Jan Ki Baat Suvarna Survey: ಪ್ರಾದೇಶಿಕ ವಿಭಾಗವಾರು ಪಕ್ಷಗಳ ಬಲಾಬಲವೆಷ್ಟು?

ರಾಜ್ಯ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ಸುವರ್ಣ ನ್ಯೂಸ್‌ ವತಿಯಿಂದ ಮಾಡಲಾದ ಜನ್‌ಕಿ ಬಾತ್‌ ಸಮೀಕ್ಷೆಯಲ್ಲಿ ರಾಜ್ಯದ ವಿಭಾಗವಾರು ಮತ್ತು ಜಿಲ್ಲಾವಾರು ಯಾವ ಪಕ್ಷಕ್ಕೆ ಎಷ್ಟು ಕ್ಷೇತ್ರ ಗಳಿಸಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ..

Jan Ki Baat Karnataka Opinion Poll What is the strength of parties by regional divisions sat

ಬೆಂಗಳೂರು (ಏ.14): ರಾಜ್ಯ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ನೇರ, ದಿಟ್ಟ, ನಿರಂತರ ಸುದ್ದಿ ಪ್ರಸಾರ ಮಾಡುವ ಸುವರ್ಣ ನ್ಯೂಸ್‌ ವತಿಯಿಂದ ಜನ್‌ಕಿ ಬಾತ್‌ ಸುವರ್ಣ ಸಮೀಕ್ಷೆಯಲ್ಲಿ ಯಾವ ಪಕ್ಷಕ್ಕೆ ಅಧಿಕಾರ ಸಿಗಲಿದೆ ಎಂಬುದನ್ನು ವರದಿ ಸಿದ್ಧಪಡಿಸಲಾಗಿದೆ. ಇನ್ನು ರಾಜ್ಯದ ವಿಭಾಗವಾರು ಮತ್ತು ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..

ರಾಷ್ಟ್ರೀಯ ವಾಹಿನಿಗಳು ನಡೆಸುವ ಸಮೀಕ್ಷೆಗಿಂತಲೂ ಸುವರ್ಣ ನ್ಯೂಸ್ ಸಮೀಕ್ಷೆ ಬಗ್ಗೆ ರಾಜ್ಯದ ಜನತೆಗೆ ಅಪಾರ ನಂಬಿಕೆ ಮತ್ತು ವಿಶ್ವಾಸ. ಶೇ.92ರಷ್ಟು ಭವಿಷ್ಯ ನುಡಿದ ಮಾಧ್ಯಮ ಸಂಸ್ಥೆ ನಮ್ಮದು. ಇದೀಗ ಈ ಬಾರಿ ಕರ್ನಾಟಕ ಚುನಾವಣೆಯ ಮೊದಲ ಹಂತದ ಚುನಾವಣೋತ್ತರ ಸಮೀಕ್ಷೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ. 20 ಸಾವಿರಕ್ಕೂ ಹೆಚ್ಚು ಜನರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದ್ದು, ಎಲ್ಲ 224 ಕ್ಷೇತ್ರಗಳ ಮತದಾರರ ನಾಡಿ ಮಿಡಿತವನ್ನು ಇಲ್ಲಿ ಹಿಡಿದಿಟ್ಟು, ನಿಮ್ಮ ಮುಂದೆ ಇಡಲಾಗುತ್ತಿದೆ. ಮಾರ್ಚ್-15 ರಿಂದ ಏಪ್ರಿಲ್ 11ರವರೆಗೆ ಸಮೀಕ್ಷೆ ನಡೆಸಲಾಗಿದೆ.

Jan Ki Baat Suvarna Survey: ಫಲಿತಾಂಶಕ್ಕೂ ಮುನ್ನವೇ ಜನ್ ಕಿ ಬಾತ್ ಹೇಳುತ್ತೆ ನಿಖರ ನಂಬರ್ಸ್‌!

