ಹಾಸನ: ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಕೊಟ್ಟಿದೆ ಅದನ್ನು ಜನತೆಗೆ ಕೊಡಲಿ, ರೇವಣ್ಣ
ಸಿಎಂ ಯಾರೇ ಆದರೂ ಸ್ವಾಗತ ಮಾಡ್ತಿನಿ. ಯಾರೇ ಆದರೂ ರಾಜ್ಯದ ಅಭಿವೃದ್ಧಿ ಮಾಡಲಿ. ಬಿಜೆಪಿಯವರು ಅಧಿಕಾರದಿಂದ ಇಳಿಯಬೇಕಾದರೆ ಶಾಕ್ ಕೊಟ್ಟಿದ್ದಾರೆ. ವಿದ್ಯುತ್ ದರ ಹೆಚ್ಚಿಸಿದ್ದಾರೆ ಅದನ್ನು ಇಳಿಸಲಿ: ಎಚ್.ಡಿ. ರೇವಣ್ಣ
ಹಾಸನ(ಮೇ.16): ಹಾಸನ ಜಿಲ್ಲೆಯಲ್ಲಿ ನಮ್ಮ ಪಕ್ಷದಿಂದ ನಾಲ್ಕು ಜನ ಗೆದ್ದಿದ್ದೀವಿ, ಮೂರು ಜನ ಸೋತಿದ್ದೀವಿ. ಜಿಲ್ಲೆಯಲ್ಲಿ ಜನ ನಮಗೆ ಪಕ್ಷಾತೀತವಾಗಿ ಮತ ಹಾಕಿದ್ದಾರೆ, ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಕೆಲವು ಸಲ ಗೆಲ್ಲಿಸಿದ್ದಾರೆ, ಕೆಲವು ಸಲ ಸೋಲಿಸಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ನಮ್ಮ ಪಕ್ಷ ಮುಗಿಸಲು ಪ್ರಯತ್ನ ಪಟ್ಟರು. ಕಾಂಗ್ರೆಸ್ ಪಕ್ಷ ಗೆದ್ದಿದೆ, ಐದು ವರ್ಷ ಒಳ್ಳೆಯ ಕೆಲಸ ಮಾಡಲಿ. ಗ್ಯಾರಂಟಿ ಕಾರ್ಡ್ ಕೊಟ್ಟವ್ರೆ ಜನಕ್ಕೆ ಅದನ್ನು ಕೊಡಲಿ. ನಾವು ವಿರೋಧ ಪಕ್ಷದಲ್ಲಿ ಕುಳಿತು ಕೆಲಸ ಮಾಡುತ್ತೇವೆ ಅಂತ ಮಾಜಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.
ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಇಂದ(ಮಂಗಳವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್.ಡಿ.ರೇವಣ್ಣ, ರಾಷ್ಟ್ರೀಯ ಪಕ್ಷದ ಮುಖಂಡರೇ ಸೋತಿರುವಾಗ ನಮ್ಮದೇನಿದೆ. ಜಿಲ್ಲೆಯ ಜನತೆ ನಮ್ಮ ಪಕ್ಷದ ನಾಲ್ಕು ಜನರನ್ನು ಗೆಲ್ಸಿದ್ದಾರೆ. ಸಕಲೇಶಪುರದಲ್ಲಿ ನಮ್ಮ ತಪ್ಪನಿಂದ ಒಂದು ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. ಇದಕ್ಕೆಲ್ಲ ದೃತಿಗೆಡಲ್ಲ, ಚುನಾವಣೆಯಲ್ಲಿ ಎಲ್ಲವನ್ನೂ ನೋಡಿದ್ದೇವೆ. 1989 ರಲ್ಲಿ ಎಂಟಕ್ಕೆ ಎಂಟು ನಾವು ಸೋತಿದ್ದೇವು. ಒಂದೇ ವರ್ಷದಲ್ಲಿ ಎಲ್ಲವನ್ನೂ ಗೆದ್ದೆವು. ಜಿಲ್ಲೆಯಲ್ಲಿ ಕೆಲವು ಅಭಿವೃದ್ಧಿ ನಿಂತಿವೆ, ಮುಂದೆ ನೋಡೋಣ ಅಂತ ಹೇಳಿದ್ದಾರೆ.
