Karnataka Politics: ಮಾಜಿ ಸಿಎಂ ಸಿದ್ದರಾಮಯ್ಯಗಾಗಿ ಬಾದಾಮಿ ಟು ದೆಹಲಿ ಚಲೋ!
ಕ್ಷೇತ್ರದ ಆಯ್ಕೆ ಬಗ್ಗೆ ಗೊಂದಲದಲ್ಲಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಬಾಗಲಕೋಟೆ ಜಿಲ್ಲೆಯ ಬಾದಾಮಿ ಹಾಲಿ ಶಾಸಕ ಸಿದ್ದರಾಮಯ್ಯ ಅವರಿಗೆ ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಒತ್ತಡ ಹೆಚ್ಚಾಗಿದ್ದು, ಇದೀಗ ಬಾದಾಮಿ ಕ್ಷೇತ್ರದ ಜನ ಸಿದ್ದರಾಮಯ್ಯಗಾಗಿ ದೆಹಲಿ ಚಲೋ ಹೊರಟಿದ್ದಾರೆ.
ಬಾಗಲಕೋಟೆ (ಫೆ.24): ಕ್ಷೇತ್ರದ ಆಯ್ಕೆ ಬಗ್ಗೆ ಗೊಂದಲದಲ್ಲಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಬಾಗಲಕೋಟೆ ಜಿಲ್ಲೆಯ ಬಾದಾಮಿ ಹಾಲಿ ಶಾಸಕ ಸಿದ್ದರಾಮಯ್ಯ ಅವರಿಗೆ ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಒತ್ತಡ ಹೆಚ್ಚಾಗಿದ್ದು, ಇದೀಗ ಬಾದಾಮಿ ಕ್ಷೇತ್ರದ ಜನ ಸಿದ್ದರಾಮಯ್ಯಗಾಗಿ ದೆಹಲಿ ಚಲೋ ಹೊರಟಿದ್ದಾರೆ.
ಚುನಾವಣಾ ಸಮಿತಿ ಸಭೆಗೂ ಮುನ್ನ ಹೈಕಮಾಂಡ್ ನಾಯಕರ ಭೇಟಿಗೆ ಬಾದಾಮಿ ಕೈ ಮುಖಂಡರು & ಕಾರ್ಯಕರ್ತರು ಮುಂದಾಗಿದ್ದು, ಮತ್ತೇ ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ಬಾದಾಮಿ ಮಂದಿ ಮನವಿ ಮಾಡಲಿದ್ದಾರೆ. ದೆಹಲಿಗೆ ತೆರಳುವ ನಿರ್ಧಾರವನ್ನು ಕೈ ಮುಖಂಡರು, ಕಾರ್ಯಕರ್ತರು ಕೈಗೊಂಡಿದ್ದು, ಅದಕ್ಕೂ ಮುನ್ನ 20 ಜನ ಬಾದಾಮಿಯ ಆಪ್ತರೊಂದಿಗೆ ಸಿದ್ದರಾಮಯ್ಯ ಸಮಾಲೋಚನೆ ನಡೆಸಲಿದ್ದಾರೆ. ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಭೇಟಿಯಾಗಲು 20 ಜನರ ಟೀಮ್ ರೆಡಿಯಾಗಿದ್ದು, ಅಲ್ಲಿಯೂ ಸ್ಪಂದನೆ ಸಿಗದೇ ಹೋದರೆ ದೆಹಲಿಗೆ ತೆರಳಲು ನಿರ್ಧಾರ ಮಾಡಿದ್ದಾರೆ.
ಬಾದಾಮಿಯಲ್ಲಿ ಜನರಿಗೆ ದ್ರೋಹ ಮಾಡಿಲ್ಲ: ಬಿಎಸ್‌ವೈಗೆ ತಿರುಗೇಟು ನೀಡಿದ ಸಿದ್ದು
ಬಾದಾಮಿಯಿಂದ 1 ಸಾವಿರಕ್ಕೂ ಅಧಿಕ ಜನ ರೈಲ್ವೆ ಮೂಲಕ ದೆಹಲಿಗೆ ತೆರಳುವ ಪ್ಲ್ಯಾನ್ ಮಾಡಿಕೊಂಡಿದ್ದು, ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಯುವ ಎರಡು ದಿನ ಮುನ್ನ ದೆಹಲಿಗೆ ತೆರಳಲು ನಿರ್ಧಾರ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ಹೈಕಮಾಂಡ್ ನಾಯಕರ ಭೇಟಿಯಾಗಿ ಮನವಿಗೆ ನಿರ್ಧಾರ ಮಾಡಿಕೊಳ್ಳಲಾಗಿದ್ದು, ಸಿದ್ದರಾಮಯ್ಯನವರಿಗೆ ಮತ್ತೇ ಬಾದಾಮಿಯಿಂದಲೇ ಟಿಕೆಟ್ ನೀಡುವಂತೆ ಬಾದಾಮಿ ಮುಖಂಡರು ಹೈಕಮಾಂಡ್ ಒತ್ತಾಯಿಸಲಿದ್ದಾರೆ.
