ಕಾಂಗ್ರೆಸ್‌ ದಿಗ್ವಿಜಯ: ಕಮಲಕ್ಕೆ ನಾಳೆಯ ಪಾಠ, ಟ್ರಬಲ್‌ ಎಂಜಿನ್‌ಗೆ ಸೋಲು ಎಂದ ಮಮತಾ ಬ್ಯಾನರ್ಜಿ

ಕರ್ನಾಟಕ ಚುನಾವಣಾ ಫಲಿತಾಂಶಗಳು (ಬಿಜೆಪಿಗೆ) ‘’ನಾಳೆಯ ಪಾಠ’’ ಎಂದೂ ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್‌ ಮಾಡಿದ್ದಾರೆ.

karnataka assembly election results 2023 after congress big karnataka win trinamool s trouble engine dig at bjp ash

ಕೋಲ್ಕತ್ತಾ(ಮೇ 13, 2023) : ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲಾಗಿರುವ ಹಿನ್ನೆಲೆ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ. ದಕ್ಷಿಣ ರಾಜ್ಯದ ಜನರು "ಟ್ರಬಲ್ ಇಂಜಿನ್" ಸರ್ಕಾರವನ್ನು ತಿರಸ್ಕರಿಸಿದ್ದಾರೆ ಮತ್ತು ಬಿಜೆಪಿಯ ಸರ್ವಾಧಿಕಾರಿ ಧೋರಣೆ ಹಾಗೂ ಬಹುಸಂಖ್ಯಾತ ರಾಜಕೀಯವನ್ನು ಸೋಲಿಸಿದ್ದಾರೆ ಎಂದು ಟಿಎಂಸಿ ಪ್ರತಿಪಾದಿಸಿದೆ. ಆದರೂ, ಕಾಂಗ್ರೆಸ್‌ ಅನ್ನು ಹೊಗಳದ ದೀದಿ, ಕರ್ನಾಟಕದ ಜನರು ಬಿಜೆಪಿಯನ್ನು ತಿರಸ್ಕರಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.

ಜತೆಗೆ, 2024 ರ ಲೋಕಸಭೆ ಚುನಾವಣೆ ಸ್ಪಷ್ಟ ಉಲ್ಲೇಖದಲ್ಲಿ ಕರ್ನಾಟಕ ಚುನಾವಣಾ ಫಲಿತಾಂಶಗಳು (ಬಿಜೆಪಿಗೆ) ‘’ನಾಳೆಯ ಪಾಠ’’ ಎಂದೂ ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್‌ ಮಾಡಿದ್ದಾರೆ. ಶನಿವಾರ ಮತ ಎಣಿಕೆ ನಡೆದ 224 ಸದಸ್ಯ ಬಲದ ವಿಧಾನಸಭೆ ಚುನಾವಣೆಯಲ್ಲಿ ಸರ್ಕಾರ ರಚನೆಗೆ ಬೇಕಾದ ಬಹುಮತವಾದ 113 ಸ್ಥಾನಗಳ ಗಡಿಯನ್ನು ಕಾಂಗ್ರೆಸ್‌ ದಾಟಿದೆ. ಸದ್ಯ, ಕೈ ಪಕ್ಷವು 136 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ ಅಥವಾ ಗೆಲ್ಲುತ್ತಿದೆ.

ಇದನ್ನು ಓದಿ: ರಾಹುಲ್‌ ಗಾಂಧಿ ವಿರುದ್ಧದ ಷಡ್ಯಂತ್ರ, ದ್ವೇಷ ರಾಜಕೀಯಕ್ಕೆ ಬಿಜೆಪಿಗೆ ಜನತೆ ತಕ್ಕ ಉತ್ತರ: ಬಿಕೆ ಹರಿಪ್ರಸಾದ್

"ಬದಲಾವಣೆಯ ಪರವಾದ ನಿರ್ಣಾಯಕ ಜನಾದೇಶಕ್ಕಾಗಿ ಕರ್ನಾಟಕದ ಜನತೆಗೆ ನನ್ನ ನಮಸ್ಕಾರಗಳು!! ಕ್ರೂರ ಸರ್ವಾಧಿಕಾರಿ ಮತ್ತು ಬಹುಸಂಖ್ಯಾತ ರಾಜಕೀಯವನ್ನು ಸೋಲಿಸಲಾಗಿದೆ!! ಜನರು ಬಹುತ್ವ ಮತ್ತು ಪ್ರಜಾಪ್ರಭುತ್ವ ಶಕ್ತಿಗಳನ್ನು ಗೆಲ್ಲಬೇಕೆಂದು ಬಯಸಿದಾಗ, ಪ್ರಾಬಲ್ಯ ಸಾಧಿಸುವ ಯಾವುದೇ ಕೇಂದ್ರ ವಿನ್ಯಾಸವು ಅವರ ಸ್ವಾಭಾವಿಕತೆಯನ್ನು ದಮನಿಸಲು ಸಾಧ್ಯವಿಲ್ಲ: ಅದು ಕಥೆಯ ನೈತಿಕತೆ, ನಾಳೆಗೆ ಪಾಠ" ಎಂದು ಮಮತಾ ಬ್ಯಾನರ್ಜಿ ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.

