Asianet Suvarna News Asianet Suvarna News

Karnataka Election Result 2023: ಸರಳತೆ ಮೆರೆದ ರಾಹುಲ್‌, ಪ್ರಿಯಾಂಕಾ ಗಾಂಧಿಗೆ ಜೈ ಎಂದ ಕರ್ನಾಟಕ ಮತದಾರ

ದ್ವೇಷದ ಮಾರುಕಟ್ಟೆಯನ್ನು ಮುಚ್ಚಲಾಗಿದೆ ಮತ್ತು ಪ್ರೀತಿಯ ಅಂಗಡಿಗಳು ತೆರೆದಿವೆ ಎಂದು ನವದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ರಾಹುಲ್‌ ಗಾಂಧಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ. ಕರ್ನಾಟಕ ಚುನಾವಣೆಯಲ್ಲಿ ಬಡವರ ಶಕ್ತಿ ಗೆದ್ದಿದೆ ಎಂದೂ ಹೇಳಿದ್ದಾರೆ.

karnataka assembly election results news 2023 congress leader rahul gandhi reaction on victory ash
Author
First Published May 13, 2023, 3:54 PM IST

ನವದೆಹಲಿ (ಮೇ 13, 2023): ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಭೂತಪೂರ್ವ ಗೆಲುವಾಗಿದ್ದು, ಈ ಹಿನ್ನೆಲೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹರ್ಷ ವ್ಯಕ್ತಪಡಿಸಿದ್ದಾರೆ. ಹಾಗೂ, ಕರ್ನಾಟಕದ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ. 

ದ್ವೇಷದ ಮಾರುಕಟ್ಟೆಯನ್ನು ಮುಚ್ಚಲಾಗಿದೆ ಮತ್ತು ಪ್ರೀತಿಯ ಅಂಗಡಿಗಳನ್ನು ತೆರೆಯಲಾಗಿದೆ  ಎಂದು ನವದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ರಾಹುಲ್‌ ಗಾಂಧಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ. ಕರ್ನಾಟಕ ಚುನಾವಣೆಯಲ್ಲಿ ಬಡವರ ಶಕ್ತಿ ಗೆದ್ದಿದೆ ಎಂದೂ ರಾಹುಲ್‌ ಗಾಂಧಿ ಹೇಳಿದ್ದಾರೆ.

ಇದನ್ನು ಓದಿ: ರಾಹುಲ್‌ ಗಾಂಧಿ ವಿರುದ್ಧದ ಷಡ್ಯಂತ್ರ, ದ್ವೇಷ ರಾಜಕೀಯಕ್ಕೆ ಬಿಜೆಪಿಗೆ ಜನತೆ ತಕ್ಕ ಉತ್ತರ: ಬಿಕೆ ಹರಿಪ್ರಸಾದ್

ಅಲ್ಲದೆ, ಕರ್ನಾಟಕ ಮಾತ್ರವಲ್ಲ, ಇದು ಇತರ ರಾಜ್ಯಗಳಲ್ಲಿಯೂ ಪುನರಾವರ್ತನೆಯಾಗುತ್ತದೆ. ಕಾಂಗ್ರೆಸ್ ಬಡವರ ಸಮಸ್ಯೆಗಳಿಗಾಗಿ ಹೋರಾಡಿದೆ ಎಂದು ರಾಹುಲ್‌ ಗಾಂಧಿ ಹೇಳಿದರು. ಹಾಗೂ, ಕಾಂಗ್ರೆಸ್‌ ಪಕ್ಷವು ತನ್ನ ಸರ್ಕಾರದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ನೀಡಿದ ಐದು ಭರವಸೆಗಳನ್ನು ಈಡೇರಿಸಲಿದೆ ಎಂದೂ ಭರವಸೆ ನೀಡಿದರು.
 
135ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸುತ್ತಿದ್ದು, ಇನ್ನೊಂದೆಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಲನ್ನು ಒಪ್ಪಿಕೊಂಡಿದ್ದಾರೆ. 224 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 65 ಸೀಟುಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇನ್ನೊಂದೆಡೆ, ಈ ಬಾರಿ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಪ್ರಚಾರ ರಾಜ್ಯದ ಮತದಾರನಿಗೆ ಹೆಚ್ಚು ವರ್ಕೌಟ್‌ ಆಗಿದೆ.  

ಇದನ್ನೂ ಓದಿ: ರಾಹುಲ್‌ ಗಾಂಧಿ ಜೊತೆ ಪ್ರಯಾಣ ಖುಷಿ ನೀಡಿತು: ಡೆಲಿವರಿ ಬಾಯ್‌!

