ಬಾದಾಮಿಯಲ್ಲಿ‌ ಜನರಿಗೆ ದ್ರೋಹ ಮಾಡಿಲ್ಲ: ಬಿಎಸ್‌ವೈಗೆ ತಿರುಗೇಟು ನೀಡಿದ ಸಿದ್ದು

ಯಡಿಯೂರಪ್ಪ ಕೊನೆಯ ಅಸೆಂಬ್ಲಿ ಅಂತಾ ಭಾಷಣ ಮಾಡಿದ್ದಾರೆ. ಬಾದಾಮಿಯಲ್ಲಿ ನಿಂತುಕೊಳ್ಳಲಿ ಎಂದು ಹೇಳಿದ್ದಾರೆ, ಅವರಿಗೆ ಧನ್ಯವಾದಗಳು ಎಂದು ಸಿದ್ದರಾಮಯ್ಯ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. 

Congress Leader Siddaramaiah reaction to BS Yediyurappa statement on assembly election contest from Badami gvd

ವಿಜಯಪುರ (ಫೆ.23): ಯಡಿಯೂರಪ್ಪ ಕೊನೆಯ ಅಸೆಂಬ್ಲಿ ಅಂತಾ ಭಾಷಣ ಮಾಡಿದ್ದಾರೆ. ಬಾದಾಮಿಯಲ್ಲಿ ನಿಂತುಕೊಳ್ಳಲಿ ಎಂದು ಹೇಳಿದ್ದಾರೆ, ಅವರಿಗೆ ಧನ್ಯವಾದಗಳು ಎಂದು ಸಿದ್ದರಾಮಯ್ಯ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಹೌದು! ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸಲಿ ಎನ್ನುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ನಾನು ಬಾದಾಮಿಯಲ್ಲಿ ಗೆಲ್ಲಲ್ಲ ಅಂತಲ್ಲ. ಬಾದಾಮಿಯಲ್ಲಿ 100ಕ್ಕೆ ನೂರು ಗೆಲ್ತೀನಿ. ಶಾಸಕನಾಗಿ ಆ ಜನರಿಗೆ 5 ವರ್ಷ ಅವರ ಕಷ್ಟ-ಸುಖಕ್ಕೆ ಸ್ಪಂದಿಸಿದ್ದೀನಿ, ಅವರ ಕೆಲಸಗಳನ್ನ ಮಾಡಿದ್ದೀನಿ. ಬಾದಾಮಿಯಲ್ಲಿ‌ ಜನರಿಗೆ ದ್ರೋಹ ಮಾಡಿಲ್ಲ. ಯಡಿಯೂರಪ್ಪ ಡಿಸ್ಟರ್ಬ್ ಆಗಿದ್ದಾರೆ.  ಅವರಿಗೆ ದೇವರು ಆಯಸ್ಸು, ಆರೋಗ್ಯ ನೀಡಲಿ‌ ಎಂದು ತಿರುಗೇಟು ನೀಡಿದರು.

ನಾನು ಎಲ್ಲಿ ನಿಲ್ಲಬೇಕು ಅನ್ನೋದನ್ನ ನಾನೇ ತೀರ್ಮಾನ ಮಾಡಿಕೊಳ್ತೇನೆ. ಯಡಿಯೂರಪ್ಪ ತೀರ್ಮಾನ ಮಾಡೋದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲಿ ನಿಲ್ಲಬೇಕು ಅನ್ನೋದನ್ನ ತೀರ್ಮಾನ ನಾನು ಹೇಳ್ತೇನೆ,  ಕಾಂಗ್ರೆಸ್ ಪಕ್ಷ ತೀರ್ಮಾನ ಮಾಡುತ್ತೆ. ಯಡಿಯೂರಪ್ಪ ಯಾರು ತೀರ್ಮಾನ ಮಾಡೋಕೆ ಎಂದು ಹೇಳಿದರು. ಐಎಎಸ್, ಐಪಿಎಸ್ ಅಧಿಕಾರಿಗಳ ಕಿತ್ತಾಟ ವಿಚಾರವಾಗಿ ನಾನು ಮಾತನಾಡಲ್ಲ ಎಂದರು. ಕೊಡಗಿನಲ್ಲಿ ನಾಯಿಗಳಿಗೆ ಟಿಪ್ಪು ಹೆಸ್ರು ವಿಚಾರವಾಗಿ ಪ್ರಶ್ನೆ ಕೇಳ್ತಿದ್ದಂತೆ ಸಿದ್ದರಾಮಯ್ಯ ಮಾಧ್ಯಮಗಳ ಕೆಂಡಾಮಂಡಲರಾಗಿ ಮಾಧ್ಯಮಗಳ ಮೈಕ್ ತಳ್ಳಿ ತೆರಳಿದರು.

