ಕರ್ನಾಟಕ ವಿಧಾನಸಭಾ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಯಾರಿಗೆ ಅಧಿಕಾರ? ಯಾರು ಮುಂದಿನ ಮುಖ್ಯಮಂತ್ರಿ ಇಂತಹ ಹಲವು ಪ್ರಶ್ನೆಗಳು ಚರ್ಚೆಯಾಗುತ್ತಿದೆ. ಬಿಜೆಪಿ ಪೂರ್ಣಬಹುಮತದ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ. ಇದಕ್ಕಾಗಿ ಕೇಂದ್ರದ ನಾಯಕರು ಸತತ ರ್ಯಾಲಿ, ಸಮಾವೇಶ ನಡೆಸುತ್ತಿದ್ದಾರೆ. ಇದರ ನಡುವೆ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕರ್ನಾಟಕ ಚುನಾವಣೆ ರಣತಂತ್ರ, ಮುಂದಿನ ಸಿಎಂ ಯಾರು? ಕನ್ನಡ ಭಾಷೆಗೆ ಬಿಜೆಪಿ ಕೊಡುಗೆ ಕುರಿತು ಸಮಗ್ರ ಮಾಹಿತಿ ನೀಡಿದ್ದಾರೆ. ಅಮಿತ್ ಶಾ ಸಂದರ್ಶನ ಇಲ್ಲಿದೆ.

ಬೆಂಗಳೂರು(ಏ.30): ಕರ್ನಾಟಕ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಬಿಜೆಪಿ ಮತ್ತೆ ಅಧಿಕಾರ ಹಿಡಿಯಲು ಭರ್ಜರಿ ಪ್ರಚಾರ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಕರ್ನಾಟಕದಲ್ಲಿ ರೋಡ್ ಶೋ, ಸಮಾವೇಶ ನಡೆಸಿದ್ದಾರೆ. ಬಿಜೆಪಿ ಪ್ರತಿ ರೋಡ್‌ ಶೋ, ಸಮಾವೇಶಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಬ್ಬರದ ಪ್ರಚಾರ, ಸಭೆ, ಕಾರ್ಯಕರ್ತರ ಜೊತೆಗೆ ಮೀಟಿಂಗ್ ನಡುವೆ ಕೇಂದ್ರ ಗೃಹ ಸಚಿವ, ಬಿಜೆಪಿಯ ಚುನಾವಣಾ ಚಾಣಾಕ್ಯ ಎಂದೇ ಗುರುತಿಸಿಕೊಂಡಿರುವ ಅಮಿತ್ ಶಾ, ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಕನ್ನಡ, ಹಿಂದಿ ಹೇರಿಕೆ, ಮುಂದಿನ ಸಿಎಂ, ರಾಜ್ಯದಲ್ಲಿ ಕೇಂದ್ರದ ಅಭಿವೃದ್ಧಿ ಕೆಲಸ ಸೇರಿದಂತೆ ಹತ್ತು ಹಲವು ವಿಚಾರಗಳ ಕುರಿತು ಅಮಿತ್ ಶಾ ಬೆಳಕು ಚೆಲ್ಲಿದ್ದಾರೆ. ಅಮಿತ್ ಶಾ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಅಜಿತ್ ಹನುಮಕ್ಕನವರ್: ಒಂದಷ್ಟು ರಾಷ್ಟ್ರೀಯ ವಿಚಾರಗಳಿರುತ್ತೆ.. ಒಂದಷ್ಟು ರಾಜ್ಯದ ವಿಚಾರಗಳಿರುತ್ತವೆ.. ಆದ್ರೆ ಬಿಜೆಪಿ ರಾಷ್ಟ್ರೀಯ ವಿಚಾರಗಳನ್ನ ವಿಧಾನಸಭೆ ಚುನಾವಣೆಗೆ ಎಳೆದು ತರುತ್ತೆ... ಮೋದಿ ಕೇಂದ್ರಿತ ಚುನಾವಣೆ ಮಾಡಲು ಬಯಸುತ್ತೆ ಬಿಜೆಪಿ.. ಅಧ್ಯಕ್ಷೀಯ ಚುನಾವಣೆ ರೀತಿ ಮಾಡಲು ಬಯಸುತ್ತೆ?

