Asianet Suvarna News Asianet Suvarna News

Karnataka Election Results 2023: ಹೊಸ ಮುಖಗಳ ಪ್ರಯೋಗದಲ್ಲಿ ಯಾವ ಪಕ್ಷಕ್ಕಾಯ್ತು ಲಾಭ?

Karnataka Election Results 2023: ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ಹೊಸ ಮುಖಗಳನ್ನು ಪರಿಚಯ ಮಾಡಿದ್ದವು. 75 ಹೊಸ ಮುಖಗಳನ್ನು ಕಣಕ್ಕಿಳಿಸಿದ್ದ ಬಿಜೆಪಿ 19 ಕ್ಷೇತ್ರದಲ್ಲಿ ಗೆಲುವು ಕಂಡಿದ್ದರೆ, ಕಾಂಗ್ರೆಸ್‌ 42 ಕ್ಷೇತ್ರಗಳಲ್ಲಿ ಹೊಸಬರಿಗೆ ಟಿಕೆಟ್‌ ನೀಡಿ 15ರಲ್ಲಿ ಗೆಲುವು ಕಂಡಿದೆ.
 

Karnataka Assembly  Election Results 2023 BJP and Congress New face san
Author
First Published May 13, 2023, 8:32 PM IST

ಬೆಂಗಳೂರು (ಮೇ.13): ಈ ಬಾರಿಯ ರಾಜ್ಯ ವಿಧಾನಸಭಾ ಕಣದಲ್ಲಿ ರಾಷ್ಟ್ರಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ದೊಡ್ಡ ಮಟ್ಟದಲ್ಲಿ ಹೊಸಮುಖಗಳಿಗೆ ಟಿಕೆಟ್‌ ನೀಡಿದ್ದವು ಬಿಜೆಪಿ ಬರೋಬ್ಬರಿ 75 ಹೊಸ ಮುಖಗಳಿಗೆ ಟಿಕೆಟ್‌ ನೀಡಿತ್ತು. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾದ ನಡುವೆಯೂ ಬಿಜೆಪಿ ತನ್ನ ಈವರೆಗಿನ ಬಹುದೊಡ್ಡ ಸಾಹಸ ಮಾಡಿತ್ತು ಈ ಪೈಕಿ 19 ಕ್ಷೇತ್ರಗಳಲ್ಲಿ ಮಾತ್ರವೇ ಬಿಜೆಪಿಯ ಹೊಸ ಮುಖ ಗೆಲುವು ಕಂಡಿದೆ. ಇನ್ನೊಂದೆಡೆ ಕಾಂಗ್ರೆಸ್‌, 42 ಕ್ಷೇತ್ರದಲ್ಲಿ ಹೊಸಮುಖಕ್ಕೆ ಟಿಕೆಟ್‌ ನೀಡಿ 15ರಲ್ಲಿ ಗೆಲುವು ಕಂಡಿದೆ.

