ಮೋದಿಯಂಥ ಸ್ಟಾರ್ ನಟರೇ ಅಟ್ರ್ಯಾಕ್ಷನ್ ಮಾಡೋಕೆ ಆಗ್ತಿಲ್ಲ; ಸುದೀಪ್, ಪವನ್ ಕಲ್ಯಾಣ್ ಏನು ಮಾಡ್ತಾರೆ?: ಎಚ್‌ಡಿಕೆ ಲೇವಡಿ

ಬಿಜೆಪಿ ಪ್ರಚಾರಕ್ಕೆ ಸುದೀಪ್ ಹಾಗೂ ಪವನ್ ಕಲ್ಯಾಣರನ್ನು ಕರೆತರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್‌ಡಿ ಕುಮಾರಸ್ವಾಮಿಯವರು, ಮೋದಿಯಂತಹ ಸ್ಟಾರ್ ನಟರ ಕೈಯಲ್ಲೇ ಆಟ್ರಾಕ್ಷನ್ ಮಾಡೋಕೆ ಆಗ್ತಿಲ್ಲ. ಅಂಥದ್ರಲ್ಲಿ ಈ ಸ್ಟಾರ್ ನಟರು ಏನು ಮಾಡುತ್ತಾರೆ ನೋಡೋಣ ಬನ್ನಿ ಎಂದು ಎಚ್‌ಡಿ ಕುಮಾರಸ್ವಾಮಿ ಲೇವಡಿ ಮಾಡಿದರು.

Karnataka assembly election issue HD Kumaraswamy's statement in Mysore today rav

ಮೈಸೂರು (ಏ.6) : ವರುಣಾದಲ್ಲಿ ಕಾಂಗ್ರೆಸ್-ಬಿಜೆಪಿ ಮೈತ್ರಿ ಆಗಿದೆ. ಹೊಸ ಬಾಂಬ್ ಸಿಡಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 

ಇಂದು ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಚ್‌ಡಿ ಕುಮಾರಸ್ವಾಮಿ(HD Kumaraswamy), ಸಿದ್ದರಾಮಯ್ಯ(Siddaramaiah)ರನ್ನು ಗೆಲ್ಲಿಸಲು ಬಿಜೆಪಿ ಅನುಕೂಲ ಮಾಡಿ ಕೊಡುತ್ತಿದೆ. ಹೀಗಾಗಿ ಬಿಜೆಪಿ ಅಲ್ಲಿ ಸಮರ್ಥ ಅಭ್ಯರ್ಥಿನ್ನು ನಿಲ್ಲಿಸುತ್ತಿಲ್ಲ. ಬಿಜೆಪಿ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಇದು ನಿಜವಲ್ಲ, ಕಾಂಗ್ರೆಸ್ ಬಿಜೆಪಿ ಒಳ ಒಪ್ಪಂದ ಆಗಿದೆ. ಜೆಡಿಎಸ್‌ ಪಕ್ಷ ಮೊದಲಿಂದಲೂ 123 ಸ್ಥಾನ ಗೆಲ್ಲಲು ಹೋರಾಟ ಮಾಡಿಕೊಂಡು ಬರುತ್ತಿದೆ. ಎಂದರು

ವೈಎಸ್‌ವಿ.ದತ್ತಾ(YSV Datta)ಗೆ ಕಾಂಗ್ರೆಸ್ ಟಿಕೆಟ್ ತಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಚ್‌ಡಿ ಕುಮಾರಸ್ವಾಮಿ,  ದತ್ತಾ ನಮ್ಮ ಪಕ್ಷ ಬಿಟ್ಟು ಹೋಗಿದ್ದಾರೆ. ಅವರು ಯಾಕೆ ಟಿಕೆಟ್ ಮಿಸ್ ಮಾಡಿಕೊಂಡರೋ ಗೊತ್ತಿಲ್ಲ. ಅವರ ಬಗ್ಗೆ ನಾ‌ನು ಮಾತನಾಡಲ್ಲ ಎಂದರು.

