ಗಣಿನಾಡಿನ 83 ಹಳ್ಳಿಗಳಲ್ಲಿ ಕುಡಿವ ನೀರಿನ ಅಭಾವ: ಫ್ಲೋ ರೈಡ್‌ ಮಿಶ್ರಿತ ನೀರು ಬಳಕೆ!

ಗಣಿ ಜಿಲ್ಲೆಯಲ್ಲಿ ಬಿಸಿಲಧಗೆ ಹೆಚ್ಚಾಗಿರುವಂತೆಯೇ ಐದು ತಾಲೂಕುಗಳ ವಿವಿಧ ಹಳ್ಳಿಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ!

Lack of drinking water in 83 villages of Bellary district rav

ಕೆ.ಎಂ. ಮಂಜುನಾಥ್‌

ಬಳ್ಳಾರಿ (ಮೇ.20) : ಗಣಿ ಜಿಲ್ಲೆಯಲ್ಲಿ ಬಿಸಿಲಧಗೆ ಹೆಚ್ಚಾಗಿರುವಂತೆಯೇ ಐದು ತಾಲೂಕುಗಳ ವಿವಿಧ ಹಳ್ಳಿಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ!

ಜಿಲ್ಲಾಡಳಿತ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಹಲವು ಕ್ರಮ ಕೈಗೊಂಡರೂ ಗ್ರಾಮೀಣ ಭಾಗಗಳಲ್ಲಿ ನೀರಿನ ಅಭಾವ ನೀಗಿಸಲು ಸಾಧ್ಯವಾಗಿಲ್ಲ. ಹೀಗಾಗಿ ಜನರ ಪರದಾಟ ಮುಂದುವರಿದಿದೆ. ತುಂಗಭದ್ರಾ ಜಲಾಶಯದ ಎಲ್‌ಎಲ್‌ಸಿ ಹಾಗೂ ಎಚ್‌ಎಲ್‌ಸಿ ಕಾಲುವೆಗಳು ಬರಿದಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟುಉಲ್ಬಣಿಸುವ ಸಾಧ್ಯತೆಗಳಿವೆ.

ತುಂಬೆ ಡ್ಯಾಂನಲ್ಲಿ 4 ಮೀಟರ್‌ಗಿಂತ ಕೆಳಗೆ ಇಳಿದ ನೀರು; ಮಂಗಳೂರಿಗೆ ಅಭಾವ ಸಾಧ್ಯತೆ !

ಪ್ರತಿವರ್ಷದಂತೆ ಈ ಬಾರಿಯೂ ಕೆಲ ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗಿದ್ದು, ಜಿಲ್ಲೆಯ ಅನೇಕ ಹಳ್ಳಿಗಳು ಫೆä್ಲೕರೈಡ್‌ ನೀರನ್ನೇ ಬಳಕೆ ಮಾಡುತ್ತಿವೆ. ಕೆಲವು ಹಳ್ಳಿಗಳ ಜನರು ದುಡ್ಡು ಕೊಟ್ಟು ಕುಡಿಯುವ ನೀರು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಜಾನುವಾರುಗಳಿಗೂ ನೀರಿಗೆ ತತ್ವಾರ ಎದುರಾಗಿದೆ ಎಂದು ಅಂದಾಜಿಸಲಾಗಿದೆ.

ಸಮಸ್ಯೆ ತೀವ್ರ:

ಜಿಲ್ಲೆಯ ಐದು ತಾಲೂಕುಗಳಲ್ಲಿ 83 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ತಿಳಿಸಿದೆ. ಬಳ್ಳಾರಿ ತಾಲೂಕಿನ 14 ಹಳ್ಳಿಗಳು, ಕಂಪ್ಲಿ 6, ಸಂಡೂರು 44 ಹಾಗೂ ಸಿರುಗುಪ್ಪ ತಾಲೂಕಿನಲ್ಲಿ 19 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಬಳ್ಳಾರಿ ತಾಲೂಕಿನ ಕಾರೇಕಲ್ಲು, ಗೊಲ್ಲ ನಾಗೇನಹಳ್ಳಿ, ಕೊರಲಗುಂದಿ, ಬೊಮ್ಮನಹಾಳು, ಕುರುಗೋಡು ತಾಲೂಕಿನ ಹೊಸ ಗೆಣಿಕೆಹಾಳು, ಕೆ. ವೀರಾಪುರ, ಲಕ್ಷ್ಮಿಪುರ, ಶ್ರೀನಿವಾಸ ಕ್ಯಾಂಪ್‌, ಗುತ್ತಿಗನೂರು, ಕಂಪ್ಲಿ ತಾಲೂಕಿನ ಎಮ್ಮಿಗನೂರು, ತಿಮ್ಮನಕೆರೆಕ್ಯಾಂಪ್‌, ರೆಗ್ಯುಲೇಟರ್‌ ಕ್ಯಾಂಪ್‌, ಸಂಡೂರು ತಾಲೂಕಿನ ಜೋಗ, ತುಮಟಿ, ಲಿಂಗದಹಳ್ಳಿ, ಕೋಡಾಲು, ಬಂಡ್ರಿ, ಅಂತಾಪುರ, ಸೋಮಲಾಪುರ ಹಾಗೂ ಸಿರುಗುಪ್ಪ ತಾಲೂಕಿನ ದರೂರು, ಕೊಂಚಗೇರಿ, ಶಿರಿಗೇರಿ, ಬಾಗೇವಾಡಿ, ಮಾಟೂರು, ಮಾಳಾಪುರ, ಗೋಸಬಾಳು, ಎಂ. ಸೂಗೂರು ಗ್ರಾಮಗಳಲ್ಲಿ ನೀರಿನ ಅಭಾವ ತೀವ್ರವಾಗಿದೆ.

