Karnataka Election Results 2023: ಬಿಜೆಪಿಯ 61 ಹಾಲಿ ಶಾಸಕರಿಗೆ ಸೋಲಿನ ಏಟು

ಒಂದಲ್ಲ.. ಎರಡಲ್ಲ ಕರ್ನಾಟಕದ ಜನತೆ ನೀಡಿದ ಜನಾದೇಶದಲ್ಲಿ ಬಿಜೆಪಿಯ ಬರೋಬ್ಬರಿ 61 ಹಾಲಿ ಶಾಸಕರು ಸೋಲು ಕಂಡಿದ್ದಾರೆ. ಇದರಲ್ಲಿ ಬಿಜೆಪಿಯ ಹಿರಿಯ ಸಚಿವರು, ಘಟಾನುಘಟಿ ನಾಯಕರು ಕೂಡ ಸೇರಿದ್ದಾರೆ..
 

Karnataka Election Results 2023 BJP 61 sitting MLA Lost san

ಬೆಂಗಳೂರು (ಮೇ.13): ಕರ್ನಾಟಕದ ಮಹಾಜನತೆ ಕಾಂಗ್ರೆಸ್‌ ಪಕ್ಷಕ್ಕೆ ಸ್ಪಷ್ಟ ಜನಾದೇಶ ನೀಡಿದ್ದು, ಬರೋಬ್ಬರಿ 136 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಕಾಣುವುದು ನಿಶ್ಚಿತವಾಗಿದೆ. ಕಾಂಗ್ರೆಸ್‌ ಬಿರುಗಾಳಿಯ ಮುಂಬೆ ಬಿಜೆಪಿಯ ಘಟನಾನುಘಟಿ ನಾಯಕರು, ಪ್ರಭಾವಿ ಸಚಿವರು ಹಾಗೂ ಬಹುತೇಕ ದೊಡ್ಡ ಹೆಸರಿನ ಹಾಲಿ ಶಾಸಕರು ನೆಲಕಚ್ಚಿದ್ದಾರೆ. ಹೆಚ್ಚಿನವರು ಬಹುತೇಕ ಮತದಾನ ನಡೆದಾಗ ಸೋಲಿನ ನಿರೀಕ್ಷೆಯಲ್ಲೇ ಇಟ್ಟುಕೊಂಡಿರಲಿಲ್ಲ. ಆದರೆ, ಇವರೆಲ್ಲರನ್ನೂ ರಾಜ್ಯ ಮತದಾರರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಬಿಜೆಪಿಯಲ್ಲಿ 61 ಹಾಲಿ ಶಾಸಕರು ಸೋಲು ಕಂಡಿದ್ದರೆ, ಕಾಂಗ್ರೆಸ್‌ನಲ್ಲೂ ಕೆಲವೊಂದಿಷ್ಟು ಹಾಲಿ ಶಾಸಕರು ಸೋಲು ಕಂಡಿದ್ದಾರೆ. ಅದರ ವಿವರಗಳು ಇನ್ನಷ್ಟೇ ಸಿಗಬೇಕಿದೆ.  ಅಥಣಿಯಲ್ಲಿ ಮಹೇಶ್‌ ಕುಮಟಳ್ಳಿ ಕಾಂಗ್ರೆಸ್‌ನ ಲಕ್ಷ್ಮಣ ಸವದಿ ವಿರುದ್ಧ ವಿರುದ್ಧ ಅತ್ಯಂತ ಹೀನಾಯವಾಗಿ ಸೋಲು ಕಂಡಿದ್ದು, ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿದೆ. ಈ ಕ್ಷೇತ್ರದಲ್ಲಿ ಗೆಲುವು ಕಾಣಲೇಬೇಕು ಎಂದು ಬಿಜೆಪಿ ಶತಃಪ್ರಯತ್ನ ಮಾಡಿದರೂ ಅದರಲ್ಲಿ ದೊಡ್ಡ ಮಟ್ಟದ ಸೋಲಾಗಿದೆ.

ಅದರೊಂದಿಗೆ ಕುಡಚಿಯಲ್ಲಿ ಪಿ.ರಾಜೀವ್‌ ಕೂಡ ದೊಡ್ಡ ಸೋಲು ಕಂಡಿದೆ. ಕಿತ್ತೂರಿನಲ್ಲಿ ಮಹಾಂತೇಶ್‌ ದೊಡ್ಡಗೌಡರ್‌, ಕಾಗವಾಡದಲ್ಲಿ ಶ್ರೀಮಂತ ಪಾಟೀಲ್‌, ಮುಧೋಳದಲ್ಲಿ ಬಿಜೆಪಿಯ ಹಿರಿಯ ನಾಯಕ ಹಾಗೂ ಸಚಿವರಾಗಿದ್ದ ಗೋವಿಂದ ಕಾರಜೋಳ, ಬೀಳಗಿ ಕ್ಷೇತ್ರದಲ್ಲಿ ಮತ್ತೊಬ್ಬ ಹಿರಿಯ ನಾಯಕ ಮುರುಗೇಶ್‌ ನಿರಾಣಿ, ಬಾಗಲಕೋಟೆಯಲ್ಲಿ ವೀರಣ ಚರಂತಿಮಠ ತೀರಾ ಕೂಡ ಸೋಲನ್ನು ಎದುರಿಸಿದ್ದಾರೆ.

