karnataka election results 2023: ರಾಜ್ಯಾದ್ಯಂತ ಮತ ಎಣಿಕೆ ಆರಂಭ: ಕಾಂಗ್ರೆಸ್ ಮುನ್ನಡೆ
ರಾಜ್ಯಾದ್ಯಂತ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ. ವೃದ್ಧರು, ಪೊಲೀಸರು, ಚುನಾವಣಾ ಕಾರ್ಯಕ್ಕೆ ತೆರಳುವ ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಅಂಚೆ ಮತದಾನ ಮಾಡಲು ಅವಕಾಶ ನೀಡಲಾಗಿತ್ತು.
ಬೆಂಗಳೂರು (ಮೇ 13): ರಾಜ್ಯಾದ್ಯಂತ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ. ವಿಧಾನಸಭಾ ಚುನಾವಣಾ ಮತದಾನಕ್ಕಿಂತ ಒಂದು ವಾರದಿಂದ ಮೊಲದೇ 80 ವರ್ಷ ಮೇಲ್ಪಟ್ಟ ವೃದ್ಧರು, ಪೊಲೀಸರು, ಚುನಾವಣಾ ಕಾರ್ಯಕ್ಕೆ ತೆರಳುವ ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಅಂಚೆ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ಈಗ ಮೊದಲು ಅಂಚೆ ಮತ ಎಣಿಕೆ ಆರಂಭವಾಗಿದ್ದು, ಬಿಜೆಪಿ 91, ಕಾಂಗ್ರೆಸ್ 100, ಜೆಡಿಎಸ್ 18 ಹಾಗೂ 2 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿವೆ. ರಾಜ್ಯಾದ್ಯಂತ ಮತ ಎಣಿಕೆ ಆರಂಭ: 100ಕ್ಕೂ ಅಧಿಕ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದೆ.
Karnataka Assembly Election 2023: ಅಂಚೆ ಮತ ಎಣಿಕೆ, ಬಿಜೆಪಿ, ಕಾಂಗ್ರೆಸ್‌ಗೆ ಸಮಬಲ...
ಹುಬ್ಬಳ್ಳಿ ಧಾರವಾಡದಲ್ಲಿ ಜಗದೀಶ್ ಶೆಟ್ಟರ್‌ಗೆ ಹಿನ್ನಡೆ (ಕಾಂಗ್ರೆಸ್)
ಚಿಕ್ಕಮಗಳೂರಿನಲ್ಲಿ ಸಿ.ಟಿ. ರವಿಗೆ ಹಿನ್ನಡೆ (ಬಿಜೆಪಿ)
ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಗೆ ಮುನ್ನಡೆ (ಜೆಡಿಎಸ್)
ಚಿಕ್ಕಬಳ್ಳಾಪುರದಲ್ಲಿ ಕೆ.ಸುಧಾಕರ್‌ಗೆ ಹಿನ್ನಡೆ (ಬಿಜೆಪಿ)
ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಮುನ್ನಡೆ (ಜೆಡಿಎಸ್)
ರಮೇಶ್ ಜಾರಕಿಹೊಳಿ ಹಿನ್ನಡೆ (ಬಿಜೆಪಿ)
ಬೆಂಗಳೂರಿನ ಜಯನಗರದಲ್ಲಿ ಸೌಮ್ಯಾರೆಡ್ಡಿಗೆ ಹಿನ್ನಡೆ (ಕಾಂಗ್ರೆಸ್)
ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಹಿನ್ನಡೆ (ಕಾಂಗ್ರೆಸ್)
