Asianet Suvarna News Asianet Suvarna News

Karnataka Election Result 2023: ಚಾಣಕ್ಯನಾಗಿ ಗೆದ್ದ ಹರಿಯಾಣದ ಜಾದೂಗಾರ ರಣದೀಪ್‌ ಸುಜೇರ್ವಾಲ!

ಹರಿಯಾಣದ ಜಾದೂಗಾರ ರಣದೀಪ್‌ ಸುಜೇರ್ವಾಲ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕೊನೆಗೂ ಗೆದ್ದು ಬೀಗಿದ್ದಾರೆ.

karnataka assembly election results 2023 randeep surjewala has become chanakya behind congress absolute victory ash
Author
First Published May 13, 2023, 7:02 PM IST

ನವದೆಹಲಿ (ಮೇ 13, 2023): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಈ ಬಾರಿ ಅಭೂತಪೂರ್ವ ಗೆಲುವು ಸಾಧಿಸಿದೆ. ಇದಕ್ಕೆ ಹಲವು ಕಾರಣಗಳಿವೆ. ಈ ಪೈಕಿ ಕರ್ನಾಟಕ ಚುನಾವಣಾ ಉಸ್ತುವಾರಿ ವಹಿಸಿದ್ದ ರಣದೀಪ ಸುರ್ಜೇವಾಲಾ ಸಹ ಒಬ್ಬರು. ಅಲ್ಲದೆ, ಕರ್ನಾಟಕ ಚುನಾವಣೆಯ ಚಾಣಕ್ಯನಾಗಿ ಹೊರಹೊಮ್ಮಿದ್ದಾರೆ.

ವಕೀಲ್ ಸಾಬಾ ಕರ್ನಾಟಕದಲ್ಲಿ ಚಾಣಕ್ಯನಾಗಿ ಗೆದ್ದಿದ್ದಾರೆ. ಹೌದು, ಕರ್ನಾಟಕ ಕಾಂಗ್ರೆಸ್ ಗೆಲುವು ಹಿಂದೆ 56 ವರ್ಷದ ಸುಜೇರ್ವಾಲಗೆ ಪ್ರಮುಖ ಸ್ಥಾನ ಎನ್ನಲಾಗುತ್ತಿದೆ. ಉಸ್ತುವಾರಿ ಕಮ್ ತಂತ್ರಗಾರಿಕೆಗಾಗಿ ಒಂದೂವರೆ ವರ್ಷ ಅವರು ವಹಿಸಿರುವ ಶ್ರಮ ಸಾರ್ಥಕವಾಗಿದೆ. ಎದುರಾಳಿ ಪಕ್ಷಕ್ಕೆ ಆಹಾರವಾಗದಂತೆ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಸಮನ್ವಯ ಸಾಧಿಸಿವ ವಿಚಾರದಲ್ಲೂ ಇವರು ಗೆಲುವು ಸಾಧಿಸಿದ್ದಾರೆ.

ಇದನ್ನು ಓದಿ: ಜನರ ಆಶೋತ್ತರಗಳನ್ನು ಕಾಂಗ್ರೆಸ್‌ ಈಡೇರಿಸಲಿ: ಬಿಜೆಪಿ ಬೆಂಬಲಿಸಿದ ಕರ್ನಾಟಕದ ಜನತೆಗೆ ಪ್ರಧಾನಿ ಮೋದಿ ಧನ್ಯವಾದ

ಸಣ್ಣ ಗೊಂದಲ ಉಂಟಾದ ಕೂಡಲೇ ಸಿದ್ದರಾಮಯ್ಯ ಅಥವಾ ಡಿಕೆಶಿ ಮನೆಯಲ್ಲಿ ಸುಜೇರ್ವಾಲ ಪ್ರತ್ಯಕ್ಷರಾಗಿ ಬಿಡುತ್ತಿದ್ದರು. ಕಾಫಿ ಕುಡಿದು, ತಿಂಡಿ ಅವರ ಜೊತೆ ತಿಂದು ಸುರ್ಜೇವಾಲಾ ಸಮಸ್ಯೆಗೆ ತೆರೆ ಎಳೆಯುತ್ತಿದ್ದರು.  ಡಿಕೆಶಿ v/s ಸಿದ್ದರಾಮಯ್ಯ ಸಿಎಂ ಗಲಾಟೆಯಿಂದ ಹಿಡಿದು ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್ ಹಾಗು ಲಕ್ಷ್ಮಣ ಸವದಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಬಿ ಫಾರ್ಮ್‌ ಕೊಡುವ ತನಕವೂ ಆ ತಂತ್ರಗಾರಿಕೆಯ ಹಿಂದೆ ಸುರ್ಜೇವಾಲಾ ಹಿಂದೆ ನಿಂತಿದ್ದರು. 

ಗುಲಾಮ್ ನಬಿ ಆಜಾದ್, ಮಧುಸೂದನ್ ಮಿಸ್ತ್ರಿ ನಂತರ ರಣದೀಫ್‌ ಸುಜೇರ್ವಾಲ ಅಚ್ಚುಕಟ್ಟಾಗಿ ಕಾಂಗ್ರೆಸ್‌ನಲ್ಲಿ ತಂತ್ರಗಾರರನ ಪಾತ್ರ ನಿಬಾಯಿಸಿದ್ದಾರಂತೆ ಎನ್ನುತ್ತೆ ಎಐಸಿಸಿ ಕಟ್ಟೆ. ಅಲ್ಲದೆ, ಮಾತನ್ನು ಕೃತಿಗೆ ಇಳಿಸಿದ, ಸಿಎಂ ಪೇ ಕ್ಯಾಂಪೇನ್‌ನಿಂದ ಹಿಡಿದು ವಿಧಾನಸೌದದ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಮುಂದೆ ಕಾಂಗ್ರೆಸ್ಸಿಗರನ್ನು ಪ್ರತಿಭಟನೆಗೆ ಕೂರಿಸಿದ್ದು ಇದೇ ವಕೀಲ್ ಸಾಬ್.

ಇದನ್ನೂ ಓದಿ: Karnataka Election Result 2023: ಸರಳತೆ ಮೆರೆದ ರಾಹುಲ್‌, ಪ್ರಿಯಾಂಕಾ ಗಾಂಧಿಗೆ ಜೈ ಎಂದ ಕರ್ನಾಟಕ ಮತದಾರ

ಒಟ್ಟಾರೆ, ಹರಿಯಾಣದ ಜಾದೂಗಾರ ರಣದೀಪ್‌ ಸುಜೇರ್ವಾಲ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕೊನೆಗೂ ಗೆದ್ದು ಬೀಗಿದ್ದಾರೆ. 

16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕಿತ್ತು.

ಇದನ್ನೂ ಓದಿ: ಪ್ರಗತಿಯ ಕಲ್ಪನೆಗೆ ಆದ್ಯತೆ ನೀಡಿದ ಕರ್ನಾಟಕಕ್ಕೆ ಸಂದ ಜಯ: ಪ್ರಿಯಾಂಕಾ ಗಾಂಧಿ

Follow Us:
Download App:
  • android
  • ios