ಬಿಜೆಪಿಯಲ್ಲಿ ಗೆಲುವು ಕಂಡ ಹೊಸ ಮುಖಗಳೆಂದರೆ,  ಮಹದೇವಪುರ ಕ್ಷೇತ್ರದಲ್ಲಿ ಮಂಜುಳಾ ಲಿಂಬಾವಳಿ, ಹುಬ್ಬಳ್ಳಿ ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಮಹೇಶ್ ಟೆಂಗಿನಕಾಯಿ, ಹುಕ್ಕೇರಿಯಲ್ಲಿ ನಿಖಿಲ್ ಕತ್ತಿ, ಖಾನಾಪುರದಲ್ಲಿ ವಿಠಲ್ ಹಲಗೇಕರ್, ಬೈಂದೂರು ಕ್ಷೇತ್ರದಲ್ಲಿ ಗುರುರಾಜ್ ಗಂಟಿಹೊಳೆ, ಕಾಪುವಿನಲ್ಲಿ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರದಲ್ಲಿ ಕಿರಣ್ ಕುಮಾರ್ ಕೂಡ್ಗಿ, ಉಡುಪಿಯಲ್ಲಿ ಯಶಪಾಲ್ ಸುವರ್ಣ, ಬೇಲೂರಿನಲ್ಲಿ ಹುಲ್ಲಳ್ಳಿ ಸುರೇಶ್, ಸಕಲೇಶಪುರದಲ್ಲಿ ಸಿಮೆಂಟ್ ಮಂಜು, ಸುಳ್ಯದಲ್ಲಿ ಭಾಗೀರಥಿ ಮುರುಳ್ಯ, ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರ, ಕೃಷ್ಣರಾಜ ಕ್ಷೇತ್ರದಲ್ಲಿ ಟಿ.ಎ. ಶ್ರೀವತ್ಸ, ದೊಡ್ಡಬಳ್ಳಾಪುರದಲ್ಲಿ ಧೀರಜ್ ಮುನಿರಾಜು, ಜಮಖಂಡಿಯಲ್ಲಿ ಜಗದೀಶ್ ಗುಡಗಂಟಿ, ಬೀದರ್ ದಕ್ಷಿಣದಲ್ಲಿ ಡಾ.ಶೈಲೇಂದ್ರ ಬೆಲ್ದಾಳೆ, ಶಿರಹಟ್ಟಿಯಲ್ಲಿ ಡಾ.ಚಂದ್ರು ಲಮಾಣಿ ಹಾಗೂ ಶಿವಮೊಗ್ಗ ನಗರದಲ್ಲಿ ಚನ್ನಬಸಪ್ಪ ಗೆಲುವು ಕಂಡಿದ್ದಾರೆ.

ಇನ್ನು ಕಾಂಗ್ರೆಸ್‌ನಲ್ಲಿ ಗೆದ್ದ ಹೊಸಮುಖಗಳೆಂದರೆ,  ಕುಡುಚಿಯಲ್ಲಿ ಮಹೇಂದ್ರ ತಮ್ಮಣ್ಣ, ಬಾದಾಮಿಯಲ್ಲಿ ಭೀಮಸೇನ್ ಚಿಮ್ಮನಕಟ್ಟಿ, ನಾಗಠಾಣದಲ್ಲಿ ವಿಠಲ್ ಕಟಕದೊಂಡ,  ರಾಣೆಬೆನ್ನೂರು ಕ್ಷೇತ್ರದಲ್ಲಿ ಪ್ರಕಾಶ್ ಕೋಳಿವಾಡ, ನೆಲಮಂಗಲದಲ್ಲಿ  ಶ್ರೀನಿವಾಸಯ್ಯ ಎನ್, ವಿರಾಜಪೇಟೆಯಲ್ಲಿ ಎ.ಎಸ್ ಪೊನ್ನಣ್ಣ, ನಂಜನಗೂಡಿನಲ್ಲಿ ದರ್ಶನ್ ಧೃವನಾರಾಯಣ್,  ಮಡಿಕೇರಿಯಲ್ಲಿ ಮಂಥರ್ ಗೌಡ,  ಮದ್ದೂರಿನಲ್ಲಿ ಉದಯ್ ಗೌಡ, ಬಳ್ಳಾರಿ ನಗರದಲ್ಲಿ ಭರತ್‌ ರೆಡ್ಡಿ,  ಮೂಡಿಗೆರೆಯಲ್ಲಿ ನಯನ ಮೋಟಮ್ಮ, ಚಿಕ್ಕಬಳ್ಳಾಪುರದಲ್ಲಿ ಪ್ರದೀಪ್ ಈಶ್ವರ್, ಶಿರಗುಪ್ಪದಲ್ಲಿ ಬಿಎಂ ನಾಗರಾಜ್, ಪುತ್ತೂರಿನಲ್ಲಿ ಅಶೋಕ್ ರೈ ಹಾಗೂ  ಚಾಮರಾಜದಲ್ಲಿ ಹರೀಶ್ ಗೌಡ ಗೆಲುವು ಕಂಡಿದ್ದಾರೆ.