ಶಿವಮೊಗ್ಗ ನಗರದಲ್ಲಿ ಚನ್ನಬಸಪ್ಪಗೆ ಮುನ್ನಡೆ (ಬಿಜೆಪಿ)
ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್‌ಗೆ ಹಿನ್ನಡೆ (ಬಿಜೆಪಿ)
ಹಳಿಯಾಳ ಆರ್.ವಿ. ದೇಶಪಾಂಡೆ ಹಿನ್ನಡೆ (ಕಾಂಗ್ರೆಸ್)
ಅರಸೀಕೆರೆಯಲ್ಲಿ ಶಿವಲಿಂಗೇಗೌಡ ಮುನ್ನಡೆ (ಕಾಂಗ್ರೆಸ್)
ವರುಣಾದಲ್ಲಿ ಸಿದ್ದರಾಮಯ್ಯ ಮುನ್ನಡೆ (ಕಾಂಗ್ರೆಸ್)
ಮಡಿಕೇರಿ ಅಪ್ಪಚ್ಚುರಂಜನ್‌ಗೆ ಹಿನ್ನಡೆ (ಬಿಜೆಪಿ)
ಬಳ್ಳಾರಿಯಲ್ಲಿ ಶ್ರೀರಾಮುಲುಗೆ ಹಿನ್ನಡೆ (ಬಿಜೆಪಿ)
ಹಾಸನದಲ್ಲಿ ಸ್ವರೂಪ್ ಪ್ರಕಾಶ್ ಮುನ್ನಡೆ (ಜೆಡಿಎಸ್)
ಕನಕಪುರದಲ್ಲಿ ಡಿ.ಕೆ. ಶಿವಕುಮಾರ್‌ಗೆ ಮುನ್ನಡೆ (ಕಾಂಗ್ರೆಸ್)
ತೀರ್ಥಹಳ್ಳಿಯಲ್ಲಿ ಅರಗ ಜ್ಞಾನೇಂದ್ರ ಮುನ್ನಡೆ (ಬಿಜೆಪಿ)
ಮೂರೂ ಪಕ್ಷಗಳಿಂದ ತಂತ್ರಗಾರಿಕೆ: ಜಿದ್ದಾಜಿದ್ದಿ ಪೈಪೋಟಿಯಿಂದ ಕೂಡಿದ್ದ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಮೂರೂ ಪಕ್ಷಗಳು ತುದಿಗಾಲಲ್ಲಿ ನಿಂತಿವೆ. ಬಹುತೇಕ ಮತಗಟ್ಟೆಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಸಾಧ್ಯತೆಯ ಕುರಿತು ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ ಪಕ್ಷಗಳು ಭರ್ಜರಿ ತಂತ್ರಗಾರಿಕೆ ಆರಂಭಿಸಿವೆ. ದಕ್ಷಿಣ ಭಾರತದಲ್ಲಿ ಪಕ್ಷ ಅಧಿಕಾರದಲ್ಲಿರುವ ಏಕೈಕ ರಾಜ್ಯವನ್ನು ಕಳೆದುಕೊಳ್ಳಬಾರದು ಎಂಬ ಹಟಕ್ಕೆ ಬಿಜೆಪಿ ಬಿದ್ದಿದ್ದರೆ, ಬಿಜೆಪಿಯನ್ನು ಹೇಗಾದರೂ ಮಾಡಿ ಅಧಿಕಾರದಿಂದ ಕೆಳಗಿಳಿಸಲೇಬೇಕು ಎಂದು ನಿಶ್ಚಯಿಸಿರುವ ಕಾಂಗ್ರೆಸ್ ಯಾವುದೇ ಅವಕಾಶವನ್ನೂ ಎದುರಾಳಿಗೆ ನೀಡದಿರಲು ಸಜ್ಜಾಗಿ ಕುಳಿತಿದೆ. ಈ ನಡುವೆ ಅತಂತ್ರ ಪರಿಸ್ಥಿತಿಯಲ್ಲಿ ಎರಡೂ ಪಕ್ಷಗಳು ತನ್ನ ಮುಂದೆ ಬರುವ ನಿರೀಕ್ಷೆಯಲ್ಲಿರುವ ಜೆಡಿಎಸ್, ‘ಚೌಕಾಸಿ’ಗೆ ಪಟ್ಟುಗಳನ್ನು ರೂಪಿಸುತ್ತಿದೆ. ಒಟ್ಟಿನಲ್ಲಿ ಇಂದು ಇಡೀ ದಿನ ಕರ್ನಾಟಕ ರಾಜಕಾರಣ ಹೈವೋಲ್ಟೇಜ್ ಕುತೂಹಲವನ್ನು ಒಡಲಲ್ಲಿಟ್ಟುಕೊಂಡಿದೆ.
16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.