ಬೆಂಗಳೂರಲ್ಲಿ ಪ್ರಧಾನಿ ಮೋದಿ ರೋಡ್‌ಶೋದಿಂದ ಜನರಿಗೆ ಹೆಚ್ಚು ತೊಂದರೆಯಾಗುತ್ತೆ ಎಂದು ಕಾಂಗ್ರೆಸ್ ಹೋರಾಟ ಮಾಡುತ್ತಲೇ ಬಂದಿತ್ತು. ಅದರಂತೆ, ಹಲವು ಜನರು ಸಹ ಆಕ್ರೋಶ ವ್ಯಕ್ತಪಡಿಸಿದ್ರು. ಆದರೆ, ಇನ್ನೊಂದೆಡೆ, ರಾಹುಲ್‌ ಗಾಂಧಿ ಅಸಂಘಟಿತ ಡೆಲಿವರಿ ಕಾರ್ಮಿಕರು ಹಾಗೂ ಡಂಜೋ, ಸ್ವಿಗ್ಗಿ, ಬ್ಲಿಂಕಿಟ್‌, ಜೊಮಾಟೋದಂತಹ ಕಂಪೆನಿಗಳ ಡೆಲಿವರಿ ಕೆಲಸಗಾರರೊಂದಿಗೆ ಸಂವಾದ ನಡೆಸಿದರು. ಇನ್ನೊಂದೆಡೆ, ಮೈಸೂರು ಬಳಿಯ ಮೈಲಾರಿ ಹೋಟೆಲ್‌ನಲ್ಲಿ ಪ್ರಿಯಾಂಕಾ ಗಾಂಧಿ ದೋಸೆ ಹೊಯ್ದಿದ್ರು. 

ಸಂವಾದ ಬಳಿಕ ಎಂ.ಜಿ. ರಸ್ತೆ ಹಾಗೂ ಸೇಂಟ್‌ ಮಾರ್ಕ್ಸ್ ವೃತ್ತದ ನಡುವಿನ ಏರ್‌ಲೈನ್ಸ್‌ ಹೋಟೆಲ್‌ನಿಂದ ವಸಂತನಗರದ ಶಾಂಘ್ರಿಲಾ ಹೋಟೆಲ್‌ ಕಡೆಗೆ ರಾಹುಲ್‌ ಗಾಂಧಿ ತೆರಳಬೇಕಿತ್ತು. ಈ ವೇಳೆ ಸಂವಾದ ಮುಗಿಸಿಕೊಂಡು ತೆರಳಲು ಮುಂದಾಗಿದ್ದ ಡೆಲಿವರಿ ಯುವಕನ ಬೈಕ್‌ನ ಹಿಂಬದಿಯಲ್ಲಿ ಹೆಲ್ಮೆಟ್‌ ಧರಿಸಿಕೊಂಡು ಕುಳಿತ ರಾಹುಲ್‌ ಗಾಂಧಿ ಶಾಂಘ್ರಿಲಾ ಅವರ ಜತೆಯೇ ಪ್ರಯಾಣ ಮಾಡಿದ್ರು. ಅಲ್ಲದೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬಿಎಂಟಿಸಿ ಬಸ್‌ನಲ್ಲಿ ಸಹ ಓಡಾಡಿ ಸರಳತೆ ಮೆರೆದಿದ್ರು.  

ಇದನ್ನೂ ಓದಿ: ಪ್ರಧಾನಿ ಮೋದಿ ಮೆಗಾ ಪ್ರಚಾರಕ್ಕೆ ತೆರೆ: ಕಡೇ ದಿನ ಬೆಂಗಳೂರಲ್ಲಿ ರೋಡ್‌ ಶೋ

ಡೆಲಿವರಿ ಯುವಕನ ಜತೆ ರಾಹುಲ್‌ ಗಾಂಧಿ ಅವರು ರಾಜ್ಯ ಸರ್ಕಾರದ 40 ಪರ್ಸೆಂಟ್‌ ಭ್ರಷ್ಟಾಚಾರ, ಜನ ವಿರೋಧಿ ನೀತಿಗಳು ಹಾಗೂ ಡೆಲಿವರಿ ಕೆಲಸಗಾರರ ಸಮಸ್ಯೆಗಳನ್ನು ಕೇಳಿದರು ಎಂದೂ ಕಾಂಗ್ರೆಸ್‌ ತಿಳಿಸಿತ್ತು. ಒಟ್ಟಾರೆ, ಸೋನಿಯಾ ಗಾಂಧಿ ಮಕ್ಕಳಾದ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಸರಳತೆಯ ಪ್ರಚಾರ ಕಾಂಗ್ರೆಸ್‌ ಪರವಾಗಿ ವರ್ಕೌಟ್‌ ಆದಂತಿದೆ. 

16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.

ಇದನ್ನೂ ಓದಿ: Shiggaon Election Result 2023: ಸೋಲಿನ ಸಾಗರದಲ್ಲಿ ಶಿಗ್ಗಾಂವಿಯಲ್ಲಿ ಕಮಲ ಅರಳಿಸಿದ ಬೊಮ್ಮಾಯಿ

Follow Us:
Download App:
  • android
  • ios