ದೀನದಲಿತರನ್ನ ಮತಬ್ಯಾಂಕ್ ಮಾಡಿಕೊಂಡಿದ್ದ ಕಾಂಗ್ರೆಸ್: ನಾವು ಮೀಸಲಾತಿ ನೀಡಿ ನ್ಯಾಯ ಒದಗಿಸಿದ್ದೇವೆ: ಸಿಎಂ

ಬಿಜೆಪಿ ಪ್ರಚಾರಕ್ಕೆ ಸುದೀಪ್(Kichha sudeep) ಹಾಗೂ ಪವನ್ ಕಲ್ಯಾಣ(Pavan Kalyan)ರನ್ನು ಕರೆತರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್‌ಡಿ ಕುಮಾರಸ್ವಾಮಿ(HD Kumaraswamy)ಯವರು, ಮೋದಿ(Narendra Modi)ಯಂತಹ ಸ್ಟಾರ್ ನಟರ ಕೈಯಲ್ಲೇ ಆಟ್ರಾಕ್ಷನ್ ಮಾಡೋಕೆ ಆಗ್ತಿಲ್ಲ. ಅಂಥದ್ರಲ್ಲಿ ಈ ಸ್ಟಾರ್ ನಟರು ಏನು ಮಾಡುತ್ತಾರೆ ನೋಡೋಣ ಬನ್ನಿ ಎಂದು ಲೇವಡಿ ಮಾಡಿದರು.

ಹಾಸನ ಟಿಕೆಟ್ ವಿಚಾರದಲ್ಲಿ ನಾನು ಬದ್ಧನಾಗಿದ್ದೇನೆ. ಪಕ್ಷದ ಕಾರ್ಯಕರ್ತನಿಗೆ ಟಿಕೆಟ್ ಕೊಡೋದು ಎಂದು ಹೇಳಿದ್ದೇನೆ. ಈ ಬಾರಿ ಕುಟುಂಬದಿಂದ ಯಾರೂ ಸ್ಪರ್ಧಿಸಲ್ಲ. ಕಾರ್ಯಕರ್ತರಿಗೆ ಕೊಡೋದು ನಿರ್ಣಯ ಆಗುತ್ತದೆ ಎಂದರು. ಇದೇ ವೇಳೆ ಭವಾನಿ(Bhavani revanna)ಗೆ ಟಿಕೆಟ್ ಕೊಟ್ಟರೆ ಅನಿತಾ ಕುಮಾರಸ್ವಾಮಿ(Anita Kumaraswamy) ಸ್ಪರ್ಧಿಸುತ್ತಾರೆ ಎಂಬ ಪ್ರಶ್ನೆಗೆ, ಅನಿತಾ ಕುಮಾರಸ್ವಾಮಿ ಸ್ಪರ್ಧೆ ಪ್ರಶ್ನೆ ಇಲ್ಲ. ಈ ಹಿಂದೆ ಎರಡುಬಾರಿ ಪಕ್ಷದಲ್ಲಿ ಅಭ್ಯರ್ಥಿ ಇಲ್ಲದಕ್ಕೆ ಅನಿವಾರ್ಯ ಸ್ಪರ್ಧೆ ಮಾಡಿದ್ದರು. ಪಕ್ಷ ಸಂಘಟನೆಗೆ ಬೇಕಾದ್ರೆ ಹೋಗಿ ಬರುತ್ತಾರೆ. ಮುಂದೆ ಯಾವುದೇ ಕಾರಣಕ್ಕೂ ಅವರು ಅಭ್ಯರ್ಥಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪಂಚರತ್ನ ಯೋಜನೆ ಜಾರಿಯಾದರೆ ರಾಜ್ಯ ಸ್ವರ್ಗ ಸದೃಶ್ಯವಾಗಲಿದೆ: ಎಚ್‌.ಡಿ.ಕುಮಾರಸ್ವಾಮಿ

Latest Videos
Follow Us:
Download App:
  • android
  • ios