ಬಿಜೆಪಿ ಶಾಸಕ ಶಿವನಗೌಡ ನಾಯಕರ ಚಿಕ್ಕಪ್ಪಗೆ ಕಾಂಗ್ರೆಸ್ ಟಿಕೆಟ್ ಎಂಬ ಸುದ್ದಿ: ಬಿವಿ ನಾಯಕ ವಿರುದ್ಧ ಕಾರ್ಯಕರ್ತರು ಆಕ್ರೋಶ

ಸ್ಥಳೀಯ ವಿಧಾನಸಭಾ ಚುನಾವಣೆಗಳ ಪೂರ್ವ ತಯಾರಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಅಬ್ಬರದ ಮುಂಚೂಣಿಯಲ್ಲಿದ್ದು, ಕಾಂಗ್ರೆಸ್‌ನಲ್ಲಿ ಇನ್ನೂ ಗೊಂದಲ ಮುಗಿಯದೇ ಇರುವದರಿಂದ ಪಕ್ಷದ ಅಭಿಮಾನಿಗಳಿಗೆ ಭ್ರಮನಿರಸನವಾದಂತಾಗಿದೆ.

Karnataka assembly election Demand to give Devadurga Congress ticket to Rajasekhar rav

ದೇವದುರ್ಗ (ಏ.10) : ಸ್ಥಳೀಯ ವಿಧಾನಸಭಾ ಚುನಾವಣೆಗಳ ಪೂರ್ವ ತಯಾರಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಅಬ್ಬರದ ಮುಂಚೂಣಿಯಲ್ಲಿದ್ದು, ಕಾಂಗ್ರೆಸ್‌ನಲ್ಲಿ ಇನ್ನೂ ಗೊಂದಲ ಮುಗಿಯದೇ ಇರುವದರಿಂದ ಪಕ್ಷದ ಅಭಿಮಾನಿಗಳಿಗೆ ಭ್ರಮನಿರಸನವಾದಂತಾಗಿದೆ.

ಈ ಮಧ್ಯೆ ಜರುಗಿದ ಬೆಳವಣಿಗಳಲ್ಲಿ ಬಿಜೆಪಿ(BJP)ಯೊಂದಿಗೆ ಗುರುತಿಸಿಕೊಂಡಿರುವ, ಹಾಲಿ ಶಾಸಕ ಕೆ.ಶಿವನಗೌಡ ನಾಯಕ(K Shivanagowda Nayak MLA)ರ ಖಾಸಾ ಚಿಕ್ಕಪ್ಪನಾಗಿರುವ ವಕೀಲ ವಿ.ಎಂ.ಮೇಟಿ(VM Meti) ಅವರಿಗೆ ಟಿಕೆಟ್‌ ನೀಡಲಿದ್ದಾರೆ ಎಂಬ ಸುದ್ದಿ ಹರಡಿರುವದರಿಂದ ರಾಜಶೇಖರ ನಾಯಕ(Rajashekhar nayak) ಬೆಂಬಲಿಗರು ಮಾನಸಗಲ್‌ ರಂಗನಾಥಸ್ವಾಮಿ ದೇವಸ್ಥಾನದ ಹೊರವಲಯದಲ್ಲಿ ಬೆಂಬಲಿಗರ ದಿಢೀರ ಸಭೆ ಜರುಗಿತು.

Ticket fight: ಮಾನ್ವಿ ಕಾಂಗ್ರೆಸ್ ಟಿಕೆಟ್‌ ಘೋಷ​ಣೆಗೂ ಮುನ್ನವೇ ಆಕ್ರೋಶ ಸ್ಪೋಟ!

