ಕರ್ನಾಟಕದಲ್ಲಿ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಜಿ ನ್ಯೂಸ್ ಸಮೀಕ್ಷೆ ಹೇಳಿದೆ. ಈ ಸಮೀಕ್ಷೆಯಲ್ಲಿ ಬಿಜೆಪಿ ಗಣನೀಯವಾಗಿ ಕುಸಿತ ಕಾಣಲಿದೆ. ಹಲವು ಪ್ರಮುಖ ಸ್ಥಾನಗಳನ್ನು ಬಿಜೆಪಿ ಕಳೆದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. ಜಿ ನ್ಯೂಸ್ ಸಮೀಕ್ಷಾ ವಿವರ ಇಲ್ಲಿವೆ.

ಬೆಂಗಳೂರು(ಮೇ.10): ಕರ್ನಾಟಕ ವಿಧಾನಸಭಾ ಚುನಾವಣೆ ಅಂತ್ಯಗೊಂಡಿದೆ. ಇನ್ನೇನಿದ್ದರೂ ಫಲಿತಾಂಶ. ಆದರೆ ಮತದಾನ ಅಂತ್ಯಗೊಂಡ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗವಾಗಿದೆ. ಝಿ ನ್ಯೂಸ್ ಸಮೀಕ್ಷೆ ಪ್ರಕಾರ ಈ ಬಾರಿ ಕಾಂಗ್ರೆಸ್ ಸರ್ಕಾರ ರಚಿಸುವ ಸಾಧ್ಯತೆಯನ್ನು ಹೇಳುತ್ತಿದೆ. ಈ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಜಿ ನ್ಯೂಸ್ ಹೇಳಿದೆ. ಕಾಂಗ್ರೆಸ್ 103 ರಿಂದ 118 ಸ್ಥಾನ ಗೆಲ್ಲಲಿದೆ ಎಂದಿದೆ. ಆದರೆ ಬಿಜೆಪಿ 79 ರಿಂದ 94 ಸ್ಥಾನಕ್ಕೆ ಕುಸಿಯಲಿದೆ ಎಂದಿದೆ.

ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾದರೆ, ಇತ್ತ ಬಿಜೆಪಿ ಹಲವು ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಜಿ ನ್ಯೂಸ್ ಸಮೀಕ್ಷೆ ಹೇಳುತ್ತಿದೆ. ಇತ್ತ ಜೆಡಿಎಸ್ 25 ರಿಂದ 33 ಸ್ಥಾನ ಗೆಲ್ಲಲಿದೆ ಎಂದು ಜಿನ್ಯೂಸ್ ಹೇಳಿದೆ. ಈ ಮೂಲಕ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆಯ ಸೂಚನೆ ನೀಡುತ್ತಿದೆ. 

Karnataka Elections 2023 LIVE: ಎಕ್ಸಿಟ್ ಪೋಲ್‌ನಲ್ಲಿ ಸಿಕ್ತು ಅತಂತ್ರ ಸರ್ಕಾರದ ಸೂಚನೆ...

ಜಿ ನ್ಯೂಸ್ ಚುನಾವಣೋತ್ತರ ಸಮೀಕ್ಷಾ ವರದಿ
ಬಿಜೆಪಿ: 79 ರಿಂದ 94 ಸ್ಥಾನ
ಕಾಂಗ್ರೆಸ್: 103 ರಿಂದ 118 ಸ್ಥಾನ
ಜೆಡಿಎಸ್: 25 ರಿಂದ 33 ಸ್ಥಾನ 

ವೋಟ್‌ಶೇರ್‌ನಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಕಾಂಗ್ರೆಸ್ ಈ ಬಾರಿ ಶೇಕಡಾ 41 ರಷ್ಟು ವೋಟ್‌ಶೇರ್ ಪಡೆಯಲಿದೆ ಎಂದು ಹೇಳಿದ್ದಾರೆ. ಇತ್ತ ಬಿಜೆಪಿ ಶೇಕಡಾ 31 ರಷ್ಟು ವೋಟ್ ಶೇರ್ ಪಡೆಯಲಿದೆ ಎಂದಿದೆ. ಇತ್ತ ಜೆಡಿಎಸ್ ಶೇಕಡಾ 17 ರಷ್ಟು ವೋಟ್ ಶೇರ್ ಪಡೆಯಲಿದೆ ಎಂದಿದೆ.

Karnataka Election Exit Poll ಏಷ್ಯಾನೆಟ್ ಚುನಾವಣೋತ್ತರ ಸಮೀಕ್ಷೆ ಪ್ರಕಟ, ಬಿಜೆಪಿ ಅತೀದೊಡ್ಡ ಪಕ್ಷ!

ಜಿ ನ್ಯೂಸ್ ಚುನಾವಣೋತ್ತರ ಸಮೀಕ್ಷೆ
ಬಿಜೆಪಿ: ಶೇಕಡಾ 36
ಕಾಂಗ್ರೆಸ್ : ಶೇಕಡಾ 41
ಜೆಡಿಎಸ್ : ಶೇಕಡಾ 17

ಇಂದು(ಮೇ.10) ಕರ್ನಾಟಕ ವಿಧಾನಸಭಾ ಚುನಾವಣೆ ನಡೆದಿದೆ. ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡು ಸಂಜೆ 6 ಗಂಟೆ ವರೆಗೆ ಮತದಾನ ನಡಿದಿದೆ. ಕೆಲ ಮತಗಟ್ಟೆಗಳಲ್ಲಿ ಕಾರ್ಯಕರ್ತರು, ನಾಯಕರ ನಡುವಿನ ಸಣ್ಣ ಪ್ರಮಾಣದ ಘರ್ಷಣೆ ಹೊರತುಪಡಿಸಿದರೆ ಕರ್ನಾಟಕ ವಿಧಾನಸಭಾ ಚುನಾವಣೆ ಶಾಂತಿಯುತವಾಗಿ ನಡೆದಿದೆ. 

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಗೆದ್ದಿತ್ತು. ಕಾಂಗ್ರೆಸ್ 80 ಸ್ಥಾನ ಗೆದ್ದುಕೊಂಡಿತ್ತು. ಇನ್ನು ಜೆಡಿಎಸ್ 37 ಸ್ಥಾನ ಗೆದ್ದುಕೊಂಡಿತ್ತು. ಇತರರ 3 ಸ್ಥಾನ ಗೆದ್ದುಕೊಂಡಿದ್ದರು.ಆಪರೇಶನ್ ಕಮಲದ ಬಳಿಕ ಹಾಲಿ ಬಿಜೆಪಿ ಸ್ಥಾನ 119. ಕಾಂಗ್ರೆಸ್ ಹಾಲಿ ಸ್ಥಾನ 69 ಹಾಗೂ ಜೆಡಿಎಸ್ ಹಾಲಿ ಸ್ಥಾನ 32ಕ್ಕೆ ಕುಸಿದಿದೆ.