Asianet Suvarna News Asianet Suvarna News

ಕರ್ನಾಟಕದಲ್ಲಿ ರಂಗೇರಿದ ಚುನಾವಣಾ ಅಖಾಡ, ಡಿ.29ರ ರಾತ್ರಿ ಬೆಂಗಳೂರಿಗೆ ಅಮಿತ್ ಶಾ ಪ್ರವಾಸ!

ಕರ್ನಾಟಕ ವಿಧಾನಸಭಾ ಚುನಾವಣೆ ತಯಾರಿ ಗರಿಗೆದರಿದೆ. ಇದೀಗ ಅಮಿತ್ ಶಾ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. 3 ದಿನ ಪ್ರವಾಸದಲ್ಲಿ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯ ಪ್ರವಾಸದಲ್ಲಿ ಅಮಿತ್ ಶಾ ಅವರ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ.

Karnataka Assembly election Amit shah arrive December 29th night to Bengaluru for 3 days tour Full schedule ckm
Author
First Published Dec 27, 2022, 7:45 PM IST

ಬೆಂಗಳೂರು(ಡಿ.27): ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ಆರಂಭಿಸಿದೆ. ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿದೆ ಅಧಿಕಾರಕ್ಕೇರಲು ಪ್ಲಾನ್ ಮಾಡಿಕೊಂಡಿರುವ ರಾಜ್ಯ ಬಿಜೆಪಿ ನಾಯಕರ ಉತ್ಸಾಹ ಡಬಲ್ ಆಗಿದೆ. ಕಾರಣ ಇದೇ ಡಿಸೆಂಬರ್ 29 ರಂದು ಕೇಂದ್ರ ಗೃಹ ಸಚಿವ್ ಅಮಿತ್ ಶಾ ರಾಜ್ಯ ಪ್ರವಾಸ ಆರಂಭಿಸುತ್ತಿದ್ದಾರೆ. ಮೂರು ದಿನಗಳ ಕರ್ನಾಟಕ ಪ್ರವಾಸದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಡಿ.29ರ ರಾತ್ರಿ ಬೆಂಗಳೂರಿಗೆ ಆಗಮಿಸಲಿರುವ ಅಮಿತ್ ಶಾ, ಡಿಸೆಂಬರ್ 31ರ ಸಂಜೆ ದೆಹಲಿಗೆ ವಾಪಾಸ್ಸಾಗಲಿದ್ದಾರೆ.

ಡಿಸೆಂಬರ್ 29ರ ರಾತ್ರಿ ಬೆಂಗಳೂರಿಗೆ ಆಗಮಿಸುತ್ತಿರು ಅಮಿತ್ ಶಾ ಖಾಸಗಿ ಹೊಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಡಿಸೆಂಬರ್ 30ರ ಬೆಳಗ್ಗೆಯಿಂದ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಡಿಸೆಂಬರ್ 30 ರಂದು ಮಂಡ್ಯದ ಬಿಜೆಪಿ ಸಭೆಯಲ್ಲಿ ಅಮಿತ್ ಶಾ ಪಾಲ್ಗೊಳ್ಳುತ್ತಿದ್ದಾರೆ. ಬಳಿಕ ಮಧ್ಯಾಹ್ನ 3.30ಕ್ಕೆ ಡೈರಿ ಉದ್ಘಾಟನೆ ಮಾಡಲಿದ್ದಾರೆ. ಇನ್ನು ಸಂಜೆ 5.45ಕ್ಕೆ ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಅಮಿತ್ ಶಾ, ಸಂಜೆ ಬೆಂಗಳೂರಿನ ಅರಮನೆ ಮೈದನಾನದಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮದ ಬಳಿಕ ಬಿಜೆಪಿ ನಾಯಕರ ಜೊತೆ ಅಮಿತ್ ಶಾ ಮಹತ್ವದ ಸಭೆ ನಡೆಸಲಿದ್ದಾರೆ.

ಮೀಸಲಾತಿ ವಿಚಾರದಲ್ಲಿ ತಪ್ಪು ತೀರ್ಮಾನ ಮಾಡಬೇಡಿ: ಸಿಎಂ ಬೊಮ್ಮಾಯಿಗೆ ಹೈಕಮಾಂಡ್‌ ಕಿವಿಮಾತು

ಇನ್ನು ಡಿಸೆಂಬರ್ 31ರ ಬೆಳಗ್ಗೆ ಬಿಜೆಪಿ ನಾಯಕರ ಜೊತೆ ಅಮಿತ್ ಶಾ ಉಪಹಾರ ಸೇವಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ದೇವನಹಳ್ಳಿಯಲ್ಲಿ ವಿವಿಧ ಕಾಮಾಕಾರಿಗಳಿಗೆ ಚಾಲನೆ ನೀಡಲಿದ್ದಾರೆ. ಇನ್ನು ಮಧ್ಯಾಹ್ನ 3ಗಂಟೆಗೆ ಬೂತ್ ಅಧ್ಯಕ್ಷರ ಜೊತೆ ಸಭೆ ನಡೆಸಲಿದ್ದಾರೆ. ಬಳಿಕ ಸಂಜೆ 5 ಗಂಟೆಗೆ ದೇವನಹಳ್ಳಿಯ ಕೆಂಪೇಗೌಂಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ಮರಳಲಿದ್ದಾರೆ. 

ಅಮಿತ್ ಶಾ ರಾಜ್ಯ ಪ್ರವಾಸದ ಸಂಕ್ಷಿಪ್ತ ವಿವರ
ಡಿಸೆಂಬರ್ 29:
ಡಿ.29ರ ರಾತ್ರಿ ಅಮಿತ್ ಶಾ ಬೆಂಗಳೂರಿಗೆ ಆಗಮನ
ಖಾಸಗಿ ಹೊಟೆಲ್‌ನಲ್ಲಿ ಅಮಿತ್ ಶಾ ವಾಸ್ತವ್ಯ

ಸಂಪುಟ, ಮೀಸಲಾತಿ: ಸಿಎಂ, ಅಮಿತ್‌ ಶಾ 2.5 ತಾಸು ಚರ್ಚೆ

ಡಿಸೆಂಬರ್ 30:
ಡಿ. 30ಕ್ಕೆ ಮಂಡ್ಯದ ಬಿಜೆಪಿಯ ಸಭೆ
ಮಧ್ಯಾಹ್ನ 3.30ಕ್ಕೆ ಡೈರಿ ಉದ್ಘಾಟನೆ
ಜೆ 5.45ಕ್ಕೆಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗಿ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ
ಬಿಜೆಪಿ ನಾಯಕರ ಜೊತೆ ಮಹತ್ವದ ಸಭೆ

ಡಿಸೆಂಬರ್ 31:
ಬಿಜೆಪಿ ನಾಯರ ಜೊತೆ ಉಪಾಹರ
ಬೆಳಗ್ಗೆ 11 ಗಂಟೆಗೆ ದೇವನಹಳ್ಳಿಯಲ್ಲಿ ಕಾಮಾಗಾರಿಗೆ ಚಾಲನೆ
ಮದ್ಯಾಹ್ನ 3 ಗಂಟೆಗೆ ಬೂತ್ ಅಧ್ಯಕ್ಷರ ಜೊತೆ ಸಭೆ
ಸಂಜೆ 5 ಗಂಟೆಗೆ ದೆಹಲಿಗೆ ಅಮಿತ್ ಶಾ ವಾಪಸ್

Follow Us:
Download App:
  • android
  • ios