Karnataka Election 2023: ಫಲಿತಾಂಶಕ್ಕೂ ಮುನ್ನವೇ ಅಭ್ಯರ್ಥಿಗಳ ಸೆರೆ ಹಿಡಿದಿಟ್ಟ ಕಾಂಗ್ರೆಸ್!
ಚುನಾವಣಾ ಫಲಿತಾಂಶ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಗಂಭೀರ ಚಿಂತನ ಮಂಥನ ನಡೆದಿದೆ. ಆಪರೇಷನ್ ಕಮಲದ ಬಗ್ಗೆ ಸಹ ಕಾಂಗ್ರೆಸ್ ಅಲರ್ಟ್ ಆಗಿದೆ. ಫಲಿತಾಂಶ ಬಂದ ನಂತರ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದೆ.
ಬೆಂಗಳೂರು (ಮೇ.11): ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಫಲಿತಾಂಶ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಗಂಭೀರ ಚಿಂತನ ಮಂಥನ ನಡೆದಿದೆ. ಆಪರೇಷನ್ ಕಮಲದ ಬಗ್ಗೆ ಸಹ ಕಾಂಗ್ರೆಸ್ ಅಲರ್ಟ್ ಆಗಿದೆ. ಫಲಿತಾಂಶ ಬಂದ ನಂತರ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜಿಲ್ಲಾ ಅಧ್ಯಕ್ಷ ರಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಗೆದ್ದ ಎಲ್ಲಾ ಶಾಸಕರನ್ನು ತಕ್ಷಣ ಬೆಂಗಳೂರಿಗೆ ಕರೆದುಕೊಂಡು ಬರಬೇಕು. ವಾಸ್ತವ್ಯಕ್ಕೆ ನಿಗದಿ ಮಾಡಿರುವ ಸ್ಥಳಕ್ಕೆ ಕರೆದುಕೊಂಡು ಬರಬೇಕು. ಗೆಲ್ಲುವ ಅಭ್ಯರ್ಥಿಗಳ ಜೊತೆಗೆ ಇತರ ಪಕ್ಷಗಳ ನಾಯಕರ ಸಂಪರ್ಕ ಕುರಿತು ಅಲರ್ಟ್ ಆಗಿರಬೇಕು ಎಂದು ಎಲ್ಲಾ ಜಿಲ್ಲಾಧ್ಯಕ್ಷರು ಮತ್ತು ಪ್ರಮುಖ ನಾಯಕರಿಗೆ ಹಾಗೂ ಮಾಜಿ ಸಂಸದರಿಗೆ ಡಿಕೆಶಿ ಖಡಕ್ ಸೂಚನೆ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಶಾಸಕರನ್ನು ರಕ್ಷಿಸಿಕೊಳ್ಳುವ ಪ್ಲಾನ್ ಕೈ ಪಡೆ ಮಾಡಿದೆ.
ಕಾಂಗ್ರೆಸ್ ಬೂತ್ ರಿಪೋರ್ಟ್: ಕಾಂಗ್ರೆಸ್ ನಾಯಕರ ಬೂತ್ ರಿಪೋರ್ಟ್ ಕೈ ಸೇರಿದೆ. ಗರಿಷ್ಠ ಮಟ್ಟದ ಬೂತ್ ಗಳಲ್ಲಿ ಕಾಂಗ್ರೆಸ್ ಗೆ ಮುನ್ನಡೆ ಇದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಸಿದ್ದರಾಮಯ್ಯ ಅವರಿಗೆ ಬೂತ್ ರಿಪೋರ್ಟ್ ತಲುಪಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾಗೆ ಜಿಲ್ಲಾ ಕಮಿಟಿಯಿಂದ ವರದಿ ಸಿಕ್ಕಿದೆ. ವರದಿ ಪಡೆದುಕೊಂಡಿರುವ ಸುರ್ಜೇವಾಲಾ ಡಿಕೆಶಿ ಮತ್ತು ಸಿದ್ದರಾಮಯ್ಯ ಜೊತೆಗೆ ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್ ಗೆ ಸಿಕ್ಕಿರುವ ಬೂತ್ ರಿಪೋರ್ಟ್ ನಲ್ಲಿ 120 ರಿಂದ 130 ಸ್ಥಾನ ದೊರೆತಿದೆ. ಬೂತ್ ರಿಪೋರ್ಟ್ ನಲ್ಲಿ ನಿಶ್ಚಿತ ಬಹುಮತ ಸಿಗುವ ಕುರಿತು ಮಾಹಿತಿ ಸಿಕ್ಕಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಕಾಂಗ್ರೆಸ್ ನಾಯಕರು ಮಾಹಿತಿ ನೀಡಿದ್ದಾರೆ
ಕರಾವಳಿ ಭಾಗದಲ್ಲೂ ಕಾಂಗ್ರೆಸ್ ಗೆ ಉತ್ತಮ ಬೆಂಬಲ ಸಿಕ್ಕಿದೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ನಿಂದ ಪ್ರಬಲ ಸ್ಪರ್ಧೆ. ಬೆಂಗಳೂರು ನಗರದ ಬೂತ್ ಗಳಲ್ಲಿ ಕಾಂಗ್ರೆಸ್ ಗೆ ಮುನ್ನಡೆ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬೂತ್ ಕಮಿಟಿ ರಿಪೋರ್ಟ್ ಮೇಲೆ ಕಾಂಗ್ರೆಸ್ ನಲ್ಲಿ ಚಿಂತನ - ಮಂಥನ ಆರಂಭಗೊಂಡಿದೆ.
