Asianet Suvarna News Asianet Suvarna News

ಮುಸ್ಲಿಂ ಸಮುದಾಯವನ್ನು ನಾನೆಂದಿಗೂ ಕಡೆಗಣಿಸಿಲ್ಲ: ಬಿಜೆಪಿ ಶಾಸಕ ನಡಹಳ್ಳಿ

ನಾನು ರಾಜಕೀಯ ಜೀವನದಲ್ಲಿ ಇರುವವರೆಗೆ ಮುಸ್ಲಿಂ ಸಮಾಜವನ್ನು ಪ್ರೀತಿ, ವಿಶ್ವಾಸದಿಂದ ಕಾಣುತ್ತೇನೆ. ನನ್ನ ಸ್ವಾರ್ಥಕ್ಕಾಗಲಿ ಅಥವಾ ನನ್ನ ರಾಜಕೀಯ ಉದ್ದೇಶಕ್ಕಾಗಲಿ ಮುಸ್ಲಿಮರನ್ನು ವಿರೋಧಿಸುವ ಕೆಲಸ ಮಾಡಿಲ್ಲ, ಮಾಡುವುದಿಲ್ಲ: ಎ.ಎಸ್‌.ಪಾಟೀಲ 

I Never Neglected the Muslim Community Says BJP MLA AS Patil Nadahalli grg
Author
First Published Mar 28, 2023, 1:39 PM IST

ತಾಳಿಕೋಟೆ(ಮಾ.28): ನನ್ನ ರಾಜಕೀಯ ಜೀವನದಲ್ಲಿ ನಾನು ಮುಸ್ಲಿಂ ಸಮಾಜವನ್ನು ಎಂದಿಗೂ ಕಡೆಗಣಿಸಿಲ್ಲ. ಮುಸ್ಲಿಂರನ್ನು ಎಲ್ಲ ಸಮುದಾಯಗಳ ಜೊತೆಗೆ ಅಭಿವೃದ್ಧಿಯತ್ತ ಕರೆದುಕೊಂಡು ಹೋಗುವ ಕೆಲಸವನ್ನು ಮಾಡಿದ್ದೇನೆ ಎಂದು ಶಾಸಕ ಎ.ಎಸ್‌.ಪಾಟೀಲ (ನಡಹಳ್ಳಿ) ಹೇಳಿದರು.

ರಂಜಾನ್‌ ಮಾಸದ ನಿಮಿತ್ತ ಪಟ್ಟಣದ ತರಕಾರಿ ಮಾರುಕಟ್ಟೆ ಆವರಣದಲ್ಲಿ ಆಯೋಜಿಸಿದ್ದ ಇಫ್ತಿಯಾರ್‌ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ರಾಜಕೀಯ ಜೀವನದಲ್ಲಿ ಇರುವವರೆಗೆ ಮುಸ್ಲಿಂ ಸಮಾಜವನ್ನು ಪ್ರೀತಿ, ವಿಶ್ವಾಸದಿಂದ ಕಾಣುತ್ತೇನೆ. ನನ್ನ ಸ್ವಾರ್ಥಕ್ಕಾಗಲಿ ಅಥವಾ ನನ್ನ ರಾಜಕೀಯ ಉದ್ದೇಶಕ್ಕಾಗಲಿ ಮುಸ್ಲಿಮರನ್ನು ವಿರೋಧಿಸುವ ಕೆಲಸ ಮಾಡಿಲ್ಲ, ಮಾಡುವುದಿಲ್ಲ. ಪವಿತ್ರ ರಂಜಾನ್‌ ಮಾಸದಲ್ಲಿ ಅಲ್ಲಾಹುವಿನ ಆರಾಧನೆಯಲ್ಲಿ ತೊಡಗಿರುವ ಎಲ್ಲರಿಗೂ ಒಳ್ಳೆಯದಾಗಲಿ. ಎಲ್ಲೆಡೆ ಸಾಂತಿ, ಸೌಹಾರ್ದ ಮನೆ ಮಾಡಲಿ ಎಂದರು.

ವಿಜಯಪುರ: ಕಾಂಗ್ರೆಸ್‌ ನಾಯಕ ಎಸ್‌.ಆರ್‌. ಪಾಟೀಲ್‌ ಫೋಟೋ ಇರುವ ರಾಶಿ ರಾಶಿ ಗಿಫ್ಟ್‌ ಪತ್ತೆ..!

ಮುಖಂಡ ಅಬ್ದುಲ್‌ರಜಾಕ್‌ ಮನಗೂಳಿ ಮಾತನಾಡಿ, ರಂಜಾನ್‌ ಮಾಸದಲ್ಲಿ ಪ್ರತಿವರ್ಷ ಶಾಸಕ ಎ.ಎಸ್‌.ಪಾಟೀಲ (ನಡಹಳ್ಳಿ) ಅವರು ಇಫ್ತಿಯಾರ್‌ ಕೂಟವನ್ನು ಆಯೋಜಿಸಿ ಸರಳತೆ ಮೆರೆಯುತ್ತಾರೆ. ಅವರು ಯಾವುದೇ ಸಮಯದಲ್ಲಿಯೂ ಜಾತಿ-ಧರ್ಮಗಳನ್ನು ಬೇರ್ಪಡಿಸಿ ರಾಜಕಾರಣ ಮಾಡಿಲ್ಲ. ಎಲ್ಲ ಧರ್ಮೀಯರನ್ನು ಜೊತೆಗೂಡಿಸಿಕೊಂಡು ಅಭಿವೃದ್ಧಿ ಮಾಡಿದ್ದಾರೆ. ಈ ಬಾರಿಯೂ ನಾವು ಅವರನ್ನು ಬೆಂಬಲಿಸೋಣ ಎಂದರು.

ಇದೇ ಸಮಯದಲ್ಲಿ ಮುಸ್ಲಿಂ ಸಮಾಜದಿಂದ ಶಾಸಕ ಎ.ಎಸ್‌.ಪಾಟೀಲ (ನಡಹಳ್ಳಿ) ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಮಾಸುಮಸಾಬ್‌ ಕೆಂಭಾವಿ, ಖಾಜಾಹುಸೇನ್‌ ಡೋಣಿ, ಜಿಪಂ ಮಾಜಿ ಸದಸ್ಯ ಬಸನಗೌಡ ವಣಕ್ಯಾಳ, ಗೈಬುಸಾಬ್‌ ಮಕಾದಾರ್‌, ರಫೀಕ್‌ ಬೇಪಾರಿ, ಮೈನು ಬೇಪಾರಿ, ಮೈಹಿಬೂಬಸಾಬ್‌ ಮುದ್ನಾಳ, ಗನಿಸಾಬ್‌ ಲಾಹೋರಿ, ಮಂಜೂರ್‌ ಬೇಪಾರಿ, ವಾಸುದೇವ ಹೆಬಸೂರ, ಡಿ.ಕೆ.ಪಾಟೀಲ, ರಾಮನಗೌಡ ಪಾಟೀಲ, ಮೊದಲಾದವರು ಉಪಸ್ಥಿತರಿದ್ದರು.

Follow Us:
Download App:
  • android
  • ios