Asianet Suvarna News Asianet Suvarna News

Vijayanagar constituency: ಬಿಸಿಲಿನಲ್ಲೂ ಈ ಸಲ ಮತದಾನದಲ್ಲಿ ಅಲ್ಪ ಹೆಚ್ಚಳ!

ನೂತನ ವಿಜಯನಗರ ಜಿಲ್ಲೆಯಲ್ಲಿ ಬಿರು ಬಿಸಿಲಿನಲ್ಲೂ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣದಲ್ಲಿ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮತದಾನ ಜಾಗೃತಿ ಸಮಿತಿ ಕೈಗೊಂಡ ವಿವಿಧ ಚಟುವಟಿಕೆಗಳೇ ಹೆಚ್ಚಳಕ್ಕೆ ಕಾರಣವಾಗಿದೆ.

Karnataka assembly election 2023 78.07 percent polling in Vijayanagara bellary rav
Author
First Published May 20, 2023, 10:56 AM IST

ಹೊಸಪೇಟೆ (ಮೇ.20) : ನೂತನ ವಿಜಯನಗರ ಜಿಲ್ಲೆಯಲ್ಲಿ ಬಿರು ಬಿಸಿಲಿನಲ್ಲೂ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣದಲ್ಲಿ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮತದಾನ ಜಾಗೃತಿ ಸಮಿತಿ ಕೈಗೊಂಡ ವಿವಿಧ ಚಟುವಟಿಕೆಗಳೇ ಹೆಚ್ಚಳಕ್ಕೆ ಕಾರಣವಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಶೇ. 78.07ರಷ್ಟುಮತದಾನ ನಡೆದಿದೆ. 2018ರ ವಿಧಾನಸಭಾ ಚುನಾವಣೆಯನ್ನು ಮೀರಿಸಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ಭಾಗವಾಗಿದ್ದ ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಶೇ. 76.99ರಷ್ಟುಪ್ರಮಾಣದಲ್ಲಿ ಮತದಾನ ನಡೆದಿತ್ತು. ಆದರೆ, ಈ ಬಾರಿ ಶೇ. 78.07ರಷ್ಟುಮತ ಚಲಾವಣೆಯಾಗಿದೆ. ಈ ಸಲ ಜಿಲ್ಲೆಯಲ್ಲಿ 61 ಸಾವಿರ ಮತದಾರರು ಹೆಚ್ಚಾಗಿದ್ದರೂ ಮತದಾನ ಮಾತ್ರ ಅಲ್ಪ ಹೆಚ್ಚಳವಾಗಿದೆ.

ಗಣಿನಾಡಿನ 83 ಹಳ್ಳಿಗಳಲ್ಲಿ ಕುಡಿವ ನೀರಿನ ಅಭಾವ: ಫ್ಲೋ ರೈಡ್‌ ಮಿಶ್ರಿತ ನೀರು ಬಳಕೆ!

8,52,502 ಮತದಾರರಿಂದ ಹಕ್ಕು ಚಲಾವಣೆ:

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟು 1,219 ಮತಗಟ್ಟೆಗಳಲ್ಲಿ ಒಟ್ಟು 10,92,011 ಜನ ಮತದಾರರ ಪೈಕಿ 8,52,502 ಜನ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಸ್ವೀಪ್‌ ಸಮಿತಿ ಬಲ:

ಜಿಲ್ಲೆಯಲ್ಲಿ ಈ ಬಾರಿ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಸದಾಶಿವ ಬಿ. ಪ್ರಭು ಅವರ ನೇತೃತ್ವದಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಜಿಲ್ಲೆಯಲ್ಲಿ ಫೆಬ್ರವರಿ ತಿಂಗಳಿಂದ ನರೇಗಾ ಕಾರ್ಮಿಕರು ಸೇರಿದಂತೆ, ಹಳ್ಳಿ, ಪಟ್ಟಣ, ತಾಂಡಾ, ಕ್ಯಾಂಪ್‌, ಕಾಲನಿಗಳಲ್ಲಿ ಮತದಾನ ಜಾಗೃತಿ ನಡೆಸಲಾಗಿತ್ತು.

ವಿಜಯನಗರ ಕ್ಷೇತ್ರದಲ್ಲಿ ಕಡಿಮೆ:

ವಿಜಯನಗರ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಕಳೆದ ಬಾರಿಗಿಂತಲೂ ಕಡಿಮೆ ಆಗಿದೆ. 2018ರಲ್ಲಿ ಶೇ. 72.04 ರಷ್ಟುಮತದಾನ ದಾಖಲಾಗಿತ್ತು. ಆದರೆ, ಈ ಬಾರಿ ಶೇ. 71.86ರಷ್ಟುಮತದಾನ ದಾಖಲಾಗಿದೆ.

2018ರ ಚುನಾವಣೆಯಲ್ಲಿ ಹಡಗಲಿ ಶೇ. 75.89, ಹಗರಿಬೊಮ್ಮನಹಳ್ಳಿ ಶೇ. 78.77, ವಿಜಯನಗರ ಶೇ. 72.04, ಕೂಡ್ಲಿಗಿ ಶೇ. 76.29, ಹರಪನಹಳ್ಳಿ ಶೇ. 82.33ರಷ್ಟುಪ್ರಮಾಣದಲ್ಲಿ ಮತ ಚಲಾವಣೆಯಾಗಿತ್ತು. ಆದರೆ, ಈ ಬಾರಿ ವಿಜಯನಗರ ಮತ್ತು ಹರಪನಹಳ್ಳಿ ಕ್ಷೇತ್ರಗಳು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಮತದಾನ ಪ್ರಮಾಣ ಹೆಚ್ಚಾಗಿದೆ.

