Asianet Suvarna News Asianet Suvarna News

Karnataka Election 2023: ಎಕ್ಸಿಟ್ ಪೊಲ್ ಏನ್ ಹೇಳಿದ್ರೂ ಬಿಜೆಪಿಗೆ 115 ಸೀಟು ಪಕ್ಕಾ: ಬಿಎಸ್‌ವೈ

ಯಾವುದೇ ಎಕ್ಸಿಟ್ ಪೊಲ್ ಏನ್ ಹೇಳಿದ್ರೂ. ಮತ ಎಣಿಕೆ ನಂತರ ನಿಮಗೆ ಗೊತ್ತಾಗಲಿದೆ. ನಮಗೆ ಸ್ಪಷ್ಟವಾದ ಬಹುಮತ ಸಿಗಲಿದೆ. 115 ಕ್ಕೂ ಹೆಚ್ಚು ಸೀಟ್ ಸಿಗಲಿದೆ ಎಂದು ಬಿಎಸ್‌ವೈ ಭವಿಷ್ಯ ನುಡಿದಿದ್ದಾರೆ.

Karnataka Assembly Election  2023 bs yediyurappa reaction after exit poll gow
Author
First Published May 11, 2023, 7:50 PM IST

ಬೆಂಗಳೂರು (ಮೇ.11): ಯಾವುದೇ ಎಕ್ಸಿಟ್ ಪೊಲ್ ಏನ್ ಹೇಳಿದ್ರೂ. ಮತ ಎಣಿಕೆ ನಂತರ ನಿಮಗೆ ಗೊತ್ತಾಗಲಿದೆ. ನಮಗೆ ಸ್ಪಷ್ಟವಾದ ಬಹುಮತ ಸಿಗಲಿದೆ. 115 ಕ್ಕೂ ಹೆಚ್ಚು ಸೀಟ್ ಸಿಗಲಿದೆ. ಈ ಬಾರಿ ಕರ್ನಾಟಕದಲ್ಲಿ  ಬಿಜೆಪಿ ಸರ್ಕಾರ ರಚನೆ ಮಾಡ್ತಿವಿ ಎಂದು  ಬೆಂಗಳೂರಿನಲ್ಲಿ ಮಾಜಿ ಮುಖ್ಯ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಗಿಂತ ನಾವು ಹೆಚ್ಚು ಸೀಟ್ ತಗೊಳ್ಳೋದು ನೂರಕ್ಕೆ ನೂರು ಸತ್ಯ. ವೀರಶೈವ ಲಿಂಗಾಯತ ಮತಗಳ ವಿಭಜನೆ ಆಗಿಲ್ಲ. ನಾನೇ ಸ್ವಂತ ನಿರ್ಧಾರದಿಂದ ಸಿಎಂ ಸ್ಥಾನದಿಂದ ಕೆಳಗಿಳಿದೆ. ಇದನ್ನು ಸಮುದಾಯ ಅರ್ಥ ಮಾಡ್ಕೊಂಡಿದೆ. ಮುಂದಿನ ಸಿಎಂ‌ ಯಾರಾಗ್ತಾರೆ ಅಂತ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ ಆಗುತ್ತೆ. ಸಿಎಂ ಯಾರಾಗ್ತಾರೆ ಅನ್ನೋದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಹೇಳಿಕೆ ನೀಡಿದ್ದಾರೆ.

ಯಾರದೇ ಬೆಂಬಲ ಇಲ್ಲದೇ ನಾವು ಸರ್ಕಾರ ರಚನೆ ಮಾಡ್ತಿವಿ. ಈ ಬಾರಿ ಕರ್ನಾಟಕದಲ್ಲಿ  ಬಿಜೆಪಿ ಸರ್ಕಾರ ರಚನೆ ಮಾಡ್ತಿವಿ. ಏಕೆಂದರೆ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಬಂದಿದ್ದೀನಿ. ಈ ಆಧಾರದ ಮೇಲೆ ನಾನು ಈ ಮಾತು ಹೇಳ್ತಾಯಿದ್ದೀನಿ. ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡ್ತಿವಿ. ನಾವು ಹೇಳಿದಕ್ಕಿಂತ ಹೆಚ್ಚು ಸೀಟ್ ಗೆಲ್ತಿವಿ ಎಂದಿದ್ದಾರೆ.

