Karnataka Elections 2023: ಎಕ್ಸಿಟ್ ಪೋಲ್ ಅತಂತ್ರ ಕೈಬಿಟ್ಟು, ಒಂದೇ ಪಕ್ಷಕ್ಕೆ ಬಹುಮತ ಕೊಟ್ಟ ಸಟ್ಟಾ ಬಜಾರ್‌ಗಳು!
ದೇಶದ ಪ್ರಮುಖ 6 ಸಟ್ಟಾ ಬಜಾರ್‌ಗಳು ಕೂಡ ಭವಿಷ್ಯ ನುಡಿದಿದ್ದು, ಕಾಂಗ್ರೆಸ್ ಸ್ಪಷ್ಟವಾಗಿ ಬಹುಮತ ಸಾಧಿಸಿ ಅಧಿಕಾರ ಸ್ಥಾಪಿಸುವ ಪಕ್ಷವಾಗಲಿದೆ ಎಂದು ಹೇಳಿವೆ.
ಬೆಂಗಳೂರು (ಮೇ 11): ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ 10ಕ್ಕೂ ಅಧಿಕ ಸಮೀಕ್ಷಾ ಸಂಸ್ಥೆಗಳು ವರದಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಕಾಂಗ್ರೆಸ್‌ಗೆ 7ಕ್ಕೂ ಅಧಿಕ ಸಂಸ್ಥೆಗಳು ದೊಡ್ಡ ಪಕ್ಷವೆಂದು ವರದಿ ನೀಡಿವೆ. ಇನ್ನು ದೇಶದ ಪ್ರಮುಖ 6 ಸಟ್ಟಾ ಬಜಾರ್‌ಗಳು ಕೂಡ ಭವಿಷ್ಯ ನುಡಿದಿದ್ದು, ಕಾಂಗ್ರೆಸ್ ಸ್ಪಷ್ಟವಾಗಿ ಬಹುಮತ ಸಾಧಿಸಿ ಅಧಿಕಾರ ಸ್ಥಾಪಿಸುವ ಪಕ್ಷವಾಗಲಿದೆ ಎಂದು ಹೇಳಿವೆ.
ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಮತದಾನ ಪೂರ್ಣಗೊಂಡಿದ್ದು, 2,615 ಅಭ್ಯರ್ಥಿಗಳ ಭವಿಷ್ಯ ಹಾಗೂ ಯಾವ ಪಕ್ಷಕ್ಕೆ ಬಹುಮತ ಸಿಗಲಿದೆ ಎನ್ನುವುದು ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ. ಇನ್ನು ಮೇ 13 ರಂದು ಮತದಾನದ ಫಲಿತಾಂಶ ಹೊರ ಬೀಳಲಿದ್ದು, ಯಾವ ಪಕ್ಷದ ಎಷ್ಟು ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ತಿಳಿಯಲಿದೆ. ಕರ್ನಾಟಕದಲ್ಲಿ ಸರ್ಕಾರ ರಚಿಸಲು ಯಾವುದೇ ಪಕ್ಷವು 224 ಸ್ಥಾನಗಳ ವಿಧಾನಸಭೆಯಲ್ಲಿ ಬಹುಮತದಿಂದ ಅಧಿಕಾರಕ್ಕೆ ಬರಲು 113 ಸ್ಥಾನಗಳನ್ನು (Magic Number) ಗಳಿಸಬೇಕು. ಇನ್ನು ಈಗಾಗಲೇ ರಾಜ್ಯದಲ್ಲಿ 10ಕ್ಕೂ ಅಧಿಕ ಸಂಸ್ಥೆಗಳು ಸಮೀಕ್ಷಾ ವರದಿಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ತಿಳಿಸಿವೆ. ಆದರೆ, ಏಷ್ಯಾನೆಟ್ ಸುವರ್ಣ ನ್ಯೂಸ್, ಸಿ-ಜಿಎಸ್ ಸಂಸ್ಥೆಗಳು ಬಿಜೆಪಿಗೆ ಬಹುಮತ ಕೊಟ್ಟಿವೆ. ಆದರೆ, ಈಗ ಸಟ್ಟಾ ಬಜಾರ್‌ಗಳು ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿದ್ದು, ಕಾಂಗ್ರೆಸ್ ನಾಯಕರಿಗೆ ಭರ್ಜರಿ ಸಂತಸವಾಗಿದೆ.
