡೆಗಣಿಸಿಲ್ಲ: ಬಿಜೆಪಿ ಶಾಸಕ ನಡಹಳ್ಳಿ
ಕಾಂತರಾಜ್ ಆಯೋಗದ ವರದಿ ಸರ್ಕಾರಗಳು ಸ್ವೀಕರಿಸಿಲ್ಲ, ಸರ್ಕಾರ ಕೇವಲ ಕಣ್ಣೊರೆಸುವ ಕೆಲಸ ಮಾಡುವ ಉದ್ದೇಶದಿಂದ ಮೀಸಲಾತಿ ಹೆಚ್ಚಿಸಿದೆ, ಹೊರತು ನೈಜ ಕಾಳಜಿಯಿಂದ ಅಲ್ಲ, ನಮ್ಮ ರಾಜ್ಯದಲ್ಲಿ ಕಾಂತರಾಜ್ ಆಯೋಗದ ವರದಿಯನ್ನು ಆಧರಿಸಿ ಮೀಸಲಾತಿ ಕಲ್ಪಿಸಬೇಕು, ಈ ವರದಿಯ ಅಂಶಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ನಾನು ಈಗಾಗಲೇ ಕಾನೂನಾತ್ಮಕ ಹೋರಾಟ ಸಹ ಕೈಗೊಂಡಿದ್ದೇನೆ ಎಂದರು.
ಬಿಜೆಪಿ ಶಾಸಕರೊಬ್ಬರ ಮನೆಯಲ್ಲಿ ಕೋಟಿ ಕೋಟಿ, ಕಾಂಗ್ರೆಸ್ ರಾಜ್ಯಾಧ್ಯಕ್ಷರ ಮನೆಯಲ್ಲಿ ಕೋಟಿ ಕೋಟಿ ಪತ್ತೆಯಾಯಿತು, ಆದರೆ ಶಿಕ್ಷೆ ಮಾತ್ರ ನಾಪತ್ತೆ, ಆದರೆ ಆಮ್ ಆದ್ಮಿ ಪಕ್ಷ ತನ್ನ ಸಚಿವನ ಶೇ.1 ರಷ್ಟು ಭ್ರಷ್ಟಾಚಾರ ಸಹಿಸದೇ ಅಮಾನತ್ತು ಮಾಡಿದೆ, ಇದು ನಮ್ಮ ಬದ್ದತೆ ಎಂದು ಹೇಳಿದರು.
ರಾಹುಲ್ ಗಾಂಧಿ ಸಾತ್ವಿಕ ಟೀಕೆ ಮಾಡಿದ್ದಾರೆ, ಅವರಿಗೆ ದೊಡ್ಡ ಮಟ್ಟದ ಶಿಕ್ಷೆಯೇ? ಮೋದಿ ಅವರನ್ನು ಟೀಕೆ ಮಾಡಿದ್ದರೆ ಎಂದ ಮಾತ್ರಕ್ಕೆ ಅವರನ್ನು ದಮನ ಮಾಡುವುದು ಸರಿಯಲ್ಲ, ಇನ್ನೊಂದೆಡೆ ವಿಜಯಪುರ ನಗರ ಶಾಸಕ ಯತ್ನಾಳರು ಮುಖ್ಯಮಂತ್ರಿ ಆಗಲು ಕೋಟಿ ಕೋಟಿ ಲಂಚ ಕೊಡಬೇಕು ಎಂದು ಹೇಳಿದ್ದರು, ಆದರೆ ಅವರ ಮೇಲೆ ಸಣ್ಣ ಕ್ರಮ ಸಹ ಆಗಲಿಲ್ಲ ಎಂದರು.
ವಿಜಯಪುರ: ಕಾಂಗ್ರೆಸ್ ನಾಯಕ ಎಸ್.ಆರ್. ಪಾಟೀಲ್ ಫೋಟೋ ಇರುವ ರಾಶಿ ರಾಶಿ ಗಿಫ್ಟ್ ಪತ್ತೆ..!
ನೀರು, ವಿದ್ಯುತ್, ಟೆಂಡರ್ ಹೀಗೆ ಎಲ್ಲದರಲ್ಲಿಯೂ ಮಾಫಿಯಾ ತಾಂಡವವಾಡುತ್ತಿವೆ, ಪಿ.ಎಸ್.ಐ. ಹಗರಣದಲ್ಲಿ ಎಲ್ಲರೂ ಇದ್ದಾರೆ, ಆದರೂ ಯಾರ ಮೇಲೆ ಕ್ರಮ ಇಲ್ಲ, ಲಲಿತ್ ಮೋದಿ, ನೀರವ್ ಮೋದಿ ಕಳ್ಳರು, ಅವರನ್ನು ಕಳ್ಳರು ಎಂದು ಕರೆಯುದಿದ್ದರೆ ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು. ಯಾವ ಅಭಿವೃದ್ಧಿ ಕಾರ್ಯ ರಾಜ್ಯದಲ್ಲಿ ನಡೆದಿಲ್ಲ, ಯಾವ ಸಾಧನೆಯೂ ಇಲ್ಲ, ಕೇವಲ ಕೋಮುವಾದ ಬಿತ್ತನೆಯೇ ಬಿಜೆಪಿ ಸಾಧನೆ ಎಂದರು.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸರಣಿ ಪ್ರಚಾರ ನಡೆಸಲಿದ್ದು, 80 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದ್ದು, ಎಲ್ಲ ವಲಯ, ವರ್ಗಗಳಿಗೆ ಆದ್ಯತೆ ನೀಡಲಾಗಿದೆ ಎಂದರು.
ಶುದ್ದ ಹಸ್ತರಿಗೆ ತೆರೆದ ಬಾಗಿಲು, ಶ್ರೀಮಂತರು ಬೇಡ, ಧೀಮಂತರು ಬೇಕು, ಈಶ್ವರಪ್ಪ, ಡಿ.ಕೆ. ಶಿವಕುಮಾರ ಅಂತವರು ಬೇಡ ಎಂದರು. ಆಪ್ ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮಾ, ಉಪಾಧ್ಯಕ್ಷ ಸಾ.ಸಿ. ಬೆನಕನಹಳ್ಳಿ, ಆಪ್ ಮುಖಂಡರಾದ ರೋಹನ್ ಐನಾಪೂರ, ಭೋಗೇಶ ಸೊಲ್ಲಾಪೂರ ಮುಂತಾದವರು ಇದ್ದರು.