ಕಳೆದ ವಾರವೇ ಕರ್ನಾಟಕದ ಮತದಾರರಿಗೆ ಬಿಜೆಪಿ ಪರವಾಗಿ ಮತ ಹಾಕದಂತೆ ಪಶ್ಚಿಮ ಬಂಗಾಳ ಸಿಎಂ ಮನವಿ ಮಾಡಿದ್ದರು ಮತ್ತು 2024 ರಲ್ಲಿ ಲೋಕಸಭೆ ಚುನಾವಣೆಗೆ ಮುನ್ನ ಕೇಸರಿ ಪಾಳೆಯದ ಅವನತಿ ದಕ್ಷಿಣ ರಾಜ್ಯದಿಂದ ಪ್ರಾರಂಭವಾಗಲಿದೆ ಎಂದು ಆಶಿಸಿದ್ದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಚಾಣಕ್ಯನಾಗಿ ಗೆದ್ದ ಹರಿಯಾಣದ ಜಾದೂಗಾರ ರಣದೀಪ್‌ ಸುಜೇರ್ವಾಲ!

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಮಾರ್ಚ್‌ನಲ್ಲಿ ಕೋಲ್ಕತ್ತಾಕ್ಕೆ ಮಮತಾ ಬ್ಯಾನರ್ಜಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಲು ತೆರಳಿದ್ದರು. ಅಲ್ಲದೆ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಲು ಟಿಎಂಸಿ ನಾಯಕಿಗೆ ವಿನಂತಿಸಿದ್ದರು. ಆದರೂ, ದಕ್ಷಿಣ ರಾಜ್ಯಕ್ಕೆ ದೀದಿ ಬೇಟಿ ನೀಡಿರಲಿಲ್ಲ.

ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸಹ ಕೇಸರಿ ಪಾಳೆಯದ ಟ್ರಬಲ್‌ ಎಂಜಿನ್‌ ಸರ್ಕಾರವನ್ನು ಜನರು ತಿರಸ್ಕರಿಸಿದ್ದಾರೆ ಎಂದು ಹೇಳಿದರು.  ಇದು ಆ ರಾಜ್ಯದ ಜನತೆಯ ಗೆಲುವು, ಬಿಜೆಪಿ ವರಿಷ್ಠರ ಸೋಲು ಎಂದು ಅವರು ಹೇಳಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆಯ ಬಗ್ಗೆ ಕೇಳಿದಾಗ, ಕರ್ನಾಟಕದ ಜನರು ಬಿಜೆಪಿಗೆ "ಅತ್ಯಂತ ಸಮರ್ಥ" ಪರ್ಯಾಯವನ್ನು ಆಯ್ಕೆ ಮಾಡಿದ್ದಾರೆ ಎಂದೂ ಹೇಳಿದರು.

ಇದನ್ನೂ ಓದಿ: Karnataka Election Result 2023: ಸರಳತೆ ಮೆರೆದ ರಾಹುಲ್‌, ಪ್ರಿಯಾಂಕಾ ಗಾಂಧಿಗೆ ಜೈ ಎಂದ ಕರ್ನಾಟಕ ಮತದಾರ

ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಟಿಎಂಸಿ ವಕ್ತಾರ ಕುನಾಲ್‌ ಘೋಷ್, ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿರಬಹುದು, ಆದರೆ ಬಂಗಾಳದಲ್ಲಿ ಅದರ ಪಾತ್ರವು ಪ್ರಶ್ನಾರ್ಹವಾಗಿದೆ. ಏಕೆಂದರೆ ಅದು ಟಿಎಂಸಿಯನ್ನು ವಿರೋಧಿಸಲು ಮತ್ತು ಪ್ರತಿಯಾಗಿ ಬಿಜೆಪಿಗೆ ಸಹಾಯ ಮಾಡಲು ಎಡಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.

16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.

ಇದನ್ನೂ ಓದಿ: ಕರ್ನಾಟಕದಲ್ಲಿ ಚಾಣಕ್ಯನಾಗಿ ಗೆದ್ದ ಹರಿಯಾಣದ ಜಾದೂಗಾರ ರಣದೀಪ್‌ ಸುಜೇರ್ವಾಲ!

Latest Videos
Follow Us:
Download App:
  • android
  • ios