ಗರಿಗೆದರಿದ ಕಾಂಗ್ರೆಸ್ ಚಟುವಟಿಕೆ:
ಎಕ್ಸಿಟ್ ಪೊಲ್ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್ ಚಟುವಟಿಕೆ ಗರಿಗೆದರಿದೆ. ಸಂಜೆ 6 ಗಂಟೆಗೆ ಸಿದ್ದರಾಮಯ್ಯ ಮನೆಯಲ್ಲಿ ಮಹತ್ವದ ಸಭೆ ನಡೆಯಲಿದೆ. ಸಿದ್ದರಾಮಯ್ಯ ನಿವಾಸದಲ್ಲಿ ನಡೆಯುವ ಸಭೆಯಲ್ಲಿ ಸುರ್ಜೆವಾಲ ಡಿಕೆ ಸಹ ಭಾಗಿಯಾಗುವ ಸಾಧ್ಯತೆ. ಸ್ವತಂತ್ರವಾಗಿ ಪಕ್ಷ ಗೆದ್ದರೆ ಏನು ಮಾಡಬೇಕು. ಅಂತಂತ್ರವಾದರೆ ಯಾವ ರಣ ತಂತ್ರ ರೂಪಿಸಬೇಕು ಎಂಬದರ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.
Karnataka Election 2023 : ಫಲಿತಾಂಶಕ್ಕೂ ಮುನ್ನವೇ ಪ್ಲ್ಯಾನ್ 'ಬಿ' ರೆಡಿ: ಬಿಜೆಪಿ ನಾಯಕನ ಹೊಸ
ಸುರ್ಚೇವಾಲ-ಸಿದ್ದು ಭೇಟಿ:
ಎಕ್ಸಿಟ್ ಪೊಲ್ ಫಲಿತಾಂಶ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಭೇಟಿ ಮಾಡಿದ್ದಾರೆ. ಚುನಾವಣೋತ್ತರ ಮಾಹಿತಿ ಕುರಿತು ಒಂದು ಗಂಟೆಗೂ ಹೆಚ್ಚು ಕಾಲ ಸಿದ್ದರಾಮಯ್ಯ ನಿವಾಸದಲ್ಲಿ ಸುರ್ಜೇವಾಲ ಚರ್ಚೆ ನಡೆಸಿದ್ದಾರೆ. ಉಭಯ ನಾಯಕರು ನಿನ್ನೆ ಎಲ್ಲಾ ಜಿಲ್ಲೆಗಳಿಂದ ಮಾಹಿತಿ ಪಡೆದಿದ್ದು ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಯಾವ ಜಿಲ್ಲೆಯಲ್ಲಿ ಎಷ್ಟು ಸ್ಥಾನ ಬರಬಹುದು ಎಂಬ ಲೆಕ್ಕಾಚಾರದ ಬಗ್ಗೆ ಚರ್ಚೆ ನಡೆದಿದೆ. ಫಲಿತಾಂಶ ಬಳಿಕ ತೆಗೆದುಕೊಳ್ಳುವ ನಡೆ ಬಗ್ಗೆಯೂ ಚರ್ಚೆ. ಜೊತೆಗೆ ಎಕ್ಸಿಟ್ ಪೊಲ್ ಸಮೀಕ್ಷೆ ಬಗ್ಗೆಯೂ ಚರ್ಚೆ ನಡೆದಿದೆ.
KODAGU: ಸೂಟ್‌ಕೇಸ್ ಕ್ಯಾಂಡಿಡೇಟ್‌ನಿಂದ ಚುನಾವಣಾ ಕಣ ಟಫ್ ಇತ್ತು: ಅಪ್ಪಚ್ಚು ರಂಜನ್
ಸಿದ್ದರಾಮಯ್ಯ ಭೇಟಿ ಬಳಿಕ ಸುರ್ಜೆವಾಲ ಹೇಳಿಕೆ:
ಬದಲಾವಣೆಗೆ ಮತ ಚಲಾಯಿಸಿದ್ದಕ್ಕೆ ಕರ್ನಾಟಕ ಜನತೆ ಧನ್ಯವಾದಗಳು. 40 % ಭ್ರಷ್ಟಾಚಾರ ಸರ್ಕಾರದ ವಿರುದ್ಧ ಮತ ಹಾಕಿದ್ದಾರೆ. ಮೇ 13 ಕ್ಕೆ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ. ಕರ್ನಾಟಕವನ್ನ ಮತ್ತೆ ನಾವು ರೀ ಬ್ರಾಂಡ್ ಮಾಡಲಿದ್ದೇವೆ ಎಂದು ಸುರ್ಜೆವಾಲ ಹೇಳಿದ್ದಾರೆ.