ಕರ್ನಾಟಕದಲ್ಲಿ ಪ್ರೀತಿ ಅಂಗಡಿ ಮಾತ್ರ ತೆಗೆಯುತ್ತೇವೆ; ದ್ವೇಷದ ಅಂಗಡಿಗೆ ಬೀಗ ಜಡಿಯುತ್ತೇವೆ: ಸುರ್ಜೇವಾಲ
ವಿಭಜಿಸುವ ಮನಃಸ್ಥಿತಿಗಳನ್ನು ಜನರು ಸೋಲಿಸಿದ್ದಾರೆ. ಕರ್ನಾಟಕದಲ್ಲಿ ಪ್ರೀತಿ ಅಂಗಡಿ ಮಾತ್ರ ತೆಗೆಯುತ್ತೇವೆ. ದ್ವೇಷದ ಅಂಗಡಿಗೆ ಬೀಗ ಜಡಿಯುತ್ತೇವೆ ಎಂಬುದನ್ನು ಇಲ್ಲಿನ ಜನರು ತೋರಿಸಿದ್ದಾರೆ. ಮುಂದೆ ಪಾರದರ್ಶಕ ಹಾಗೂ ಜನಪರ ಆಡಳಿತ ನೀಡುವುದು ನಮ್ಮ ಗುರಿ. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದವರನ್ನೂ ನಾವು ತಲುಪುತ್ತೇವೆ. ಸರ್ಕಾರದ ಕಾರ್ಯಕ್ರಮಗಳನ್ನು ಮುಟ್ಟಿಸುತ್ತೇವೆ’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು.
, ಬೆಂಗಳೂರು (ಮೇ.14) : ‘ಕಾಂಗ್ರೆಸ್ ಪಕ್ಷದ 136 ಅಭ್ಯರ್ಥಿಗಳು ಗೆಲುವು ಸಾಧಿಸುವ ಜತೆಗೆ ಕಾಂಗ್ರೆಸ್ ಬೆಂಬಲಿತ ರೈತಸಂಘದ ದರ್ಶನ್ ಪುಟ್ಟಣ್ಣಯ್ಯ ಗೆಲುವಿನ ಮೂಲಕ ಕಾಂಗ್ರೆಸ್ ಬಲ 137ಕ್ಕೆ ಹೆಚ್ಚಾಗಿದೆ. ಜತೆಗೆ ಗೌರೀಬಿದನೂರು ಪಕ್ಷೇತರ ಶಾಸಕ ಪುಟ್ಟಸ್ವಾಮಿ ಗೌಡ ಕಾಂಗ್ರೆಸ್‌ಗೆ ಬೇಷರತ್ ಬೆಂಬಲ ಸೂಚಿಸಿದ್ದು, ಪಕ್ಷದ ಬಲ 138ಕ್ಕೆ ಏರಿಕೆಯಾಗಿದೆ’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಬಳಿಕ ಭಾರತ್ ಜೋಡೋ(Bharat jodo bhavana) ಭವನದಲ್ಲಿ ನಾಯಕರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಜನತೆ ಚುನಾವಣಾ ಜನಾದೇಶದ ಮೂಲಕ ದ್ವೇಷದ ಅಂಗಡಿ ತೆರೆಯಲು ಬಂದಿದ್ದ ಅಂಗಡಿಗೆ ಬೀಗ ಜಡಿದಿದ್ದು ಪ್ರೀತಿಯ ಅಂಗಡಿ ತೆರೆದಿದ್ದಾರೆ. ಪ್ರಜಾತಂತ್ರ ರಕ್ಷಿಸಲು ಹೊಸ ಮಂತ್ರವನ್ನು ರಾಜ್ಯ ದೇಶಕ್ಕೆ ನೀಡಿದೆ’ ಎಂದು ಹೇಳಿದರು.
ಮುಳುಗುವ ಪರಿಸ್ಥಿತಿಯಲ್ಲಿದ್ದ ಕಾಂಗ್ರೆಸ್ ‘ಕೈ’ ಹಿಡಿದ ಕರ್ನಾಟಕ ಮತದಾರ: ಲೋಕಸಭೆ ಚುನಾವಣೆಗೂ ಬೂಸ್ಟರ್ ಡೋಸ್!
‘ವಿಭಜಿಸುವ ಮನಃಸ್ಥಿತಿಗಳನ್ನು ಜನರು ಸೋಲಿಸಿದ್ದಾರೆ. ಕರ್ನಾಟಕದಲ್ಲಿ ಪ್ರೀತಿ ಅಂಗಡಿ ಮಾತ್ರ ತೆಗೆಯುತ್ತೇವೆ. ದ್ವೇಷದ ಅಂಗಡಿಗೆ ಬೀಗ ಜಡಿಯುತ್ತೇವೆ ಎಂಬುದನ್ನು ಇಲ್ಲಿನ ಜನರು ತೋರಿಸಿದ್ದಾರೆ. ಮುಂದೆ ಪಾರದರ್ಶಕ ಹಾಗೂ ಜನಪರ ಆಡಳಿತ ನೀಡುವುದು ನಮ್ಮ ಗುರಿ. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದವರನ್ನೂ ನಾವು ತಲುಪುತ್ತೇವೆ. ಸರ್ಕಾರದ ಕಾರ್ಯಕ್ರಮಗಳನ್ನು ಮುಟ್ಟಿಸುತ್ತೇವೆ’ ಎಂದು ಭರವಸೆ ನೀಡಿದರು.
ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ(KS Puttannaiah) ಎರಡು ಭಾರಿ ಶಾಸಕರಾಗಿ ಆಯ್ಕೆಯಾದ ಸಂದರ್ಭದಲ್ಲೂ ಕಾಂಗ್ರೆಸ್ ಪಕ್ಷದ ಜತೆಗೆ ಇದ್ದರು. ಆ ಹಿನ್ನೆಲೆಯಲ್ಲಿ ಕಳೆದ 2018ರ ಚುನಾವಣೆ ವೇಳೆ ಪುಟ್ಟಣ್ಣಯ್ಯ ನಿಧನರಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ದರ್ಶನ್ ಪುಟ್ಟಣ್ಣಯ್ಯ(Darshan puttannaiah)ರಿಗೆ ಬೆಂಬಲ ನೀಡಲಾಗಿತ್ತು ಎಐಸಿಸಿ, ಕೆಪಿಸಿಸಿ ನಾಯಕರ ನಿರ್ಧಾರದಂತೆ ಮೇಲುಕೋಟೆ ವಿಧಾನಸಭಾ ಕ್ಷೇತ್ರ(Melukote assembly constittuency)ದಲ್ಲಿ ಕಾಂಗ್ರೆಸ್ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯರಿಗೆ ಬೆಂಬಲ ಸೂಚಿಸಲಾಗಿತ್ತು.
Karnataka Election Result 2023: ಚಾಣಕ್ಯನಾಗಿ ಗೆದ್ದ ಹರಿಯಾಣದ ಜಾದೂಗಾರ ರಣದೀಪ್ ಸುಜೇರ್ವಾಲ!