ಬಿಜೆಪಿ ಸಂಸದರೆಲ್ಲಾ ಶೋ ಪೀಸ್‌ಗಳು; ಅಲ್ಲಿ ಯಾರೊಬ್ಬರೂ ಗಂಡಸರಿಲ್ಲ: ಹೆಚ್.ಸಿ. ಬಾಲಕೃಷ್ಣ

ಅನುದಾನ ತಾರತಮ್ಯದ ಬಗ್ಗೆ ಮಾತನಾಡದ ಬಿಜೆಪಿ ಸಂಸದರು ಶೋ ಪೀಸ್‌ಗಳಾಗಿದ್ದಾರೆ. ಅವರಲ್ಲಿ ಯಾರೊಬ್ಬರೂ ಗಂಡಸು ಇಲ್ಲವೆಂದು ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಹೇಳಿದ್ದಾರೆ.

Karnataka All BJP MPs are showpieces There are no men there said MLA HC Balakrishna sat

ರಾಮನಗರ (ಫೆ.05): ದೇಶದಲ್ಲಿ ಅತಿಹೆಚ್ಚು ತೆರಿಗೆ ಕಟ್ಟುವ 2ನೇ ರಾಜ್ಯ ನಮ್ಮದಾಗಿದೆ. ಆದರೆ, ಅನುದಾನ ತಾರತಮ್ಯದ ಬಗ್ಗೆ ಕರ್ನಾಟಕ ಯಾವೊಬ್ಬ ಸಂಸದರೂ ಮಾತನಾಡುವುದಿಲ್ಲ. ರಾಜ್ಯದ ಎಲ್ಲ ಬಿಜೆಪಿ ಸಂಸದರು ಶೋ ಪೀಸ್‌ಗಳಾಗಿದ್ದಾರೆ. ಅವರಲ್ಲಿ ಯಾರೊಬ್ಬರೂ ಗಂಡಸು ಇಲ್ಲವೆಂದು ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಹೇಳಿದ್ದಾರೆ.

ರಾಮನಗರದ ನಾಗರಕಲ್ಲುದೊಡ್ಡಿ ಗ್ರಾಮದಲ್ಲಿ ಮಾತನಾಡಿದ ಶಾಸಕ ಹೆಚ್.ಸಿ.ಬಾಲಕೃಷ್ಣ, ದೇಶದಲ್ಲಿ ಕೇಂದ್ರ ಸರ್ಕಾರಕ್ಕೆ ಅತಿ ಹೆಚ್ಚು ತೆರಿಗೆ ಕಟ್ಟುವ 2ನೇ ರಾಜ್ಯ ನಮ್ಮದು. ನಮಗೆ ಕೊಡಬೇಕಾದ ಅನುದಾನವನ್ನ ನಮಗೆ ಕೊಡ್ತಿಲ್ಲ. ಬಿಜೆಪಿಯ ಸಂಸದರು ನರೇಂದ್ರ ಮೋದಿ ಮುಂದೆ ಕೂರೋದು ಇಲ್ಲ, ಏಳೋದು ಇಲ್ಲ. ಕೇವಲ ಮೋದಿ ಹೆಸರಲ್ಲಿ ಗೆಲ್ತಾರೆ, ಅವರಿಗೆ ತಮ್ಮದೇ ಆದ ವೈಯಕ್ತಿಕ ವರ್ಚಸ್ಸು ಇಲ್ಲ. ನೀವು ಪಕ್ಕದ ತಮಿಳುನಾಡು ತನ್ನ ಹಕ್ಕಿಗಾಗಿ ಮಾಡುವ ಹೋರಾಟವನ್ನ ನೋಡಿ ಕಲಿಯಿರಿ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ 'ಸತ್ತ ಸರಕಾರದ ಸಾಹುಕಾರ'; ಸೋಗಲಾಡಿ ಸಮಾಜವಾದ ಬೆತ್ತಲಾಗಿದೆ: ಹೆಚ್‌ಡಿಕೆ ವಾಗ್ದಾಳಿ