ಸಿಎಂ ಸ್ಥಾನದ ತಿಕ್ಕಾಟದ ಮಧ್ಯೆ ಡಿಸಿಎಂ ಸ್ಥಾನಕ್ಕೆ ಪಟ್ಟು: ಕಾಂಗ್ರೆಸ್‌ಗೆ ರೆಡ್ಡಿ ಸಮುದಾಯ ಎಚ್ಚರಿಕೆ
ರಾಷ್ಟ್ರೀಯ ಪಕ್ಷಕ್ಕೆ ಮೆಜಾರಿಟಿ ಕೊಟ್ಟಿದ್ದಾರೆ. ದೇವೇಗೌಡರ ಶಕ್ತಿಯಿಂದ ನಾಲ್ಕು ಕ್ಷೇತ್ರಗಳಲ್ಲಿ ಗೆಲ್ಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಸರಿ ಮಾಡ್ಕಂಡು ಹೋರಾಟ ಮುಂದುವರಿಸುತ್ತೇವೆ. ನನ್ನ ಮೇಲೆ ಸುಳ್ಳು ಮಾಹಿತಿಗಳನ್ನು ನೀಡಿರುವುದರಿಂದ ಚುನಾವಣೆಯಲ್ಲಿ ನನಗೆ ಅಂತರ ಕಡಿಮೆಯಾಗಿದೆ. ಇನ್ನೂ ಐದು ವರ್ಷ ಇದೆ ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಬಿಜೆಪಿ-ಕಾಂಗ್ರೆಸ್ ಇಬ್ಬರೂ ಜೆಡಿಎಸ್ ತೆಗಿಬೇಕು ಅಂತ ತೀರ್ಮಾನ ಮಾಡಿದ್ರು. ಹಾಸನ ಜಿಲ್ಲೆಗೆ, ಚನ್ನಪಟ್ಟಣಕ್ಕೂ ಪ್ರಧಾನಮಂತ್ರಿ ಬಂದಿದ್ರು, ಕುಮಾರಸ್ವಾಮಿ ಗೆಲ್ಲಲ್ಲಿವಾ? ಅಂತ ಪ್ರಶ್ನಿಸಿದ್ದಾರೆ.
ಬಿಜೆಪಿ ಮುಖಂಡರ ತಪ್ಪಿನಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಪಕ್ಷ ನಮ್ಮ 5% ಓಟು ತೆಗದುಕೊಂಡರು, ಕಾಂಗ್ರೆಸ್ ಮತಗಳು ಹೆಚ್ಚುವರಿ ಆಯ್ತು. ಈ ಚುನಾವಣೆ ಲೋಕಸಭೆ ಚುನಾವಣೆಯ ಮೇಲೆ ಪರಿಣಾಮ ಬೀರಲ್ಲ. ಲೋಕಸಭೆ ಚುನಾವಣೆಯನ್ನೂ ಎದುರಿಸುತ್ತೇವೆ. ತಾ.ಪಂ., ಜಿ.ಪಂ., ಚುನಾವಣೆಯನ್ನೂ ಎದುರಿಸುತ್ತೇವೆ. ಕಾಲ ಇನ್ನೂ ಇದೆ, ದೇವೇಗೌಡರು ಸುಮ್ಮನೆ ಕೂರಲ್ಲ, ಇನ್ನೂ ಅವರಿಗೆ ಶಕ್ತಿ ಇದೆ. ದೇವೇಗೌಡರು ಇನ್ನೊಂದು ವಾರದಲ್ಲಿ ಗೆದ್ದ ಹಾಗೂ ಸೋತ ಅಭ್ಯರ್ಥಿಗಳ ಮೀಟಿಂಗ್ ಕರೆಯುತ್ತಾರೆ. ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಮುಖಂಡರಿಗೆ ಥ್ಯಾಂಕ್ಸ್
