ದೀನದಲಿತರನ್ನ ಮತಬ್ಯಾಂಕ್ ಮಾಡಿಕೊಂಡಿದ್ದ ಕಾಂಗ್ರೆಸ್: ನಾವು ಮೀಸಲಾತಿ ನೀಡಿ ನ್ಯಾಯ ಒದಗಿಸಿದ್ದೇವೆ: ಸಿಎಂ

ಇಷ್ಟು ದಿನದ ದೀನದಲಿತರನ್ನು ಕಾಂಗ್ರೆಸ್ ಮತ ಬ್ಯಾಂಕ್ ಮಾಡಿಕೊಂಡಿತ್ತು. ಅವರಿಗೆ ನ್ಯಾಯ ಒದಗಿಸುವ ಕೆಲಸ ನಾವು ಮಾಡಿದ್ದೇವೆ. ರಾಜಕೀಯ ಇಚ್ಛಾಶಕ್ತಿ ಕಾಂಗ್ರೆಸ್ಗೆ ಇರಲಿಲ್ಲ, ಅವರದ್ದು ಡೋಂಗಿತನ. ಹತಾಶೆಯಿಂದ ಕಾಂಗ್ರೆಸ್ ಆರೋಪಿಸುತ್ತಿದೆ. ಇಷ್ಟು‌ದಿನ ಅವರು ಹೇಳಿಕೊಂಡು ಬಂದಿದ್ದು ಅವರಿಗೆ ತಿರುಗು ಬಾಣ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ತಿರುಗೇಟು ನೀಡಿದರು.

reservation issue cm Basavaraj bommai outraged agains Congress statement at hubballi rav

ಹುಬ್ಬಳ್ಳಿ (ಏ.6) : 'ಮೀಸಲಾತಿ ವಿಚಾರದಲ್ಲಿ ನಮ್ಮ ನಿರ್ಧಾರಗಳಿಂದ ಕಾಂಗ್ರೆಸ್‌ಗೇ ತಿರುಗು ಬಾಣ ಆಗಲಿದೆ. ಕಾಂಗ್ರೆಸ್ ಮಾಡದ್ದನ್ನು ಬಿಜೆಪಿ ಮಾಡಿ ತೋರಿಸಿದೆ'. ಮೀಸಲಾತಿ ವಿಚಾರ ಬಿಜೆಪಿಗೆ ತಿರುಗು ಬಾಣ ಆಗಲಿದೆ ಎಂಬ ಕಾಂಗ್ರೆಸ್ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

ಹುಬ್ಬಳ್ಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಇಷ್ಟು ದಿನದ ದೀನದಲಿತರನ್ನು ಕಾಂಗ್ರೆಸ್ ಮತ ಬ್ಯಾಂಕ್ ಮಾಡಿಕೊಂಡಿತ್ತು. ಅವರಿಗೆ ನ್ಯಾಯ ಒದಗಿಸುವ ಕೆಲಸ ನಾವು ಮಾಡಿದ್ದೇವೆ. ರಾಜಕೀಯ ಇಚ್ಛಾಶಕ್ತಿ ಕಾಂಗ್ರೆಸ್ಗೆ ಇರಲಿಲ್ಲ, ಅವರದ್ದು ಡೋಂಗಿತನ. ಹತಾಶೆಯಿಂದ ಕಾಂಗ್ರೆಸ್ ಆರೋಪಿಸುತ್ತಿದೆ. ಇಷ್ಟು‌ದಿನ ಅವರು ಹೇಳಿಕೊಂಡು ಬಂದಿದ್ದು ಅವರಿಗೆ ತಿರುಗು ಬಾಣ ಆಗಲಿದೆ ಎಂದರು.

ಕುಂಬಳಕಾಯಿ ಕಳ್ಳರು: ಕಾಂಗ್ರೆಸ್ಸಿಗೆ ಸಿಎಂ ಬೊಮ್ಮಾಯಿ ಚಾಟಿ

ರಾಜ್ಯ ಕೋರ್ ಕಮಿಟಿ ಸಭೆ ನಿನ್ನೆ ಸಭೆ ಮುಗಿದಿದೆ. ಏಪ್ರಿಲ್ 8 ರಂದು ಸಭೆ ಸೇರಿ ಅಂತಿಮ ಪಟ್ಟಿ ಬಿಡುಗಡೆ. ಸೆಲೆಬ್ರಿಟಿಗಳು ಬಿಜೆಪಿ‌ಪರ‌ ಪ್ರಚಾರ ನಡೆಸಲು ಮುಂದೆ ಬಂದಿದ್ದಾರೆ. ಈಗಾಗಲೇ ಪವನ್ ಕಲ್ಯಾಣ್ ಕೇಂದ್ರ ನಾಯಕರನ್ನು ಭೇಟಿಯಾಗಿದ್ದಾರೆ ಎಂದರು.

 ಕೊಲೆ ಆರೋಪಿ ವಿನಯ ಕುಲಕರ್ಣಿ ಕಾಂಗ್ರೆಸ್ ಟಿಕೆಟ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ,  ವಿನಯ್ ಕುಲಕರ್ಣಿ ಪ್ರಕರಣ ಕೋರ್ಟ್ನಲ್ಲಿದೆ‌. ಕಾನೂನಾತ್ಮಕ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ, ಈ‌ ತರಹ ಪ್ರಕರಣದಲ್ಲಿ ಜನರೇ ತಿರ್ಮಾನ ಮಾಡ್ತಾರೆ ಎಂದರು.

 ಅಪರಾಧ ಹಿನ್ನೆಲೆಯುಳ್ಳವರಿಗೆ ಬಿಜೆಪಿ ಟಿಕೆಟ್ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,. ಕಾನೂನು ಬಹಳ‌ ಸ್ಪಷ್ಟವಾಗಿದೆ. ಕೇಸ್ ಗಳು ವಿವಿಧ ಹಂತದಲ್ಲಿ ಇರುತ್ತವೆ. ಇದನ್ನೆಲ್ಲ ಗಮನಿಸಿ ಟಿಕೆಟ್ ನೀಡಲಾಗುವುದು ಎಂದರು.

ಕರ್ನಾಟಕ ಕುರುಕ್ಷೇತ್ರದಲ್ಲಿ ಬೊಮ್ಮಾಯಿಗೆ ಬಾದ್‌ಷಾ ಬಲ: ಅಖಾಡಕ್ಕೆ ಅಭಿನಯ ಚಕ್ರವರ್ತಿ ಸುದೀಪ್!

ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು,  ಟಿಕೆಟ್ ಆಯ್ಕೆ ಪ್ರಕ್ರಿಯೆಗೆ ಮೂರು ನಾಲ್ಕು ಹಂತದಲ್ಲಿ ಪರಿಶೀಲಿಸಿ ವರದಿ‌ ತರಸಿಕೊಳ್ಳಲಾಗಿದೆ. ಅದನ್ನೆಲ್ಲ ಗಮನದಲ್ಲಿಟ್ಟುಕೊಂಡು ಟಿಕೆಟ್ ನೀಡಲಾಗುವುದು.‌ ನಾನು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಅನ್ನೊದು ವದಂತಿ. ಅದಕ್ಕೆ ಯಾರೂ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.

Latest Videos
Follow Us:
Download App:
  • android
  • ios