ಐದ್ಹತ್ತು ವರ್ಷದಲ್ಲಿ ಬಹುಮತದ ಜೆಡಿಎಸ್ ಸರ್ಕಾರ ಬರುವುದು ಗ್ಯಾರೆಂಟಿ: ಎಚ್‌ಡಿ ರೇವಣ್ಣ ಭರವಸೆ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಇನ್ನು ಶಕ್ತಿಯಿದ್ದು, ಮುಂದಿನ ಐದು ಹತ್ತು ವರ್ಷಗಳಲ್ಲಿ ಜೆಡಿಎಸ್ ಮತ್ತೆ ಅಧಿಕಾರ ಪಡೆಯುತ್ತದೆ. ಜಿಲ್ಲೆಯನ್ನು ರಾಜ್ಯದಲ್ಲೇ ಮಾದರಿಯಾಗಿ ಅಭಿವೃದ್ಧಿ ಮಾಡುತ್ತೇವೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಭರವಸೆ ನೀಡಿದರು.
ಹಾಸನ (ಮೇ.16) : ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಇನ್ನು ಶಕ್ತಿಯಿದ್ದು, ಮುಂದಿನ ಐದು ಹತ್ತು ವರ್ಷಗಳಲ್ಲಿ ಜೆಡಿಎಸ್ ಮತ್ತೆ ಅಧಿಕಾರ ಪಡೆಯುತ್ತದೆ. ಜಿಲ್ಲೆಯನ್ನು ರಾಜ್ಯದಲ್ಲೇ ಮಾದರಿಯಾಗಿ ಅಭಿವೃದ್ಧಿ ಮಾಡುತ್ತೇವೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ(HD Revanna) ಭರವಸೆ ನೀಡಿದರು.
ನಗರದಲ್ಲಿ ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ(Karnataka assembly election 2023)ಯಲ್ಲಿ ಜಿಲ್ಲೆಯ ಏಳು ಕ್ಷೇತ್ರದಲ್ಲಿ ನಮ್ಮ ಜೆಡಿಎಸ್ ಪಕ್ಷದ (JDS party) ನಾಲ್ವರು ಗೆದ್ದಿದ್ದೇವೆ. ಮೂವರು ಸೋತಿದ್ದಾರೆ. ನಮಗೆ ಮತ ನೀಡಿದ ಎಲ್ಲರಿಗು ಧನ್ಯವಾದಗಳನ್ನು ತಿಳಿಸುತ್ತೇನೆ. ಈ ಚುನಾವಣೆ ಫಲಿತಾಂಶವನ್ನು ಸ್ಪರ್ಧಾ ಮನೋಭಾವದಿಂದ ತೆಗೆದುಕೊಳ್ಳುತ್ತೇವೆ. ಈ ರಾಜ್ಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ನಮ್ಮನ್ನ ಮುಗಿಸಲು ಯತ್ನ ಮಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಒಳ್ಳೆ ಕಲಸ ಮಾಡಲಿ. ಜೊತೆಗೆ ಅವರು ಕೊಟ್ಟಿರೊ ಗ್ಯಾರಂಟಿ ಕಾರ್ಡ್ ಪ್ರಕಾರ ಕೆಲಸ ಮಾಡಬೇಕು ಎಂದರು.
HD Kumaraswamy: ಎಚ್ಡಿಕೆ ಗೆಲುವಿಗೆ 2,500 ಲಡ್ಡು ಹಂಚಿದ ಅಭಿಮಾನಿಗಳು!
ರಾಷ್ಟ್ರೀಯ ಪಕ್ಷಗಳ ಮುಖಂಡರೇ ಸೋತಿರುವಾಗ ನಮ್ಮದೇನಿದೆ. ಕೆಲ ನಾಯಕರು ನಮ್ಮನ್ನ ಮುಗಿಸಬೇಕು ಎಂದು ನಾಲ್ಕು ವರ್ಷದಿಂದ ಹೋರಾಟ ಮಾಡಿದ್ದರು. ಆದರೆ ಜನರು ನಮ್ಮನ್ನ ಜನ ಉಳಿಸಿಕೊಂಡಿದ್ದಾರೆ. ನಾವು ಸೋಲು ಗೆಲುವು ಎರಡನ್ನು ನೋಡಿದ್ದೇವೆ. ಕೋಮುವಾದಿಗಳನ್ನು ದೂರ ಇಡಬೇಕು ಎಂದು ಜನರು ಕಾಂಗ್ರೆಸ್‌ಗೆ ಬಹುಮತ ಕೊಟ್ಟಿದ್ದಾರೆ. ಒಂದು ಕ್ಷೇತ್ರದಲ್ಲಿ ನಾವು ಅಲ್ಪ ಮತದಿಂದ ಸೋತಿದ್ದೇವೆ. ಮಂಡ್ಯದಲ್ಲಿ ಕೂಡ ಜೆಡಿಎಸ್ ತೆಗಿಯಬೇಕು ಎಂದು ಪ್ರಯತ್ನ ಮಾಡಿದರು. ಪ್ರಧಾನಿಯೇ ಹಾಸನ ಮಂಡ್ಯಕ್ಕೆ ಬಂದು ಹೋದರು. ಚನ್ನಪಟ್ಟಣಕ್ಕೆ ಮೋದಿ ಬಂದಿದ್ದರೂ ಕುಮಾರಣ್ಣ ಗೆದ್ದಿದ್ದಾರೆ. ಇನ್ನೂ ನಮಗೆ ಐದು ವರ್ಷ ಸಮಯ ಇದೆ. ಎಲ್ಲವನ್ನು ಸರಿ ಮಾಡಿಕೊಳ್ಳುತ್ತೇವೆ ಎಂದರು.