ಅದರೊಂದಿಗೆ ಹುನಗುಂದದಲ್ಲಿ ದೊಡ್ಡನಗೌಡ ಪಾಟೀಲ್‌, ಮುದ್ದೇಬಿಹಾಳದಲ್ಲಿ ಎಎಸ್‌ ಪಾಟೀಲ್‌ ನಡಹಳ್ಳಿ, ದೇವರಹಿಪ್ಪರಗಿಯಲ್ಲಿ ಸೋಮನಗಗೌಡ ಪಾಟೀಲ್, ಸಿಂದಗಿಯಲ್ಲಿ ರಮೇಶ್ ಬೂಸನೂರು,  ಸುರಪುರದಲ್ಲಿ ರಾಜುಗೌಡ, ಯಾದಗಿರಿಯಲ್ಲಿ ವೆಂಕಟರೆಡ್ಡಿ ಮುದ್ನಾಳ್, ಸೇಡಂ ಕ್ಷೇತ್ರದಲ್ಲಿ ರಾಜಕುಮಾರ್ ಪಾಟೀಲ್ ಸೇಡಂ, ಕಲಬುರಗಿ ದಕ್ಷಿಣದಲ್ಲಿ ದತ್ತಾತ್ರೇಯ ಪಾಟೀಲ್ ರೇವೂರು, ಆಳಂದ ಕ್ಷೇತ್ರದಲ್ಲಿ ಸುಭಾಷ್ ಗುತ್ತೇದಾರ್, ದೇವದುರ್ಗದಲ್ಲಿ ಶಿವನಗೌಡ ನಾಯಕ್, ಕನಕಗಿರಿ ಕ್ಷೇತ್ರದಲ್ಲಿ ಬಸವರಾಜ್ ದಡೇಸಗೂರ್, ಗಂಗಾವತಿಯಲ್ಲಿ ಪರಣ್ಣ ಮುನವಳ್ಳಿ, ಯಲಬುರ್ಗಾದಲ್ಲಿ ಹಾಲಪ್ಪ ಆಚಾರ್ ಮುಗ್ಗರಿಸಿದ್ದಾರೆ.

ರೋಣದಲ್ಲಿ ಕಳಕಪ್ಪ ಬಂಡಿ, ನವಲಗುಂದ ಕ್ಷೇತ್ರದಲ್ಲಿ ಶಂಕರ್ ಪಾಟೀಲ್ ಮುನೇನಕೊಪ್ಪ, ಧಾರವಾಡದಲ್ಲಿ ಅಮೃತ್ ದೇಸಾಯಿ, ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕ್ಷೇತ್ರದಲ್ಲಿ ರೂಪಾಲಿ ನಾಯ್ಕ್‌, ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ, ಭಟ್ಕಳದಲ್ಲಿ ಸುನೀಲ್ ನಾಯ್ಕ್, ಬ್ಯಾಡಗಿಯಲ್ಲಿ ವಿರೂಪಾಕ್ಷಪ್ಪ ಬಳ್ಳಾರಿ, ಹಿರೆಕೆರೂರು ಕ್ಷೇತ್ರದಲ್ಲಿ ಬಿಸಿ ಪಾಟೀಲ್, ರಾಣೇಬೆನ್ನೂರು ಕ್ಷೇತ್ರದಲ್ಲಿ ಅರುಣ್ ಕುಮಾರ್ ಪೂಜಾರ್, ಶಿರಗುಪ್ಪದಲ್ಲಿ ಎಂ ಎಸ್ ಸೋಮಲಿಂಗಪ್ಪ, ಬಳ್ಳಾರಿ ಗ್ರಾಮೀಣದಲ್ಲಿ  ಶ್ರೀರಾಮಲು,ಬಳ್ಳಾರಿ ನಗರದಲ್ಲಿ ಸೋಮಶೇಖರ್ ರೆಡ್ಡಿ, ಚಿತ್ರದುರ್ಗದಲ್ಲಿ ತಿಪ್ಪಾರೆಡ್ಡಿ, ಹಿರಿಯೂರು ಕ್ಷೇತ್ರದಲ್ಲಿ ಪೂರ್ಣಿಮಾ ಶ್ರೀನಿವಾಸ್, ಜಗಳೂರು ಕ್ಷೇತ್ರದಲ್ಲಿ ಎಸ್ ವಿ ರಾಮಚಂದ್ರ , ಹರಪನಹಳ್ಳಿಯಲ್ಲಿ ಕರುಣಾಕರ್ ರೆಡ್ಡಿ, ಹೊನ್ನಾಳಿಯಲ್ಲಿ ರೇಣುಕಾಚಾರ್ಯ, ಶಿವಮೊಗ್ಗ ಗ್ರಾಮಾಂತರದಲ್ಲಿ ಅಶೋಕ್ ನಾಯಕ್, ಸೊರಬದಲ್ಲಿ ಕುಮಾರ್ ಬಂಗಾರಪ್ಪ, ಸಾಗರದಲ್ಲಿ ಹರತಾಳು ಹಾಲಪ್ಪ ಸೋಲು ಕಂಡಿದ್ದಾರೆ.