ದಯವಿಟ್ಟು ಕ್ಷಮಿಸಿ: ಅಭಿಮಾನಿಗಳ ಪ್ರೀತಿಗೆ ಸ್ಪಂದಿಸಿ ಮಾತನಾಡಿರುವ ಸಿದ್ದರಾಮಯ್ಯ, ದಯವಿಟ್ಟು ನನ್ನನ್ನು ಕ್ಷಮಿಸಬೇಕು. ಮೈಸೂರಿನಿಂದ ಬಂದ ನನ್ನನ್ನು ಪ್ರೀತಿಯಿಂದ ಗೆಲ್ಲಿಸಿದ್ದೀರಿ. ಆದರೆ ನಿಮ್ಮ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದರೂ ನಿತ್ಯ ನಿಮ್ಮ ಕಷ್ಟಸುಖ ಆಲಿಸಲು ಆಗುತ್ತಿಲ್ಲ. ನನ್ನ ಗೆಲ್ಲಿಸಿದ ನಿಮ್ಮ ಋುಣ ತೀರಿಸಲು ಆಗುವುದಿಲ್ಲ. ನನಗೆ 76 ವರ್ಷ ವಯಸ್ಸಾಗಿದೆ. ದೂರದ ಬಾದಾಮಿಗೆ ನಿರಂತರವಾಗಿ ಪ್ರಯಾಣಿಸಲು ಆಗುವುದಿಲ್ಲ ಎಂಬ ಕಾರಣಕ್ಕೆ ಮಾತ್ರವೇ ಬಾದಾಮಿಯಿಂದ ಸ್ಪರ್ಧಿಸಲು ಹಿಂಜರಿಯುತ್ತಿದ್ದೇನೆ.
ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಮನವೊಲಿಸುವ ಪ್ರಯತ್ನ ಮಾಡಿದರು.ಆದರೂ ಪಟ್ಟು ಬಿಡದ ಬಾದಾಮಿ ಕಾಂಗ್ರೆಸ್ ಕಾರ್ಯಕರ್ತರು, ನೀವು ಕ್ಷೇತ್ರಕ್ಕೆ ಬಂದ ಬಳಿಕ ಎಂದೂ ಕಾಣದ ಅಭಿವೃದ್ಧಿಯನ್ನು ಕ್ಷೇತ್ರ ಕಂಡಿದೆ. ಹೀಗಾಗಿ ನೀವು ಈ ಬಾರಿಯೂ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು. ಕೋಲಾರಕ್ಕಿಂತಲೂ ಬಾದಾಮಿಯಲ್ಲೇ ನಿಮಗೆ ಪೂರಕ ವಾತಾವರಣ ಇದೆ. ನಿಮ್ಮನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು ಎಂದು ಹಠ ಹಿಡಿದರು.
ಚುನಾವಣೆ ಗೆಲ್ಲಲು ಅಮಿತ್ ಶಾ ಪಂಚಸೂತ್ರ: ಮೋದಿ, ಪಕ್ಷದ ಹೆಸರಲ್ಲಿ ಚುನಾವಣಾ ಪ್ರಚಾರ ನಡೆಸಿ
ಹೈಕಮಾಂಡ್ ಹೇಳಿದೆಡೆ ಸ್ಪರ್ಧೆ: ಅಂತಿಮವಾಗಿ ಸಿದ್ದರಾಮಯ್ಯ ಅವರು, ಮುಂದೆ ನಮ್ಮ ಸರ್ಕಾರ ಬರುತ್ತದೆ. ನಾನು ಬಾದಾಮಿ ಶಾಸಕನಾಗಿರದಿದ್ದರೂ ಅಭಿವೃದ್ಧಿ ಮಾಡುತ್ತೇನೆ. ಫೆ.26ರ ಬಳಿಕ ನಡೆಯುವ ಸ್ಕ್ರೀನಿಂಗ್ ಸಮಿತಿಯಲ್ಲೂ ನಿಮ್ಮ ಒತ್ತಾಯದ ಬಗ್ಗೆ ಹೇಳುತ್ತೇನೆ. ಹೈಕಮಾಂಡ್ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಹೇಳಿದರೆ ಅಲ್ಲಿಂದ ಸ್ಪರ್ಧಿಸುತ್ತೇನೆ. ಅದು ಕೋಲಾರ ಆಗಿರಬಹುದು, ಬಾದಾಮಿ ಆಗಿರಬಹುದು, ವರುಣ ಆಗಿರಬಹುದು ಅಥವಾ ಬೇರೆಯದ್ದೇ ಕ್ಷೇತ್ರ ಆಗಿರಬಹುದು ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.