ಬೇಲೂರಿನಲ್ಲಿ ಜೆಡಿಎಸ್ ಸೋಲಿಸಲೇಬೇಕು ಅಂತಾ ಪ್ರಧಾನಿ ಬಂದರೂ ಏನು ಮಾಡೋಕೆ ಆಗುತ್ತೆ. ಈ ಚುನಾವಣೆ ಫಲಿತಾಂಶ ಮುಂದಿನ ಚುನಾವಣೆಯಲ್ಲಿ ಏನೂ ಪರಿಣಾಮ ಬೀರುವುದಿಲ್ಲ. ಕಾಲ ಇನ್ನೂ ಇದೆ ನೋಡುತ್ತಾ ಇರಿ. ದೇವೇಗೌಡರು(HD Devegowda) ಸುಮ್ಮನೇ ಕೂರುವುದಿಲ್ಲ. ದೇವೇಗೌಡರಿಗೆ ಇನ್ನೂ ಶಕ್ತಿ ಇದೆ. ಕೂಡಲೆ ಜೆಡಿಎಸ್ ಸಭೆ ಕರೆದು ಈ ಬಗ್ಗೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ. ಹಾಸನದಲ್ಲಿ ಅಲ್ಪ ಸಂಖ್ಯಾತರು ನಮ್ಮ ಪಕ್ಷದ ಕೈ ಹಿಡಿದಿದ್ದಾರೆ. ಅಲ್ಪ ಸಂಖ್ಯಾತರಿಗೆ ಅವಕಾಶ ಕೊಟ್ಟಿದ್ದು ಜೆಡಿಎಸ್. ಬಿಜೆಪಿಯವರು ಅಧಿಕಾರದಿಂದ ಕೆಳಗೆ ಇಳಿಯುವಾಗ ಒಂದು ಯುನಿಟ್ ವಿದ್ಯುತ್‌ಗೆ 70 ಪೈಸೆ ಏರಿಸಿ ಒಂದು ಶಾಕ್ ಕೊಟ್ಟಿದಾರೆ. ಇದನ್ನ ಇಳಿಸಲಿ. ಕಾಂಗ್ರೆಸ್‌ನಲ್ಲಿ ಯಾರಾದರು ಸಿಎಂ ಆಗಲಿ, ಆದರೇ ಒಳ್ಳೆ ಕೆಲಸ ಮಾಡಿಲಿ. ಹಾಸನದ ಅಭಿವೃದ್ಧಿ ಮಾಡಿದರೆ ಸಂತೋಷ ಎಂದು ಸಲಹೆ ನೀಡಿದರು.