ಸಭೆಯಲ್ಲಿ ಮಾಜಿ ಸಂಸದ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ನಾಯಕ(BV Nayaka) ವಿರುದ್ಧ ಪಕ್ಷದ ಕಟ್ಟಾಬೆಂಬಲಿಗರು ಅಕ್ರೋಶ ವ್ಯಕ್ತಪಡಿಸಿದರು. ಯಾವದೇ ಕಾರಣಕ್ಕೂ ರಾಜಶೇಖರ ನಾಯಕ ಕುಟುಂಬ ಬಿಟ್ಟು ಬೇರೆಯವರಿಗೆ ಟಿಕೆಟ್‌ ನೀಡಬಾರದು. ಬಿ.ವಿ.ನಾಯಕರಿಗೆ ಮಾನ್ವಿ ಕ್ಷೇತ್ರಕ್ಕೆ ಟಿಕೆಟ್‌ ನೀಡಿದರೆ ಸ್ವಾಗತ. ಆದರೆ ವಲಸಿಗರಿಗೆ ಮಾತ್ರ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಪಕ್ಷದ ಹೈಕಮಾಂಡ್‌ ಅಲಕ್ಷಿಸದರೆ, ತಾಲೂಕಿನಾದ್ಯಂತ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಬೆಂಗಳೂರಿಗೆ ರಾರ‍ಯಲಿ ನಡೆಸಿ, ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರರಿಗೆ ಸಾಮೂಹಿಕ ರಾಜೀನಾಮೆ ನೀಡಲು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿ​ದ​ರು.

ಪಕ್ಷ ಒಂದು ವೇಳೆ ಮಾನ್ವಿ, ದೇವದುರ್ಗ ಕ್ಷೇತ್ರಗಳ ಟಿಕೆಟ್‌ ಒಂದೇ ಕುಟುಂಬಕ್ಕೆ ಕೊಡುವದು ಬೇಡ ಎನ್ನುವದಾದರೆ, ಈ ಕ್ಷೇತ್ರದಕದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ಕೊಡಿಸಿ, ಕುಟುಂಬ ರಾಜಕಾರಣದ ಅಪವಾದ ಪಕ್ಷದ ಮುಖಂಡರು ಹೊರಬೇಕೆಂದು ಕೆಲ ಕಾರ್ಯಕರ್ತರು ಸಭೆಯಲ್ಲಿ ಪ್ರಸ್ತಾಪಿಸಿದರು.

ಮಾನ್ವಿ: ಕಾಂಗ್ರೆಸ್ ಟಿಕೆಟ್ ಘೋಷಣೆಗೆ ಮುನ್ನವೇ ಅಸಮಾಧಾನ ಸ್ಫೋಟ: ಬಿವಿ ನಾಯಕ ವಿರುದ್ಧ ತಿರುಗಿಬಿದ್ದ ಸ್ಥಳೀಯರು!

ಅಕ್ರೋಶ ಭರಿತ ಕಾರ್ಯಕರ್ತರು, ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಮುಖ ಆಕಾಂಕ್ಷಿ ಎ.ರಾಜಶೇಖರ ನಾಯಕ, ಯಾವುದೇ ಕಾರಣಕ್ಕೂ ನಮ್ಮ ಕುಟುಂಬ ಟಿಕೆಟ್‌ನಿಂದ ವಂಚಿತಗೊಳ್ಳುವದಿಲ್ಲ. ಬಿ.ವಿ.ನಾಯಕ ಸೇರಿದಂತೆ ರಾಜ್ಯಮಟ್ಟದ ಅನೇಕ ಮುಖಂಡರೊಂದಿಗೆ ಚರ್ಚಿಸಲಾಗಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ, ಸಲ್ಲದ ವದಂತಿಗಳಿಗೆ ಕಿವಿಕೊಡಬಾರದು ಎಂದು ಹೇಳಿ​ದರು.

ಈ ಸಂದರ್ಭದಲ್ಲಿ ಮಾಜಿ ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಅಬ್ದುಲ್‌ ಅಜೀಜ್‌, ಜಿಪಂ ಸದಸ್ಯ ರಾಮಣ್ಣ ಇರಬಗೇರಾ, ಮುಖಂಡ ಶರಣಗೌಡ ಕಮತಗಿ, ಸಾಬಣ್ಣ ಹೂಗಾರ ಗಾಣದಾಳ, ಗುಲಾಮ ಮಹಬೂಬ್‌ ಸಾಬ್‌, ಶಿವರಾಜ ನಾಯಕ ಶಾಖೆ ಇದ್ದ​ರು.

Latest Videos
Follow Us:
Download App:
  • android
  • ios