Karnataka Election 2023 : ಫಲಿತಾಂಶಕ್ಕೂ ಮುನ್ನವೇ ಪ್ಲ್ಯಾನ್ 'ಬಿ' ರೆಡಿ: ಬಿಜೆಪಿ ನಾಯಕನ ಹೊಸ ಬಾಂಬ್
ಪ್ರಮುಖ 6 ಸಟ್ಟಾ ಬಜಾರ್‌ಗಳ ಭವಿಷ್ಯ ಹೀಗಿದೆ ನೋಡಿ..
- ಫಲೋಡಿ ಸಟ್ಟಾ ಬಜಾರ್
- ಕಾಂಗ್ರೆಸ್ - 137 ಸ್ಥಾನಗಳು
- ಬಿಜೆಪಿ - 55
- ಜೆಡಿ(ಎಸ್) - 30
ಪಾಲನ್ಪುರ್ ಸಟ್ಟಾ ಬಜಾರ್
ಕಾಂಗ್ರೆಸ್ - 141 ಸ್ಥಾನಗಳು
ಬಿಜೆಪಿ - 57
ಜೆಡಿ(ಎಸ್) - 24
- ಕರ್ನಾಲ್ ಸಟ್ಟಾ ಬಜಾರ್
- ಕಾಂಗ್ರೆಸ್ - 124 ಸ್ಥಾನಗಳು
- ಬಿಜೆಪಿ - 69
- ಜೆಡಿ(ಎಸ್) - 24
ಬೋಹ್ರಿ ಸಟ್ಟಾ ಬಜಾರ್
ಕಾಂಗ್ರೆಸ್ - 149 ಸ್ಥಾನಗಳು
ಬಿಜೆಪಿ - 48
ಜೆಡಿ(ಎಸ್) - 22
- ಬೆಳಗಾವಿ ಸಟ್ಟಾ ಬಜಾರ್
- ಕಾಂಗ್ರೆಸ್ - 136 ಸ್ಥಾನಗಳು
- ಬಿಜೆಪಿ - 56
- ಜೆಡಿ(ಎಸ್) - 30
ಕೋಲ್ಕತ್ತಾ ಸಟ್ಟಾ ಬಜಾರ್
ಕಾಂಗ್ರೆಸ್ - 132 ಸ್ಥಾನಗಳು
ಬಿಜೆಪಿ - 56
ಜೆಡಿ(ಎಸ್) - 34
ಕಾಂಗ್ರೆಸ್‌ಗೆ 124ಕ್ಕಿಂತ ಹೆಚ್ಚು ಸ್ಥಾನ ಕೊಟ್ಟ ಸಟ್ಟಾ ಬಜಾರ್‌ಗಳು: ದೇಶದಲ್ಲಿ ಪ್ರಮುಖ 6 ಸಟ್ಟಾ ಬಜಾರ್‌ಗಳು ಕೂಡ ಕಾಂಗ್ರೆಸ್‌ಗೆ 124ಕ್ಕೂ ಅಧಿಕ ಹೆಚ್ಚಿನ ಸ್ಥಾನಗಳನ್ನು ನೀಡಿವೆ. ಇನ್ನು ಬಿಜೆಪಿ ರಾಜ್ಯದಲ್ಲಿ 68ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ಹೇಳಿವೆ. ಇನ್ನು ಅತಂತ್ರ ಸ್ಥಿತಿ ಬಂದರೆ ಸಾಕು ನಾವು ಮತ್ತೆ ಕಿಂಗ್ ಮೇಕರ್ ಆಗಬಹುದು ಎಂದು ಕಾಯುತ್ತಿರುವ ಜೆಡಿಎಸ್‌ಗೆ 30 ಸ್ಥಾನಕ್ಕಿಂತ ಕಡಿಮೆ ಕ್ಷೇತ್ರದಲ್ಲಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿವೆ.