ಬಾದಾಮಿ ಕ್ಷೇತ್ರ ಬಿಡುವುದು ನಂಬಿಕೆ ದ್ರೋಹ: ಸಿದ್ದುಗೆ ಬಿಎಸ್‌ವೈ ಕಿವಿಮಾತು

ಬಿಜೆಪಿಗೆ ಯಾವ ಸಿದ್ಧಾಂತವಿದೆ?: ಈ ಚುನಾವಣೆಯಲ್ಲಿ ಅಬ್ಬಕ್ಕ ವರ್ಸಸ್‌ ಟಿಪ್ಪು ಚರ್ಚೆ ಆಗಲಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ಸಿದ್ದಾಂತವೇ?. ಗಾಂಧಿ ವರ್ಸಸ್‌ ಸಾವರ್ಕರ್‌ ಎನ್ನುವ ಬಿಜೆಪಿಯವರ ಹೇಳಿಕೆ ಸಿದ್ಧಾಂತವೇ?. ಸಿದ್ದರಾಮಯ್ಯನವರನ್ನು ಮುಗಿಸಿ ಎಂಬ ಸಚಿವ ಅಶ್ವತ್ಥ ನಾರಾಯಣ ಅವರ ಹೇಳಿಕೆ ಸಿದ್ಧಾಂತವೇ?. ಬಿಜೆಪಿಯವರಿಗೆ ಯಾವ ಸಿದ್ಧಾಂತವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಗೂ ಮುನ್ನ ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಸಿದ್ಧಾಂತ ಇಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿಕೆಗೆ ಟಾಂಗ್‌ ನೀಡಿದರು. 

ಮೋದಿ, ನಡ್ಡಾ ಕರ್ನಾಟಕಕ್ಕೆ ನೂರು ಸಾರಿ ಬಂದ್ರೂ ಯಾವುದೇ ಪ್ರಯೋಜನ ಆಗಲ್ಲ. ರಾಜ್ಯದ ಜನ ಬಿಜೆಪಿ ಸೋಲಿಸಿ, ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರುವ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್‌ನಿಂದ ಮುಸ್ಲಿಂ ಓಲೈಕೆ ರಾಜಕಾರಣ ಮಾಡಲಾಗುತ್ತಿದೆ ಎಂಬ ಶೋಭಾ ಕರಂದ್ಲಾಜೆ ಆರೋಪಕ್ಕೆ ಪ್ರತಿಕ್ರಿಯಿಸಿ, ನಾವು ಯಾರ ಓಲೈಕೆ ಮಾಡಲ್ಲ. ಕಾಂಗ್ರೆಸ್‌ ಮನುಷ್ಯತ್ವದ ರಾಜಕಾರಣ ಮಾಡುತ್ತಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌, ದಲಿತರೆಲ್ಲಾ ಮನುಷ್ಯರು ಎಂದರು. ಅಹಿಂದ ಹೆಸರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ, ಟಿಪ್ಪು ಜಯಂತಿ ಆಚರಿಸಿ ವಿವಾದ ಹುಟ್ಟಿಹಾಕಿದರು, 

ರಾಜಕೀಯ ಪಕ್ಷಗಳಿಗೆ ದೇಶದ ನಿಜವಾದ ಬಡತನದ ಬಗ್ಗೆ ಅರಿವಿಲ್ಲ: ಎಚ್.ಡಿ.ಕುಮಾರಸ್ವಾಮಿ

ಜಾತಿ, ಧರ್ಮದ ಹೆಸರಲ್ಲಿ ಸಮಾಜ ಒಡೆಯುವ ಕೆಲಸ ಮಾಡಿದರು ಎಂಬ ಶೋಭಾ ಕರಂದ್ಲಾಜೆ ಆರೋಪಕ್ಕೆ ನಗೆಯಾಡಿದ ಸಿದ್ದರಾಮಯ್ಯ, ಪಾಪ ಶೋಭಾ ಕರಂದ್ಲಾಜೆ ಹೆಣ್ಣು ಮಗಳು. ಜಾತಿ ,ಧರ್ಮ ಅಂದರೇನು ಗೊತ್ತಿಲ್ಲ. ನಾವು ಎಲ್ಲಾ ಜಾತಿ, ಧರ್ಮದ ಬಗ್ಗೆ ಗೌರವವಿಟ್ಟುಕೊಂಡಿದ್ದೇವೆ. ಎಲ್ಲಾ ಜಾತಿಯಲ್ಲಿರುವ ಬಡವರಿಗೆ ಕಾರ್ಯಕ್ರಮ ನೀಡಿದ್ದೇವೆ ಎಂದರು. ಸಿ.ಟಿ.ರವಿಯವರು ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ದೇವಸ್ಥಾನಕ್ಕೆ ಹೋಗೋದು, ಹೋಗದಿರೋದು, ಮಾಂಸ ತಿನ್ನೋದು, ತಿನ್ನದೇ ಇರೋದು ವಿಷಯಗಳೇ ಅಲ್ಲ. ಅಧಿಕಾರದಲ್ಲಿ ಇದ್ದಾಗ ಏನೇನು ಮಾಡಿದ್ದೀವಿ ಎಂಬುದನ್ನು ಹೇಳಬೇಕು. ಅದನ್ನು ಬಿಟ್ಟು ನಾಮ ಹಾಕ್ಕೋಳ್ಳೋದು, ದೇವಸ್ಥಾನಕ್ಕೆ ಹೋಗೋದು, ಟಿಪ್ಪು, ಅಬ್ಬಕ್ಕ, ಗಾಂಧಿ, ಗೋಡ್ಸೆ ಬಗ್ಗೆ ಮಾತನಾಡಿದರೆ ಜನ ಬುದ್ಧಿವಂತರಿದ್ದಾರೆ ಎಂದರು.

Latest Videos
Follow Us:
Download App:
  • android
  • ios