Karnataka Election Results 2023: ಗಂಭೀರ್‌ ರೀತಿ ಶಟ್‌ಅಪ್‌ ಎಂದ ರಾಹುಲ್‌, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌!

ಚಿಕ್ಕಮಗಳೂರಿನಲ್ಲಿ  ಬಿಜೆಪಿ ಪ್ರಭಾವಿ ನಾಯಕ ಸಿಟಿ ರವಿ, ತರಿಕೆರೆ ಕ್ಷೇತ್ರದಲ್ಲಿ ಡಿ ಎಸ್ ಸುರೇಶ್, ಕಡೂರು ಕ್ಷೇತ್ರದಲ್ಲಿ ಬೆಳ್ಳಿಪ್ರಕಾಶ್, ಚಿಕ್ಕನಾಯಕನಹಳ್ಳಿಯಲ್ಲಿ ಮಾಧುಸ್ವಾಮಿ, ತಿಪಟೂರು ಕ್ಷೇತ್ರದಲ್ಲಿ ಶಿಕ್ಷಣ ಸಚಿವರಾಗಿದ್ದ ಬಿ ಸಿ ನಾಗೇಶ್, ತುರುವೆಕೆರೆಯಲ್ಲಿ ಮಸಾಲಾ ಜಯರಾಂ, ಶಿರಾದಲ್ಲಿ ಡಾ. ರಾಜೇಶ್ ಗೌಡ, ಚಿಕ್ಕಬಳ್ಳಾಪುರದಲ್ಲಿ ಡಾ. ಸುಧಾಕರ್, ಹೊಸಕೋಟೆಯಲ್ಲಿ ಶ್ರೀಮಂತ ಅಭ್ಯರ್ಥಿ ಎಂಟಿಬಿ ನಾಗರಾಜ್, ಕನಕಪುರದಲ್ಲಿ ಆರ್ ಅಶೋಕ್, ಚನ್ನಪಟ್ಟಣದಲ್ಲಿ ಸಿಪಿ ಯೋಗಿಶ್ವರ್, ಕೆ ಆರ್ ಪೇಟೆಯಲ್ಲಿ ನಾರಾಯಣ್ ಗೌಡ, ಹಾಸನದಲ್ಲಿ ಪ್ರೀತಮ್ ಗೌಡ, ಮಡಿಕೇರಿ ಕ್ಷೇತ್ರದಲ್ಲಿ ಅಪ್ಪಚ್ಚು ರಂಜನ್, ವಿರಾಜಪೇಟೆ ಕ್ಷೇತ್ರದಲ್ಲಿ ಕೆಜಿ ಬೋಪಯ್ಯ, ನಂಜನಗೂಡು ಕ್ಷೇತ್ರದಲ್ಲಿ ಹರ್ಷವರ್ಧನ, ಚಾಮರಾಜನಗರದಲ್ಲಿ ನಾಗೇಂದ್ರ, ವರುಣಾದಲ್ಲಿ ವಿ ಸೋಮಣ್ಣ, ಕೊಳ್ಳೆಗಾಲದಲ್ಲಿ ಎನ್ ಮಹೇಶ್, ಚಾಮರಾಜನಗರದಲ್ಲಿ ವಿ ಸೋಮಣ್ಣ ಹಾಗೂ ಗುಂಡ್ಲುಪೇಟೆಯಲ್ಲಿ  ನಿರಂಜನ್ ಕುಮಾರ್ ಸೋಲು ಕಂಡಿದ್ದಾರೆ.

Gandhi Nagar election results 2023: ಬರೀ 113 ಮತಗಳ ಅಂತರದಲ್ಲಿ ಗೆದ್ದು ಬೀಗಿದ ದಿನೇಶ್‌ ಗುಂಡೂರಾವ್‌!

16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.

Latest Videos
Follow Us:
Download App:
  • android
  • ios