Karnataka Election Results 2023: ಬಿಜೆಪಿಯ 61 ಹಾಲಿ ಶಾಸಕರಿಗೆ ಸೋಲಿನ ಏಟು

ಇನ್ನು ಕಾಂಗ್ರೆಸ್‌ನಲ್ಲಿ ಸೋಲು ಕಂಡ ಹೊಸ ಮುಖಗಳ ಪೈಕಿ, ವಿಜಯಪುರ ಸಿಟಿಯಲ್ಲಿ ಅಬ್ದುಲ್ ಅಮೀದ್, ಗೋಕಾಕ್‌ನಲ್ಲಿ ಮಹಾಂತೇಶ್ ಕಡಾಡಿ, ಕುಂದಾಪುರದಲ್ಲಿ ದಿನೇಶ್ ಹೆಗಡೆ, ಉಡುಪಿಯಲ್ಲಿ ಪ್ರಸಾದ್ ರಾಜ್ ಕಾಂಚನ್, ಯಶವಂತಪುರದಲ್ಲಿ ಬಾಲರಾಜ್ ಗೌಡ, ಮಹಾಲಕ್ಷ್ಮಿ ಲೇಔಟ್‌ನಲ್ಲಿ ಕೇಶವಮೂರ್ತಿ,  ಮಲ್ಲೇಶ್ವರಂದಲ್ಲಿ ಅನೂಪ್ ಅಯ್ಯಂಗಾರ್,  ಪದ್ಮನಾಭನಗರದಲ್ಲಿ ರಘುನಾಥ್ ನಾಯ್ಡು, ಕೆ.ಆರ್. ಪೇಟೆಯಲ್ಲಿ ಬಿಎಲ್ ದೇವರಾಜ್, ಹೊಳೆನರಸೀಪುರದಲ್ಲಿ  ಶ್ರೇಯಸ್ ಎಂ ಪಟೇಲ್,  ಸಕಲೇಶಪುರದಲ್ಲಿ ಮುರಳಿ ಮೋಹನ್, ಬೆಳ್ತಂಗಡಿಯಲ್ಲಿ ರಕ್ಷಿತ್ ಶಿವರಾಂ,  ಸುಳ್ಯದಲ್ಲಿ ಕೃಷ್ಣಪ್ಪ.ಜಿ,  ಚಾಮುಂಡೇಶ್ವರಿಯಲ್ಲಿ ಸಿದ್ದೇಗೌಡ,  ಬೆಳಗಾವಿ ಉತ್ತರದಲ್ಲಿ ಆಸೀಫ್ ಸೇಠ್ ಬೆಳಗಾವಿ ದಕ್ಷಿಣದಲ್ಲಿ ಪದ್ಮಾವತಿ, ಶರಣಪ್ಪ ಸುಣಾಗಾರ, ಔರಾದ್‌ನಲ್ಲಿ ಭೀಮ್ ಸೇನ್ ಶಿಂಧೆ,  ಶಿರಹಟ್ಟಿದಲ್ಲಿ ಸುಜಾತ ದೊಡ್ಡಮನಿ,  ಕುಮಟಾದಲ್ಲಿ ನಿವೇದಿತ್ ಆಳ್ವಾ,  ಶಿವಮೊಗ್ಗದಲ್ಲಿ ಎಚ್.ಸಿ ಯೋಗೇಶ್, ಕಾರ್ಕಳದಲ್ಲಿ ಉದಯ್ ಶೆಟ್ಟಿ, ತುಮಕೂರು ಗ್ರಾಮೀಣದಲ್ಲಿ ಷಣ್ಮುಗಪ್ಪ,  ದಾಸರಹಳ್ಳಿಯಲ್ಲಿ ಧನಂಜಯ್ ಗೌಡ,  ಬೊಮ್ಮನಹಳ್ಳಿಯಲ್ಲಿ ಉಮಾಪತಿ ಗೌಡ, ಚನ್ನಪಟ್ಟಣದಲ್ಲಿ ಗಂಗಾಧರ್ ಹಾಗೂ ಹಾಸನದಲ್ಲಿ ಬನವಾಸಿ ರಂಗಸ್ವಾಮಿ ಸೋಲು ಕಂಡಿದ್ದಾರೆ.

Udupi Election Results 2023: ಸೋಲಿನ ಸಾಗರದಲ್ಲಿ ಬಿಜೆಪಿಗೆ ಉಡುಪಿ ಹ್ಯಾಪಿ

Follow Us:
Download App:
  • android
  • ios