ಬಿಜೆಪಿ ಮುಖಂಡರು ಹಾಗೂ ಕಾಂಗ್ರೆಸ್ ಮುಖಂಡರಿಗೆ ಥ್ಯಾಂಕ್ಸ್ ಹೇಳಬೇಕು. ಬಿಜೆಪಿಯ ಕೆಲವು ಮುಖಂಡರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಜಿಲ್ಲೆಯಲ್ಲಿ ಯಾವುದೇ ಸಮುದಾಯಕ್ಕೂ ಅನ್ಯಾಯವಾಗಲು ಬಿಡಲ್ಲ. ಜಿಲ್ಲೆಯಲ್ಲಿ ನಾವು ನಾಲ್ಕು ಜನ ಎಂಎಲ್‌ಎಗಳು ಇದ್ದೇವೆ. ಕಾಂಗ್ರೆಸ್ ಸರ್ಕಾರ ಇದ್ದರೆ ಏನು ಹೆದರಿಕೊಂಡು ಓಡಲ್ಲ ಅಂತ ತಿಳಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಸಿಎಂ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಎಚ್.ಡಿ. ರೇವಣ್ಣ ಅವರು, ಸಿಎಂ ಯಾರೇ ಆದರೂ ಸ್ವಾಗತ ಮಾಡ್ತಿನಿ. ಯಾರೇ ಆದರೂ ರಾಜ್ಯದ ಅಭಿವೃದ್ಧಿ ಮಾಡಲಿ. ಬಿಜೆಪಿಯವರು ಅಧಿಕಾರದಿಂದ ಇಳಿಯಬೇಕಾದರೆ ಶಾಕ್ ಕೊಟ್ಟಿದ್ದಾರೆ. ವಿದ್ಯುತ್ ದರ ಹೆಚ್ಚಿಸಿದ್ದಾರೆ ಅದನ್ನು ಇಳಿಸಲಿ. ಕಾಂಗ್ರೆಸ್‌ನವರು ಕೊಟ್ಟಿರುವ ಗ್ಯಾರೆಂಟಿ ಕಾರ್ಡ್‌ನ್ನು ಈಡೇರಿಸಲಿ. ನನಗೆ ಸಿದ್ದರಾಮಯ್ಯ ಅವರ ಮೇಲೆ ವೈಯಕ್ತಿಕವಾಗಿ ಗೌರವವಿದೆ. ವೈಯುಕ್ತಿಕ ಬೇರೆ, ರಾಜಕೀಯ ಬೇರೆ ಅಂತ ಹೇಳಿದ್ದಾರೆ.
ಹೈಕಮಾಂಡ್ ಸಿಎಂ ಆಗು ಅಂದ್ರೆ ನಾನು ಸಿದ್ಧನಿದ್ದೇನೆ: ಡಾ.ಜಿ. ಪರಮೇಶ್ವರ್
ಸಿಎಂ ಬಸವರಾಜ ಬೊಮ್ಮಯಿ ಜಿಲ್ಲೆಯಲ್ಲಿ ಬಿಜೆಪಿಯವರು ಒಂದೇ ಒಂದು ಸ್ಥಾನ ಗೆದ್ದಿದ್ದಾರೆ. ರೇವಣ್ಣ ಕ್ಷೇತ್ರದಲ್ಲಿ ನಾಲ್ಕು ಸ್ಥಾನ ಗೆಲ್ಸಿದ್ದಾರೆ. ವಾಲ್ಮೀಕಿ ಸಮುದಾಯದ ಪ್ರಮುಖ ಲೀಡರ್ ಶ್ರೀರಾಮುಲು ಇಪ್ಪತ್ತು ಸಾವಿರ ಮತದಿಂದ ಸೋತಿದ್ದಾರೆ ಅಂತ ತಿಳಿಸಿದ್ದಾರೆ.