ಪುರುಷರ ಮತದಾನ ಹೆಚ್ಚಳ:

ಜಿಲ್ಲೆಯಲ್ಲಿ ಪುರುಷ ಮತದಾರರೇ ಹೆಚ್ಚಿದ್ದು, ಮತದಾನದಲ್ಲಿ ಮೇಲುಗೈ ಸಾಧಿಸಿದ್ದಾರೆ. 10,92,011 ಮತದಾರರಲ್ಲಿ 8,52,502 ಮತದಾನವಾಗಿದೆ. 5,46,255 ಪುರುಷರಲ್ಲಿ 4,35,437 ಮತ್ತು 5,45,610 ಮಹಿಳೆಯರಲ್ಲಿ 4,17,041 ಹಾಗೂ 146ರಲ್ಲಿ 24 ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಕ್ಷೇತ್ರವಾರು ಮತದಾನ:

ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ 218 ಮತಗಟ್ಟೆಗಳಿದ್ದು, 1,91,270 ಮತದಾರರ ಪೈಕಿ 1,47,835 ಮತದಾನ ಮಾಡಿದ್ದಾರೆ. 76,217 ಪುರುಷರು, 71,618 ಮಹಿಳೆಯರು ಮತ ಚಲಾಯಿಸಿದ್ದಾರೆ.

ಎಚ್‌.ಬಿ. ಹಳ್ಳಿ ಕ್ಷೇತ್ರದಲ್ಲಿ 252 ಮತಗಟ್ಟೆಗಳಿದ್ದು, 2,29,987 ಮತದಾರರ ಪೈಕಿ 1,87,566 ಮತ ಚಲಾಯಿಸಿದ್ದಾರೆ. 96,106 ಪುರುಷರು, 91,447 ಮಹಿಳೆಯರು ಹಾಗೂ 13 ಲಿಂಗತ್ವ ಅಲ್ಪಸಂಖ್ಯಾತರು ಮತ ಚಲಾಯಿಸಿದ್ದು, ಶೇ. 81.56 ಮತದಾನ ಪ್ರಮಾಣ ದಾಖಲಾಗಿದೆ.

ವಿಜಯನಗರದಲ್ಲಿ 247 ಮತಗಟ್ಟೆಗಳಿದ್ದು, 2,49,956 ಮತದಾರರಲ್ಲಿ 1,79,627 ಮತ ಚಲಾಯಿಸಿದ್ದು, 88,970 ಪುರುಷರು, 90,648 ಮಹಿಳೆಯರು ಹಾಗೂ 9 ಇತರೆ ಮತ ಚಲಾಯಿಸಿದ್ದು, ಶೇ. 71.86 ಮತದಾನವಾಗಿದೆ.

ಕೂಡ್ಲಿಗಿಯಲ್ಲಿ 245 ಮತಗಟ್ಟೆಗಳಿದ್ದು, 1,00,352 ಮತದಾರರಲ್ಲಿ 1,62,371 ಜನ ಮತ ಚಲಾಯಿಸಿದ್ದಾರೆ. 83,997 ಪುರುಷರು, 78,372 ಮಹಿಳೆಯರು ಹಾಗೂ ಇಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಮತ ಚಲಾಯಿಸಿದ್ದು, ಶೇ. 79.69 ಮತದಾನವಾಗಿದೆ.

ಮತದಾರರನ್ನು ಸೆಳೆಯಲು ಮತಗಟ್ಟೆಯಲ್ಲಿ ಧಾರವಾಡ ಪೇಡೆ ವಿಶೇಷ!

ಹರಪನಹಳ್ಳಿ 257 ಮತಗಟ್ಟೆಗಳಿದ್ದು, 2,17,045 ಮತದಾರರ ಪೈಕಿ 1,75,103 ಮತ ಚಲಾಯಿಸಿದ್ದಾರೆ. 90,147 ಪುರುಷರು, 84,956 ಮಹಿಳೆಯರು ಮತ ಚಲಾಯಿಸಿದ್ದು, ಶೇ. 80.68 ಮತದಾನ ದಾಖಲಾಗಿದೆ.

ವಿಜಯನಗರ ಜಿಲ್ಲೆಯಲ್ಲಿ ಮತದಾನ ಈ ಹಿಂದಿನ ಚುನಾವಣೆಗಿಂತ ಅಲ್ಪ ಪ್ರಮಾಣ ದಾಖಲಾಗಿದೆ. ಆದರೂ ನಿರೀಕ್ಷೆ ಮಟ್ಟದಲ್ಲಿ ಮತದಾನವಾಗಿಲ್ಲ. ಮನೆ, ಮನೆಗೆ ಹೋಗಿ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಜಯನಗರ ಕ್ಷೇತ್ರದ ಮತದಾನ ಹೆಚ್ಚಾಗುವ ನಿರೀಕ್ಷೆಯಿತ್ತು. ಆದರೆ, ಕಡಿಮೆಯಾಗಿದೆ.

ಸದಾಶಿವ ಬಿ. ಪ್ರಭು, ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರು, ವಿಜಯನಗರ

Follow Us:
Download App:
  • android
  • ios