ಸಿಎಂ ಜಿಲ್ಲೆಯಲ್ಲೇ ಒಂದು ಸ್ಥಾನ ಗೆದ್ದಿದಾರೆ. ನಾವು ನಾಲ್ಕಾದರೂ ಗೆದ್ದಿದ್ದೇವೆ. ಹಾಸನದಲ್ಲಿ ಸ್ವರೂಪ್ ಇದ್ದಾರೆ ಹಾಗೂ ಅವರಲ್ಲಿ ಶಕ್ತಿ ಇದೆ. ಎಚ್.ಎಸ್. ಪ್ರಕಾಶ್ ನಾಲ್ಕು ಬಾರಿ ಗೆದ್ದು ಶಾಸಕರಾಗಿದ್ದರು. ಮತದಾರರು ಈಗ ಅವರ ಮಗನನ್ನು ಗೆಲ್ಲಿಸಿ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಕೆಲವರು 50 ಸಾವಿರ ಮತ ಇಲ್ಲವೇ ಒಂದು ಲಕ್ಷ ಮತ ತಗೊಳ್ಳುತ್ತೇವೆ ಎಂದು ಹೇಳಿಕೆ ಕೊಟ್ಟಿದ್ರು. ಈಗ ಜನರು ಸ್ವರೂಪ್ ಬಗ್ಗೆ ಒಲವು ತೋರಿಸಿದ್ದಾರೆ. ದೇವೇಗೌಡರು ರಾಜಕೀಯದಲ್ಲಿ ಸುಮ್ಮನೇ ಕೂರುವಂಥವರಲ್ಲ. ಹಾಸನದಲ್ಲಿ ಸ್ವರೂಪ್ ಜೊತೆಗೆ ನಾನು ನಿಲ್ಲುತ್ತೇನೆ. ಸಂಸದರು ಇದಾರೆ, ದೇವೇಗೌಡರ ಮಾರ್ಗದರ್ಶನ ಇದೆ. ಖಂಡಿತಾ ಹಾಸನ ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡುತ್ತೇವೆ ಎಂದರು.
ಹಾಸನ: ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಕೊಟ್ಟಿದೆ ಅದನ್ನು ಜನತೆಗೆ ಕೊಡಲಿ, ರೇವಣ್ಣ
ನಾವು ಸೋಲು ಗೆಲುವು ಎರಡನ್ನು ನೋಡಿದ್ದೇವೆ. ಈ ಚುನಾವಣೆ ಫಲಿತಾಂಶವನ್ನು ಸ್ಪರ್ಧಾ ಮನೋಭಾವದಿಂದ ತೆಗೆದುಕೊಳ್ಳುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಒಳ್ಳೆ ಕಲಸ ಮಾಡಲಿ. ಜೊತೆಗೆ ಅವರು ಕೊಟ್ಟಿರೊ ಗ್ಯಾರಂಟಿ ಕಾರ್ಡ್ ಪ್ರಕಾರ ಕೆಲಸ ಮಾಡಬೇಕು. ಕಾಂಗ್ರೆಸ್ ಸರ್ಕಾರವು ಹಾಸನದ ಅಭಿವೃದ್ಧಿ ಮಾಡಿದರೆ ಸಂತೋಷ
ಎಚ್.ಡಿ ರೇವಣ್ಣ, ಮಾಜಿ ಸಚಿವ
ಕೊಡಲಾಗಿರುವ ಕೆಲಸ ಪೂರ್ಣ ಆಗದಿದ್ದರೂ ಬಿಲ್ ಮಾಡಲು ಗುತ್ತಿಗೆದಾರರು ಸಂಬಂಧಪಟ್ಟಅಧಿಕಾರಿಗಳಿಗೆ ಒತ್ತಡ ಹಾಕುತ್ತಿರುವುದು ತಿಳಿದು ಬಂದಿದ್ದು, ಮುಂದೆ ನನ್ನ ನೇತೃತ್ವದಲ್ಲಿ ಸಭೆ ಆಗುವವರೆಗೂ ಯಾವ ಬಿಲ್ ಮಾಡಬಾರದು.
ಎಚ್.ಪಿ. ಸ್ವರೂಪ್, ನೂತನ ಶಾಸಕ
ಲೋಕಸಭೆಗೆ ಎಚ್ಡಿಡಿ, ಪ್ರಜ್ವಲ್ ಸ್ಪರ್ಧೆ
ನಾನು ಬದುಕಿರುವ ಒಳಗೆ ಹಾಸನ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವ ಆಸೆ ಇದೆ. ಮಾಡಿಯೇ ಮಾಡುತ್ತೇನೆ. ಇಲ್ಲವಾದರೇ ಇನ್ನೊಂದು ಸಾರಿ ರಾಜಕೀಯ ಕ್ಷೇತ್ರಕ್ಕೆ ಬರುವುದಿಲ್ಲ. ಅಭಿವೃದ್ಧಿ ಕೆಲಸಕ್ಕೆ ಕಾಂಗ್ರೆಸ್ ಸರಕಾರ ಅವಕಾಶ ಮಾಡಿಕೊಟ್ಟರೆ ಸಂತೋಷ. ಲೋಕಸಭೆ ಚುನಾವಣೆಗೆ ಹಾಸನ ಜಿಲ್ಲೆಯಿಂದ ಪ್ರಜ್ವಲ್ ಸ್ಪರ್ಧೆ ಮಾಡುತ್ತಾನೆ. ದೇವೇಗೌಡರು ಕೂಡ ಸ್ಪರ್ಧೆ ಮಾಡಿ ಲೋಕಸಭೆಯಲ್ಲಿ ಕೂರುತ್ತಾರೆ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.