ನಮ್ಮ ರಾಜ್ಯದ ಬಿಜೆಪಿ ಸಂಸದರೆಲ್ಲಾ ಶೋ ಪೀಸ್ ಗಳು. ಕೇವಲ ದೆಹಲಿಗೆ ಹೋಗೋದು ಟಿಎ-ಡಿಎ (MPs TA-DA) ತಕೊಂಡು ಬರೋದು ಅಷ್ಟೇ ಇವರ ಕೆಲಸವಾಗಿದೆ. ರಾಜ್ಯ ಬಿಜೆಪಿಯ ಎಲ್ಲ ಸಂಸದರು ಹಾಗೂ ಮಂತ್ರಿಗಳು ರಾಜ್ಯದ ಪರವಾಗಿ ಧ್ವನಿ ಎತ್ತುತ್ತಿಲ್ಲ. ಹಾಗಾಗಿ, ನಾವು ಹೋರಾಟ ಮಾಡ್ತಿದ್ದೀವಿ. ಪಾಪ ನಮ್ಮ ಹೋರಾಟ ನೋಡಿ ಬಿಜೆಪಿಯ ಗಂಡಸರು ಹೋರಾಟ ಮಾಡ್ತಾರಾ ನೋಡೊಣ. ಇದರ ಅರ್ಥ ಬಿಜೆಪಿಯಲ್ಲಿ ಯಾರು ಗಂಡಸರು ಇಲ್ಲ ಅಂತ.! ಈಗಿರುವ ಬಿಜೆಪಿ ಸಂಸದರು ಯಾರು ಗಂಡಸರಲ್ಲ ಎಂದರ್ಥ ಎಂದು ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ವಾಗ್ದಾಳಿ ಮಾಡಿದ್ದಾರೆ.

ದಕ್ಷಿಣ ಭಾರತದಲ್ಲಿ ಚೆನ್ನಾಗಿ ಫ್ಯಾಮಿಲಿ ಪ್ಲ್ಯಾನಿಂಗ್ ಮಾಡಿದ್ದೇವೆ; ಆದ್ರೂ ಅನುದಾನದಲ್ಲೇಕೆ ತಾರತಮ್ಯ: ಸಿದ್ದರಾಮಯ್ಯ

ಡಿ.ಕೆ. ಸುರೇಶ್ ಎದುರಿಸುವಂಥ ಅಭ್ಯರ್ಥಿ ಬಿಜೆಪಿಯಲ್ಲಿಲ್ಲ:  ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿ ಹುಡುಕಾಟ ವಿಚಾರವಾಗಿ ಮಾತನಾಡಿದ ಅವರು, ಹಾಲಿ ಸಂಸದ ಡಿ.ಕೆ. ಸುರೇಶ್ ಅವರನ್ನು ಎದುರಿಸುವಂತಹ ಅಭ್ಯರ್ಥಿ ಅವರಲ್ಲಿ ಇಲ್ಲ. ಲೋಕಸಭಾ ಸದಸ್ಯ ಜನಸಾಮಾನ್ಯರ ಜೊತೆ ಬೆರೆತು ಕೆಲಸ ಮಾಡಬಹುದು ಎಂಬುದನ್ನು ಸುರೇಶ್ ತೋರಿಸಿಕೊಟ್ಟಿದ್ದಾರೆ. ಬೇಕಿದ್ದರೆ ಸಾರ್ವಜನಿಕವಾಗಿ ಚರ್ಚೆಗೆ ಬರಲಿ. ಅವರಿಗೆ ಅಭ್ಯರ್ಥಿನೆ ಇಲ್ಲ. ಡಿ.ಕೆ. ಸುರೇಶ್ ವಿರುದ್ಧ ಮೈತ್ರಿ ವರ್ಕೌಟ್ ಆಗಲ್ಲ. ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಯೋಗೇಶ್ವರ್ ಮೊದಲು ಸ್ಪರ್ಧೆ ಮಾಡಲಿ. ನಂತರ ಮಾತನಾಡೋಣ ಎಂದು ಮಾಗಡಿ ಶಾಸಕ ಹೆಚ್. ಸಿ. ಬಾಲಕೃಷ್ಣ ಹೇಳಿದರು.
 

Latest Videos
Follow Us:
Download App:
  • android
  • ios