Karnataka Election 2023: ಫಲಿತಾಂಶಕ್ಕೂ ಮುನ್ನವೇ ಅಭ್ಯರ್ಥಿಗಳ ಸೆರೆ ಹಿಡಿದಿಟ್ಟ

ಕಾಂಗ್ರೆಸ್ ಸರ್ಕಾರ ರಚನೆ ಮಾಡುತ್ತೆ ಅನ್ನೋ ಕಾಂಗ್ರೆಸ್ ನಾಯಕರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ನಾನು ಇವತ್ತು ಸ್ಪಷ್ಟವಾಗಿ ಹೇಳುತ್ತಿದ್ದೇನೆ ನಮ್ಮ ಸರ್ಕಾರ ರಚನೆ ಮಾಡುತ್ತೇವೆ. ಕಾಂಗ್ರೆಸ್ ಗಿಂತ ಹೆಚ್ಚು ಸೀಟ್ ಗೆಲ್ಲುತ್ತೇವೆ ಎಂದಿದ್ದಾರೆ.

KARNATAKA ELECTIONS 2023: ಎಕ್ಸಿಟ್‌ ಪೋಲ್‌ ಅತಂತ್ರ ಕೈಬಿಟ್ಟು, ಒಂದೇ ಪಕ್ಷಕ್ಕೆ ಬಹುಮತ ಕೊಟ್ಟ ಸಟ್ಟಾ ಬಜಾರ್‌ಗಳು!

ರಿಲ್ಯಾಕ್ಸ್ ಮೂಡ್ ನಲ್ಲಿ ಅಭ್ಯರ್ಥಿಗಳು:
ಅಬ್ಬರದ ಪ್ರಚಾರದ ನಂತರ ಅಭ್ಯರ್ಥಿಗಳು  ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಚುನಾವಣೆ ಬಳಿಕ ಯಾದಗಿರಿ ಬಿಜೆಪಿ ಅಭ್ಯರ್ಥಿ ವೆಂಕಟರಡ್ಡಿ ಮುದ್ನಾಳ್ ಮುಖಂಡರ ಜೊತೆ ಚರ್ಚೆ ನಡೆಸಿದ್ದು, ವೋಟಿಂಗ್ ಲೆಕ್ಕಾಚಾರದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಕಚೇರಿಯಲ್ಲಿ ನಿನ್ನೆ ನಡೆದ ಮತದಾನದ ಬಗ್ಗೆ ಚರ್ಚೆ ಮಾಡುತ್ತಾ ಕುಳಿತ ವೆಂಕಟರೆಡ್ಡಿ ಮುದ್ನಾಳ. ಈ ಬಾರಿ ಮತ್ತೊಮ್ಮೆ ಗೆಲ್ಲುವ ವಿಶ್ವಾಸವಿದೆ. ಮತ್ತೆ ರಾಜ್ಯದಲ್ಲಿ ಸರ್ಕಾರ ನಮ್ದೆ ಬರುತ್ತೆ. ಅಮಿತ್ ಶಾ ಹಾಗೂ ಯಡಿಯೂರಪ್ಪ ಹೇಳಿದ ಪ್ರಕಾರ ಬಿಜೆಪಿಗೆ ಬಹುಮತ ಬರುತ್ತದೆ. ಅಮಿತ್ ಶಾ ಹಾಗೂ ಯಡಿಯೂರಪ್ಪ ಸುಮ್ನೆ ಹೇಳಲ್ಲ. ಕರೆಕ್ಟ್ ಆಗಿ ಜನರ ನಾಡಿಮಿಡಿತ ಅರ್ಥ ಮಾಡಿಕೊಂಡೆ ಹೇಳುತ್ತಾರೆ. ಕಾಂಗ್ರೆಸ್ ಪರ‌‌ ಸಮೀಕ್ಷೆ ತೋರಿಲಾಗುತ್ತೆ ಅದರಲ್ಲಿ ಬದಲಾವಣೆ ಆಗಬಹುದು. ಬೇರೆ ಬೇರೆ ಕಡೆ ಸಮೀಕ್ಷೆಗಳಲ್ಲಿ ವ್ಯತ್ಯಾಸ ಆಗಿದೆ ಇಲ್ಲಿ ಕೂಡ ವ್ಯತ್ಯಾಸ ಆಗಬಾರದು. ನನ್ನ ಪ್ರಕಾರ ಕನಿಷ್ಠ 110 ರಿಂದ 112 ವರೆಗಾದ್ರು ನಮ್ಮ ಸೀಟ್ ಬರಬಹುದು ಎಂದ ಬಿಜೆಪಿ ಶಾಸಕ ವೆಂಕಟರಡ್ಡಿ ಮುದ್ನಾಳ್.

Follow Us:
Download App:
  • android
  • ios