ಉಡುಪಿಯಲ್ಲಿ ಅಮಿತ್ ಶಾ ಬಿರುಸಿನ ಪ್ರಚಾರ: ಕಾಂಗ್ರೆಸ್‌ ಗ್ಯಾರೆಂಟಿ ಯೋಜನೆಗಳಿಗೆ ತಿರುಗೇಟು

ಅಮಿತ್ ಶಾ: ಮೋದಿ ನಮ್ಮ ನಾಯಕರು. ಅವರ ಜನಪ್ರಿಯತೆಯಿಂದ ನಮಗೆ ಲಾಭ ಆಗೇ ಆಗುತ್ತದೆ. ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಹೇಳಿದೆ ಅದು ರಾಷ್ಟ್ರೀಯ ವಿಚಾರನಾ? 5 ಕೋಟಿ ಫಲಾನುಭವಿಗಳ ಬಗ್ಗೆ ಮಾಹಿತಿ ನೀಡಿದೆ ಇದು ಕರ್ನಾಟಕ ರಾಜ್ಯದೊಳಗಿನ ವಿಚಾರ ಅಲ್ವಾ? ಕರ್ನಾಟಕಕ್ಕಾಗಿ ಎಷ್ಟು ನಿರ್ಧಾರಗಳನ್ನ ತೆಗೆದುಕೊಂಡಿದ್ದೇವೆ ಎಂಬುದನ್ನು ನಾನು ಇಲ್ಲಿ ಕುಳಿತುಕೊಂಡು ಹೇಳುತ್ತೇನೆ.

ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ - 3,800 ಕೋಟಿ ಯೋಜನೆ
ಮೈಸೂರು-ಬೆಂಗಳೂರು ದಶಪಥ ರಸ್ತೆ - 8,000 ಕೋಟಿ
ಬೆಂಗಳೂರು - ಚೆನ್ನೈ ಎಕ್ಸ್ಪ್ರೆಸ್ ಹೈವೇ - 17,000 ಕೋಟಿ
ಬೆಂಗಳೂರು - ಹೈದ್ರಾಬಾದ್ ಎಕ್ಸ್ಪ್ರೆಸ್ ಹೈವೇ - 31,000 ಕೋಟಿ
ಬೀದರ್- ಕಲಬುರಗಿ- ಬಳ್ಳಾರಿ ಹೈವೇ - 7,600 ಕೋಟಿ
ಬೆಂಗಳೂರು - ಮೈಸೂರು - ಚೆನ್ನೈ ಹೈಸ್ಪೀಡ್ ರೈಲ್ ಕಾರಿಡಾರ್ ಮಂಜೂರಾಗಿದೆ
ಶಿವಮೊಗ್ಗ - ಕಲಬುರಗಿಯಲ್ಲಿ ಹೊಸ ಏರ್ಪೋರ್ಟ್ ನಿರ್ಮಾಣವಾಗಿದೆ
ಹಾಸನ, ಕೋಲಾರ, ರಾಯಚೂರು, ವಿಜಯಪುರದಲ್ಲಿ ಹೊಸ ಏರ್ಪೋರ್ಟ್ಗೆ ಪ್ಲಾನ್ ಆಗಿದೆ. ಇದು ರಾಷ್ಟ್ರೀಯ ವಿಷಯವಲ್ಲ.. ಇದು ಇಲ್ಲಿನ ವಿಷಯವೇ.. ಅದು ಜನರಿಗೆ ಚೆನ್ನಾಗಿ ಗೊತ್ತಿದೆ