ಅಧಿಕಾರ ಹಿಡಿಯಲು ಪಕ್ಷಗಳ ಪ್ಲ್ಯಾನ್‌ ಏನು? : ಸುವರ್ಣ ನ್ಯೂಸ್‌ನಲ್ಲಿ ಕುರುಕ್ಷೇತ್ರದ ಮಹಾ ನಂಬರ್ ಯಾರಿಗೆ ಸಿಗುತ್ತದೆ. 2023ಕ್ಕೆ ಸ್ವತಂತ್ರ ಸರ್ಕಾರ ಬರುತ್ತದೆಯೇ ಅಥವಾ ಮತ್ತೆ ಅತಂತ್ರ ಸರ್ಕಾರ ಬಂದು ರೆಸಾರ್ಟ್‌ ರಾಜಕಾರಣ ನಡೆಯುತ್ತದೆಯೇ ಎಂಬುದು ತೀವ್ರ ಕುತೂಹಲ ಕೆರಳಿದಿದೆ. ಇನ್ನು ರಾಜ್ಯ ರಾಜಕೀಯದ ಪಕ್ಕಾ ಲೆಕ್ಕ ನಮ್ಮಲ್ಲಿ ಮಾತ್ರ ಇದೆ. ಇನ್ನು ಯಾವೊಂದು ಖಾಸಗಿ ಸಂಸ್ಥೆಯ ಮೊರೆಯನ್ನೂ ಹೋಗದೇ ನೇರವಾಗಿ ಜನರ ಬಳಿಯಿಂದಲೇ ಸಂಗ್ರಹಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ. ಇನ್ನು ಸುವರ್ಣ ನ್ಯೂಸ್‌ ವರದಿಯಂತೆಯೇ ಬಿಜೆಪಿ ಮತ್ತೆ ಅಧಿಕಾರ ಹಿಡಿದು ಗದ್ದುಗೆ ಏರುತ್ತಾ ನೋಡಬೇಕಿದೆ. ಕಾಂಗ್ರೆಸ್ ನಾಯಕರ ಪ್ಲಾನ್  ವರ್ಕೌಟ್ ಆಗುತ್ತಾ? ಅಥವಾ 2 ರಾಷ್ಟ್ರೀಯ ಪಕ್ಷಗಳ ಮಧ್ಯೆ ಜೆಡಿಎಸ್ ಯೋಜನೆ ಏನು ಎಂಬುದರ ಲೆಕ್ಕ ಇಲ್ಲಿದೆ.

ರಾಜ್ಯದ ಪ್ರಾದೇಶಿಕ ವಿಭಾಗವಾರು ಪಕ್ಷಗಳ ಬಲಾಬಲ ಹೀಗಿದೆ.
ಹಳೇ ಮೈಸೂರು - 57 ಕ್ಷೇತ್ರ
ಬಿಜೆಪಿ    12
ಕಾಂಗ್ರೆಸ್    23
ಜೆಡಿಎಸ್    22
ಇತರೆ    00
==
ಕಲ್ಯಾಣ ಕರ್ನಾಟಕ - 40 ಕ್ಷೇತ್ರ
ಬಿಜೆಪಿ    16
ಕಾಂಗ್ರೆಸ್    23
ಜೆಡಿಎಸ್    01
ಇತರೆ    00
==
ಬೆಂಗಳೂರು ಮಹಾನಗರ- 32 ಕ್ಷೇತ್ರ
ಬಿಜೆಪಿ    15
ಕಾಂಗ್ರೆಸ್    14
ಜೆಡಿಎಸ್    03
ಇತರೆ    00
==
ಮಧ್ಯ ಕರ್ನಾಟಕ - 26 ಕ್ಷೇತ್ರ
ಬಿಜೆಪಿ    13        
ಕಾಂಗ್ರೆಸ್    12    
ಜೆಡಿಎಸ್    01    
ಇತರೆ    00
==
ಕಿತ್ತೂರು ಕರ್ನಾಟಕ - 50 ಕ್ಷೇತ್ರ
ಬಿಜೆಪಿ     31
ಕಾಂಗ್ರೆಸ್    19
ಜೆಡಿಎಸ್    00
ಇತರೆ    00

Jan Ki Baat Suvarna News Survey: ಹಳೇ ಮೈಸೂರು ಕುತೂಹಲಕ್ಕೆ ಉತ್ತರ, ಯಾವ ಪಕ್ಷಕ್ಕೆ ಎಷ್ಟು ಸೀಟು?

ಕರಾವಳಿ ಕರ್ನಾಟಕ - 19 ಕ್ಷೇತ್ರ
ಬಿಜೆಪಿ     16
ಕಾಂಗ್ರೆಸ್    03
ಜೆಡಿಎಸ್    00
ಇತರೆ    00

Latest Videos
Follow Us:
Download App:
  • android
  • ios