ಸ್ವರೂಪ್ ಜತೆ ನಾನು ನಿಲ್ತಿನಿ, ಸಂಸದರು ನಿಲ್ತಾರೆ
ಹಾಸನದಲ್ಲಿ ಸ್ವರೂಪ್ ಜಯಭೇರಿ ವಿಚಾರಕ್ಕೆ ಸಂಬಂಧಿಸಿಂತೆ ಮಾತನಾಡಿದ ಅವರು, ಹಾಸನದಲ್ಲಿ ಸ್ವರೂಪ್ ಇದ್ದಾನೆ ಕೆಲಸ ಮಾಡ್ತಾನೆ. ಅವರ ಜೊತೆ ನಾನು ನಿಲ್ತಿನಿ, ಸಂಸದರು ನಿಲ್ತಾರೆ. ಅವರ ತಂದೆ ಹೇಗೆ ಕೆಲಸ ಮಾಡಿದ್ರು, ಅದೇ ರೀತಿ ಕೆಲಸ ಮಾಡ್ತಾರೆ. ಜನರಿಗೆ ತೊಂದರೆಯಾಗದಂತೆ ಒಳ್ಳೆಯ ಕೆಲಸ ಮಾಡ್ತಾರೆ. ಪ್ರಕಾಶ್ ನಾಲ್ಕು ಬಾರಿ ಶಾಸಕರಾಗಿದ್ರು, ಅವರ ಮಗನನ್ನು ಗೆಲ್ಸಿದ್ದಾರೆ, ಅವರ ಆತ್ಮಕ್ಕೆ ಶಾಂತಿ ಸಿಕ್ಕಿದೆ. ಕೆಲವರು ಹೇಳೋರು ಐವತ್ತು ಸಾವಿರ ಓಟನಲ್ಲಿ ಗೆಲ್ತಿನಿ, ಒಂದು ಲಕ್ಷ ಮತ ತಗೊತಿನಿ ಅಂತಿದ್ರು, ಜನ ಸ್ವರೂಪ್‌ನನ್ನು ಗೆಲ್ಲಿಸಿದ್ದಾರೆ ಅಂತ ಹೇಳಿದ್ದಾರೆ.
ಬಿಜೆಪಿಯ ಮುಖಂಡರೇ ಕಾಂಗ್ರೆಸ್ ಅಧಿಕಾರಕ್ಕೆ ತಂದಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಪಕ್ಷದ ಮುಖಂಡರು ಹಳೇ ಮೈಸೂರಿಗೆ ಬಂದು ಪ್ರಾದೇಶಿಕ ಪಕ್ಷ ಮುಗಿಸಲು ಕಾಂಗ್ರೆಸ್‌ಗೆ ಸಹಾಯ ಮಾಡಿದ್ರು. ಅವರಿಗೆ ಕಾಂಗ್ರೆಸ್ ಮುಖಂಡರು ಧನ್ಯವಾದ ಹೇಳಲಿ. ನಾನು ಓಟೇ ಕೇಳಲು ಹೋಗಿಲ್ಲ, ಜನ ನನ್ನನ್ನು ಉಳಿಸಿಕೊಂಡಿದ್ದಾರೆ. ಇನ್ನೂ ಐದು ವರ್ಷ ಇದೆ ಸರಿ ಮಾಡ್ಕೋತಿನಿ. ಆರು ಬಾರಿ ನನ್ನನ್ನು ಗೆಲ್ಸಿದ್ದಾರೆ. ಎರಡು ರಾಷ್ಟ್ರೀಯ ಪಕ್ಷದ ಮುಖಂಡರು ನನ್ನನ್ನು ಮುಗಿಸಲು ಯತ್ನಿಸಿದ್ರು, ನನಗೆ ಎಷ್ಟು ಓಟು ಬರಬೇಕು ಅದು ಬಂದಿದೆ. ಕಡಿಮೆ ಏಕೆ ಆಯ್ತು ನನಗೆ ಗೊತ್ತಿದೆ, ಅದನ್ನು ಹೇಗೆ ಸರಿ ಮಾಡಿಕೊಳ್ಳಬೇಕು ಅನ್ನೋದು ಗೊತ್ತಿದೆ. ಇನ್ನೂ ಐದು ವರ್ಷ ಟೈಂ ಇದೆ ಅಂತ ಎಚ್.ಡಿ ರೇವಣ್ಣ ಅವರು ತಿಳಿಸಿದ್ದಾರೆ.