ಅಜಿತ್ ಹನುಮಕ್ಕನವರ್: ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿ ಹೇರಿಕೆ ಭಾವನಾತ್ಮಕ ವಿಷಯ. ಎನ್ಇಪಿನಲ್ಲಿ ಮಾತೃಭಾಷೆ ಶಿಕ್ಷಣಕ್ಕೆ ಮಹತ್ವ ನೀಡ್ತಿದೆ. ಇದರ ಮಧ್ಯೆ ಬಿಜೆಪಿಯನ್ನ ಹಿಂದಿ ಪಾರ್ಟಿ ಅಂತಾ ಬಿಂಬಿಸೋ ಪ್ರಯತ್ನ ನಡೀತಿದೆ

Karnataka election 2023: ಮಹದಾಯಿ ಸಮಸ್ಯೆ ಬಗೆಹರಿಸಿದ್ದು ಬಿಜೆಪಿ ಸರ್ಕಾರ: ಅಮಿತ್ ಶಾ

ಅಮಿತ್ ಶಾ: ಪ್ರಯತ್ನ ಎಷ್ಟು ಬೇಕಾದರೂ ಮಾಡಲಿ.. ಕನ್ನಡ ಭಾಷೆಗೆ ರಾಜ್ಯದಲ್ಲಿ ಹೆಚ್ಚು ಮಹತ್ವ ನೀಡಿದ್ದು ಭಾರತೀಯ ಜನತಾ ಪಾರ್ಟಿ.. ಐಎಎಸ್, ಐಪಿಎಸ್ ಪರೀಕ್ಷೆಗಳನ್ನ ಕನ್ನಡದಲ್ಲಿ ಶುರು ಮಾಡಿದ್ದು ಮೋದಿ ಬಂದ ಮೇಲೆಯೇ.. ಕನ್ನಡ ಮಾತ್ರವಲ್ಲ ತುಂಬಾ ಭಾಷೆಗಳಲ್ಲಿ ಅವಕಾಶ ನೀಡಿದ್ವಿ.. ಈಗ ಸಿಆರ್ಪಿಎಫ್ ಪರೀಕ್ಷೆಯಲ್ಲೂ ಕನ್ನಡಕ್ಕೆ ಅವಕಾಶ ನೀಡಿದ್ದೇವೆ.. ನಾವು ಕನ್ನಡದ ವ್ಯಾಪ್ತಿಯನ್ನ ಹೆಚ್ಚಿಗೆ ಮಾಡಿದ್ದೇವೆ.. ನಮ್ಮ ಉದ್ದೇಶವೇ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಮತ್ತು ಅಭಿಪ್ರಾಯ ವ್ಯಕ್ತವಾಗಬೇಕು. ಈ ತತ್ವದಡಿ ನಾವು ಕೆಲಸ ಮಾಡಿದ್ದೇವೆ. ನನಗೊಂದು ಹೇಳಿ ಪ್ರಿಯಾಂಕಾ ಗಾಂಧಿ ಕರ್ನಾಟಕಕ್ಕೆ ಬಂದ್ರೆ ಯಾವ ಭಾಷೆಯಲ್ಲಿ ಮಾತಾನಾಡುತ್ತಾರೆ? 

ಅಜಿತ್ ಹನುಮಕ್ಕನವರ್: ಹಿಂದಿಯಲ್ಲಿ

ಅಮಿತ್ ಶಾ: ಹಾಗಿದ್ರೆ ಅವರು ಹಿಂದಿಯನ್ನ ಹೇರಿಕೆ ಮಾಡ್ತಿದ್ದಾರಾ? ಹೇರಿಕೆ ಮಾಡಲು ಆಗೋದಿಲ್ಲ. ನಾನು ಗುಜರಾತ್‌ನಿಂದ ಬಂದಿದ್ದೇನೆ.. ನನಗೆ ಕನ್ನಡ ಬರೋದಿಲ್ಲ.. ಹಾಗಾಗಿ ಹಿಂದಿಯಲ್ಲಿ ಮಾತನಾಡುತ್ತೇನೆ. ಅದು ಸ್ವಾಭಾವಿಕ.. ಬಿಜೆಪಿ ಸರ್ಕಾರ ಪ್ರಾದೇಶಿಕ ಭಾಷೆಗಳನ್ನ ಬೆಳೆಸಲು ಮಾಡಿದಷ್ಟು ಕೆಲಸವನ್ನ ಯಾವ ಸರ್ಕಾರವೂ ಮಾಡಿಲ್ಲ.. ಮೆಡಿಕಲ್ ಪರೀಕ್ಷೆಯನ್ನೂ ಕನ್ನಡದಲ್ಲಿ ಬರೆಯಬಹುದು.. ಗುಜರಾತಿಯಲ್ಲೂ ಬರೆಯಬಹುದು.. ಮರಾಠಿಯಲ್ಲೂ ಬರೆಯಬಹುದು.. ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲೂ ಬರೆಯಬಹುದು.