ಜಿಲ್ಲೆಯ ಪೈಕಿ ಕುಡಿಯುವ ನೀರಿಗೆ ತೀವ್ರ ಅಭಾವ ಎದುರಾಗಿರುವ ಹರಗಿನಡೋಣಿ, ಬೆಳಗಲ್ಲು, ರಾಯಾಪುರ ಹಾಗೂ ಕಮ್ಮರಚೇಡು ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, ಪರ್ಯಾಯ ವ್ಯವಸ್ಥೆ ಆಗಿರುವುದರಿಂದ ಸದ್ಯ ಟ್ಯಾಂಕರ್‌ ನೀರು ಪೂರೈಕೆಯನ್ನು ನಿಲ್ಲಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಹರಗಿನಡೋಣಿ ಗ್ರಾಮಸ್ಥರು ಬಳಕೆಗೆ ಫೆä್ಲೕರೈಡ್‌ ನೀರನ್ನೇ ಬಳಕೆ ಮಾಡುತ್ತಿದ್ದು, ಸ್ನಾನ ಮಾಡಿದರೆ ಮೈ- ಕೈ ತುರಿಕೆ ಬರುವುದರಿಂದ ನೀರು ಬಳಕೆಗೆ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಫೆä್ಲೕರೈಡ್‌ ನೀರನ್ನೇ ಶುದ್ಧೀಕರಿಸಿ ನೀಡುತ್ತಿದ್ದು, ದುಡ್ಡು ಕೊಟ್ಟು ನೀರು ಖರೀದಿಸುತ್ತಿದ್ದೇವೆ. ಆದರೆ, ನಾವು ಕುಡಿಯುವ ನೀರು ಶುದ್ಧವಾಗಿದೆಯೇ ಎಂಬುದು ಖಾತ್ರಿಯಿಲ್ಲ. ಈ ನೀರನ್ನು ಯಾರು ಪರೀಕ್ಷೆಯೂ ಮಾಡಿಲ್ಲ. ಅನಿವಾರ್ಯವಾಗಿ ಇದೇ ನೀರನ್ನು ಬಳಕೆ ಮಾಡುತ್ತಿದ್ದೇವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಧಿಕಾರಿಗಳ ನಿರ್ಲಕ್ಷ್ಯ ಆರೋಪ:

ನೀರಿನ ಸಮಸ್ಯೆ ಎದುರಾಗಿರುವ ಹಳ್ಳಿಗಳ ಜನರು ನೀರಿಗಾಗಿ ಪರದಾಡುತ್ತಿದ್ದರೂ ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕುಡಿಯುವ ನೀರಿಗೆಂದು ಕೋಟ್ಯಂತರ ರು. ವ್ಯಯಿಸಲಾಗುತ್ತಿದೆಯಾದರೂ ಈ ಹಣ ಎಲ್ಲಿ ಖರ್ಚಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ನೀರಿನ ಸಮಸ್ಯೆಯಿಂದ ಜನ- ಜಾನುವಾರುಗಳು ತೊಂದರೆಯಲ್ಲಿದ್ದರೂ ಕ್ರಮ ವಹಿಸಬೇಕಾದ ಅಧಿಕಾರಿಗಳು ಹಳ್ಳಿಗಳ ಕಡೆಗೆ ತಿರುಗಿ ನೋಡಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಎಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ಕಾಲುವೆಗೆ ನೀರು ಬರಿದಾಗುತ್ತಿದ್ದಂತೆಯೇ ನೀರಿನ ಸಮಸ್ಯೆ ಎದುರಾಗುತ್ತದೆ. ಎಲ್ಲ ಕಡೆ ನೀರಿನ ಬವಣೆ ಶುರುವಾಗಿದೆ. ಬೇಸಿಗೆ ಬೇಗುದಿ ಜತೆಗೆ ಕುಡಿಯುವ ನೀರಿಗೂ ತತ್ವಾರ ಎದುರಿಸುವಂತಾಗಿದೆ. ಜಿಲ್ಲಾಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಬೇಕು. ತೀವ್ರ ಸಮಸ್ಯೆ ಇರುವ ಕಡೆ ಕೂಡಲೇ ತುರ್ತು ನೀರು ಪೂರೈಕೆಗೆ ಕ್ರಮ ವಹಿಸಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.

RO ನೀರು ಕುಡಿತಿದೀರಾ? ರಕ್ತಹೀನತೆಗೆ ಕಾರಣವಾಗಬಹುದು ಎಚ್ಚರ

ಕುಡಿಯುವ ನೀರು ದುಡ್ಡು ಕೊಟ್ಟು ತೆಗೆದುಕೊಳ್ಳಬೇಕು. ಬಳಕೆಯ ನೀರು ಗುಣಮಟ್ಟವಿಲ್ಲ. ಸ್ನಾನ ಮಾಡಿದರೆ ಮೈ ತಿಂಡಿ ಬರುತ್ತದೆ. ಕೆಲವು ದಿನಗಳ ಕಾಲ ಟ್ಯಾಂಕರ್‌ ನೀರು ಪೂರೈಕೆ ಮಾಡಿದ್ರು. ಈಗ ನಿಲ್ಲಿಸಿದ್ದಾರೆ.

ಶಿವರಾಮರೆಡ್ಡಿ, ಹರಗಿನಡೋಣಿ ಗ್ರಾಮ, ಬಳ್ಳಾರಿ ತಾಲೂಕು

Latest Videos
Follow Us:
Download App:
  • android
  • ios