ಎಕ್ಸಿಟ್ ಪೋಲ್ ವರದಿ ನಂಬುವುದಿಲ್ಲ ಎಂದ ಸಿಎಂ ಬೊಮ್ಮಾಯಿ: ಇನ್ನು ಮತದಾನೋತ್ತರ ಸಮೀಕ್ಷೆಯಿಂದ ಹೊರಬಂದ ವರದಿಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮೇಲುಗೈ ಸಾಧಿಸುವ ಎಕ್ಸಿಟ್ ಪೋಲ್‌ಗಳಿಂದ ವಿಚಲಿತರಾಗದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಪಕ್ಷದ ಗ್ರೌಂಡ್ ರಿಪೋರ್ಟ್‌ಗಳೊಂದಿಗೆ ಬಿಜೆಪಿ 'ಸರಳ ಬಹುಮತ' (Simple majority) ದೊಂದಿಗೆ ಮತ್ತೊಮ್ಮೆ ಸರ್ಕಾರವನ್ನು ರಚಿಸಲಿದೆ ಎಂದು ಹೇಳಿದ್ದಾರೆ. "ಈ ಹಿಂದೆ ಎಲ್ಲಾ ಎಕ್ಸಿಟ್ ಪೋಲ್‌ಗಳು ಯೋಗಿ ಆದಿತ್ಯನಾಥ್ ಮರಳಿ ಬರುವುದಿಲ್ಲ ಎಂದು ಭವಿಷ್ಯ ನುಡಿದಿದ್ದವು. ಆದರೆ ಅವರು ಉತ್ತರ ಪ್ರದೇಶದಲ್ಲಿ ಮತ್ತೆ ಬಂದರು. ಕಳೆದ ಬಾರಿ, ಎಕ್ಸಿಟ್ ಪೋಲ್‌ಗಳುನಬಿಜೆಪಿಗೆ ಕೇವಲ 80 ಮತ್ತು ಕಾಂಗ್ರೆಸ್‌ಗೆ 107 ಸ್ಥಾನಗಳನ್ನು ಭವಿಷ್ಯ ನುಡಿದಿದ್ದರು, ಆದರೆ ಅದು ರಿವರ್ಸ್ ಆಯಿತು. ನಮ್ಮ ನೆಲದ ಮೇಲೆ ನಮಗೆ ವಿಶ್ವಾಸವಿದೆ. ವರದಿಗಳು ಮತ್ತು ನಾವು ಮತ್ತೊಮ್ಮೆ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ಬೊಮ್ಮಾಯಿ ಮಾಧ್ಯಮಗಳಿಗೆ ತಿಳಿಸಿದರು.
Karnataka Election 2023: ಫಲಿತಾಂಶಕ್ಕೂ ಮುನ್ನವೇ ಅಭ್ಯರ್ಥಿಗಳ ಸೆರೆ ಹಿಡಿದಿಟ್ಟ ಕಾಂಗ್ರೆಸ್!
ರಾಷ್ಟ್ರೀಯ ಪಕ್ಷಗಳಿಂದ ಸರ್ಕಾರ ರಚಿಸುವ ಭರವಸೆ: ಹೆಚ್ಚಿನ ಎಕ್ಸಿಟ್ ಪೋಲ್ ಪ್ರಕ್ಷೇಪಗಳ ಪ್ರಕಾರ, ಕಾಂಗ್ರೆಸ್ ಬಿಜೆಪಿಗಿಂತ ಮುಂದಿದೆ ಆದರೆ ಅದೇ ಸಮಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆಗಳನ್ನು ಕೂಡ ತಿಳಿಸಲಾಗಿದೆ. ಜೆಡಿಎಸ್ ಪಕ್ಷವು ಸತತ ಎರಡನೇ ಬಾರಿಗೆ ಕಿಂಗ್‌ಮೇಕರ್ ಆಗಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಆದರೆ, ಕಾಂಗ್ರೆಸ್ ನಾಯಕರು ಹಾಗೂ ಬಿಜೆಪಿ ನಾಯಕರು 'ಎಕ್ಸಿಟ್ ಪೋಲ್‌ಗಳನ್ನು ನಂಬಬೇಡಿ, ನಮ್ಮ ಪಕ್ಷಗಳೇ ಸ್ವಂತವಾಗಿ ಸರ್ಕಾರ ರಚಿಸುತ್ತವೆ ಎಂದು ಹೇಳಿಕೊಂಡಿದ್ದಾರೆ.
ಕಾಂಗ್ರೆಸ್‌ಗೆ 146 ಸ್ಥಾನ ಬರಲಿದೆ ಎಂದು ಡಿಕೆಶಿ: ಕಾಂಗ್ರೆಸ್‌ನ ಕರ್ನಾಟಕ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಬುಧವಾರ ಎಕ್ಸಿಟ್ ಪೋಲ್ ಫಲಿತಾಂಶಗಳಲ್ಲಿ ನಂಬಿಕೆಯಿಲ್ಲ ಎಂದು ಹೇಳಿದ್ದಾರೆ. ನಮ್ಮ ಪಕ್ಷವು 146 ಸ್ಥಾನಕ್ಕಿಂತ ಹೆಚ್ಚು ಸ್ಥಾನ ಗಳಿಸಲಿದೆ. ಚುನಾವಣಾ ಫಲಿತಾಂಶ ನಿರ್ಣಾಯಕವಾಗಿ ತಮ್ಮ ಪಕ್ಷದ ಪರವಾಗಿರಲಿದ್ದು, ಸರ್ಕಾರ ರಚಿಸಲು ಬೇರೆ ಪಕ್ಷದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.