ಎಂಜಿನಿಯರಿಂಗ್ ಪರೀಕ್ಷೆಯನ್ನು ಬರೆಯಬಹುದು.. ಐಎಎಸ್.. ಐಪಿಎಸ್ ಆಲ್ ಇಂಡಿಯಾ ಸರ್ವಿಸ್ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಬಹುದು.. ಕಾನ್ಸ್ಟೇಬಲ್ ಲೆವೆಲ್ ಪರೀಕ್ಷೆಗಳನ್ನು ಎಲ್ಲಾ ಭಾಷೆಯಲ್ಲಿ ಬರೆಯಲು ಅವಕಾಶ ನೀಡಿದ್ದೇವೆ.. ಕನ್ನಡ ಮಾಧ್ಯಮದಲ್ಲಿ ಎಸ್ಎಸ್ಎಲ್‌ಸಿ ಓದಿದ ವ್ಯಕ್ತಿ ಕೂಡ ಈಗ ಪರೀಕ್ಷೆ ತೆಗೆದುಕೊಳ್ಳಬಹುದು.. ಮೊದಲು ಅಂದರೆ ಕಾಂಗ್ರೆಸ್ ಸಮಯದಲ್ಲಿ ಇಂಗ್ಲಿಷ್ ಹಾಗೂ ಹಿಂದಿ ಮಾಧ್ಯಮದವರಿಗೆ ಮಾತ್ರ ಅವಕಾಶವಿತ್ತು. ಗ್ರಾಮೀಣ ಭಾಗದ ಕನ್ನಡ ಮಾಧ್ಯಮದ ಹುಡುಗ ಏನು ಮಾಡಬೇಕಿತ್ತು..? ಈಗ ಅದಕ್ಕೂ ಅವಕಾಶ ಮಾಡಿಕೊಟ್ಟಿದ್ದೇವೆ.. ಇದನ್ನೆಲ್ಲಾ ಮಾಡಿದ್ದು ನಾವೇ..

ಅಜಿತ್ ಹನುಮಕ್ಕನವರ್: ಪೂರ್ಣ ಬಹುಮತದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ್ರೆ ಸಿಎಂ ಮುಂದುವರೆಯುತ್ತಾರಾ? ಬದಲಾವಣೆ ಆಗ್ತಾರಾ?

ಅಮಿತ್ ಶಾ: ಈಗ ಚುನಾವಣೆ ನಡೀತಿದೆ.. ಮುಖ್ಯಮಂತ್ರಿ ನಮ್ಮವರೇ ಇದ್ದಾರೆ. ಈ ಮಾತನ್ನ ನಾನು ಸ್ಪಷ್ಟಪಡಿಸ್ತೀನಿ.. ಈಗಿನ ಸಿಎಂ ನೇತೃತ್ವದಲ್ಲೇ ಚುನಾವಣೆ ನಡೀತಿದೆ.. ಚುನಾವಣೆ ಬಳಿಕ ಯಾವ ಪರಿಸ್ಥಿತಿ ಬರುತ್ತೋ? ಮೆಜಾರಿಟಿ ಇದ್ದಾಗ ಪಾರ್ಟಿ ನಿರ್ಣಯ ಮಾಡುತ್ತೆ..